ರೆಸಿಪಿ

ರುಚಿ ರುಚಿಯಾದ ಬಾದುಷ ಮಾಡುವ ವಿಧಾನ ತಿಳಿಯಿರಿ…

2425

 

ಸಿಹಿ ತಿಂಡಿಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಬಾದುಶ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಎಲ್ಲಾ ವಯೋಮಾನದವರು ಸಹ ಇಷ್ಟ ಪಡುತ್ತಾರೆ. ನೀವೂ ಮನೆಯಲ್ಲೇ ಬಿಸಿಯಾದ ರುಚಿಯಾದ ಬಾದುಶವನ್ನು ತಯಾರಿಸಬಹುದು. ತಿಳಿಯಲು ಮುಂದೆ ಓದಿ…

ಬೇಕಾಗುವ ಪದಾರ್ಥಗಳು…

  • ಮೈದಾಹಿಟ್ಟು – 2 ಬಟ್ಟಲು
  • ಅಡುಗೆ ಸೋಡಾ – ಚಿಟಿಕೆ
  • ಮೊಸರು- ಕಾಲು ಬಟ್ಟಲು
  • ಏಲಕ್ಕಿ ಪುಡಿ- ಸ್ವಲ್ಪ
  • ಡಾಲ್ಡಾ (ತುಪ್ಪ) – ಅರ್ಧ ಬಟ್ಟಲು
  • ಎಣ್ಣೆ – ಕರಿಯಲು
  • ಸಕ್ಕರೆ – 1 1/2 ಬಟ್ಟಲು

ಮಾಡುವ ವಿಧಾನ…

  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಅಡುಗೆ ಸೋಡಾ, ಮೊಸರು ಹಾಗೂ ತುಪ್ಪವನ್ನು ಹಾಕಿ ಚಪಾತಿ ಹಿಟ್ಟಿನಂತೆ ಮಾಡಿಕೊಳ್ಳಬೇಕು.
  • ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಸಕ್ಕರೆಯನ್ನು ಹಾಕಿ ಎಳೆ ಪಾಕ ಮಾಡಿಕೊಳ್ಳಬೇಕು. ಪಾಕ ತಯಾರಾದ ಬಳಿಕ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಬೇಕು.
  • ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು.
  • ನಂತರ ಈ ಹಿಂದೆಯೇ ಮಾಡಿಟ್ಟುಕೊಂಡ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಿಕ್ಕ ಗಾತ್ರಕ್ಕೆ ತಟ್ಟಿ, ಉಂಡೆ ಮಧ್ಯೆ ಬೆರಳಿನಿಂದ ಹಳ್ಳ ಮಾಡಬೇಕು. (ಹಳ್ಳ ಮಾಡುವುದರಿಂದ ಎಣ್ಣೆಗೆ ಹಾಕಿದಾಗ ಉಂಡೆಗಳು ಒಳಗಿನಿಂದ ಚೆನ್ನಾಗಿ ಬೇಯಲು ಸಹಾಯವಾಗುತ್ತದೆ).
  • ಎಣ್ಣೆಯನ್ನು ಬಹಳ ಕಾಯಿಸಬಾರದು. ಸ್ವಲ್ಪ ಎಣ್ಣೆ ಕಾದ ನಂತರ ಸಣ್ಣ ಉರಿಯಲ್ಲಿಯೇ ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಕೆಂಪಗೆ ಕರಿಯಬೇಕು. ನಂತರ ಪಾಕಕ್ಕೆ ಇದನ್ನು ಹಾಕಿ 5 ನಿಮಿಷಗಳ ನಂತರ ತೆಗೆದರೆ ರುಚಿಕರವಾದ ಬಾದುಷ ಸವಿಯಲು ಸಿದ್ಧ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು

    ‘ಉಗ್ರ ಹನುಮಂತ’ಚಿತ್ರದ ಹಿಂದಿರುವ ರೋಚಕ ಸ್ಟೋರಿ ಗೊತ್ತಾ ನಿಮ್ಗೆ!ಈ ಚಿತ್ರ ಹೇಗೆ ಬಂತು ಗೊತ್ತಾ?

    ಯುವ ಜನರಿಗೆ ಟ್ಯಾಟೂ, ಹಚ್ಚೆಗಳು ಅಂದ್ರೆ ಸ್ವಲ್ಪ ಹೆಚ್ಚೇ ಹುಚ್ಚಿದೆ. ವಾಹನಗಳ ಮೇಲೆ ವಿಭಿನ್ನವಾದ ಸ್ಟಿಕ್ಕರ್ಗಳು ಪ್ರಯೋಗಿಸುವ ಬಗ್ಗೆಯೂ ಆಸಕ್ತಿ ಇರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರು ಮತ್ತು ಬೈಕ್ಗಳ ಮೇಲೆ ಉಗ್ರ ಸ್ವರೂಪಿ ಆಂಜನೇಯನ ಚಿತ್ರ ರಾರಾಜಿಸುತ್ತಿದೆ. ರಾಜ್ಯದ ಸಾಕಷ್ಟು ಕಡೆಗಳಲ್ಲಿ ಈ ಭಜರಂಗಿ ಓಡಾಡುತ್ತಿದ್ದಾನೆ.

  • ಸುದ್ದಿ

    ಮದ್ವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್.

    ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಬಾಲಕೃಷ್ಣ ಚೌಬೆ (55) ಎಂಬಾತ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.  ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ…

  • ಜ್ಯೋತಿಷ್ಯ

    ಬನಶಂಕರಿ ದೇವಿಯನ್ನು ಭಕ್ತಿಯಿಂದ ಸ್ಮರಿಸಿ,ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಶ್ರೀ ಬಾದಾಮಿ ಬನಶಂಕರಿ ದೇವಿ9901077772 ಜ್ಯೋತಿಷ್ಯರು .ಪ್ರೀತಿಯಲ್ಲಿ ನಂಬಿ ಮೋಸ ಹೋದವರು,ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತನ್ನು ಕೇಳದೆ ಇದ್ದರೆ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ಶತ್ರುಗಳಿಂದ ತೊಂದರೆ,ಗುಪ್ತ ಸಮಸ್ಯೆಗಳಿಗೆ ಕೇರಳ ಭಗವತಿ ದೇವಿಯ ಆರಾಧಕರಾದ ದಾಮೋದರ ಭಟ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 100% ಪರಿಹಾರ ಮಾಡಿಕೊಡುತ್ತಾರೆ 9901077772 ಮೇಷ ರಾಶಿ ದಿನಭವಿಷ್ಯಈ ದಿನ ನಿಮ್ಮ ರಾಶಿಯ ವ್ಯಕ್ತಿಗಳಿಗೆ ಕ್ರಯ ವಿಕ್ರಯಗಳಲ್ಲಿ ಅಲ್ಪ ಲಾಭ, ವಾಹನ ರಿಪೇರಿ, ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸುಳ್ಳು ಹೇಳುವಿರಿ,…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ,ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 14 ಜನವರಿ, 2019 ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು…