ಸಿನಿಮಾ, ಸ್ಪೂರ್ತಿ

ಲ್ಯಾಟಿನ್ ಅಮೆರಿಕದಲ್ಲಿ ಬಿಹಾರದ ಈ ಹುಡುಗ ಹಾಲಿವುಡ್ ಸೂಪರ್ ಸ್ಟಾರ್‌‌‌..!ತಿಳಿಯಲು ಈ ಲೇಖನ ಓದಿ..

136

ಸಿನಿಮಾದಲ್ಲಿ ಸೂಪರ್ ಸ್ಟಾರ್‌ ಎನಿಸಿಕೊಳ್ಳುವುದು ನಿಜವಾಲೂ ಕಷ್ಟದ ವಿಚಾರ. ಪರಿಶ್ರಮ, ಟ್ಯಾಲೆಂಟ್‌‌‌, ಲುಕ್ ಎಲ್ಲದರ ಜೊತೆ ಲಕ್ ಕೂಡಾ ಅಷ್ಟೇ ಮುಖ್ಯ.ಬಿಹಾರ ರಾಜಧಾನಿ ಪಾಟ್ನಾದಲ್ಲಿ ಹುಟ್ಟಿ ಬೆಳೆದ ಪ್ರಭಾಕರ್ ಶರಣ್‌‌ಗೆ ಬಾಲಿವುಡ್‌‌ನಲ್ಲಿ ವಿಲನ್ ಪಾತ್ರದಲ್ಲಿ ಹೆಸರು ಮಾಡಬೇಕೆಂದು ಮೊದಲಿನಿಂದಲೂ ಆಸೆ ಇತ್ತು.

ಹುಟ್ಟಿ ಬೆಳೆದ ಸ್ಥಳಕ್ಕಿಂತ ಬಹಳಷ್ಟು ನಟ/ನಟಿಯರು ಬೇರೆ ರಾಜ್ಯಗಳಲ್ಲಿ ಬಹಳ ಫೇಮಸ್ ಆಗಿ ಬಿಡುತ್ತಾರೆ. ಹಾಗೇ ಬಿಹಾರದ ಯುವಕನೊಬ್ಬ ಇದೀಗ ಲ್ಯಾಟಿನ್ ಅಮೆರಿಕದಲ್ಲಿ ಸೂಪರ್ ಸ್ಟಾರ್‌‌‌ ಆಗಿದ್ದಾರೆ.

ಆದರೆ ಬಾಲಿವುಡ್‌‌ನಲ್ಲಿ ಆತನಿಗೆ ಒಳ್ಳೆಯ ಅವಕಾಶ ದೊರೆಯಲಿಲ್ಲ. 2000 ದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಕೋಸ್ಟರಿಕಾಗೆ ಹೊರಟ ಪ್ರಭಾಕರ್ 2010 ರಲ್ಲಿ ರೆಸ್ಟೋರೆಂಟ್ ಹಾಗೂ ಕ್ಲೋತ್ ಬ್ಯುಸಿನೆಸ್‌ ಆರಂಭಿಸಿದ್ದರು.

ಬ್ಯುಸಿನೆಸ್‌ನಲ್ಲಿ ಎಷ್ಟೇ ಮುಂದೆ ಬಂದರೂ, ಹಣ ಸಂಪಾದಿಸಿದರೂ, ವೈವಾಹಿಕ ಜೀವನದಲ್ಲಿ ಸೋಲು ಕಂಡರೂ ಸಿನಿಮಾ ಪ್ರೀತಿ ಕಡಿಮೆಯಾಗದ ಕಾರಣ ಕೊನೆಗೆ ಎನ್ರೆಡಾಡೋಸ್: ಲಾ ಕನ್ಫ್ಯೂಷನ್ ಎಂಬ ಸಿನಿಮಾವನ್ನು ಬಾಲಿವುಡ್ ಶೈಲಿಯಲ್ಲಿ ನಿರ್ಮಿಸಿ ಥಿಯೇಟರ್‌‌ಗಳಲ್ಲಿ ರಿಲೀಸ್ ಮಾಡಿದರು. ಈ ಸಿನಿಮಾ ಕೋಸ್ಟರಿಕಾದಲ್ಲೇ 2017 ರ ಸೂಪರ್ ಹಿಟ್ ಆಯಿತು.

ಈ ಸಿನಿಮಾದಲ್ಲಿ ಫೇಮಸ್ ಕೋಸ್ಟರಿಕಾ ಟಿವಿ ಆ್ಯಂಕರ್ ನ್ಯಾನ್ಸಿ, ಹಾಲಿವುಡ್ ನಟ ಹಾಗೂ ಮಾಜಿ ಕುಸ್ತಿ ಪಟು ಸ್ಕಾಟ್ ಸ್ಟೆನರ್‌‌‌‌‌‌‌‌‌‌‌‌ ಪ್ರಭಾಕರ್ ಜೊತೆ ನಟಿಸಿದ್ದಾರೆ. ಈ ಸಿನಿಮಾವನ್ನು ಹಿಂದಿ, ಇಂಗ್ಲಿಷ್ ಹಾಗೂ ಬೋಜ್‌‌‌ಪುರಿ ಭಾಷೆಗಳಲ್ಲಿ ನಿರ್ಮಿಸಲು ಇದೀಗ ಪ್ಲಾನ್ ಮಾಡುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ