ದೇವರು-ಧರ್ಮ

ಶನಿ ಭಗವಾನನ ಕಾಟದಿಂದ ಪಾರಾಗಲು, ಹನುಮಂತ ದೇವರನ್ನು ಪೂಜಿಸೋದು ಏಕೆ ಗೊತ್ತಾ..?

1803

ಶನಿ ಭಗವಾನನ ‘ಕೆಟ್ಟ ಪ್ರಭಾವ’ದಿಂದ, ಪರಿಣಾಮಗಳಿಂದ ಪಾರಾಗಲು ಭಗವಾನ್ ಹನುಮಂತನ ಪ್ರಾರ್ಥನೆಯೊಂದೇ ಸರ್ವ ಔಷಧಿ.

 

ತ್ರೇತಾಯುಗದಲ್ಲಿ ರಾವಣನು ಬ್ರಹ್ಮ ಮತ್ತು ಶಿವನ ವರ ಪ್ರಸಾದದಿಂದ ಎಲ್ಲಾ ಲೋಕಗಳನ್ನು ಗೆದ್ದಿದ್ದನು. ಅಲ್ಲದೆ ಆತ ನವಗ್ರಹಗಳನ್ನು ಜಯಿಸಿ, ತನ್ನ ಸಿಂಹಾಸವನ್ನೇರುವ ಮೆಟ್ಟಿಲುಗಳಾಗಿ ಅವರನ್ನು ನೇಮಿಸಿಕೊಳ್ಳುತ್ತಾನೆ.ಆಗ ಲಂಕೆಗೆ ಬಂದ ಹನುಮಂತನು ಶನಿ ಭಗವಾನನು ಸೇರಿದಂತೆ ಎಲ್ಲಾ ನವಗ್ರಗಳನ್ನು ರಾವಣನ ಕಪಿಮುಷ್ಟಿಯಿಂದ ಬಿಡಿಸಿರುತ್ತಾನೆ.

 

 

ರಾಮಾಯಣ ದಲ್ಲಿ ,ರಾವಣನ ಬಿಗಿ ಹಿಡಿತದಿಂದ ಶನಿಯನ್ನು , ಹನುಮಂತನನ್ನು, ರಕ್ಷಿಸಿದ ಕಾರಣದಿಂದ, ಕೃತಜ್ಞತೆಯಾಗಿ ,ಹನುಮಂತನಿಗೆ ಭಾಷೆಯನ್ನೂ ನೀಡಿ, ಯಾರು (ಹನುಮಂತ )ನನ್ನು ಪ್ರಾರ್ಥಿಸುತ್ತಾರೋ, ಅದರಲ್ಲಿಯೂ ಶನಿವಾರದಂದು ಪೂಜಿಸುತ್ತಾರೋ, ಅಂತಹವರಿಗೆ ಶನಿಗ್ರಹದ ” ದೋಷ ” ದಿಂದ ಮುಕ್ತರನ್ನಾಗಿಸಿ ಅಥವಾ ಕಡೆಯ ಪಕ್ಷ ಕಷ್ಟಗಳನ್ನು ಆದಷ್ಟೂ ಕಡಿಮೆ ಮಾಡಿಸುವುದಾಗಿ ತಿಳಿಸುತ್ತಾನೆ.

ಇಲ್ಲಿ ಓದಿ :-ಹನುಮಂತನ ಮೊದಲ ಅವತಾರದ ಬಗ್ಗೆ ನಿಮ್ಗೆ ಗೊತ್ತಾ..?

ಮತ್ತೊಂದು ಕಥೆಯ ಪ್ರಕಾರ…

ಹನುಮಂತ ಮತ್ತು ಶನಿ ಭಗವಾನ್ ನಡುವೆ ನಡೆದ ಜಟಾಪಟಿಯಲ್ಲಿ , ಶನಿಯು ಹನುಮಂತನ ಹೆಗಲನ್ನು ಏರಿ, ಹನುಮಂತ ನ ಮೇಲೆ ಪ್ರಭಾವವನ್ನು ಬೀರುವ ಸಂದರ್ಭದಲ್ಲಿ , ಹನುಮಾನನು ಬಹಳ ಎತ್ತರವಾಗಿ ಬೆಳೆಯಲಾರಂಭಿಸಿದಾಗ, ಶನಿಯು ಹನುಮಾನನ ತೋಳುಗಳ ನಡುವೆ ಸಿಲುಕಿಕೊಂಡು, ಕೊಠಡಿಯ ಚಾವಣಿಯ ನಡುವೆ ಸಿಲುಕಿ,

ಅತ್ಯಂತ ನೋವಿನಿಂದ ನರಳುತ್ತಾ, ತಡೆದುಕೊಳ್ಳಲಾಗದೆ, ಶನಿಯು ಹನುಮಾನನನ್ನು,ತನ್ನನ್ನು ಈ ಕಷ್ಟದಿಂದ ಪಾರು ಮಾಡಲು ಬೇಡಿಕೊಳ್ಳಲಾಗಿ , ಯಾರು ಹನುಮಾನನನ್ನು,ಪ್ರಾರ್ಥಿಸುತ್ತಾರೋ, ಅಂತಹ ವ್ಯಕ್ತಿಗಳ ಮೇಲಿನ ತನ್ನ ಪ್ರಭಾವವನ್ನು ಕಡಿಮೆ ಮಾಡುವುದಾಗಿ, ಶನಿ ಭಗವಾನನು ಆಶ್ವಾಸನೆಯನ್ನು ನೀಡಿದ ಮೇಲೆ , ಹನುಮಾನನು ಶನಿ ಭಗವಾನನ್ನು ಬಿಡುಗಡೆ ಮಾಡುತ್ತಾನೆ…..

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ