ಆಧ್ಯಾತ್ಮ

ಸತ್ತ ನಂತರ ಅತೃಪ್ತಿ ಆತ್ಮಗಳು ಹೋಗುವದಾದ್ರೂ ಎಲ್ಲಿಗೆ ಗೊತ್ತಾ ???

4414

ಸಾಮಾನ್ಯವಾಗಿ ನಮ್ಮಲ್ಲಿ ಒಂದು ವಾಡಿಕೆಯಿದೆ, ಅದೇನಂದ್ರೆ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ನೀನು ಸತ್ತಾಗ ನರಕ್ಕೆ ಹೋಗೋದು ಅಂತ ಶಾಪ ಹಾಕ್ತಾರೆ.  ಹಿಂದೂ ಧರ್ಮದ ಪ್ರಕಾರ  ಮನುಷ್ಯರು ಮಾಡಿದ ಪಾಪ ಅಥವಾ ಪುಣ್ಯಗಳನ್ನು ಅನುಸರಿಸಿ ,ಅವರು ಸತ್ತನಂತರ ಅವರ ಆತ್ಮಗಳು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತವೆಂದು ಎಲ್ಲರ ವಿಶ್ವಾಸ.

ಯಾರಾದರೂ ಸಹಜ ಸಾವು ಕಂಡರೆ ಆತ್ಮಗಳು ಅವರ ಕರ್ಮ ಅನುಸಾರವಾಗಿ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತವೆಂದು ಹೇಳುತ್ತಾರೆ. ಆದ್ರೆ ಯಾರಾದರು ಆಕಸ್ಮಿಕ ಅಪಘಾತ, ಅನಾರೋಗ್ಯ ಅಥವಾ ಯಾವುದೋ ಕಾರಣಗಳಿಂದ ಆತ್ಮಹತ್ತ್ಯ ಮಾಡಿಕೊಂಡು ಸತ್ತರೆ ಅವರು ತಮ್ಮ ಆಸೆಗಳ ಈಡೇರದ ಕಾರಣ ಅಂತಹ ಆತ್ಮಗಳು ಮಾತ್ರ ಹಾಗೆ ಹೋಗುವುದಿಲ್ಲವೆಂದು ಹಿಂದೂ ಪುರಾಣಗಳಲ್ಲಿ ತಿಳಿಸಲಾಗಿದೆ. ಹಾಗಾದರೆ, ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಎಲ್ಲಿಗೆ ಹೋಗುತ್ತವೆ? ಏನು ಮಾಡುತ್ತವೆ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹಿಂದೂ ಪುರಾಣಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವುದು ಮಹಾ ಪಾಪದ ಕೆಲಸ. ಇತರೆ ಯಾವುದೇ ರೀತಿಯಲ್ಲಿ ಮರಣಿಸಿದರೂ ಅದನ್ನು ಸಹಜವಾದ ಸಾವೆಂದು ಪರಿಗಣಿಸಲಾಗುತ್ತದೆ. ಆದರೆ, ಆಯುಷ್ಯ ಮುಗಿಯುವುದಕ್ಕೆ ಮುಂಚೆಯೇ ಬಲವಂತವಾಗಿ ಪ್ರಾಣ ಕಳೆದುಕೊಳ್ಳುವುದು ಆತ್ಮಹತ್ಯೆ ಮಾಡಿಕೊಳ್ಳುವುದು ಕ್ಷಮಾರ್ಹ ವಲ್ಲದ ಅಪರಾಧಗಳು ಎಂದು ಹಿಂದೂ ಪುರಾಣಗಳಲ್ಲಿ ತಿಳಿಸಲಾಗಿದೆ. ಆಯುಷ್ಯ ಮಗಿಯದೆ ಆತ್ಮಹತ್ಯೆ ಮಾಡಿಕೊಂಡರೆ, ಅವರ ಆಸೆಗಳು ಈಡೇರಿರುವುದಿಲ್ಲ. ಮತ್ತು  ಮರಣವೆಂಬ ಪ್ರಕ್ರಿಯೆ ಸಹ ಅಪೂರ್ಣವಾಗಿರುತ್ತೆ ಅಂತ ಹೇಳಲಾಗಿದೆ.

ಹಾಗಾದ್ರೆ ಆತ್ಮಹತ್ಯೆ ಮಾಡಿಕೊಂಡವರ ಆತ್ಮಗಳು ಎಲ್ಲಿಗೆ ಹೋಗುತ್ತವೆ?

ಆತ್ಮ ಹತ್ಯೆ ಮಾಡಿಕೊಂಡವರ ಆತ್ಮಗಳು ಸ್ವರ್ಗ ಅತವಾ ನರಕಕ್ಕೆ ಹೋಗದೆ ‘ಕಾಮಲೋಕ’ ಎಂಬ ಪ್ರತ್ಯೇಕ ಲೋಕದಲ್ಲಿ ಸಿಲುಕಿಕೊಂಡು ಅಲ್ಲಿಯೇ ತಿರುಗಾಡುತ್ತಿರುತ್ತವಂತೆ. ಅಂದರೆ, ಒಬ್ಬ ವ್ಯಕ್ತಿಯ ಆಯುಷ್ಯ 90 ವರ್ಷವಿದ್ದರೆ, ಒಂದು ವೇಳೆ ಆ ವ್ಯಕ್ತಿ 20 ವರ್ಷ ವಯಸ್ಸಿನಲ್ಲಿ ಆತ್ಮ ಹತ್ಯೆ ಮಾಡಿಕೊಂಡರೆ, ಮಿಕ್ಕುಳಿದ 70 ವರ್ಷಗಳ ಕಾಲ ಕಾಮಲೋಕದಲ್ಲಿ ತಿರುಗುತ್ತಲೇ ಇರುತ್ತಾರಂತೆ. ಅಲ್ಲಿಯವರೆಗೂ ಮರಣವೆಂಬ ಪ್ರಕ್ರಿಯೆ ಪೂರ್ತಿಯಾಗುವುದಿಲ್ಲವಂತೆ.
ಹೀಗೆ ಕಾಮಲೋಕದಲ್ಲಿರುವ ಆತ್ಮಗಳು ಭೌತಿಕ ಪ್ರಪಂಚದ ಆಗು ಹೋಗುಗಳನ್ನು ನೋಡಬಹುದಂತೆ. ದಿನವೂ ಒಂದು ಶಿಕ್ಷೆಯಂತೆ ಕಾಲ ಕಳೆಯುತ್ತದಂತೆ.       ಹಾಗೂ ಆತ್ಮಗಳಿಗೆ ಶಾಂತಿ ಇರುವುದಿಲ್ಲವಂತೆ ಅಂತ ಹೇಳಲಾಗಿದೆ.

ಆತ್ಮಗಳನ್ನು ನೋಡಬಲ್ಲ, ಅವುಗಳನ್ನು ಮಾತನಾಡಿಸಬಲ್ಲವರಿಗೆ ಇಂತಹ ಕಾಮಲೋಕದ ಆತ್ಮಗಳು ಹಾನಿಯನ್ನುಂಟುಮಾಡುತ್ತವೆ.
ಕಾಮಲೋಕದಲ್ಲಿ ಮರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಆತ್ಮಗಳು ಮರುಜನ್ಮ ಪಡೆಯಲು ಬೇರೊಂದು ದೇಹದಲ್ಲಿ ಸೇರಿಕೊಳ್ಳುತ್ತವಂತೆ. ಆದರೆ, ಆ ಜನ್ಮ ಮಾತ್ರ ಅವರಿಗೆ ಬಹಳ ಕಷ್ಟಕರವಾಗಿರುತ್ತದಂತೆ. ಇಲ್ಲಿ ಓದಿ:-ಹಿಂದೂ ಧರ್ಮದಲ್ಲಿ ಯಾರಾದರೂ ಸತ್ತರೆ ಕೇಶ ಮುಂಡನ ಮಾಡುತ್ತಾರೆ. ಏಕೆ ಗೊತ್ತಾ?

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸದ್ಯದಲ್ಲೇ ಪೂರ್ತಿಗೊಲ್ಲಲಿದೆ ಜಗತ್ತಿನ ಅತ್ಯಂತ ಎತ್ತರದ ಶಿವನ ಪ್ರತಿಮೆ…!

    ಜೈಪುರ: ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆ (ಸ್ಟಾಚು ಆಫ್ ಯುನಿಟಿ) ಬಳಿಕ ಭಾರತ ಇನ್ನೊಂದು ಅತೀ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದು, ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿ ಭಾರತ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಎಂದು ಬಿರುದು ಪಡೆದಿದೆ. ಈಗ ರಾಜಸ್ಥಾನದ ನಾಥದ್ವಾರದ ಗಣೇಶ್ ತೆಕ್ರಿ ಪ್ರದೇಶದಲ್ಲಿ ಪ್ರಪಂಚದ ಅತೀ ಎತ್ತರದ…

  • ಜ್ಯೋತಿಷ್ಯ

    ಗಣೇಶನನ್ನು ನೆನೆಯುತ್ತಾ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(20 ಮಾರ್ಚ್, 2019) ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ…

  • ಉಪಯುಕ್ತ ಮಾಹಿತಿ

    ಶೀಘ್ರದಲ್ಲೇ ‘ಸಂಪೂರ್ಣ ಉಚಿತ ಜಿಯೋ ಆಂಡ್ರಾಯ್ಡ್ ಫೋನ್ ‘..!ತಿಳಿಯಲು ಈ ಲೇಖನ ಓದಿ..

    ರಿಯಲನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತನ್ನ ಆಕರ್ಷಕ ಆಫರ್ ಮತ್ತು ವೇಗದ ಇಂಟರ್ನೆಟ್ ನಿಂದಾಗಿ ಜನರಿಗೆ ಹತ್ತಿರವಾಗಿದೆ.

  • ಸುದ್ದಿ

    ಬ್ರಾಹ್ಮಣ ರೂಪದಲ್ಲಿರುವ ಪಾಲಿಯ ಗಣೇಶ, ಬಲ್ಲಾಲೇಶ್ವರನನ್ನು ನೋಡಿದ್ದೀರಾ?ಇದರ ಇತಿಹಾಸವೇನು ಗೊತ್ತ.?

    ಅಷ್ಟವಿನಾಯಕ ದೇವಾಲಯಗಳಲ್ಲಿ ಪನ್ವೆಲ್‌ನಲ್ಲಿರುವ ಬಲ್ಲಾಲೇಶ್ವರ ದೇವಾಲಯವು ಪ್ರಮುಖವಾದದ್ದು, ಬ್ರಾಹ್ಮಣ ರೂಪದಲ್ಲಿರುವ ಗಣೇಶನ ವಿಶೇಷತೆ ಬಗ್ಗೆ ತಿಳಿಯಿರಿ. ಮುಂಬೈಯಲ್ಲಿರುವ ಪನ್ವೆಲ್‌ನ ಬಲ್ಲಾಲೇಶ್ವರ ದೇವಾಲಯವು ಅಷ್ಟವಿನಾಯಕ ದೇವಾಲಯಗಳಲ್ಲಿ ಒಂದು. ಮುಖ್ಯವಾಗಿ ಮರ ಮತ್ತು ಕಲ್ಲಿನಿಂದ ಮಾಡಿದ ನೀಲಿ ಮತ್ತು ಹಳದಿ ರಚನೆಯು ದೇವಾಲಯವನ್ನು ಹೋಲುವಂತಿಲ್ಲ, ಆದರೆ ಗಣೇಶ ಭಕ್ತರು ಮತ್ತು ನಿವಾಸಿಗಳು ಇದನ್ನು ಪನ್ವೆಲ್‌ನ ಅತ್ಯಂತ ಹಳೆಯ, ವಿಶೇಷ ಪೂಜಾ ಸ್ಥಳವೆಂದು ಪರಿಗಣಿಸಿದ್ದಾರೆ. ಮುಂಬೈಯಲ್ಲಿರುವ ಪನ್ವೆಲ್‌ನ ಬಲ್ಲಾಲೇಶ್ವರ ದೇವಾಲಯವು ಅಷ್ಟವಿನಾಯಕ ದೇವಾಲಯಗಳಲ್ಲಿ ಒಂದು. ಮುಖ್ಯವಾಗಿ ಮರ ಮತ್ತು ಕಲ್ಲಿನಿಂದ ಮಾಡಿದ…

  • ಶಿಕ್ಷಣ

    ಪಿಯುಸಿ ಬಳಿಕ ಡಿಪ್ಲೊಮಾ 2ನೇ ವರ್ಷಕ್ಕೆ ಸೇರಲು ಅವಕಾಶ…!

    ಬೆಂಗಳೂರು: ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ 2ನೇ ವರ್ಷಕ್ಕೆ ದಾಖಲಾಗಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಬ್ರಿಡ್ಜ್ ಕೋರ್ಸ್‌ ಕೂಡ ಸಿದ್ಧವಾಗುತ್ತಿದೆ. ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್‌ ಎಂಟ್ರಿ ಮೂಲಕ ಎಂಜಿನಿಯರಿಂಗ್‌ ಎರಡನೇ ವರ್ಷಕ್ಕೆ ಸೇರಿಕೊಳ್ಳಲು ಈ ವರೆಗೂ ಅವಕಾಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ದಾಖಲಾಗಲು ಅವಕಾಶ…