ಆಧ್ಯಾತ್ಮ

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಪೂಜಿಸುವ ರೀತಿ ನೀತಿಗಳ ಸಂಪೂರ್ಣ ಮಾಹಿತಿಗೆ ಈ ಲೇಖನಿ ಓದಿ…

1397

ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ|

ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||

ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಿಯವಾದ ವರಮಹಾಲಕ್ಷ್ಮಿ ಹಬ್ಬವೂ ಸಹ ಈ ಮಾಸದಲ್ಲೇ ಬರುತ್ತದೆ. ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು.

ಭಾರತದ ದಕ್ಷಿಣ ಭಾಗದಲ್ಲಿ ನೆಲೆಸಿರುವವರಿಗೆ ವರಮಹಾಲಕ್ಷ್ಮಿ ವೃತವು ಹೆಚ್ಚು ಮಹತ್ವಪೂರ್ಣ ಮತ್ತು ವಿಶೇಷ ಎಂದೆನಿಸಿದೆ. ಈ ದಿನಂದು ಲಕ್ಷ್ಮೀಯನ್ನು ಪೂಜಿಸುವುದರಿಂದ ಆಕೆ ನಮ್ಮ ಮನದ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆ ಇರುವುದರಿಂದ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.ವರಮಹಾಲಕ್ಷ್ಮಿ ಹಬ್ಬ ಆಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಆಡಂಬರವಾಗಿ ಅಲ್ಲದಿದ್ದರೂ ಚಿಕ್ಕದಾದ ಲಕ್ಷ್ಮಿ ದೇವಿಯನ್ನು ಕೂರಿಸಿ ಆಚರಣೆ ಮಾಡಲು ಜನರು ಮುಂದಾಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಲಕ್ಷ್ಮಿ ಕೂರಿಸುವುದಕ್ಕೆ ಬೇಕಾದ ಎಲ್ಲಾ ವಸ್ತುಗಳು ದೊರೆಯುವುದುಂಟು.ಲಕ್ಷ್ಮಿ ಕೂರಿಸುವುದು ಕೇವಲ ಇತರರು ನೋಡುವುದಕ್ಕಾಗಿ ಅಲ್ಲ. ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ. ರೀತಿನೀತಿ ನಿಯಮಗಳ ಮೂಲಕ ಲಕ್ಷ್ಮಿಪೂಜೆಯನ್ನು ಮಾಡಬೇಕು.

ಪ್ರತಿಯೊಂದು ಪೂಜೆಗೂ ಒಂದಲ್ಲ ಒಂದು ರೀತಿಯ ನಿಯಮ ಹಾಗೂ ಪದ್ಧತಿ ಇರುತ್ತದೆ. ಹಾಗೆಯೇ ಲಕ್ಷ್ಮಿ ಪೂಜೆಗೂ ನಿಯಮಗಳಿದ್ದು, ಅವುಗಳನ್ನು ಪಾಲಿಸಿ ಪೂಜೆ ಮಾಡಿದರೆ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು ಎಂದು ಹಿರಿಯರು ಹೇಳುತ್ತಾರೆ.

ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸುತ್ತಾಳೆ ಲಕ್ಷ್ಮೀ.

ಲಕ್ಷ್ಮಿ ಪೂಜೆ ಮಾಡುವ ವಿಧಿ ವಿಧಾನಗಳ ಮಾಹಿತಿಯನ್ನು ತಿಳಿಯಲು ಮುಂದೆ ಓದಿ:-

  • ಲಕ್ಷ್ಮಿ ಪೂಜೆ ಮಾಡುವ ಹಿಂದಿನ ದಿನವೇ ಶುಭ್ರವಾಗಿ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತಯಾರು ಮಾಡಿಟ್ಟುಕೊಳ್ಳಬೇಕು. ಉದಾಹರಣೆಗೆ: ಸೀರೆ, ಹಣ್ಣು, ಅಲಂಕಾರಿಕ ವಸ್ತು, ಶುದ್ಧ ನೀರು ಇತ್ಯಾದಿ…
  • ಲಕ್ಷ್ಮಿಯನ್ನು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸುವುದಾದರೆ ಹಸಿರು ಬಣ್ಣದ ಸೀರೆಯನ್ನು ತೊಡಿಸಬೇಕು. ಕೆಂಪು ಮತ್ತು ಹಳದಿ ಹೂವುಗಳನ್ನು ಬಳಸಬೇಕು. ದೀಪವನ್ನು ತುಪ್ಪದಿಂದ ಹಚ್ಚಬೇಕು.
  • ಪೂಜೆಯ ದಿನದಂದು ಮಹಿಳೆಯರು ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಎದ್ದು, ಶುದ್ಧ ನೀರಿನಿಂದ ಸ್ನಾನ ಮಾಡಬೇಕು. ಲಕ್ಷ್ಮಿ ವ್ರತ ಮಾಡುವವರೇ ಕಲಶ ಸ್ಥಾಪನೆ ಮಾಡಬೇಕು.
  • ಪೂಜಾ ಸ್ಥಳವನ್ನು ತುಂಬಿದ ಕೊಡದ ನೀರಿನಿಂದ ಶುದ್ಧ ಮಾಡಿ. ಸ್ಥಳದಲ್ಲಿ ಅಷ್ಟದಳದ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಬೇಕು.
  • ಕಲಶಕ್ಕೆ ತುಂಬಿದ ಕೊಡದ ಶುದ್ಧ ನೀರು ಹಾಕಿ/ಶುದ್ಧ ಅಕ್ಕಿ ಹಾಕಬೇಕು. ಇದರ ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ಅಥವಾ ಯಾವುದೇ ನಾಣ್ಯ, ದ್ರಾಕ್ಷಿ, ಗೋಡಂಬಿ, ಕರ್ಜೂರ, ಬಾದಾಮಿ, ಕಲ್ಲುಸಕ್ಕರೆ ಹಾಕಬೇಕು. ನಂತರ ಒಂಬತ್ತು ಎಳೆಯ ದಾರ ತೆಗೆದುಕೊಂಡು ಇದಕ್ಕೆ ಅರಿಶಿಣ ಹಚ್ಚಿ, ಅರಿಶಿಣದ ಕೊಂಬನ್ನು ಕಟ್ಟಿ ತಾಳಿ ಮಾಡಬೇಕು. ಇದನ್ನು ಕಲಶದ ಚೊಂಬಿಗೆ ಕಟ್ಟಿದರೆ ಕಲಶ ತಯಾರಾಗುತ್ತದೆ.

  • ನಂತರ ಶುಭ್ರವಾಗಿ ತೊಳೆದ ತೆಂಗಿನಕಾಯಿಗೆ ಅರಿಶಿಣ ಹಚ್ಚಿಬೇಕು. ಅರಿಶಿಣ ಹಚ್ಚಿದ ತೆಂಗಿನಕಾಯಿಗೆ ಕುಂಕುಮ ಬೊಟ್ಟು ಇಡಬೇಕು. ಕಳಶದ ಬಾಯಿಗೆ ವೀಳ್ಯದೆಲೆ ಅಥವಾ ಮಾವಿನ ಎಲೆ ಇಡಬೇಕು. ನಂತರ ತಟ್ಟೆಯೊಂದಕ್ಕೆ ಅಕ್ಕಿ ಹಾಕಿ ಇದರ ಮೇಲೆ ಕಲಶವನ್ನು ಇಡಬೇಕು. ಅರಿಶಿಣವನ್ನು ಸ್ವಲ್ಪ ನೀರಿನಿಂದ ಮಿಶ್ರಣ ಮಾಡಿ ಒಂದು ನಾಣ್ಯ ತೆಗೆದುಕೊಂಡು ಅದರ ಹಿಂದೆ ಹಾಕಬೇಕು. ನಂತರ ದೇವರ ಬಳಿ ಇಚ್ಛೆಯನ್ನು ಹೇಳಿಕೊಂಡು ದೇವಿಯನ್ನು ಬೇಡಿ ಸಂಕಲ್ಪ ಮಾಡಿಕೊಳ್ಳಬೇಕು. ನಂತರ ದೇವಿಯನ್ನು ಆವಾಹನೆ ಮಾಡಬೇಕು ಅಂದರೆ ಪ್ರಾಣ ಪ್ರತಿಷ್ಠಾಪನೆ.

  • ಇಷ್ಟಾದ ನಂತರ ಲಕ್ಷ್ಮಿ ದೇವಿಗೆ ಪ್ರಾಣಪ್ರತಿಷ್ಠಾಪನೆ ಮಾಡಬೇಕು. ಇದಕ್ಕೆ ಷೋಡಶೋಪಚಾರ ಪೂಜೆಯೆಂದು ಕರೆಯಲಾಗುತ್ತದೆ. ದೇವಯು ತನ್ನ ಎಲ್ಲ ಆಂಗಾಂಗ, ಪರಿವಾರ, ಆಯುಧ ಮತ್ತು ಶಕ್ತಿಸಹತಿವಾಗಿ ಬಂದು ಮೂರ್ತಿಯಲ್ಲಿ ಪ್ರತಿಷ್ಟಿತಳಾಬೇಕು ಮತ್ತು ನಮ್ಮ ಪೂಜೆಯನ್ನು ಸ್ವೀಕರಿಸಬೇಕು ಎಂದು ದೇವತೆಯಲ್ಲಿ ಸಂಪೂರ್ಣ ಶರಣಾಗತಭಾವದಿಂದ ಮಾಡುವ ಪ್ರಾರ್ಥನೆಯೆ ಪ್ರಾಣಪ್ರತಿಪ್ಠಾಪನೆ ಎಂದು ಕರೆಯಲಾಗುತ್ತದೆ.
  • ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು. ದೇವಿಯ ಸಹಸ್ರ ನಾಮವನ್ನು ಹೇಳಿ ಕೊನೆಗೆ ನಮಃ ಎಂದು ಹೇಳಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವನ್ನು ದೇವತೆಗೆ ಅರ್ಪಿಸಿ ನಮಸ್ಕರಿಸಬೇಕು.
  • ಪ್ರಾಣ ಪ್ರತಿಷ್ಟಾಪನೆ ಬಳಿಕ ನಂತರ ಲಕ್ಷ್ಮಿ ದೇವಿಗೆ ಸೀರೆಯನ್ನು ಉಡಿಸಿ, ಅಲಂಕಾರ ಮಾಡಬೇಕು.

ಅಲಂಕಾರವಾದ ಬಳಿಕ ಪೂಜೆಗೆ ಯಾವುದೇ ವಿಘ್ನಗಳು ಬಾರದಿರುವುದಕ್ಕೆ, ನಮ್ಮ ಕಾರ್ಯವನ್ನು ಸಿದ್ಧಿ ಮಾಡು ಎಂದು ವಿಘ್ನೇಶ್ವರನ ಬಳಿ ಪ್ರಾರ್ಥಿಸಬೇಕು.

ಗಣಪತಿಗೆ ಪೂಜೆ ಮಾಡುವಾಗ ಅಷ್ಟನಾಮ ಸಹಸ್ರ ನಾಮಾವಳಿಯನ್ನು ಮಾಡಬೇಕು. ಹೇಳಲು ಸಾಧ್ಯವಾಗದಿದ್ದರೆ ಮಾರುಕಟ್ಟೆಯಲ್ಲಿ ಗಣಪತಿಯ ಸಹಸ್ರ ನಾಮಾವಳಿಯ ಸಿಡಿಗಳು ಲಭ್ಯವಿದೆ ಇದನ್ನು ಹಾಕಬಹುದು.

ಗಣಪತಿ ಪೂಜೆಯ ಬಳಿಕ ಲಕ್ಷ್ಮಿಗೆ ಇಷ್ಟವಾಗುವ ಹಣ್ಣು, ತಿಂಡಿ, ತಿನಿಸುಗಳನ್ನು ದೇವಿಯ ಮುಂದೆ ಇಡಬೇಕು. ಮತ್ತೊಂದು ತಟ್ಟೆಯಲ್ಲಿ ಚಿಕ್ಕ ಕಳಶ, ಅರಿಶಿನದ ಕೊಂಬು, ಮರದ ಜೊತೆ / ಬಾಗಿನ, ಹಸಿರು ಬಳೆ, ಬಳೆ ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ರವಿಕೆ ಬಟ್ಟೆ (ಬಾಗಿನದ ಸಾಮಾನು ಎಂದರೆ ಇದೀಗ ಮಾರುಕಟ್ಟೆಯ ಅಂಗಡಿಗಳಲ್ಲಿ ಸಿಗುತ್ತದೆ) ಇಡಬೇಕು.

 

ಲಕ್ಷ್ಮಿ ಪೂಜೆ ಮಾಡುವಾಗ ಪೂಜೆಯ ತಟ್ಟೆಯೊಂದರಲ್ಲಿ 9ಸುತ್ತಿನ ದಾರ ಇಟ್ಟಿರಬೇಕು. ಪೂಜೆಯಾದ ಬಳಿಕ ಈ ದಾರವನ್ನು ಮನೆಯಲ್ಲಿರುವವರು ತಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು.

ಲಕ್ಷ್ಮಿ ಪೂಜೆ ಮಾಡಿದ ಬಳಿಕ ಸುಮಂಗಲಿಯರನ್ನು ಮನೆಗೆ ಕರೆದು ದೇವಿಯ ಕಥಾ ಶ್ರವಣ ಮಾಡಬೇಕು. ನಂತರ ಸುಮಂಗಲಿಯರಿಗೆ ಅರಿಶಿನ, ಕುಂಕುಮ ರವಿಕೆ ಬಟ್ಟೆ ಹಾಗೂ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು ಕೊಟ್ಟು ಅವರನ್ನು ಸಂಸತದಿಂದ ಕಳುಹಿಸಿಕೊಡಬೇಕು. ಪೂಜೆಗೆ ಬಂದವರಿಗೆಲ್ಲಾ ದೇವಿಯನ್ನು ಆರಾಧನೆ ಮಾಡಿ ಆರತಿ ಕೊಡಬೇಕು.

ದೇವಿಯ ವಿಸರ್ಜನೆ…

ವರಮಹಾಲಕ್ಷ್ಮಿ ದಿನ ಮುಗಿಯಿತು….ಪೂಜೆ ಮಾಡಿ ಆಯಿತೆಂದು ಹೇಗೆಂದರೆ ಹಾಗೆ ದೇವಿಯನ್ನು ತೆಗೆದುಬಿಡುವುದಲ್ಲ…ಪ್ರಾಣಪ್ರತಿಷ್ಠಾಪನೆ ಹಾಗೂ ಕಳಶವನ್ನು ಹೇಗೆ ಶ್ರದ್ಧಾ ಭಕ್ತಿ, ನೀತಿ, ನಿಯಮಗಳಿಂದ ಮಾಡುತ್ತೇವೆಯೋ ಹಾಗೆಯೇ ದೇವಿಯ ಕಳಶ ವಿಸರ್ಜನೆಯನ್ನೂ ಕ್ರಮಬದ್ಧವಾಗಿ, ಪದ್ಧತಿಯಿಂದ ಮಾಡಬೇಕು. ಸಾಮಾನ್ಯವಾಗಿ ವರಲಕ್ಷ್ಮಿಯನ್ನು ಒಂದು, ಮೂರು ಹಾಗೂ ಐದು ದಿನಗಳ ಕಾಲ ಮನೆಯಲ್ಲಿಟ್ಟು ಪೂಜಿಸುವುದುಂಟು.

ದೇವಿಯ ವಿಸರ್ಜನೆ ಮಾಡುವಾಗ ಸುಮಂಗಲಿಯರು ಸಂಕಲ್ಪ ಮುದ್ರೆಯಲ್ಲಿ ಕುಳಿತುಕೊಂಡು ಕೈಯ ನಡುಬೆರಳಿನಿಂದ ನೆಲದಲ್ಲಿ ಬರೆದಿರುವ ಚೌಕದ ಗೆರೆಯನ್ನು ಭಿನ್ನಗೊಳಿಸಬೇಕು. ಪ್ರತಿಷ್ಠಾಪನೆ ಉತ್ತಾರಾಭಿಮುಖವಾಗಿದ್ದರೆ ಉತ್ತರದ ಗೆರೆಯನ್ನು ಭಿನ್ನ ಮಾಡಬೇಕು. ಪೂರ್ವಾಭಿಮುಖವಾಗಿದ್ದರೆ ಪೂರ್ವದ ಗೆರೆಯನ್ನು ಭಿನ್ನಗೊಳಿಸಬೇಕು. ನಂತರ ನಿಧಾನವಾಗಿ ಕಳಶವನ್ನು ಅಲುಗಾಡಿಬೇಕು.

ಇದೆಲ್ಲಾ ಆದ ಮೇಲೆ ಒಳ್ಳೆಯ ಸಮಯ ನೋಡಿ ದೇವಿಯ ಬಳಿಯಿರುವ ಎಲ್ಲಾ ಸಾಮಾಗ್ರಿಗಳನ್ನು ನಿಧಾನವಾಗಿ ತೆಗೆಯಬೇಕು. ಕಲಶ ಪಾತ್ರೆಯಲ್ಲಿರುವ ಅಕ್ಕಿ ಹಾಗೂ ತೆಂಗಿನ ಕಾಯಿಯನ್ನು ಸಿಹಿ ಅಡುಗೆಗೆ ಉಪಯೋಗಿಸಿ ಮಕ್ಕಳಿಗೆ ಹಂಚಬೇಕು.

ಚೌಕ ಹಾಗೂ ರಂಗೋಲಿ ಬರೆದ ಪುಡಿ, ಹೂವು, ಎಲ್ಲಾ ವಸ್ತುವನ್ನು ತೆಗೆದು ಎಲ್ಲೆಂದರಲ್ಲಿ ಬಿಸಾಡದೆ ಗಲೀಜು ಮಾಡದೆ ನದಿ ದಡದಲ್ಲಿ ಇಡಬೇಕು. ನದಿಗೆ ಎಸೆಯಬಾರದು. ನದಿಗೆ ಎಸೆದರೆ ದೋಷ ಉಂಟಾಗುತ್ತದೆ. ಪೂಜೆ ಮಾಡುವುದು ಎಷ್ಟು ಮುಖ್ಯವೋ ಪೂಜೆ ನಂತರವಿರುವ ಪದ್ಧತಿಗಳನ್ನೂ ಅನುಸರಿಸುವುದೂ ಸಹ ಅಷ್ಟೇ ಮುಖ್ಯ.

ಈ ವರಮಹಾಲಕ್ಷ್ಮಿ ಹಬ್ಬದ ಮತ್ತೊಂದು ವಿಶೇಷತೆಯೇನೆಂದರೆ ಜಾತಿ, ಮತ, ಭೇದವಿಲ್ಲದೆ ಹಿಂದೂ ಧರ್ಮದ ಎಲ್ಲರೂ ಆ ತಾಯಿಯನ್ನು ವಿವಿಧ ರೀತಿಯಲ್ಲಿ ಪೂಜಿಸಿ ಅವಳನ್ನು ಆರಾಧಿಸುತ್ತಾರೆ.

ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ನಂಬಿಕೆಯೂ ಇದೆ. ಎಷ್ಟೇ ಈ ನಮ್ಮ ಆಧುನಿಕ, ಪಾಶ್ಚಿಮಾತ್ಯ ಜೀವನ ನಮ್ಮನ್ನು ಆವರಿಸದರೂ ನಾವು ನಮ್ಮ ಸಂಪ್ರದಾಯ, ಪದ್ದತಿಗಳನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇವೆ ಎನ್ನುವುದಕ್ಕೆ ಈ ವರಮಹಾಲಕ್ಷ್ಮಿ ಹಬ್ಬದ ಆಚರಣೆಯೇ ಸಾಕ್ಷಿ. ಎಲ್ಲರೂ ಹಬ್ಬವನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಿ, ವಿಷ್ಣುವಿನ ಹೃದಯವಾಸಿ ಲಕ್ಷ್ಮಿದೇವಿಯನ್ನು ಪೂಜಿಸಿ, ಶ್ರದ್ಧೆ ಭಕ್ತಿಯೊಂದಿಗೆ ಅವಳನ್ನು ಆರಾಧಿಸಿ ಅವಳ ಕೃಪೆಗೆ ಪಾತ್ರರಾಗಿ.

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು…

ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ|

ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||

ಮೂಲ:

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನವೂ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

    ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…

  • ಸುದ್ದಿ

    ಅಲ್ಲು ಅರ್ಜುನ್ ಬಳಿ ಕ್ಷಮೆ ಯಾಚಿಸಿದ ರಶ್ಮಿಕಾ ಮಂದಣ್ಣ..!ಯಾಕೆ ಗೊತ್ತಾ?

    ನಟಿ ರಶ್ಮಿಕಾ ಮಂದಣ್ಣ ತೆಲುಗು ನಟ ಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ್ದಾರೆ. ಅಲ್ಲು ಅರ್ಜುನ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಇಂದು (ಅಕ್ಟೋಬರ್ 30) ನಡೆದಿದೆ. ನಟ ಅಲ್ಲು ಅರ್ಜುನ್, ನಿರ್ಮಾಪಕ ಅಲ್ಲು ಅರವಿಂದ್, ನಿರ್ದೇಶಕ ಸುಕುಮಾರ್, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸೇರಿದಂತೆ ಇಡೀ ತಂಡ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಬೇರೆ ಸಿನಿಮಾದ ಚಿತ್ರೀಕರಣ ಇದ್ದ ಕಾರಣ ರಶ್ಮಿಕಾ ಈ ಸಿನಿಮಾದ ಪೂಜಾ ಕಾರ್ಯಕ್ರಮದಲ್ಲಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(16 ಫೆಬ್ರವರಿ, 2019) ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಮನೆಯಲ್ಲಿ ಸಾಮರಸ್ಯ ತರಲು…

  • ಸುದ್ದಿ

    ಎರಡು ತಿಂಗಳಿಂದ ರೇಷನ್ ಬಂದಿಲ್ಲ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಸ್ಪಷ್ಟನೆ.

    ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು…

  • ಜೀವನಶೈಲಿ

    ಸ್ಪೂನ್ ಬಿಡಿ…ಕೈ ನಲ್ಲಿ ಊಟ ಮಾಡಿ…ಆಮೇಲೆ ನೋಡಿ ಏನ್ ಲಾಭ ಆಗುತ್ತೆ ಅಂತಾ..!ತಿಳಿಯಲು ಈ ಲೇಖನ ಓದಿ…

    ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು

  • Health

    ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಸುಖ ನಿದ್ದೆಗೆ ತೊಂದರೆಯಾಗದಂತೆ ತಡೆಯುವುದು ಹೇಗೆ? ಇದನ್ನೊಮ್ಮೆ ಓದಿ..

    ಹಗಲಿಡಿ ಸ್ಮಾರ್ಟ್‌ ಫೋನ್‌ ಬಳಸಿ ಮತ್ತು ರಾತ್ರಿ ಹೊತ್ತು ಮಲಗುವ ಮುಂಚೆಯೂ ಸ್ಮಾರ್ಟ್‌ ಫೋನ್‌ ಬಳಸುವುದರಿಂದ ನಿಮ್ಮ ಸುಖ ನಿದ್ದೆಗೆ ಭಂಗ ಖಂಡಿತ ಬರುತ್ತದೆ. ನಮ್ಮ ಜೀವನ ಶೈಲಿಯೇ ಹಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೆ ಅತ್ಯುತ್ತಮವಾದ ನಿದ್ದೆ ಬೇಕು. ಆದರೆ,ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ನಿದ್ರೆಯ ಪ್ಯಾಟರ್ನ್‌ ಕೂಡ ಬದಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 9 ಗಂಟೆಯಾದರೂ ನಿದ್ರೆ ಮಾಡಬೇಕು.  ಕೆಲಸ ಮಾಡುವಾಗ ನಾವು ಬಹುತೇಕ ಸಮಯವನ್ನು ಕಂಪ್ಯೂಟರ್‌ ಸ್ಕ್ರೀನ್‌ ನೋಡಿಕೊಂಡೇ ಇರುತ್ತೇವೆ ಮತ್ತು ಕೆಲಸ ಇಲ್ಲದಿದ್ದಾಗ…