ವಿಚಿತ್ರ ಆದರೂ ಸತ್ಯ

ಸಮುದ್ರದಲ್ಲಿ ವಿಚಿತ್ರಗಳು! ಹೌದು ಸಮುದ್ರದಲ್ಲಿ ಹೀಗೂ ಇರುತ್ತೆ. ಮುಂದೆ ಓದಿ ಶಾಕ್ ಆಗ್ತೀರಾ!!!

1250

ಸಮುದ್ರ ಗರ್ಭದಲ್ಲಿ ಮುತ್ತು ರತ್ನ ಹವಳಗಳಷ್ಟೇ ಅಲ್ಲದೇ ಬಂಗಾರ ಕೂಡ ಇದೆ. ಆದರೆ ಇವನ್ನೆಲ್ಲ ಬಿಟ್ಟೂ ಕೆಲವು ಸೋಜಿಗಗಳು ಸಿಗುತ್ತವೆ. ಇವುಗಳಲ್ಲಿ ಡೈವಿಂಗ್ ಬೆಲ್ ಸ್ಪೈಡರ್ ಕೂಡ ಒಂದು. ಇದು ನೆಲದ ಜೇಡವಾದರೂ ಬಲೆ ಕಟ್ಟುವುದು ಸಮುದ್ರದ ಆಳದಲ್ಲಿ. ಜೀವನದ ಬಹುಪಾಲು ಸಮಯವನ್ನು ನೀರಿನಡಿಯಲ್ಲೇ ಸವೆಸುತ್ತದೆ.

ಸಮುದ್ರದ ಜೇಡಗಳು :-

                                                                                     ಮೂಲ

ನೀರಿನಡಿಯಲ್ಲಿ ಇದು ಉಸಿರಾಡಲು ಕಂಡುಕೊಂಡ ಪರಿ ಅದ್ಭುತ. ತನ್ನ ಹೊಟ್ಟೆಯ ರೋಮಗಳಲ್ಲಿ ಗಾಳಿಯ ಗುಳ್ಳೆ ಯನ್ನು ಹಿಡಿದುಕೊಂಡು ನೀರಿನಾಳಕ್ಕೆ ಹೋಗುತ್ತದೆ. ಅಲ್ಲಿ ಬಲೆಯನ್ನು ಕಟ್ಟಿ ಈ ಗುಳ್ಳೆಯನ್ನು ಬಲೆಯಲ್ಲಿ ಬಂಧಿಸಿಟ್ಟು ಅದರಲ್ಲಿ ತಲೆ ಇರಿಸಿ ಕುಳಿತುಕೊಳ್ಳುತ್ತದೆ. ಈ ಗುಳ್ಳೆ ನೀರಿನಿಂದ ಆಮ್ಲಜನಕ ಹೀರುವುದರಿಂದ ಜೇಡಕ್ಕೆ ಸುಮಾರು ಒಂದು ದಿನಕ್ಕೆ ಆಗುವಷ್ಟು ಆಮ್ಲಜನಕ ಸಿಗುತ್ತದೆ. ಮಾರನೇ ದಿನ ಬಂದು ಇನ್ನೊಂದು ಗುಳ್ಳೆ ಒಯ್ದರಾಯಿತು. ಹೆಣ್ಣು ಜೇಡ ದೊಡ್ಡ ಗುಳ್ಳಯನ್ನೇ ಒಯ್ದು ಅದರಲ್ಲಿ ಮೊಟ್ಟೆ ಕೂಡ ಇಡುತ್ತದೆ.

ಸಮುದ್ರದ ಆಳದಲ್ಲಿ ನದಿಗಳು ಕೂಡ ಹರಿಯುತ್ತವೆ :-

ಮೆಕ್ಸಿಕೊ ದಲ್ಲಿ ಇಂಥಹ ನದಿಯೊಂದು 2010 ರಲ್ಲಿ ಡೈವಿಂಗ್ ಮಾಡುವವರು ಗಮನಿಸಿದರು. ಸುಮಾರು 25 ಅಡಿ ಆಳದಲ್ಲಿ ಸುಂದರವಾದ ನದಿಯನ್ನು ನೋಡಿದ ಇವರಿಗೆ ಇದು ಕನಸೋ ನನಸೋ ಅಂತ ಗೊತ್ತಾಗಲಿಲ್ಲ. ಆ ನದಿಗೆ ದಂಡೆಗಳು , ಆ ದಂಡೆಗುಂಟ ಮರಗಳು, ನದಿಯ ನೀರಿನ ಮೇಲೆ ಮೋಡದಂಥ ಹೊಗೆ ನೋಡಿ ಇವರಿಗೆ ತಾವು ಭೂಮಿಯ ಮೇಲೆ ಗಾಳಿಯಲ್ಲಿ ಹಾರುತ್ತಾ ನದಿಯನ್ನು ನೋಡುತ್ತಿರುವ ಅನುಭವ ಆಗಿದೆ.

ನೀರಿನಲ್ಲಿ ನೀರು ಹರಿಯಲು ಹೇಗೆ ಸಾಧ್ಯ? ಅಸಲಿಗೆ ಈ ನದಿಯ ನೀರು ಉಪ್ಪು ಮತ್ತು ಹೈಡ್ರೋಜನ್ ಸಲ್ಫೈಡ್ ಮಿಶ್ರಣವಾಗಿರುವುದರಿಂದ ಉಳಿದ ನೀರಿಗಿಂತಲೂ ಹೆಚ್ಚು ಭಾರ. ಆದುದರಿಂದ ಉಳಿದ ನೀರಿನಲ್ಲಿ ಮಿಕ್ಸ್ ಆಗುವುದಿಲ್ಲ ಮತ್ತು ಹರಿಯುತ್ತದೆ ಕೂಡ. ಆದರೆ ಹೈಡ್ರೋಜನ್ ಸಲ್ಫೈಡ್ ಒಂದು ವಿಷ. ಆದುದರಿಂದ ಇದರಲ್ಲಿ ಮೀನುಗಳು ಇರುವುದಿಲ್ಲ.

ಸಮುದ್ರದಾಳದಲ್ಲಿ ಅರಣ್ಯ ಕೂಡ ಇವೆ:-

ನೂರೈವತ್ತು ಅಡಿ ಆಳದಲ್ಲಿ ಹುಟ್ಟಿದ ಮರಗಳು ನೀರಿನ ಮೇಲ್ಮೈ ತನಕ ಬೆಳೆಯುತ್ತವೆ. ದಿನಕ್ಕೆ ಎರಡಡಿ ಬೆಳೆಯುವ ಮರಗಳೂ ಇವೆ.

ಸಮುದ್ರ ಮಧ್ಯದಲ್ಲಿ ದೊಡ್ಡ ದೊಡ್ಡ ಸಿಂಕ್ ಹೋಲ್ಗಳು :- 

                                                             ಮೂಲ

ಸುತ್ತಲೂ ಪಾಚಿ ಬೆಳೆದಿದ್ದರೂ ಈ ದೊಡ್ಡ ಹೊಂಡದಲ್ಲಿ ಮಾತ್ರ ಕ್ಲಿಯರ್ ನೀರು ಇರುತ್ತದೆ. ಸುಮಾರು ಆರು ನೂರು ಅಡಿ ಸಿಂಕ್ ಹೋಲ್ ನಲ್ಲಿ ಸ್ಕ್ಯೂಬಾ ಡೈವ್ ಮಾಡುವುದು ಅತ್ಯಂತ ಸಾಹಸದ ಕೆಲಸ. ಕೆಳಗೆ ಹೋದಾಗ ಸೂರ್ಯ ಕಿರಣದ ಒಂದೇ ಒಂದು ಸ್ರೋತ ಕಂಡುಬರುತ್ತದೆ.

ಮೂಲ

 

ಮೂಲ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ