ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಿಕ್ಷುಕನ ಮನೆಯಲ್ಲಿ 1.70 ಕೋಟಿಗಳ ಹಣ ಸಿಕ್ಕಿದೆ. ಮುಂಬೈ ಪಟ್ಟಣದಲ್ಲಿನ ಕೊಳಗೇರಿಗೆ ಸೇರಿದ ಭಿಕ್ಷುಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ಪ್ರತಿದಿನ ಭಿಕ್ಷೆ ಬೇಡುವುದು, ದೊರೆತ್ತದ್ದನ್ನು ತಿನ್ನುವುದು, ಬಂದದ್ದನ್ನು ಎತ್ತಿಡುವುದು…..ಇದೇ ಆತನ ದಿನನಿತ್ಯದ ಕೆಲಸವಾಗಿತ್ತು.

ಕೆಲವು ವರ್ಷಗಳಿಂದಲೂ ಹೀಗೆಯೇ ಮಾಡುತ್ತಿದ್ದ ಆತನಿಗೆ ವಯಸ್ಸಾಗಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮೊದಲೇ ಹೇಳಿದಂತೆ ತನ್ನವರೆಂಬುವರು ಯಾರೂ ಇಲ್ಲದಿರುವುದರಿಂದ ಸ್ಥಳೀಯ ಸ್ವಯಂಸೇವಾ ಸಂಸ್ಥೆಯು ಮುಂದಾಗಿ ಆತನ ಅಂತ್ಯಕ್ರಿಯೆಗಳನ್ನು ನಡೆಸಿದೆ.

ಆತನ ಗುಡಿಸಲಲ್ಲಿ ಹುಡುಕುವಾಗ ಕಣ್ಣು ಕುಕ್ಕುವ ದೃಶ್ಯ ಕಂಡು ಬಂದಿತು. ಪ್ಲಾಸ್ಟಿಕ್ ಚೀಲಗಳಲ್ಲಿ, ಗೋಣಿ ಚೀಲಗಳಲ್ಲಿ ಹಣ ಕಾಣಿಸಿದ್ದು, ಅದನ್ನು ಲೆಕ್ಕ ಹಾಕಿದಾಗ 1 ಕೋಟಿ 70 ಲಕ್ಷ 35 ಸಾವಿರ ರೂಪಾಯಿಗಳಿದ್ದವು. ಇದನ್ನು ಕಂಡವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ.

ಆದರೆ ಆತ ಒಂದೊಂದು ಪೈಸೆಯನ್ನೂ ಕೂಡಿಟ್ಟ ಭಿಕ್ಷುಕನಾದ್ದರಿಂದ ಅನಾಥನಂತೆಯೇ ಲೋಕವನ್ನು ಬಿಟ್ಟಿದ್ದಾನೆ. ಕಳೆದ ವರ್ಷ ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿಯೂ ನಡೆದಿದೆ. ಆದ್ದರಿಂದಲೇ ಹುಟ್ಟಿದಾಗ ಏನನ್ನೂ ತರುವುದಿಲ್ಲ. ಹೋಗುವಾಗ ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ ಎಂಬ ವೇದಾಂತದ ಮಾತಿದೆ.

ಈ ಮಾತನ್ನು ಯಾರಾದರೂ ಮೃತಪಟ್ಟಿದ್ದಾಗ ಆಡುತ್ತಾರೆ ಆದರೂ ಮನುಷ್ಯನು ಮಾತ್ರ ಜೀವನವಿಡೀ ಹಣದ ಸುತ್ತಲೂ ಸುತ್ತುತ್ತಿರುತ್ತಾನೆ. ಭಿಕ್ಷೆ ಬೇಡಿ ಅಷ್ಟು ಹಣವನ್ನು ಗಳಿಸಿದ್ದಾನೆ ಎಂದರೆ ನಂಬಲು ಸ್ವಲ್ಪ ಅಚ್ಚರಿಯೇ ಆಗುತ್ತದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಾಸ್ 7ನೇ ಸೀಸನ್ ಈಗ 7ನೇ ವಾರಕ್ಕೆ ಕಾಲಿಡುತ್ತಿದೆ .ಕಳೆದ ಎಪಿಸೋಡ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ನಟಿ ರಕ್ಷಾ ಸೋಮಶೇಖರ್ ಬೆನ್ನಲ್ಲೇ ಮತ್ತೊಬ್ಬ ಸದ್ಯಸ್ಯರು ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಎರಡನೇ ಶಾಕ್ ನೀಡಿದ್ದಾರೆ. 6 ನೇ ವಾರಂತ್ಯದಲ್ಲಿ ಮನೆಯಿಂದ ನಟಿ ಸುಜಾತ ಅವರು ಹೊರ ಹೋಗಿದ್ದೇ ತಡ ಹೊಸ ಸದ್ಯರೊಬ್ಬರನ್ನು ಬಿಗ್ ಬಾಸ್ 2ನೇ ವೈಲ್ಡ್ ಕಾರ್ಡ್ಎಂಟ್ರಿ ಮೂಲಕ ಮನೆಯೊಳಕ್ಕೆ ಕರೆಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ…
ಒಂದು ಸಲ ಹಾವು ಕಚ್ಚಿದರೂ ಇಹ ಲೋಕ ಸೇರುವವರ ಮಧ್ಯೆ ಇಲ್ಲೊಬ್ಬಳು ಹುಡುಗಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಅದೆಷ್ಟು ಬಾರಿ ಹಾವು ಕಚ್ಚಿದ್ದರೂ ಈಕೆ ಸಾವನ್ನಪ್ಪಿಲ್ಲ. ಹಿಮಾಚಲ ಪ್ರದೇಶದ 18ರ ಕಿಶೋರಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಈಕೆಗೆ ಏನೂ ಆಗಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೀಷಾ ಅಪ್ಪ ಸುಮೀರ್ ವರ್ಮಾ ಇದೆಲ್ಲಾ ಆಕೆಗೆ ಮಾಮೂಲಿ ಎನ್ನುತ್ತಾರೆ.
ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಮಗನ ಕನಸನ್ನು ನನಸು ಮಾಡಿದ ತಂದೆ… ಅಜಯ್ ಬಾರೋಟ್ ಸಣ್ಣ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ ಕಷ್ಟವಾಯಿತು. ಯಾಕಂದರೆ ಅಜಯ್ ಬೆಳೆಯುತ್ತಾ ಅಂಗವೈಕಲ್ಯದಿಂದ ಬಳಲತೊಡಗಿದ. ಹೀಗಾಗಿ ಆತನಿಗೆ ವಧು ಇಲ್ಲದೆ ಮದುವೆ ಮಾಡಲು ಕುಟುಂಬ ತೀರ್ಮಾನ ಮಾಡಿತ್ತು. ಹಾಗೆಯೇ…
ಉಡುಪಿ: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ದಿನೇಶ್ ಆತ್ಮಹತ್ಯೆಗೆ ಶರಣಾದ ತಂದೆ. ಇವರು ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ದಿನೇಶ್ ಇತ್ತೀಚೆಗಷ್ಟೇ ಸಾಲ ಮಾಡಿ, ಮಗಳ ಮದುವೆ ಮಾಡಿಸಿದ್ದರು. ಈ ಮದುವೆ ಸಾಲದ ಜೊತೆಗೆ ಟ್ಯಾಕ್ಸಿ ಕೂಡಾ ಅಪಘಾತಕ್ಕೀಡಾಗಿತ್ತು. ಇದರಿಂದ ಚಿಂತೆಗೀಡಾಗಿದ್ದ ದಿನೇಶ್, ಉಡುಪಿಯ ಇಂದ್ರಾಳಿ ಬಳಿಯ ರೈಲ್ವೆ ಟ್ರ್ಯಾಕ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟ್ಯಾಕ್ಸಿಯಲ್ಲಿ ದುಡಿದು ಮನೆ ನಿಭಾಯಿಸುವ ಜೊತೆಗೆ ಮದುವೆಗೆ ಮಾಡಿದ್ದ ಸಾಲ…
ಸೀತಾಫಲ ಭಾರತೀಯರಿಗೆ ಚಿರಪರಿಚಿತ, ಆದರೆ ಎಷ್ಟೋ ಜನರಿಗೆ ಇದರ ನಿಜವಾದ ಪೌಷ್ಟಿಕತೆಯ ಬಗ್ಗೆ ತಿಳಿದಿಲ್ಲ. ನಿಜವಾಗಿ ಹೇಳಬೇಕೆಂದರೆ ಸೀತಾಫಲ ನಮ್ಮ ದೇಹಕ್ಕೆ ಬರುವ ಎಲ್ಲ ರೋಗಗಳಿಗೂ ಫುಲ್ ಸ್ಟಾಪ್ ಇಡುವ ಅದ್ಬುತ ಶಕ್ತಿ ಹೊಂದಿದೆ. ದಿನಾಲೂ ಒಂದು ಸೀತಾಫಲದ ಸೇವನೆ ದೇಹಕ್ಕೆ ಬಲಶಾಲಿ ಮದ್ದು. ಕಸ್ಟರ್ಡ್ ಆಪಲ್, ಶುಗರ್ ಆಪಲ್, ಚೆರಿಮೋಯಾ ಮೊದಲಾದ ಇತರ ಹೆಸರುಗಳಿಂದಲೂ ಕರೆಯಲ್ಪಡುವ ಈ ಸೀತಾಫಲವನ್ನು ಬೆಲೆಯ ತಕ್ಕಡಿಯಲ್ಲಿ ತೂಗದೇ ಪೋಷಕಾಂಶಗಳ ತಕ್ಕಡಿಯಲ್ಲಿ ತೂಗಿದರೆ ಇದು ಭಾರೀ ಬೆಲೆಯುಳ್ಳ ಫಲವಾಗಿದೆ. ತೂಕ ಹೆಚ್ಚಿಸಬೇಕಾದವರಿಗೆ…
ದಿನನಿತ್ಯ ವ್ಯಾಯಾಮ, ಡಯಟ್, ಕಟ್ಟುನಿಟ್ಟಾದ ಆಹಾರ ಮಾಡಿದರೂ ಸಹ ಬೊಜ್ಜು ಕರಗುವುದಿಲ್ಲ. ಹಲವು ಪ್ರಯತ್ನ ಮಾಡಿದರು ಕೆಲವರಿಗೆ ಬೊಜ್ಜು ಕರಗಿಸಲು ಹಾಗುವುದಿಲ್ಲ. ಆದರೆ ಕೆಲವು ಹಣ್ಣುಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿದೆ. ಹೌದು ನಿಮಗೆ ಇಷ್ಟವಾದ ರುಚಿಕರವಾದ ಕೆಲವು ಹಣ್ಣುಗಳಿಂದ ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಫೈಬರ್ ಮತ್ತು ಪೋಷಕಾಂಶಗಳಿರುತ್ತವೆ. ಈಗ ನಾವು ದಿನನಿತ್ಯ ಸೇವನೆ…