ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.
ಅದಕ್ಕೆ ಒಂದು ಹಾಡನ್ನೇ ಬರೆದಿದ್ದಾರೆ. ಹಾವಿನ ದ್ವೇಷ ಹನ್ನೆರಡು ವರುಷ ಎಂದು. ಹಾಗಾದ್ರೆ ಹಾವು ದ್ವೇಷ ಸಾದಿಸುತ್ತದಯೇ. ಅದರಲ್ಲೂ ನಿಜಾನ ಸತ್ಯನಾ? ಮುಂದೆ ಓದಿ….
ಹಾವನ್ನು ಸಾಯಿಸುವ ಸಮಯದಲ್ಲಿ,ಹಾವು ಗಾಯಗೊಂಡು ತಪ್ಪಿಸಿಕೊಂಡು ಹೋದರೆ ಅದು ಹಗೆ ಸಾಧಿಸುತ್ತದೆಯೇ? ಹೊಡೆಯುವ ಸಮಯದಲ್ಲಿ ಆ ಹಾವು ಹೊಡೆದವನ ಚಹರೆಯನ್ನು ಜ್ಞಾಪಕವಿಟ್ಟುಕೊಂಡು ನಂತರ ಪ್ರತೀಕಾರ ತೀರಿಸಿಕೊಳ್ಳುತ್ತದೆಯೇ? ಎಂದು ಹಿರಿಯರನ್ನು ಕೇಳಿದರೆ,ಹೌದೆನ್ನುತ್ತಾರೆ. ಕೆಲವು ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ನಮಗೆ ಅಚ್ಚರಿಯ ಸಂಗತಿಗಳು ತಿಳಿಯುತ್ತವೆ.
ಹಾವಿಗೆ ಅಷ್ಟೊಂದು ಜ್ಞಾಪಕ ಶಕ್ತಿ ಇದಿಯೇ!
ಸತ್ಯ ಸಂಗತಿಯೆಂದರೆ, ಹಾವಿಗೆ ಜ್ಞಾಪಕ ಶಕ್ತಿಯೇ ಇರುವುದಿಲ್ಲವಂತೆ…ಹಾಗಿರುವಾಗ ಗಾಯಗೊಂಡ ಹಾವು ,ಹೊಡೆದವರನ್ನು ಜ್ಞಾಪಕವಿಟ್ಟುಕೊಂಡು ಹಗೆ ಸಾಧಿಸುವ ಸಂಭವವೇ ಇಲ್ಲವಂತೆ. ಇವೆಲ್ಲವೂ ಕೇವಲ ನಮ್ಮ ಹಿರಿಯರ ಕಲ್ಪಿತ ನಂಬಿಕೆಯಂತೆ ! ಆದರೆ, ಇದಕ್ಕೂ ಒಂದು ಕಾರಣವಿದೆಯೆಂದು ಬಹಳಷ್ಟು ಜನ ಹೇಳುತ್ತಾರೆ.
ಇದರ ಹಿಂದೆ ಇದೆ ಒಂದು ಸ್ಟೋರಿ…
ಒಂದು ಕಾಲದಲ್ಲಿ ಜನರ ಪ್ರಧಾನ ವೃತ್ತಿ ಬೇಸಾಯವಾಗಿತ್ತು. ತಾವು ಬೆಳೆದ ಬೆಳೆಗಳನ್ನು ಇಲಿಗಳು ನಾಶಮಾಡುತ್ತಿದ್ದವಂತೆ. ಹಾವುಗಳನ್ನು ಕಂಡ ಕಂಡಲ್ಲಿ ಸಾಯಿಸುತ್ತಿದ್ದರೆ ಹಾವುಗಳ ಸಂಖ್ಯೆ ಕಡಿಮೆಯಾಗಿ… ಇಲಿಗಳ ಸಂಖ್ಯೆ ಹೆಚ್ಚಾಗತೊಡಗಿ ಬೆಳೆ ಹಾನಿಯೂ ಹೆಚ್ಚಾಗತೊಡಗುತ್ತದೆಂದು, ಮುಂದಾಲೋಚನೆಯಿಂದ ಹಾವನ್ನು ಸಾಯಿಸಬೇಡಿ.
ಒಂದು ವೇಳೆ ಅದು ಸಾಯದೆ ತಪ್ಪಿಸಿಕೊಂಡು ಹೋದರೆ, ಗಾಯಗೊಂಡ ಹಾವು ಹಗೆ ಸಾಧಿಸುತ್ತದೆ ಎಂದು ಭಯಹುಟ್ಟಿಸಿದರಂತೆ. ನಮ್ಮ ಪೂರ್ವಜರು ಹಾವನ್ನು ದೇವರೆಂದು ಪೂಜಿಸುವುದು, ಪ್ರಕೃತಿಯ ಮೇಲೆ ಪ್ರೀತಿಯುಳ್ಳವರಾಗಿದ್ದುದೇ ಅಸಲು ಕಾರಣವಂತೆ.!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, ಆ.4- ಈಗಾಗಲೇ ಮೂವರು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದಿರುವ ಬಿಜೆಪಿ ಜೆಡಿಎಸ್‍ಗೆ ಮತ್ತೊಂದು ಭಾರೀ ಶಾಕ್ ಕೊಡಲು ಸಜ್ಜಾಗಿದೆ. ಜೆಡಿಎಸ್‍ನ ಎಲ್ಲ 23 ಶಾಸಕರನ್ನು ಒಂದೇ ಬಂಚ್‍ನಲ್ಲಿ ಸೆಳೆಯಲು ಮಹತ್ವದ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರ ಪತನದ ನಂತರ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಎಲ್ಲ 23 ಶಾಸಕರನ್ನು ಬಿಜೆಪಿಗೆ ಕರೆದೊಯ್ಯಲು ಇಬ್ಬರು ಮಾಜಿ ಸಚಿವರೇ ಮುಂದಾಳತ್ವ ವಹಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ…
ಬಹಳಷ್ಟು ಮಂದಿಯ ಮನೆಯಲ್ಲಿ ಈ ಸೊಳ್ಳೆ ಬ್ಯಾಟ್‌ಗಳು ಇದ್ದೇ ಇರುತ್ತವೆ. ನೀವು ಮನೆ ಬಾಗಿಲು ಹಾಕಿಟ್ಟಿದ್ದರೂ ಒಂದು ಕ್ಷಣಕ್ಕೆ ಬಾಗಿಲು ತೆರೆದರೆ ಸಾಕು ಸೊಳ್ಳೆಗಳೆಲ್ಲಾ ಮನೆಯೊಳಗಡೆ ಸೇರಿಕೊಂಡು ಬಿಡುತ್ತವೆ. ಮಧ್ಯರಾತ್ರಿಯಲ್ಲಿ ಸೊಳ್ಳೆ ಬ್ಯಾಟ್ ಹಿಡಿದುಕೊಂಡು ಸೊಳ್ಳೆಯನ್ನು ಹುಡುಕಿ ಹುಡುಕಿ ಸಾಯಿಸಬೇಕಾಗುತ್ತದೆ. ಬೇಸಿಗೆಗಾಲದಲ್ಲಂತೂ ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಇರುತ್ತವೆ. ಈ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗಬೇಕಾ? ನಾವು ನಿಮಗೆ ಸೊಳ್ಳೆ ಓಡಿಸಲು ಉಪಯೋಗಕ್ಕೆ ಬರುವ ಕೆಲವು ಸುಲಭವಾದ ಟಿಪ್ಸ್‌ನ್ನು ಹೇಳಿಕೊಡಲಿದ್ದೇವೆ. ಇದಕ್ಕೆ ಮನೆಯಲ್ಲಿರುವ ಕೆಲವು ವಸ್ತುಗಳೇ ಸಾಕು. ಅದಕ್ಕೆ…
ಅದು ಇಟಲಿಯ ಒಂದು ಪ್ರಾಂತ್ಯ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಕಡಿಮೆಯಾಗುತ್ತಲೇ ಇತ್ತು. ಸರ್ಕಾರಕ್ಕೂ ಇದನ್ನು ನೋಡಿ ತಲೆ ಕೆಟ್ಟು ಹೋಗಿತ್ತು. ಹಾಗಾಗಿ ಒಂದು ಭರ್ಜರಿ ಆಫರ್ ನೀಡಿದೆ. ಈ ಪ್ರದೇಶಕ್ಕೆ ಯಾರೇ ಹೋಗಿ ನೆಲೆಸಿದರೂ ಅವರಿಗೆ 22000 ಪೌಂಡ್ ಕೊಡಲಾಗುತ್ತದೆ ಎಂದು ಘೋಷಿಸಿದೆ. ಆದರೆ ಷರತ್ತುಗಳು ಅನ್ವಯ. ಇದು ಇಟಲಿಯ ಮೊಲೀಸ್ ಪ್ರಾಂತ್ಯ. ಸದ್ಯ ಈ ಪ್ರದೇಶದಲ್ಲಿ 2000ಕ್ಕಿಂತ ಕಡಿಮೆ ಮಂದಿ ವಾಸವಾಗಿದ್ದಾರೆ. ಕಳೆದ 5 ವರ್ಷದಲ್ಲಿ ಸುಮಾರು 9000 ದಷ್ಟು ಮಂದಿ ಈ ಪ್ರಾಂತ್ಯವನ್ನು ತೊರೆದಿದ್ದಾರೆ….
ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆಗಸ್ಟ್ 9ರಿಂದ ಆರಂಭವಾಗಲಿದೆ. ದೇಶ ಸ್ವಾತಂತ್ರ್ಯಗೊಂಡ ನಂತರ ರಾಜಸಂಸ್ಕೃತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲಾಗುತ್ತದೆ. ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ , ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅವರು ರಾಜ್ಯಕ್ಕೆ…
‘ಬಿಗ್ ಬಾಸ್ ಕನ್ನಡ ಸೀಸನ್ 7’ ಆರಂಭವಾಗಿ ಐದು ವಾರಗಳು ಕಳೆದಿವೆ.ನಾಲ್ಕು ಸ್ಫರ್ಧಿಗಳು ಎಲಿಮಿನೇಶನ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅವರಲ್ಲಿ ಗುರುಲಿಂಗ ಸ್ವಾಮೀಜಿ,ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಚೈತ್ರಾಕೋಟೂರ್. ಕಳೆದ ವಾರ ಚೈತ್ರಾಕೋಟೂರ್ ಬಿಗ್ ಮನೆಯಿಂದ ಹೊರಬಂದುಶಾಕ್ ಕೊಟ್ಟಿದ್ದರು. ಈ ವಾರ ಯಾರು ಬಿಗ್ ಮನೆಯಿಂದ ಹೊರಬರುತ್ತಾರೆ. 5ನೇವಾರ ಬಿಗ್ ಮನೆಯಿಂದ ಹೊರ ಬರುವವರಾರು : ಮೂಲಗಳ ಪ್ರಕಾರ ಈ ಬಾರಿ ಜೈ ಜಗದೀಶ್ ಬಿಗ್ ಮನೆಯಿಂದ ಹೊರಬರಲಿದ್ದಾರೆ. ಆಮನೆಯಲ್ಲಿ ಜೈಜಗದೀಶ್ ಎಲ್ಲರ ಜೊತೆ ಬೆರೆತು ತಮ್ಮಕೈಲಾದಷ್ಟು ಟಾಸ್ಕ್‌ಗಳಲ್ಲಿ ಪಾಲ್ಗೊಂಡು…
ಇತ್ತೀಚೆಗಷ್ಟೇ ಜೂನಿಯರ್ ಇಂಜಿನಿಯರ್ ಲಿಸ್ಟ್ ನಲ್ಲಿ ಟಾಪರ್ ಆಗಿ ಆಯ್ಕೆ ಆಗಿದ್ದ ಸನ್ನಿ ಲಿಯೋನ್ ವಿರುದ್ಧ ಈಗ ಎಫ್‍ಐಆರ್ ದಾಖಲಾಗಿದೆ. ಆದರೆ ಈ ಬಗ್ಗೆ ಸನ್ನಿ ಲಿಯೋನ್ ಅಭಿಮಾನಿಗಳು ಬೇಸರಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಕೇಸ್ ದಾಖಲಾಗಿರುವುದು “ಸನ್ನಿ ಲಿಯೋನ್” ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಸಿ ಆಯ್ಕೆ ಆಗಿರುವ ಅಭ್ಯರ್ಥಿ ಮೇಲೆ. ಬಿಹಾರದ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಡಿಪಾರ್ಟ್‍ಮೆಂಟ್ (ಪಿಎಚ್‍ಇಡಿ)ನ ಜೂನಿಯರ್ ಇಂಜಿನಿಯರ್ ಮೆರಿಟ್ ಲಿಸ್ಟ್ ನಲ್ಲಿ ಸನ್ನಿ ಲಿಯೋನ್ ಹೆಸರು ಟಾಪರ್ ಸ್ಥಾನದಲ್ಲಿತ್ತು. ಆಕೆ ಶೇ. 98.50…