ಸುದ್ದಿ

MNC ಕಂಪನಿಯಲ್ಲಿ ಕೆಲಸ ಮಾಡ್ತಿರೋ ಈ ಜೋಡಿ ಪುಟ್‌ಪಾತ್‌ ಮೇಲೆ ತಿಂಡಿ ಮಾರೋದ್ಯಾಕೆ ಅಂತ ಕಾರಣಾ ಗೊತ್ತಾ..?ತಿಳಿದರೆ ಅಚ್ಚರಿಯಂತು ಗ್ಯಾರಂಟಿ..,!

35

ಈ ಸ್ಟೋರಿನಾ ಮೊದಲ ಬಾರಿ ನೋಡಿದವರಿಗೆ ಇದು ವಿಚಿತ್ರ ಎನ್ನಿಸಬಹುದು. ಆದ್ರೆ ಈ ಜೋಡಿಯ ಕೆಲಸದ ಹಿಂದೆ ಒಂದೊಳ್ಳೆ ಸಂದೇಶವಿದೆ. ಅದೇನು ಅನ್ನೋದನ್ನ ಈ ಸ್ಟೋರಿಯಲ್ಲಿ ಓದಿ.

ಮುಂಬೈನ ಖಾಂಡಿವಾಲಿ ಸ್ಟೇಷನ್‌ನಲ್ಲಿ ವಿದ್ಯಾವಂತರಾದ, ಒಳ್ಳೆ ಕಂಪನಿಯಲ್ಲಿ ಒಳ್ಳೆ ಸಂಬಳಕ್ಕೆ ಕೆಲಸ ಮಾಡುವ ಜೋಡಿಯೊಂದು ಫೂಟ್‌ಪಾತ್‌ನಲ್ಲಿ ತಿಂಡಿ ಮಾರುತ್ತಾರೆ. ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯ ಒಳಗೆ ಫೂಟ್‌ಪಾತ್‌ನಲ್ಲಿ ತಿಂಡಿ ಮಾರಿ, ಇವರು ತಮ್ಮ ತಮ್ಮ ಕೆಲಸಕ್ಕೆ ತೆರಳುತ್ತಾರೆ.

ಎಂಬಿಎ ಮಾಡಿರುವ ಈ ಜೋಡಿ ತಿಂಡಿ ಮಾಡೋ ಬಗ್ಗೆ ಒಬ್ಬರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್‌ನಲ್ಲಿ, ಇಷ್ಟು ಒಳ್ಳೆ ಕೆಲಸದಲ್ಲಿದ್ದರೂ, ಅಶ್ವಿನಿ ಶೆಣೈ ಶಾ ಮತ್ತವರ ಪತಿ ಯಾಕೆ ಫೂಟ್‌ಪಾತ್‌ನಲ್ಲಿ ಫುಡ್‌ಸ್ಟಾಲ್ ಹಾಕಿದ್ದಾರೆಂದು ವಿವರಣೆ ನೀಡಿದ್ದಾರೆ.

ಅಶ್ವಿನಿ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ 55 ವಯಸ್ಸಿನ ಮಹಿಳೆ ಕಷ್ಟದಲ್ಲಿದ್ದು, ಆಕೆಯ ಪತಿಗೆ ಪಾರ್ಶ್ವವಾಯುವಾಗಿದೆ. ಪತಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿರುವ ಆಕೆಗೆ , ಈ ದಂಪತಿ ಸಹಾಯಕ್ಕೆ ನಿಂತಿದ್ದಾರೆ. ಆಕೆ ಬೆಳ್ಳಂಬೆಳಿಗ್ಗೆ ಎದ್ದು ತಿಂಡಿ ಮಾಡಿಕೊಟ್ಟರೆ, ಈ ದಂಪತಿ ಫುಡ್‌ಸ್ಟಾಲ್‌ನಲ್ಲಿ ಅದನ್ನ ಮಾರಿ, ಅದರಿಂದ ಬಂದ ಹಣವನ್ನ ಆಕೆಗೆ ನೀಡುತ್ತಾರೆ. ಈ ಮೂಲಕ ಉತ್ತಮ ಸಂದೇಶ ಸಾರಿರುವ ಇವರು, ಮಾದರಿ ದಂಪತಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ