ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ.

ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು ನಿದ್ದೆ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಹಗಲು ಮಾಡುವ ನಿದ್ದೆ ಹೃದಯ ಸಂಬಂಧಿ ಖಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ.

ಸ್ವಿಡ್ಜರ್ಲೆಂಡ್ ನಲ್ಲಿ ಒಟ್ಟು 3462 ಮಂದಿಯನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಇವರೆಲ್ಲ 35 ರಿಂದ 75 ವರ್ಷ ವಯಸ್ಸಿನವರು. ಹಾರ್ಟ್ ಎಂಬ ಪತ್ರಿಕೆಯಲ್ಲಿ ಈ ಬಗ್ಗೆ ಲೇಖನ ಪ್ರಕಟವಾಗಿದೆ. 2003ರಿಂದ್ಲೇ ಈ ಬಗ್ಗೆ ಸಂಶೋಧನೆ ಆರಂಭವಾಗಿತ್ತು.

ನಿದ್ದೆಯ ಅವಧಿ ಮತ್ತು ಸಮಯ ಎಲ್ಲವನ್ನೂ ಮಾನಿಟರ್ ಮಾಡಲಾಗಿದೆ. ಒಂದಿಡೀ ವಾರದಲ್ಲಿ 3-7 ಬಾರಿ ಹಗಲು ಹೊತ್ತು ನಿದ್ದೆ ಮಾಡಿರುವವರ ಪೈಕಿ ಬಹುತೇಕರು ವೃದ್ಧರು, ಪುರುಷರು, ಧೂಮಪಾನಿಗಳು ಹಾಗೂ ಅತಿಯಾದ ತೂಕ ಹೊಂದಿರುವವರೇ ಆಗಿದ್ದರು.

ಶೇ.58 ಮಂದಿ ಹಗಲು ನಿದ್ದೆ ಮಾಡುತ್ತಿರಲಿಲ್ಲ. 667 ಜನರು ವಾರದಲ್ಲಿ ಒಂದೆರಡು ಬಾರಿ ಹಗಲು ಮಲಗುವ ಅಭ್ಯಾಸ ಇಟ್ಟುಕೊಂಡಿದ್ದರು. 411 ಮಂದಿ 3 ರಿಂದ 5 ಬಾರಿ ಹಗಲಲ್ಲಿ ನಿದ್ದೆ ಹೋಗುತ್ತಿದ್ದರು. ಇವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಹಗಲು ನಿದ್ದೆ ಹೃದಯದ ಆರೋಗ್ಯಕ್ಕೆ ಪೂರಕ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ನೀವೇನಾದ್ರೂ ಆಯಸ್ಸು ಹೆಚ್ಚಿಸಿಕೊಳ್ಳಬೇಕೆಂದುಕೊಂಡಿದ್ದರೆ ವಾರದಲ್ಲಿ ಒಂದೆರಡು ಬಾರಿ ಹಗಲಲ್ಲಿ ನಿದ್ದೆ ಮಾಡಿ. ಇದರಿಂದ ನಿಮ್ಮ ಮನಸ್ಸು ಕೂಡ ಪ್ರಫುಲ್ಲವಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕನ್ನಡ ಕಿರುತೆರೆ ಲೋಕದಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ.ಆದರೆ ಪುರಾಣಕ್ಕೆ ಸಂಭಂದಿಸಿದಂತೆ ಧಾರಾವಾಹಿಗಳು ಬರುವುದು ತುಂಬಾ ಕಡಿಮೆ.ಯಾಕಂದ್ರೆ ಪೌರಾಣಿಕ ಧಾರಾವಾಹಿಗಳನ್ನು ಮಾಡಲು ತುಂಬಾ ಹಣ ಬೇಕಾಗುತ್ತದೆ.ಹಾಗಾಗಿ ಕನ್ನಡದಲ್ಲಿ ಅಲ್ಲೊಂದು ಇನ್ನೊಂದು ಧಾರಾವಾಹಿಗಳು ಮಾತ್ರ ನೋಡಲು ನಮಗೆ ಸಿಗುತ್ತವೆ. ಅದರಲ್ಲಿ ಒಂದು ಶನಿ ಧಾರವಾಹಿ. ಇದು ನ್ಯಾಯದ ಅಧಿದೇವತೆ ಶನಿಯ ಕಥೆ ಹೇಳುವ ಧಾರವಾಹಿ. ಇದು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 23ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದ್ದು ಅಭೂತಪೂರ್ವ…
ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಸವ ಪೀಠದ ಅಧ್ಯಕ್ಷೆ 74 ವರ್ಷದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ. ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು…
ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ ಪರಿಮಳಕ್ಕಷ್ಟೇ ಅಲ್ಲ, ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳೂ ಇವೆ. ಕರಿಬೇವು ಕಬ್ಬಿಣದಂಶ ಹಾಗೂ ಪೋಲಿಕ್ ಆಸಿಡ್ ಗಳ ಗುಚ್ಛವೆಂದೇ ಹೇಳಬಹುದು. ರಕ್ತಹೀನತೆಗೂ ಇದು ರಾಮಬಾಣ. ಕರಿಬೇವು ಲಿವರ್ ಗೂ ಒಳ್ಳೆಯದು. ಲಿವರ್ ಹಾಳಾಗದಂತೆ ತಡೆಯುತ್ತದೆ. ಕರಿಬೇವು ಆಂಟಿಬಯಾಟಿಕ್ ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ. ಕರಿಬೇವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ….
ಬಾರ್ಲಿ ನೀರು ದೇಹಕ್ಕೆ ಉತ್ತಮ. ಡಿಹೈಡ್ರೇಷನ್ ಉಂಟಾದಾಗ ಬಾರ್ಲಿ ನೀರು ಕುಡಿದರೆ ಇನ್ನೂ ಒಳ್ಳೆಯದು. ಅಷ್ಟೇ ಅಲ್ಲ, ಇದರಿಂದ ಇನ್ನು ಏನೇನೆಲ್ಲಾ ಲಾಭಗಳಿವೆ ನೋಡಿ. * ಬಾರ್ಲಿಯಲ್ಲಿರುವ ಬೀಟಾ ಗ್ಲೂಕೋನ್ ಅಂಶ ದೇಹದೊಳಗಿನ ವಿಷಾಂಶ ಹೊರಹಾಕಲು ನೆರವಾಗುತ್ತದೆ. * ಮೂತ್ರದ ಸೋಂಕು ಹೋಗುವವರೆಗೂ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರು ಕುಡಿಯುವುದು ಒಳ್ಳೆಯದು. * ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ಉಷ್ಣದಿಂದ ಆಗುವ ಸಮಸ್ಯೆಗಳಿಗೆ ಬಾರ್ಲಿ ನೀರು ಒಳ್ಳೆಯದು. * ಮಲಬದ್ಧತೆ, ಬೇಧಿ ಮುಂತಾದ ಸಮಸ್ಯೆ ಇದ್ದರೂ ಬಾರ್ಲಿ…
ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಮಾಜಿ ಸಿಎಂ ಆಪ್ತರೆಲ್ಲ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಪರಮೇಶ್ವರ್ ಅವರು ಕರೆದ ಉಪಹಾರ ಕೂಟಕ್ಕೆ ಆಗಮಿಸಿದ್ದ ಎಲ್ಲ ಸಚಿವರು ತಮ್ಮ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯರಿಗೆ ರಾಜೀನಾಮೆ ನೀಡಿದ್ದಾರೆ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣೆಬೈರೇಗೌಡರು ಸೇರಿದಂತೆ ಎಲ್ಲ 22 ಸಚಿವರು ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಇತ್ತ ರಾಜೀನಾಮೆ ನೀಡಿ ಹೊರ ಬಂದು ಮಾತನಾಡಿದ ಸಚಿವ ರಹೀಂಖಾನ್, ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ…
ದಾಳಿಕೋರರಿಂದ ನೂರಾರು ಕ್ರೈಸ್ತರನ್ನು ರಕ್ಷಿಸಿದ ಮುಸ್ಲಿಂ ಧರ್ಮಗುರುವಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ ಅಮೆರಿಕಾಲಾಗೊಸ್, ನೈಜೀರಿಯಾ, ಜು.19: ಮಧ್ಯ ನೈಜೀರಿಯಾದಲ್ಲಿ ದಾಳಿಯೊಂದರ ಸಂದರ್ಭ ತನ್ನ ನಿವಾಸ ಹಾಗೂ ಮಸೀದಿಯಲ್ಲಿ 262 ಕ್ರೈಸ್ತರಿಗೆ ಆಶ್ರಯವೊದಗಿಸಿದ 83 ವರ್ಷದ ಮುಸ್ಲಿಂ ಧರ್ಮಗುರು ಇಮಾಮ್ ಅಬೂಬಕರ್ ಅಬ್ದುಲ್ಲಾಹಿ ಎಂಬವರನ್ನು ಅಮೆರಿಕಾ ಸರಕಾರ ಗೌರವಿಸಿದೆ. ಅಬ್ದುಲ್ಲಾಹಿ ಅವರ ಜತೆ ಸುಡಾನ್, ಇರಾಕ್, ಬ್ರೆಝಿಲ್ ಹಾಗೂ ಸೈಪ್ರಸ್ ದೇಶಗಳ ನಾಲ್ಕು ಮಂದಿ ಇತರ ಧಾರ್ಮಿಕ ನಾಯಕರಿಗೆ 2019ನೇ ವರ್ಷದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿ (ಇಂಟರ್…