ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯುರೋಪ್ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ ಕಳೆದಿವೆ.

ವಾಸ್ಕೋಡಿಗಾಮ ಭಾತರಕ್ಕೆ ಬಂದು 523 ವರ್ಷಗಳು ಸಂದಿವೆ. 1460ರ ಸುಮಾರಿಗೆ ಜನಿಸಿದ ಪೋರ್ಚುಗೀಸ್ ಕುಲೀನ ವಾಸ್ಕೋಡಿಗಾಮ 1497ರ ಜುಲೈ 8ರಂದು ಲಿಸ್ಬನ್ನಿಂದ ಪ್ರಯಾಣ ಕೈಗೊಂಡು 1498 ಮೇ 20ರಂದು ಕ್ಯಾಲಿಕಟ್ಗೆ ತಲುಪಿದನು. ಯುರೋಪ್ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 523 ವರ್ಷ ಕಳೆದಿವೆ.
ಭಾರತವನ್ನು ವಾಸ್ಕೋಡಿಗಾಮನಿಗಿಂತ ಮೊದಲು ಅನೇಕರು ಹುಡುಕಲು ಪ್ರಯತ್ನಿಸಿದ್ದರು. ಆದರೆ ಯಾರೂ ಕೂಡ ಯಶಸ್ವಿಯಾಗಿರಲಿಲ್ಲ. ಭಾರತ ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿ ಹೊಂದಿತ್ತು. ಈ ಮೂಲಕ ಅನೇಕ ದೇಶಗಳು ಆಮದು ಮಾಡಿಕೊಳ್ಳಲು ಭಾರತಕ್ಕೆ ಬರುತ್ತಿದ್ದರು. ಯುರೋಪ್ ಮತ್ತು ಭಾರತದ ನಡುವೆ ಸಮುದ್ರಯಾನದ ಮೂಲಕ ಸಂಚರಿಸಿ ಮಾರ್ಗ ಕಂಡು ಹಿಡಿದ ಮೊದಲಿಗ ವಾಸ್ಕೋಡಿಗಾಮ .

ಕ್ರಿಸ್ಟೋಫರ್ ಕೊಲಂಬಸ್ 1492ರಲ್ಲಿ ಪ್ರಯಾಣವನ್ನು ಕೈಗೊಂಡಿದ್ದ. ಅದಾದ 5 ವರ್ಷದ ಬಳಿಕ ವಾಸ್ಕೋಡಿಗಾಮ ಪ್ರಯಾಣ ಕೈಗೊಂಡನು. ಆದರೆ, ಭಾರತದ ಮಾರ್ಗ ಕಂಡುಹಿಡಿಯುವ ಉದ್ದೇಶದಿಂದ ಸಂಚಾರ ಕೈಗೊಂಡಿದ್ದು ಮೊದಲು ಕಂಡು ಹಿಡಿದ ದೇಶ ಅಮೇರಿಕಾ.
ಸಮುದ್ರಯಾನ ಪ್ರಯಾಣ ಕೈಗೊಂಡ ಸಮಯದಲ್ಲಿ ವಾಸ್ಕೋಡಿಗಾಮ ನೌಕಾಪಡೆ ಕ್ರಿಸ್ಮಸ್ದಿನದಂದು ನಟಾಲ್ ತೀರವನ್ನು ತಲುಪಿತು. ವಿವಿಧ ನದಿಗಳನ್ನು ದಾಟಿ ಮೊಜಾಂಬಿಕ್ ಎಂಬ ದ್ವೀಪದಲ್ಲಿ ನೌಕಾಪಡೆ ಸೇರಿತು. ಅಲ್ಲೇ ಒಂದು ತಿಂಗಳ ಕಾಲ ನೆಲೆಸಿದರು.

ಮೊಜಾಂಬಿಕ್ನಲ್ಲಿ ನೆಲೆಸಿದ್ದ ಒಂದು ತಿಂಗಳ ಕಾಲದಲ್ಲಿ ವಾಸ್ಕೋಡಿಗಾಮ ಅರಬ್ಬರ ಜೊತೆಗಿನ ತಮ್ಮ ವಾಣಿಜ್ಯ ಸಂಪರ್ಕವನ್ನು ಪ್ರಾರಂಭಿಸಿದನು. ಚಿನ್ನ, ಬೆಳ್ಳಿ ಮತ್ತು ಸಾಂಬಾರು ಪದಾರ್ಥದ ವ್ಯಾಪಾರದ ಕುರಿತಾಗಿ ತಿಳಿದುಕೊಂಡನು. ಈ ಮೂಲಕ ವಾಸ್ಕೋಡಿಗಾಮ ಭಾರತಕ್ಕೆ ಹೋಗಬಹುದು ಎಂಬ ಭರವಸೆ ಹೊಂದಿದನು. 1598 ಏಪ್ರಿಲ್ 7ರಂದು ಮೊಂಬಾಸಾಕ್ಕೆ (ಈಗಿನ ಕೀನ್ಯಾ) ತಲುಪಿ ಗುಜರಾತಿ ಪೈಲೆಟ್ ಓರ್ವರನ್ನು ಭೇಟಿ ಮಾಡಿದನು.
ಗುಜರಾತಿ ಪೈಲೆಟ್ ಸಹಾಯದಿಂದ 20 ದಿನಗಳ ಕಾಲ ಸಂಚರಿಸಿ ಭಾರತದ ಮಾರ್ಗದೆಡೆಗೆ ಪ್ರಯಾಣ ಬೆಳೆಸಿದನು. 1498 ಮೇ 17ರಂದು ಭಾರತವನ್ನು ತಲುಪಿದ ಮೊದಲ ಯುರೋಪಿಯನ್ ನಾವಿಕ ವಾಸ್ಕೋಡಿಗಾಮ.
ಭಾರತದಿಂದ ಪೋರ್ಚುಗಲ್ಗೆ ಸಂಬಾರ ಪದಾರ್ಥ ಮತ್ತು ರೇಷ್ಮೆಯನ್ನು ಖರೀದಿಸಿ ಪುನಃ ಪೋರ್ಚುಗಲ್ಗೆ ಹಿಂತಿರುಗಿದನು. ಭಾರತಕ್ಕೆ ಮೂರನೇ ಪ್ರಯಾಣ ಕೈಗೊಂಡ ಸಮಯದಲ್ಲಿ 1524ರ ಸಂದರ್ಭದಲ್ಲಿ ವಾಸ್ಕೋಡಾಗಾಮಾ ಸಾವಿಗೀಡಾದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇಹದಲ್ಲಿ ಬಿಸಿಯಾಗಲು ಮತ್ತು ಶರೀರ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ನಿಮ್ಮ ಸುತ್ತಲಿನ ಪರಿಸರದ ಕಾರಣದಿಂದಾಗಿ ನಿಮ್ಮ ದೇಹದಲ್ಲಿನ ಶಾಖಕ್ಕೆ ಕಾರಣ.
ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ…
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಶ್ರೀಗಳನ್ನೂ ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ…
ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಜೆಡಿಎಸ್ ಮುಖಂಡ ಸಿಎಸ್ ಪುಟ್ಟರಾಜು ಹೊಸ ಬಾಂಬ್ ಸಿಡಿಸಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷಕ್ಕೆ ಸೇರಲು ತಯಾರಿ ನಡೆಸಿದ್ದಾರೆ. ಈ ಕುರಿತ ವಿಡಿಯೋ ಸಿಡಿ ತಮ್ಮ ಬಳಿ ಇದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಪುಟ್ಟರಾಜು ಅವರು, ‘ಖಾಸಗಿ ಹೋಟೆಲ್ವೊಂದರಲ್ಲಿ ಸುಮಲತಾ ಈಗಾಗಲೇ ಬಿಜೆಪಿ ಜತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಸೇರಲು…
ಸ್ಯಾಂಡಲ್ ವುಡ್ ನಟಿ ವಿಜಯಲಕ್ಷ್ಮಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ಹಣಕಾಸು ನೆರವು ನೀಡುವಂತೆ ಅವರ ಸಹೋದರಿ ಉಷಾದೇವಿ ಮನವಿ ಮಾಡಿದ್ದಾರೆ. ಸ್ಯಾಂಡಲ್ ವುಡ್ ಟಾಪ್ ನಟಿಯಾಗಿದ್ದ ವಿಜಯಲಕ್ಷ್ಮಿ ಅವರಿಗೆ ತೀವ್ರವಾದ ಸುಸ್ತು ಮತ್ತು ಹೈ ಬಿಪಿಯಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರ ಅವರ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಸೇರಿಸಿದ್ದು, ಇದ್ದ ಹಣವನ್ನೆಲ್ಲ ಖರ್ಚು ಮಾಡಲಾಗಿದೆ. ಈಗ ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆಗೆ ನೆರವು ನೀಡುವಂತೆ ಸಹೋದರಿ ಉಷಾದೇವಿ…
ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 25 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಕೆಜಿಎಫ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಚಿತ್ರ…