ಸುದ್ದಿ

ವಿಶೇಷ ರೀತಿಯಲ್ಲಿ ಗಣೇಶನ ವಿಸರ್ಜನೆ ಮಾಡಿದ ಕೋಲಾರದ ಜನ..ಕಣ್ಮನ ಸೆಳೆದ ಆ ಮೆರವಣಿಗೆ ಹೇಗಿತ್ತು ಗೊತ್ತ.?

59

ನಗರದ ಪ್ರವಾಸಿ ಮಂದಿರದ ಮುಂಭಾಗ ಅಖಂಡ ಭಾರತ ವಿನಾಯಕ ಮಹಾಸಭಾ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಗಳನ್ನು ಭಾನುವಾರ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು.

ಬೃಹತ್ ವೇದಿಕೆಯಲ್ಲಿ ವೆಂಕಟರಮಣಸ್ವಾಮಿ ರೂಪಿ ಸಿದ್ಧಿ-ಬುದ್ಧಿ ಸಮೇತ ಗಣಪನ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಮಹಾಸಭಾ ಒಂದು ವಾರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು.

ಭಾನುವಾರ ಮಧ್ಯಾಹ್ನ ಬೃಹತ್ ಕೇಸರಿ ಧ್ವಜ ಹಾರಾಡಿಸುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.ಕೇರಳದ ಚಂಡೆ ವಾದನ, ಷಣ್ಮುಖ, ಉಗ್ರನರಸಿಂಹ, ಕಾಳಿ, ವಿಷ್ಣು, ಈಶ್ವರ, ಶ್ರೀಕೃಷ್ಣ, ತಿರುಪತಿ ತಿರುಮಲ ವೆಂಕಟೇಶ್ವರ ಸೇರಿ ಶಕ್ತಿ ದೇವತೆಗಳ ಪಟ ಪ್ರದರ್ಶನ ಮೆರವಣಿಗೆಯ ಆಕರ್ಷಣೆಯಾಗಿತ್ತು. ಗಾರುಡಿ ಬೊಂಬೆ ಇನ್ನಿತರ ಜಾನಪದ ಕಲಾ ತಂಡಗಳು ರಸ್ತೆಯುದ್ದಕ್ಕೂ ನೀಡಿದ ಪ್ರದರ್ಶನವನ್ನು ಜನತೆ ಕಣ್ತುಂಬಿಕೊಂಡರು.

ಕೋಲಾರಮ್ಮ ಕೆರೆಯಲ್ಲಿ ವಿಸರ್ಜನೆಛತ್ರಪತಿ ಶಿವಾಜಿ ವೇಷಧಾರಿ ಕುದುರೆ ಮೇಲೇರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರನ್ನು ಆಕರ್ಷಿಸಿದರೆ, ಯುವಕರು ಗುಂಪು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿದ ನಂತರ ಕೋಲಾರಮ್ಮ ಕೆರೆಯಲ್ಲಿ ನಿರ್ಮಿಸಿರುವ ಸಾಮೂಹಿಕ ಗಣೇಶ ವಿಸರ್ಜನಾ ಹೊಂಡದಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ಬಜರಂಗದಳ ಜಿಲ್ಲಾ ಸಂಚಾಲಕ ಬಾಬು, ನಗರಸಭಾ ಮಾಜಿ ಸದಸ್ಯರಾದ ಸೋಮಶೇಖರ್, ಮಂಜುನಾಥ್, ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ಮುನಿವೆಂಕಟಯಾದವ್, ಡಾ.ಶಿವಣ್ಣ ಇತರರು ಹಾಜರಿದ್ದರು.

ಬರಪೀಡಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಬೇಡಿಕೆ ಮುಂದಿಟ್ಟುಕೊಂಡು ನಗರದಲ್ಲಿ 6ವರ್ಷಗಳಿಂದ ಅಖಂಡ ಭಾರತ ವಿನಾಯಕ ಮಹಾಸಭಾ ಗಣೇಶೋತ್ಸವವನ್ನು ಶಾಂತಿಯಿಂದ ಆಚರಿಸುತ್ತಿದೆ. ಜಿಲ್ಲೆಗೆ ನೀರಾವರಿ ಯೋಜನೆಗಳು ಮಂಜೂರಾಗಬೇಕು, ಅದು ಯರಗೋಳ್, ಎತ್ತಿನಹೊಳೆ, ಪರಮಶಿವಯ್ಯ ವರದಿ ಅಧಾರಿತ ಹೀಗೆ ಯಾವುದೇ ಮೂಲದಿಂದ ಆದರೂ ಶಾಶ್ವತ ನೀರಾವರಿ ಸೌಲಭ್ಯವನ್ನು ಸರ್ಕಾರ ಆದಷ್ಟು ಬೇಗ ಒದಗಿಸಬೇಕೆಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂ ಶಕ್ತಿ ಚಲಪತಿ ಒತ್ತಾಯಿಸಿದರು.

ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಸಿಗುವವರೆಗೂ ಗಣೇಶೋತ್ಸವ ಮುಂದುವರೆಯಲಿ. ಯುವಕರ ಒಗ್ಗಟ್ಟು ಪ್ರದರ್ಶನದ ಜತೆಗೆ ಶಾಂತಿ ಸೌಹಾರ್ದತೆ ಕಾಪಾಡುವ ರೀತಿಯಲ್ಲಿ ಮೆರವಣಿಗೆ ನಡೆಯಲಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನೀವು ಪ್ಯಾಕೆಟ್ ಹಾಲುಗಳನ್ನ ಬಳಸ್ತಿದೀರಾ! ಎಚ್ಚರಿಕೆ.

    ಈ ಭೂಮಿಗೆ ಕಾಲಿಟ್ಟ ಪ್ರತಿಯೊಬ್ಬರೂ ತಾಯಿಯ ಹಾಲನ್ನ ಕುಡಿದಿರುತ್ತಾರೆ ಮತ್ತು ಬಹಳಷ್ಟು ದಿನಗಳ ತನಕ ಬೇರೆ ಯಾವ ಆಹಾರವನ್ನ ಕೂಡ ಸೇವನೆ ಮಾಡದೆ ಕೇವಲ ತಾಯಿಯ ಎದೆ ಹಾಲನ್ನ ಕುಡಿದು ನಾವು ಬದುಕಿದ್ದೇವೆ, ತಾಯಿಯ ಎದೆ ಹಾಲು ಭೂಲೋಕದಲ್ಲಿ ಸಿಗುವ ಒಂದು ಅಮೃತ ಎಂದು ಹೇಳಿದರೆ ತಪ್ಪಾಗಲ್ಲ. ಮಮತೆ, ಪ್ರೀತಿ ಮತ್ತು ಪೋಷಣೆಯ ಅದ್ಬುತ ಶಕ್ತಿ ಈ ಹಾಲಿನಲ್ಲಿ ಇದೆ. ತಾಯಿಯ ಎದೆ ಹಾಲಿನ ಋಣವನ್ನ ತೀರಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಇನ್ನು ಕೆಲವರಿಗೆ ಈ ಮಮತೆಯ…

  • Automobile

    ಈ ಬೈಕ್ ಕಲುಷಿತ ನೀರಿನಲ್ಲಿ ಓಡಿಸಬಹುದು! ಇದು ಕೊಡೋ ಮೈಲೇಜ್ ಬಗ್ಗೆ ಕೇಳಿದ್ರೆ, ಶಾಕ್ ಆಗ್ತೀರಾ…

    ನಾವು ದಶಕಗಳಿಂದಲೂ ನೀರಿನಲ್ಲಿ ಓಡುವ ಬೈಕ್ ಗಳ ಕತೆಗಳ ಬಗ್ಗೆ ಓದಿರುತ್ತೇವೆ. ಅದೇ ರೀತಿ ಬ್ರೆಜಿಲ್ ಒಬ್ಬರು ನೀರಿನಲ್ಲಿ ಓಡುವ ಬೈಕ್’ನ್ನು ಕಂಡುಹಿಡಿದಿದ್ದಾರೆ.

  • ಸುದ್ದಿ

    ಮೆಟ್ರೊದಲ್ಲಿ ಪ್ರಯಾಣಿಸುವಾಗ ಸ್ವಲ್ಪ ಹೆಚ್ಚರವಿರಲಿ, ಇಲ್ಲದಿದ್ದರೆ ಹೀಗೂ ಆಗಬಹುದು,..!!

    ಮೆಟ್ರೋದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಾದಷ್ಟು ಬಾಗಿಲಲ್ಲಿ  ಸಿಲುಕಿ ಪರದಾಡುವವರ ಸಂಖ್ಯೆಯೂ  ಸಹ ಹೆಚ್ಚಾಗುತ್ತಿದೆ . ಹಸಿರು ಮಾರ್ಗದ ರೈಲಿನಲ್ಲಿ ಬಾಗಿಲ ಬಳಿ ಕಾಲು ಸಿಕ್ಕಿಕೊಂಡು ಒದ್ದಾಡುತ್ತಿರುವ ಎರಡು ದೃಶ್ಯ  ಇತ್ತೀಚೆಗೆ ನಡೆದಿವೆ. ಅ.14ರಂದು ಸಂಜೆ 6.20 ರ ಸುಮಾರಿಗೆ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಹೆಣ್ಣು ಮಗುವಿನ ಕಾಲು ಬಾಗಿಲಿನಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ. ನಿಲ್ದಾಣದಲ್ಲಿ ದಂಪತಿ ಮಗುವಿನೊಂದಿಗೆ ರೈಲಿನ ಒಳಗೆ ಪ್ರವೇಶಿಸುತ್ತಿದ್ದರು, ದಟ್ಟಣೆ ಹೆಚ್ಚಿದ್ದರಿಂದ ದಂಪತಿ ಹಾಗೂ ಮಗು ಬಾಗಿಲಿನ ಬಳಿಯಲ್ಲೇ ನಿಲ್ಲಬೇಕಾಯಿತು. ಈ ವೇಳೆ…

  • ಜ್ಯೋತಿಷ್ಯ

    ಚಾಮುಂಡೇಶ್ವರಿ ದೇವಿಯನ್ನು ಸ್ಮರಿಸುತ್ತ ಈ ದಿನದ ನಿಮ್ಮ ರಾಶಿ ಭವಿಷ್ಯ ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ನಿಮ್ಮ ಆಸಕ್ತಿಗಳನ್ನು…

  • ಸುದ್ದಿ

    ಬಾದಾಮಿಗೂ ಹೊಟ್ಟೆ ಉಬ್ಬರಕ್ಕೂ ಸಂಬಂಧವಿದೆಯೇ …..?

    ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ ಎಂದಾದರೂ ಪೋಷಕಾಂಷಕಾಂಶಗಳ ಕೊರತೆ ಕಂಡು ಬಂದರೆ ವೈದ್ಯರು ಥಟ್ಟನೆ ಸೂಚಿಸುವುದು ಡ್ರೈ ಫ್ರೂಟ್ಸ್ ಬಳಸಲು . ಏಕೆಂದರೆ ಅವುಗಳಲ್ಲಿರುವಷ್ಟು ಒಟ್ಟು ಪೌಷ್ಟಿಕಾಂಶಗಳು ಬೇರೆಲ್ಲೂ ಅಷ್ಟು ಸುಲಭವಾಗಿ ಸಿಗುವುದಿಲ್ಲ . ಒಣ ದ್ರಾಕ್ಷಿ , ಖರ್ಜೂರ , ಗೋಡಂಬಿ ಮತ್ತು ಬಾದಾಮಿ ಹೀಗೆ . ಒಂದಕ್ಕಿಂತ ಒಂದು ಹೆಚ್ಚು . ಅದರಲ್ಲೂ ಬಾದಾಮಿ ಯಲ್ಲಿ ನ್ಯೂಟ್ರಿಯೆಂಟ್ ಗಳ ಜೊತೆಗೆ ಮೆಗ್ನೀಷಿಯಂ , ವಿಟಮಿನ್ ‘ ಈ ‘ ಮತ್ತು ಫೈಬರ್ ನ ಅಂಶ ಅಗಾಧವಾಗಿದೆ…

  • ಹಣ ಕಾಸು

    ಜಿಎಸ್‍ಟಿ ತೆರಿಗೆ(ನಾಳೆ ಜುಲೈ1)ರಿಂದ ಈ ಸೇವೆಗಳು ದುಬಾರಿಯಾಗಲಿವೆ!

    ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ