ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ವರ್ಷದ ಹಿಂದೆ ಅಧಿಕೃತವಾಗಿ ಈ ಧರೆಯಲ್ಲಿ ಅವತರಿಸಿರುವ ಪುಟ್ಟ ಬಾಲಕಿಯೀಗ ಆರೋಗ್ಯವಂತಳಾಗಿ ಬೆಳೆಯುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ಮಗು ಎರಡು ಬಾರಿ ಜನಿಸಿದ್ದು, ಇದಕ್ಕಾಗಿ ಆಧುನಿಕ ವೈದ್ಯಕೀಯಕ್ಕೆ ಕೃತಜ್ಞತೆಗಳನ್ನು ಹೇಳಬೇಕಾಗಿದೆ.
ಅಮೆರಿಕದ ಹ್ಯೂಸ್ಟನ್ನಲ್ಲಿರುವ ಮಕ್ಕಳ ಆಸ್ಪತ್ರೆಯ ಸರ್ಜನ್ಗಳಾದ ಡ್ಯಾರೆಲ್ ಕಾಸ್ ಮತ್ತು ಒಲುಯಿಂಕ್ ಒಲ್ಟೊಯಿ ಅವರು ಕಳೆದ ವರ್ಷ ಸೋನೊಗ್ರಾಮ್ ಪರೀಕ್ಷೆಯಲ್ಲಿ ಆಗ ಕೇವಲ 23 ವಾರ ಪ್ರಾಯವಾಗಿದ್ದ ಲಿನ್ಲೀ ಹೋಪ್ಳ ಮಿದುಳು ಬಳ್ಳಿಯ ಬುಡದಲ್ಲಿ ಭಾರೀ ಗಡ್ಡೆಯೊಂದು ಬೆಳೆದಿರುವುದು ಪತ್ತೆಯಾದ ಬಳಿಕ ಆ ಶಿಶುವನ್ನು ತಾಯಿ ಮಾರ್ಗರೆಟ್ ಬೋಮರ್(38)ಳ ಗರ್ಭಕೋಶದಿಂದ ಹೊರಕ್ಕೆ ತೆಗೆದಿದ್ದರು. ಆಗ ಮೊದಲ ಬಾರಿಗೆ ಶಿಶು ಈ ಧರೆಗಿಳಿದಿತ್ತು.
ಅದು(ಗಡ್ಡೆ) ಹೆಚ್ಚುಕಡಿಮೆ ಇನ್ನೊಂದು ತಲೆಯಂತೆ ಕಾಣುತ್ತಿತ್ತು ಎಂದು ಮಾರ್ಗರೆಟ್ ನೆನಪಿಸಿಕೊಂಡಿದ್ದಾಳೆ.ಗರ್ಭಕೋಶದಲ್ಲಿನ ಶಿಶುವಿನ ಮಿದುಳು ಬಳ್ಳಿಯಲ್ಲಿದ್ದ ಗಡ್ಡೆ ಇನ್ನೂ ಬೆಳೆಯುತ್ತಲೇ ಇತ್ತು. ಗಡ್ಡೆಯ ಬೃಹತ್ ಗಾತ್ರದಿಂದಾಗಿ ಈ ಶಿಶು ಬದುಕುಳಿಯುವುದಿಲ್ಲ ಎಂದು ವೈದ್ಯರು ಮಾರ್ಗರೆಟ್ಗೆ ತಿಳಿಸಿದ್ದರು.
ಸ್ಯಾಕ್ರೋಕೊಸಿಜೀಲ್ ಟೆರಾಟೋಮಾ ಎಂದು ವೈದ್ಯಕೀಯ ಭಾಷೆಯಲ್ಲಿ ಹಣೆಪಟ್ಟಿ ಅಂಟಿಸಿಕೊಂಡಿದ್ದ ಈ ಟ್ಯೂಮರ್ ಭ್ರೂಣದಿಂದ ರಕ್ತವನ್ನು ಸೆಳೆಯುತ್ತಿತ್ತು ಮತ್ತು ಇದರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಾಗಿತ್ತು.
ಅದು ಎಂತಹ ಬಿಕ್ಕಟ್ಟನ್ನು ಸೃಷ್ಟಿಸಿತ್ತೆಂದರೆ ವೈದ್ಯರು ಕಾಯುವಂತಿರಲಿಲ್ಲ, ಶಿಶು ಬದುಕುಳಿಯಬೇಕೆಂದರೆ ಅವರು ತಕ್ಷಣವೇ ಶಸ್ತ್ರಚಿಕಿತ್ಸೆಯನ್ನು ನಡೆಸಲೇಬೇಕಾಗಿತ್ತು.
ವೈದ್ಯರ ತಂಡ ಶಿಶುವನ್ನು ತಾಯಿಯ ಗರ್ಭಕೋಶದಿಂದ ಹೊರಗೆ ತೆಗೆದಿದ್ದರು. ಐದು ಗಂಟೆಗಳ ಸುದೀರ್ಘ ಅವಧಿಯ ಶಸ್ತ್ರಚಿಕಿತೆಯನ್ನು ನಡೆಸುತ್ತಿದ್ದಾಗ ಮಗುವಿನ ಸಾವು-ಬದುಕಿನ ಸಾಧ್ಯತೆ 50:50ರಷ್ಟಿತ್ತು.
ಪೂರ್ತಿ 20 ನಿಮಿಷಗಳ ಕಾಲ ಶಿಶು ತಾಯಿಯ ಶರೀರದಿಂದ ಹೊರಗಿತ್ತು ಮತ್ತು ಟ್ಯೂಮರ್ನ್ನು ಬೇರ್ಪಡಿಸಿದಾಗ ಅದರ ತೂಕ ಕೇವಲ ಒಂದು ಪೌಂಡ್ ಮೂರು ಔನ್ಸ್ ಅಂದರೆ 538.64 ಗ್ರಾಮ್ಗಳಷ್ಟಿತ್ತು. ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಭ್ರೂಣವನ್ನು ಅತ್ಯಂತ ಎಚ್ಚರಿಕೆಯಿಂದ ತಾಯಿಯ ಗರ್ಭಾಶಯದಲ್ಲಿ ಮರು ಸ್ಥಾಪಿಸಲಾಗಿತ್ತು.
ಮೂರು ತಿಂಗಳುಗಳ ಬಳಿಕ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಲಿನ್ಲೀ ಎರಡನೇ ಬಾರಿ, ಅಂದರೆ ಈ ಬಾರಿ ಅಧಿಕೃತವಾಗಿ ಜನಿಸಿದಾಗ ಐದು ಪೌಂಡ್ ಐದು ಔನ್ಸ್(2.410 ಕೆ.ಜಿ) ತೂಗುತ್ತಿದ್ದಳು.
ಈಗ ಒಂದು ವರ್ಷ ಪ್ರಾಯವಾಗಿರುವ ಲಿನ್ಲೀ ಯಾವುದೇ ಆರೋಗ್ಯ ಸಮಸ್ಯೆಯಲ್ಲದೆ ಸೊಂಪಾಗಿ ಬೆಳೆಯುತ್ತಿದ್ದಾಳೆ. ತನ್ನ ಮಗು ಎಷ್ಟೊಂದು ಜಾಣೆಯಾಗಿದ್ದಾಳೆ ಎಂದು ತಾಯಿ ಮಾರ್ಗರೆಟ್ಗೆ ಹೆಮ್ಮೆಯೋ ಹೆಮ್ಮೆ.
ಅವಳು ನಡೆಯುವುದನ್ನು ಮತ್ತು ಓಡುವುದನ್ನು ಇಷ್ಟಪಡುತ್ತಾಳೆ. ಇದೊಂದು ದೊಡ್ಡ ಪವಾಡವಾಗಿದೆ. ಅವಳು ನಮ್ಮ ಪಾಲಿಗೆ ಅದ್ಭುತ ಆನಂದವಾಗಿದ್ದಾಳೆ ಎನ್ನುತ್ತಾಳೆ ಆಕೆ.
ವರ್ಷದಲ್ಲಿ ಎರಡು ಬಾರಿ ಹುಟ್ಟುಹಬ್ಬ ಆಚರಿಸುತ್ತಿರುವ ಲಿನ್ಲೀಯ ಭವಿಷ್ಯ ಉಜ್ವಲವಾಗಿದೆ. ಆಕೆ ತನ್ನ ಮನಸ್ಸಿಗೆ ಬಂದಿದ್ದನ್ನು ಮಾಡಲಿ, ಅವಳಿಗೆ ಯಾವುದೇ ಮಿತಿಯಿಲ್ಲ ಎನ್ನುತ್ತಾಳೆ ಮಾರ್ಗರೆಟ್.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಿರಿಕ್ ಪಾರ್ಟಿಯ ನಟಿ ರಶ್ಮಿಕಾ ಮಂದಣ್ಣರ ಹವಾ ಈಗ ಟಾಲಿವುಡ್ ನಲ್ಲಿ ತುಂಬಾ ಜೋರಾಗಿದೆ.ಗೀತಾ ಗೋವಿಂದಂ ಚಿತ್ರದ ಯಶಸ್ವಿ ನಂತರ ಯುವನಟರಿಂದ ಹಿಡಿದು ಸ್ಟಾರ್ ಹೀರೋಗಳ ಸಿನಿಮಾಗಳಿವರೆಗೂ ರಷ್ಮಿಕಾರವರೆ ಬೇಕು ಎನ್ನುವಷ್ಟರ ಮಟ್ಟಿಗೆ ಇವರ ಹವಾ ಕ್ರಿಯೇಟ್ ಆಗಿದೆ.
ಜಗತ್ತಿನ ಸರ್ವಾಧಿಕಾರಿಗಳಲ್ಲಿ 10 ಹತ್ತು ಮಂದಿ ಅಗ್ರ ಗಣ್ಯರು ಇವರೇ ವಿಶ್ವದ ಹತ್ತು ಸರ್ವಾಧಿಕಾರಿಗಳು ಅಲ್ಲಿ ಇವರು ಹೇಳಿದ್ದೇ ಶಾಸನ, ಮಾಡಿದ್ದೇ ಕಾನೂನು
ಓದು ಮುಗಿದ ನಂತರ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಲ್ಲೂ ಇರುವುದು ಸಾಮಾನ್ಯವಾಗಿದೆ, ಓದು ಮುಗಿದ ನಂತರ ಏನಾದರು ಸಾಧನೆ ಮಾಡುವ ಬದಲು ಓದುವಾಗಲೇ ಏನಾದರು ಸಾಧನೆ ಮಾಡೋಣ ಅನುವ ಛಲಕ್ಕೆ ಬಿದ್ದು ನಮ್ಮ ದೇಶ ಮಾತ್ರವಲ್ಲದೆ ಬೇರೆ ದೇಶದವರು ಮೆಚ್ಚುವ ಕೆಲಸವನ್ನ ಮಾಡಿದ 16 ವರ್ಷದ ಹುಡುಗಿಯ ಈ ಕಥೆಯನ್ನ ಕೇಳಿದರೆ ನೀವು ಕೂಡ ಹೆಮ್ಮೆ ಪಡುತ್ತೀರಿ. ಸಾಮಾನ್ಯವಾಗಿ ಒಂದು AC ಖರೀದಿ ಮಾಡಬೇಕು ಅಂದರೆ ಏನಿಲ್ಲ ಅಂದರೆ 25 ಸಾವಿರ ರೂಪಾಯಿ…
ಪವರ್ ಫುಲ್ ಆ್ಯಕ್ಟಿಂಗ್, ಪವರ್ ಫುಲ್ ಡ್ಯಾನ್ಸ್, ಪವರ್ ಫುಲ್ ವಾಯ್ಸ್, ಫುಲ್ ಪವರ್ನಲ್ಲೇ ಆ್ಯಕ್ಷನ್. ಪವರ್ ಸ್ಟಾರ್ ಎನ್ನಲು ಇನ್ನೇನು ಬೇಕು ಅಲ್ಲವೇ, ಹೌದು ಕನ್ನಡದ ‘ರಾಜರತ್ನ’ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೋದಲ್ಲಿ ಬಂದಲ್ಲಿ ಗೆಳೆಯರಿರುವುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಬಿಡುವು ಸಿಕ್ಕಾಗೆಲ್ಲಾ ಅಪ್ಪು ಗೆಳೆಯರೊಂದಿಗೆ ಟ್ರಿಪ್ ಹೋಗುತ್ತಾರೆ ಎಂಬ ಮಾತಿದೆ. ಹಾಗಿದ್ರೆ ಸ್ನೇಹಿತರ ದಿನ ಬುಟ್ ಬಿಡ್ತಾರಾ ಇಲ್ಲ ಎಂಬುದಕ್ಕೆ ನಟ ಪುನೀತ್ ರಾಜ್ಕುಮಾರ್ ಅವರು ಹಾಕಿರುವ ಈ…
ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ.ಅತ್ಯಾಚಾರ ಹಾಗೂ ಬಲವಂತ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಹಾಯವಾಗುವಂತಹ ಮಾಡೆಲ್ ಒಂದು ತಯಾರಾಗಿದೆ.
ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ.