ಸಿನಿಮಾ

ಸುಮ್ಮನೆ ಮನೆಯಲ್ಲಿ ಕೂರದೇ, ಕೈತುಂಬಾ ಸಂಪಾದನೆ ಮಾಡ್ತಾರೆ ನಮ್ಮ ಸ್ಟಾರ್ ನಟರ ಪತ್ನಿಯರು!

326

ವಿಶ್ವ ಮಹಿಳಾ ದಿನದಂದು ಬಾಲಿವುಡ್ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬಾಲಿವುಡ್ ನ ಕೆಲ ನಟರ ಪತ್ನಿಯರು ಕೇವಲ ಸ್ಟಾರ್ಸ್ ಪತ್ನಿಯರಾಗಿ ಗುರುತಿಸಲ್ಪಡುವುದಿಲ್ಲ. ತಮ್ಮದೇ ಬ್ಯುಸಿನೆಸ್ ಶುರು ಮಾಡಿ, ಅದ್ರಲ್ಲಿ ಹೆಸ್ರು ಮಾಡಿದವರ ಸಂಖ್ಯೆ ಸಾಕಷ್ಟಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದವರು ರಜನಿಕಾಂತ್. ಅವ್ರ ಪತ್ನಿ ಲತಾ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರ್ತಾರೆ. ಲತಾ, ಮಕ್ಕಳ ಶಿಕ್ಷಣಕ್ಕಾಗಿ ದಿ ಆಶ್ರಮ ಹೆಸರಿನ ಶಾಲೆಯೊಂದನ್ನು ನಡೆಸುತ್ತಿದ್ದಾರೆ.

ಶಾರುಕ್ ಖಾನ್ ಪತ್ನಿ ಗೌರಿ ಖಾನ್ ಎಲ್ಲರಿಗೂ ಗೊತ್ತು. ಗೌರಿ ಇಂಟೀರಿಯರ್ ಡಿಸೈನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಬಾಲಿವುಡ್ ನ ಅನೇಕ ಕಲಾವಿದರ ಮನೆಯೊಳಗಿನ ವಿನ್ಯಾಸವನ್ನು ಗೌರಿ ಮಾಡಿದ್ದಾರೆ.

ಅಮೀರ್ ಖಾನ್ ಪತ್ನಿ ಕಿರಣ್ ರಾವ್, ಚಿತ್ರೋದ್ಯಮದಲ್ಲಿಯೇ ಹೆಸರು ಮಾಡಿದ್ದಾರೆ. ಧೋಬಿ ಘಾಟ್ ಚಿತ್ರದ ನಿರ್ದೇಶನ ಮಾಡಿರುವ ಕಿರಣ್, ಚಿತ್ರಕಥೆ ಹೊಣೆಯನ್ನು ಹೊತ್ತಿದ್ದರು. ಮುಂಬೈ ಚಲನಚಿತ್ರೋದ್ಯಮದ ಅಧ್ಯಕ್ಷರಾಗಿ 2015 ರಲ್ಲಿ ಕಿರಣ್ ಆಯ್ಕೆಯಾಗಿದ್ದರು.

ನಟ ಅಕ್ಷಯ್ ಕುಮಾರ್ ಪತ್ನಿ ಹಾಗೂ ನಟಿ ಟ್ವಿಂಕಲ್ ಖನ್ನಾ, ಮದುವೆಯಾದ್ಮೇಲೆ ಸುಮ್ಮನೆ ಕುಳಿತಿಲ್ಲ. ಇಂಟಿರಿಯರ್ ಕ್ಷೇತ್ರದಲ್ಲಿ ಟ್ವಿಂಕಲ್ ಕೆಲಸ ಮಾಡ್ತಿದ್ದಾರೆ. ಕಾಲಂ ರೈಟರ್ ಆಗಿರುವ ಟ್ವಿಂಕಲ್ ಈಗಾಗಲೇ ಮೂರು ಪುಸ್ತಕ ಬರೆದಿದ್ದಾರೆ.

ಜಾನ್ ಅಬ್ರಹ್ರಾಂ ಪತ್ನಿ ಪ್ರಿಯಾ, ಬಣ್ಣದ ಲೋಕದಿಂದ ದೂರವಿದ್ದಾರೆ. ಆದ್ರೆ ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಪ್ರಿಯಾ, ಎನ್ನಾರೈ ಫೈನಾನ್ಷಿಯಲ್ ಅನಲಿಸ್ಟ್ ಮತ್ತು ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports

    ಬಂಗಾಳ ಕ್ರಿಕೆಟ್ ಆಟಗಾರರಿಗೆ ಸಹಾಯಕ ಸಿಬ್ಬಂದಿಗೆ ಕೋವಿಡ್-19

    ಬಂಗಾಳ ಕ್ರಿಕೆಟ್ ಆಟಗಾರರಿಗೆ ಕೋರೋನ  ಪಶ್ಚಿಮ ಬಂಗಾಳ ಕ್ರಿಕೆಟ್ 6 ಆಟಗಾರರಿಗೆ  ಒಬ್ಬ ಸಹಾಯಕ ಸಿಬ್ಬಂದಿಗೆ ಕೋವಿಡ್-19 ಪತ್ತೆಯಾಗಿದೆ. 6 ಬಂಗಾಳ ಕ್ರಿಕೆಟ್ ಆಟಗಾರರಿಗೆ ಮತ್ತು ಒಬ್ಬ ಸಹಾಯಕ ಸಿಬ್ಬಂದಿ ಕೋವಿಡ್-19 ಪತ್ತೆಯಾಗಿದೆ.ರಣಜಿ ಪಂದ್ಯಗಳ ತಯಾರಿಯಲ್ಲಿ ತೊಡಗಿದ್ದ ಬಂಗಾಳ ಆಟಗಾರರು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದು ತರಬೇತಿ ಯನ್ನು ರದ್ದುಗೊಳಿಸಲಾಯಿತು.ರಣಜಿ ಪಂದ್ಯಗಳನ್ನು ಆಡಲು ಬೆಂಗಳೂರು ಪ್ರವಾಸವನ್ನು ಜ.8 ಕೈಗೊಳ್ಳಬೇಕಾಗಿತ್ತು ಅದನ್ನು ಮುಂದೂಡಲಾಗಿದೆ. ಕೋವಿಡ್-19 ದೃಢಪಟ್ಟ ಆಟಗಾರರು ಸುದೀಪ್ ಚಟರ್ಜಿ ಅನುಸ್ಟಪ್ ಮಜುಂದಾರ್ ಕಾಜಿ ಜುನೈದ್ ಸೈಫಿ ಗೀತ್…

    Loading

  • ಸುದ್ದಿ

    ಮದುವೆಯಾದ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ರೈಲಿನಿಂದ ತಳ್ಳಿ ತಾನೂ ಹಾರಿದ…ಕಾರಣ ?

    ಮದುವೆಯಾಗಿ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿ ತಾನೂ ಹಾರಿದ ಘಟನೆ ಅಸ್ಸಾಂನ ಟೆನ್ಸುಕಿಯದ ರೈಲಿನಲ್ಲಿ ನಡೆದಿದೆ.ಈ ಘಟನೆ ಮಂಗಳವಾರ ನಡೆದಿದ್ದು, ತನ್ನ 18 ವರ್ಷದ ಪತ್ನಿ ಬೇಬಿಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ನಂತರ ಪತಿ ಹಿರಾನು ಕೂಡ ಹಾರಿದ್ದಾನೆ. ಆದರೆ ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫತೇಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದಂಪತಿಯನ್ನು ಪೊಲೀಸರು ಹತ್ತಿರದ ಜಿಲ್ಲಾ ಆಸ್ಪತ್ರೆಯ ತುರ್ತು…

  • ಸುದ್ದಿ

    ಝೊಮ್ಯಾಟೋ ಮೇಲೆ 55 ಸಾವಿರ ದಂಡ ವಿಧಿಸಿದ ಕೋರ್ಟ್…ಸಸ್ಯಾಹಾರಿ ಕೇಳಿದಕ್ಕೆ ಮಾಂಸಹಾರಿ ಡೆಲಿವರಿ

    ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ. ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ,…

  • ಉಪಯುಕ್ತ ಮಾಹಿತಿ, ಸಂಬಂಧ

    ಮದುವೆಯಾಗದವರು ತಪ್ಪದೆ ಈ ಸುದ್ದಿಯನ್ನು ಓದಿ ಶಾಕ್ ಆಗ್ತೀರಾ ..!

    ಮದುವೆಯಾಗದ ಜೋಡಿಗೂ ಕೆಲವೊಂದು ಅಧಿಕಾರವಿದೆ. ಆದ್ರೆ ಅನೇಕರಿಗೆ ಈ ಅಧಿಕಾರದ ಬಗ್ಗೆ ಗೊತ್ತಿಲ್ಲ. ಹೊಟೇಲ್ ನಲ್ಲಿ ಒಂದೇ ರೂಮಿನಲ್ಲಿ ಮದುವೆಯಾಗದ ಜೋಡಿ ಇರುವುದು ತಪ್ಪಲ್ಲ. ಪೊಲೀಸ್ ಈ ವಿಷ್ಯದ ಬಗ್ಗೆ ನಿಮ್ಮನ್ನು ಪ್ರಶ್ನೆ ಮಾಡಿದ್ರೆ ಭಯ ಪಡಬೇಕಾಗಿಲ್ಲ. ನಿಮಗೆ ಸಿಕ್ಕ ಅಧಿಕಾರದ ಬಗ್ಗೆ ನೀವು ತಿಳಿದಿದ್ದರೆ ಭಯವಿಲ್ಲದೆ ವಾದ ಮಾಡಬಹುದು.

  • ರೆಸಿಪಿ

    ನಿಮ್ಮ ಮನೆಯಲ್ಲೇ ರುಚಿ ರುಚಿಯಾದ “ಪಾನಿ ಪುರಿ” ತಯಾರಿಸಿ…

    ಸಂಜೆ ಆದ್ರೂ ಸಾಕು, ಏನಾದ್ರೂ ಬಿಸಿ ಬಿಸಿ ಚಾಟ್ಸ್ ತಿನ್ನಬೇಕೆಂದು ಎಲ್ಲಾ ರೀತಿಯ ವಯೋಮಾನದವರಿಗೆ ಇಷ್ಟವಾಗುತ್ತದೆ. ಆದ್ರೆ ಹೆಚ್ಚಾಗಿ ತಳ್ಳು ಗಾಡಿಯಲ್ಲಿ ಸಿಗುವ ಪಾನಿ ಪುರಿಯನ್ನು ತಿನ್ನಲು ಕೆಲವರು ಇಷ್ಟ ಪಡುತ್ತಾರೆ, ಕೆಲವರು ಇಷ್ಟ ಪಡುವುದಿಲ್ಲ.ಯಾಕೆಂದ್ರೆ ತಳ್ಳು ಗಾಡಿಯಲ್ಲಿನ ಸ್ವಚ್ಚತೆ ಕುರಿತು ಕೆಲವರಿಗೂ ಅನುಮಾನ. ಆದ್ರೂ ತಿನ್ನದೇ ಸುಮ್ಮನೆ ಇರಲಿಕ್ಕೆ ಆಗೋದಿಲ್ಲ.