ಜ್ಯೋತಿಷ್ಯ, ಭವಿಷ್ಯ

ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…

550

ಹಿಂದೂ ಧರ್ಮದ ಜ್ಯೋತಿಷ್ಯದ ಪ್ರಕಾರ ರತ್ನಗಳ ಧಾರಣೆಯಿಂದ ಕ್ಷೇಮ ಪ್ರಾಪ್ತವಾಗುತ್ತದೆ ಹಾಗೂ ಉದ್ಯೋಗ, ವ್ಯಾಪಾರ, ವಿವಾಹ, ಸಂತಾನ ಹೀಗೆ ನಾನಾ ಬಯಕೆಗಳ ಈಡೇರಿಕೆ ಹಾಗೂ ಜೀವನದಲ್ಲಿ ಉಂಟಾಗುವ ತೊಂದರೆಗಳಿಗೂ ರತ್ನಗಲಿಂದ ಪರಿಹಾರ ಸಿಗುತ್ತೆ ಎಂದು ಹಿಂದೂಗಳಲ್ಲಿ ನಂಬಿಕೆ ಇದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದಕ್ಕೂ ತನ್ನದೇ ಆದ ನಿಯಮವನ್ನು ಹೊಂದಿರುತ್ತದೆ ಅಂತೆಯೇ ನೀವು ರತ್ನಗಳನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಒಳಿತು. ನೀವು ಧರಿಸುವ ರತ್ನಗಳು ನಿಮಗೆ ಒಳಿತು ಮಾಡಬಬೇಕು ಅಂದ್ರೆ ನೀವು ಇಂತಹ ನಿಯಮಗಳನ್ನು ಪಾಲಿಸಲೇಬೇಕು ..

ನೀವು ಧರಿಸುವ ರತ್ನಗಳು ನಿಮಗೆ ಒಳಿತು ಮಾಡಬೇಕು ಅಂದ್ರೆ ನೀವು ಇಂತಹ ನಿಯಮಗಳನ್ನು ಪಾಲಿಸಲೇಬೇಕು …

*ಯಾವುದೇ ರತ್ನ ಧರಿಸುವ ಮುನ್ನ ರತ್ನಶಾಸ್ತ್ರಜ್ಞರ ಸಲಹೆ ಇಲ್ಲದೆ ರತ್ನಧಾರಣೆಯನ್ನು ಮಾಡಬಾರದು.

*ಜಾತಕದಲ್ಲಿ ಯಾವ ದೆಶೆ ಯಾವ ಭುಕ್ತಿ ನಡೆಯುತ್ತಿದೆ ಎಂದು ತಿಳಿದ ನಂತರ ರತ್ನಗಳನ್ನು ಧರಿಸಬೇಕು.

*ಜಾತಕದಲ್ಲಿ ಕೆಟ್ಟಫಲಕೊಡುತಿರುಲ ಗ್ರಹದ ಸಂಬಂಧಪಟ್ಟ ರತ್ನವನ್ನು ಧರಿಸಿದರೆ ಉತ್ತಮ.

*ರತ್ನಗಳನ್ನು ಧರಿಸಲು ನಿಮ್ಮ ಜನ್ಮ ನಕ್ಷತ್ರ ಅಥವಾ ಹೆಸರಿಗೆ ತಾರಾಬಲವಿರುವ ದಿನವೇ ಧರಿಸಬೇಕು.

*ಯಾವುದೇ ತಿಂಗಳ ಕೃಷ್ಣಪಕ್ಷದಲ್ಲಿ ರತ್ನಧಾರಣೆ ಮಾಡಬಾರದು.

*ಯಾವ ಗ್ರಹದ ರತ್ನ ಧರಿಸಬೇಕೋ ಆ ಗ್ರಹದ ವಾರ ದಿನವನ್ನೆ ಗೊತ್ತುಪಡಿಸಿ ಧರಿಸಬೇಕು

ಮೊದಲು ಧರಿಸುವಾಗ ರಾಹುಕಾಲ, ಯಮಗಂಡಕಾಲಗಳಲ್ಲಿ ರತ್ನಧಾರಣೆ ಮಾಡಬಾರದು

*ಮುತ್ತುಗಳಿಗೆ ಹಾಗೂ ಯಾವುದೇ ರತ್ನಗಳಿಗೆ ರಂಧ್ರ ಮಾಡಿಸಿ ಉಪಯೋಗಿಸಬಾರದು.

*ಸಾಮಾನ್ಯವಾಗಿ ರತ್ನಧಾರಣೆಯೆಂದು ಬ್ರಾಹ್ಮಿ ಮುಹೂರ್ತವೇ ಉತ್ತಮ ಫಲ ಸಿಗುತ್ತದೆ.

*ಯಾವುದೇ ರತ್ನವನ್ನು ಧರಿಸುವ ಸಮಯದಲ್ಲಿ ಹೆಚ್ಚು ಫಲಕಾರಿಯಾಗಲು ಕ್ಷೀರದಿಂದ ತೊಳೆದು ನಿಮ್ಮ ಮನೆಯ ದೇವರ ಮುಂದೆ ಪೂಜಿಸಿ ಧರಿಸಿದರೆ ಉತ್ತಮ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ