ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟದ ಸೀಟುಗಳಿಗೆ ಆನ್‌ಲೈನ್ ನೋಂದಣಿ, ಆಪ್ಶನ್ ಎಂಟ್ರಿ, ಶುಲ್ಕಪಾವತಿ ಮಾಡುವ ಅಭ್ಯರ್ಥಿಗಳು ಮುಂದಿನ ಸಾಲಿನಿಂದ ಸೈಬರ್ ಕೆಫೆ ಸೇರಿದಂತೆ ಕಂಪ್ಯೂಟರ್ ಮೊರೆ ಹೋಗುವ ಅಗತ್ಯವಿಲ್ಲ. ಇದನ್ನೆಲ್ಲಾ ಬೆರಳ ತುದಿಯಲ್ಲೇ ಮಾಡಿ ಮುಗಿಸಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ವ್ಯವಸ್ಥೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿಸಲು ಬೇಕಾದ ಸಾಫ್ಟ್ವೇರ್ ತಯಾರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. 2018ರ ಏಪ್ರಿಲ್‌ನಲ್ಲಿ ಸಿಇಟಿ ನಡೆಯಲಿದ್ದು, ಇದಾದ ನಂತರದ ಎಲ್ಲಾ ಪ್ರಕ್ರಿಯೆಯನ್ನ ವಿದ್ಯಾರ್ಥಿಗಳು ಮೊಬೈಲ್ ಮೂಲಕವೇ ಮಾಡಬಹುದಾಗಿದೆ.
ಎಂಜಿನಿಯರಿಂಗ್, ಭಾರತೀಯ ವೈದ್ಯ ಪದ್ಧತಿಯ ಕೋರ್ಸ್‌ಗೆ ಪ್ರತಿ ವರ್ಷ ಸಿಇಟಿ ಫಲಿತಾಂಶದ ನಂತರ ತೇರ್ಗಡೆಯಾದ ವಿದ್ಯಾರ್ಥಿಗಳ ನೋಂದಣಿ, ದಾಖಲೆ ಪರಿಶೀಲನೆ, ಆಪ್ಶನ್ ಎಂಟ್ರಿ, ಎಂಟ್ರಿ ತಿದ್ದುಪಡಿ, ಸೀಟು ಹಂಚಿಕೆ, ಶುಲ್ಕ ಪಾವತಿ ಇತ್ಯಾದಿ ಪ್ರಕ್ರಿಯೆ ನಡೆಯುತ್ತದೆ.ಶುಲ್ಕಪಾವತಿಸಿದ ವಿದ್ಯಾರ್ಥಿಗಳು ಆಯಾ ಕಾಲೇಜಿನಲ್ಲಿ ದಾಖಲಾಗುತ್ತಾರೆ. 2014ರ ನಂತರ ಸಿಇಟಿ ವ್ಯವಸ್ಥೆಗೆ ಆನ್‌ಲೈನ್ ರೂಪ ನೀಡಲಾಯಿತು. ಆರಂಭದಲ್ಲಿ ಕಾಲೇಜುಗಳ ಮೂಲಕವೇ ನೋಂದಣಿ ಮಾಡಿಸಿಕೊಳ್ಳಲಾಗುತಿತ್ತು. ನಂತರ ವಿದ್ಯಾರ್ಥಿಗಳಿಗೆ ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು.
ನಗರದ ಪ್ರದೇಶದ ವಿದ್ಯಾರ್ಥಿಗಳು ಇದನ್ನು ಚೆನ್ನಾಗಿ ಬಳಿಸಿಕೊಂಡಿದ್ದರು. ಹೀಗಾಗಿಯೇ ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ಸೈಬರ್ ಕೆಫೆ ಮೊರೆ ಹೋಗುತ್ತಿದ್ದರು. ತಮ್ಮ ಎಲ್ಲಾ ದಾಖಲೆಗಳನ್ನು ಸೈಬರ್ ಕೆಫೆಯವರಿಗೆ ನೀಡಿ, ಅವರಿಂದಲೇ ಭರ್ತಿ ಮಾಡಿಸುತ್ತಿದ್ದರು. ಇದರಿಂದ ಹತ್ತಾರು ಅನಾಹುತ ಆಗಿರುವ ನಿದರ್ಶನವೂ ಪ್ರಾಧಿಕಾರದ ಮುಂದಿದೆ. ಇದನ್ನೆಲ್ಲ ಅರಿತ ಪ್ರಾಧಿಕಾರದ ಅಧಿಕಾರಿಗಳು, ಮುಂದಿನ ವರ್ಷದಿಂದ ಸಿಇಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಿಸಿ, ವಿದ್ಯಾರ್ಥಿ ಸ್ನೇಹಿಯಾಗಿಸಲು ಕ್ರಮ ತೆಗೆದುಕೊಂಡಿದ್ದಾರೆ.
ಸಾಫ್ಟ್ವೇರ್ ಬದಲಾವಣೆ:-
ಸಿಇಟಿ ಸಾಫ್ಟ್ವೇರ್ ಬದಲಾಯಿಸುವ ಕಾರ್ಯ ಆರಂಭವಾಗಿದೆ. ಕೆಇಎ ಕಾರ್ಯನಿರ್ವಹಕ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕೂಡ ನಡೆದಿದೆ.
ಹೊಸ ಸಾಫ್ಟ್ವೇರ ರಚನೆಯ ಜವಾಬ್ದಾರಿಯನ್ನು ಎನ್‌ಐಸಿಗೆ ವಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾಹಿತಿ ಸುಲಭದಲ್ಲಿ ಸಿಗುವು ಮತ್ತು ಅತ್ಯಂತ ಸರಳ ವಿಧಾನದಲ್ಲಿ ಮಾಹಿತಿ ಅಪ್‌ಲೋಡ್ ಮಾಡಬಹುದಾಗಿದೆ .
ಮೊಬೈಲ್ ಲಿಂಕ್ ಮಾಡಲಾಗುತ್ತಿದೆ:-
ಹೊಸ ಸಾಫ್ಟ್ವೇರ್‌ಗೆ ಮೊಬೈಲ್ ಲಿಂಕ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಿಇಟಿಯ ಎಲ್ಲಾ ಪ್ರಕ್ರಿಯೆಯನ್ನು ತಮ್ಮಲ್ಲಿರುವ ಮೊಬೈಲ್ ಮೂಲಕವೇ ಪೂರೈಸಬಹುದು. ವೃತ್ತಿಪರ ಕೋರ್ಸ್‌ಗಳ ಆನ್‌ಲೈನ್ ನೋಂದಣಿ, ಆಪ್ಶನ್ ಎಂಟ್ರಿ, ಅರ್ಜಿ ತಿದ್ದುಪಡಿ, ಶುಲ್ಕ ಪಾವತಿ ಕೂಡ ಮೊಬೈಲ್‌ನಲ್ಲೇ ಮಾಡಬಹುದು ಮತ್ತು ಸೀಟು ಹಂಚಿಕೆಯ ಫಲಿತಾಂಶವನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು.
ಲಾಗಿನ್ ಐಡಿಯಲ್ಲೂ ಕೆಲವೊಂದು ಬದಲಾವಣೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಲ್ಲಿ ಅಥವಾ ಅವರ ಪಾಲಕ, ಪೋಷಕರಲ್ಲಿ ಮೊಬೈಲ್ ಫೋನ್ ಇರುವುದರಿಂದ ಸಿಇಟಿ ಪ್ರಕ್ರಿಯೆ ಮುಂದಿನ ವರ್ಷದಿಂದ ಸುಲಭವಾಗಲಿದೆ. ಸರ್ವರ್ ಸಮಸ್ಯೆ ಬಾರದ ರೀತಿಯಲ್ಲಿ ಸಾಫ್ಟ್ವೇರ್‌ಗೆ ಮೊಬೈಲ್ ಲಿಂಕ್ ಮಾಡುತ್ತಿದ್ದಾರೆ.
ಹೊಸ ಅಭ್ಯರ್ಥಿಗಳು :-
ಸಿಇಟಿಗೆ ಪ್ರತಿ ವರ್ಷ ಹೊಸ ಅಭ್ಯರ್ಥಿಗಳು ಬರುವುದರಿಂದ ಯಾವುದೇ ರೀತಿಯ ಸುಧಾರಣೆ ತಂದರೂ, ಒಂದಲ್ಲೊಂದು ತಪ್ಪು ನಡೆಯುತ್ತಲೇ ಇರುತ್ತದೆ. ವಿದ್ಯಾರ್ಥಿಗಳು ಸಿಇಟಿ ಪ್ರಕ್ರಿಯೆಯಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂಬುದರ ಬಗ್ಗೆ ಪ್ರತಿ ವರ್ಷ ಪ್ರಾಧಿಕಾರದಿಂದಲೇ ಕಾಲೇಜುಗಳಲ್ಲಿ ಮತ್ತು ಪ್ರಾಧಿಕಾರದ ಕಚೇರಿಯಲ್ಲಿ ಒರಿಯಂಟೇಷನ್ ಕಾರ್ಯಕ್ರಮ ನಡೆಸಲಾಗುತ್ತದೆ.
ಮಾರ್ಗಸೂಚಿ, ವೇಳಾಪಟ್ಟಿ ಹೊಂದಿರುವ ಬೊÅಷರ್ ಕೂಡ ನೀಡಲಾಗುತ್ತದೆ.ಹೀಗಾಗಿ ವಿದ್ಯಾರ್ಥಿಗಳು ಪಾಲಕರ ಜತೆ ಕುಳಿತು ಮೊಬೈಲ್‌ನಲ್ಲಿ ಸಾವಕಾಶದಿಂದ ಎಲ್ಲಾ ಪ್ರಕ್ರಿಯೆ ಮುಗಿಸಲು ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನಿ ಪ್ಲಾಂಟ್ ಅನ್ನೊದು ಸಾಮಾನ್ಯವಾಗಿ ಮನೆಯಲ್ಲಿಡೋ ಒಂದು ಗಿಡ. ಇದನ್ನು ಬೆಳ್ಸೋದು ಅಷ್ಟೇನ್ ಕಷ್ಟ ಅಲ್ಲ ಬಿಡಿ. ದಿನನಿತ್ಯ ಅದರ ಕಡೇ ಸ್ವಲ್ಪ ಕಣ್ಣಾಯ್ಸಿ ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರ ಮತ್ತು ಚೀನಾದ ಪೆಂಗ್ ಶು ಪ್ರಕಾರ ಮನಿ ಪ್ಲಾಂಟ್ನಿಂದ ಮನೆಯಲ್ಲಿ ಅದ್ರಷ್ಟ ತಾನಾಗೇ ತಾನೇ ಬದ್ಲಾಗತ್ತೆ.
ಫೋಟೋ ಪೋಸ್ಟ್ ಮಾಡಿದ ವ್ಯಕ್ತಿ ನಿಮಗೆ ಟ್ಯಾಗ್ ಮಾಡಿಲ್ಲವಾದಲ್ಲಿ ಮಾತ್ರ ಈ ಸಂದೇಶ ನಿಮಗೆ ಬರಲಿದೆ. ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಫೋಟೋವನ್ನು ಗುರುತಿಸಲು ಫೇಶಿಯಲ್ ರೆಕಗ್ನೈಸ್ ಟೆಕ್ನಾಲಜಿಯನ್ನು ಬಳಸಲಿದೆ.
ಬೈಕಿನಲ್ಲಿ ಹೆಲ್ಮೆಟ್ ಹಾಕದೆ ಹೋಗುತ್ತಿದ್ದರೆ ಟ್ರಾಫಿಕ್ ಪೊಲೀಸರು ದಂಡ ಹಾಕಿದರೆ ಸರಿ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ ದಂಡ ಬೀಳುತ್ತೆ…..ಅದು ಸಹ ಸರಿ. ಆದರೆ ತನ್ನದೇ ಹೊಲದಲ್ಲಿ ನಿಲ್ಲಿಸಿದ್ದ ಎತ್ತಿನ ಬಂಡಿಗೆ ದಂಡ ಹಾಕುವುದೆಂದರೆ…? ಅದೂ ಒಂದು ಸಾವಿರ ರೂಪಾಯಿ…! ಇಂಥದ್ದೊಂದು ಘಟನೆ ಉತ್ತರ ಪ್ರದೇಶದ ಡೆಡ್ರಾಡೂನ್ ವ್ಯಾಪ್ತಿಯ ಶಹಾಪುರ ಹೊರವಲಯದಲ್ಲಿರುವ ಚಾರ್ಬಾ ಗ್ರಾಮದ ಹಸನ್ ಎಂಬಾತನಿಗೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಸಬ್ ಇನ್ಸ್ ಪೆಕ್ಟರ್ ಪಂಕಜ್ ಕುಮಾರ್ ಮತ್ತವರ ತಂಡ ನೂತನ ಸಾರಿಗೆ…
ಜಗತ್ತಿನಲ್ಲೇ ಅತೀ ಹೆಚ್ಚಾಗಿ ಸೇವಿಸುವ ಹಣ್ಣು ಬಾಳೆಹಣ್ಣು. ಬಾಳೆಹಣ್ಣು ಅತ್ಯಂತ ಹೆಚ್ಚು ಪೋಷಕಾಂಶವುಳ್ಳ ಆಹಾರ ಎಂದು ವೈದ್ಯರಿಂದ ಹಿಡಿದು ಪ್ರತಿಯೊಬ್ಬರು ಶಿಫಾರಸು ಮಾಡುತ್ತಾರೆ. ಇದನ್ನು ಸೇವಿಸುವುದರಿಂದ ತಕ್ಷಣವೇ ಶಕ್ತಿ ತುಂಬುತ್ತದೆ. ಒಂದು ರೀತಿಯಲ್ಲಿ ಗ್ಲೂಕೊಸ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಕೂಡ ಹೇಳಬಹುದು.
ಕುರುಕ್ಷೇತ್ರ’ ಸಿನಿಮಾದ ಆಡಿಯೋ ಬಿಡುಗಡೆ ಇದೇ ಭಾನುವಾರ (ಜುಲೈ 7) ನಡೆಯಲಿದೆ. ಈ ವಿಶೇಷವಾಗಿ ಸಿನಿಮಾದ ಹೊಸ ಪೋಸ್ಟರ್ ಹೊರ ಬಂದಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮದ ಪಾಸ್ ನಲ್ಲಿ ದರ್ಶನ್ ಫೋಟೋ ಇಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಆದರೆ, ಇದೀಗ ದರ್ಶನ್ ಪೋಸ್ಟರ್ ಮೂಲಕವೇ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಸ್ವಾಗತ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ಒಂದು ವಿಶೇಷ ಇದೆ. ಇದು ದರ್ಶನ್ ಅವರ 50 ಸಿನಿಮಾ. ಆದರೆ, ಈ ಹಿಂದೆ ಬಂದ ಪೋಸ್ಟರ್…
ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ…