ಸರ್ಕಾರದ ಯೋಜನೆಗಳು

ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ :ಹೊಸ ಕಾರು ಭಾಗ್ಯ ಯೋಜನೆ ..!ತಿಳಿಯಲು ಈ ಲೇಖನ ಓದಿ ..

2177

ರಾಜ್ಯ ಸರ್ಕಾರ 3500 ಮಂದಿ ಪರಿಶಿಷ್ಟ ಜಾತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ  ವಾಲ್ಮೀಕಿ, ಬೋವಿ, ದೇವರಾಜ ಅರಸು ಅಭಿವೃದ್ಧಿ ನಿಗಮಗಳ ಮೂಲಕವೂ ಯೋಜನೆ ಜಾರಿಗೆ ತರಲಾಗುತ್ತಿದೆ. ಯೋಜನೆಗೆ ಬೆಂಗಳೂರಿನಲ್ಲಿ ಈಗಾಗಲೇ ಚಾಲನೆ ದೊರೆತಿದ್ದು ಆರಂಭಿಕವಾಗಿ 1000 ಅಭ್ಯರ್ಥಿಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

ಫಲಾನುಭವಿಯು 6 ರಿಂದ 8 ಲಕ್ಷ ರೂ. ವರೆಗಿನ ಹುಂಡೈ ಕಂಪನಿಯ ಎಸ್ಸೆಂಟ್ ಕಾರು, ಟೊಯೋಟಾ ಇಟಿಯೋಸ್, ಮಾರುತಿ ಸ್ವಿಫ್ಟ್ ಡಿಸೈರ್ ಅಥವಾ ಹೊಂಡಾ ಅಮೇಝಾನ್‌ ಕಾರುಗಳನ್ನು ಖರೀದಿಸಬೇಕಾಗುತ್ತದೆ.

ಏನಿದು ಯೋಜನೆ?

*ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸುಮಾರು 3500 ಟ್ಯಾಕ್ಸಿ ಕಾರುಗಳ ವಿತರಣೆ.

* ಆಯ್ಕೆಯಾದ ಫಲಾನುಭವಿಗಳಿಗೆ ಒಂದು ಟ್ಯಾಕ್ಸಿಗೆ 3 ಲಕ್ಷ ರೂ.ವರೆಗೆ ಸಬ್ಸಿಡಿ.

* ಬ್ಯಾಂಕ್​ಗಳಿಂದ ಸಾಲ ದೊರೆಯುವಂತೆ ಮಾಡುವುದು, ಓಲಾ ಹಾಗೂ ಊಬರ್ ಕಂಪನಿಗಳ ಜತೆ ಟೈಅಪ್ ಮಾಡಿಕೊಂಡು ಬಿಜಿನೆಸ್ ಕೊಡಿಸುವುದು, ಗಳಿಸಿದ ಆದಾಯದಲ್ಲಿ ಬ್ಯಾಂಕ್​ಗಳಿಗೆ ಸಾಲ ಮರುಪಾವತಿಯಾಗುವಂತೆ ನೋಡಿಕೊಳ್ಳುವುದು.

ಮಾನದಂಡಗಳೇನು?

1.ಅಭ್ಯರ್ಥಿ ಬಳಿ ಹಳದಿ ಬ್ಯಾಡ್ಜ್ ಇರಬೇಕು.

2.ನಿರುದ್ಯೋಗಿಯಾಗಿರಬೇಕು.

3.ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರಿ ಹೊಂದಿರಬಾರದು.

4.ಬಿಪಿಎಲ್ ಕಾರ್ಡ್ ಹೊಂದಿರಬೇಕು.

5.ವರ್ಷಕ್ಕೆ 12 ಸಾವಿರ ರೂ. ಮೀರಿರಬಾರದು.

ಆಯ್ಕೆ ಪಕ್ರಿಯೆ ಹೇಗೆ?

ಆಯಾ ಜಿಲ್ಲೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅರ್ಜಿಗಳನ್ನು ಪಡೆದು ಸ್ವ ವಿವರಗಳನ್ನು ಭರ್ತಿ ಮಾಡಿ ಕೊಡಬೇಕು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ.

ವಿಶೇಷ ಯೋಜನೆ:-

ಈ ಮೊದಲೂ ನಿಗಮದ ಅಧಿಕಾರಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಿ ಕಾರು ಖರೀದಿಗೆ ಸಬ್ಸಿಡಿ ಮಂಜೂರು ಮಾಡುತ್ತಿದ್ದರು. ಆದರೆ ಸಬ್ಸಿಡಿ ಹಣವಿದ್ದರೂ ಬ್ಯಾಂಕ್​ಗಳಲ್ಲಿ ಸಾಲ ಸಿಗದೇ ಕಾರು ಖರೀದಿಸಲು ಆಗುತ್ತಿರಲಿಲ್ಲ.

ಈ ರೀತಿ ಆಗದಂತೆ ನಿಗಮವು ಈಗ ಹೊಸ ಯೋಜನೆ ಜಾರಿಗೆ ತಂದಿದೆ. ವಾಣಿಜ್ಯ, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್​ಗಳ ಅಧಿಕಾರಿಗಳು ಹಾಗೂ ಆಯ್ಕೆಯಾದ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಾಲ ಸಿಗುವಂತೆ ಮಾಡಲಿದೆ.

ರಾಜ್ಯದಲ್ಲಿ ಪ್ರಥಮ ಬಾರಿ ಈ ವಿಶೇಷ ಯೋಜನೆ ಜಾರಿಗೆ ಬರುತ್ತಿದೆ. ಈ ವರ್ಷ 3500 ಕಾರುಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಶಾಸಕರು ಫಲಾನುಭವಿಗಳ ಪಟ್ಟಿಯನ್ನು ತ್ವರಿತವಾಗಿ ಕಳುಹಿಸಿದರೆ ಯೋಜನೆ ಶೀಘ್ರ ಅನುಷ್ಠಾನ ಮಾಡಲಾಗುವುದು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಮನುಷ್ಯ ಸತ್ತ ನಂತರ ಮೂಗು ಮತ್ತು ಕಿವಿಗೆ ಹತ್ತಿಯನ್ನು ಇಡುತ್ತಾರೆ ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಮತ್ತು ಶೇರ್ ಮಾಡಿ…

    ನಮ್ಮ ಕಣ್ಣ ಮುಂದಯೇ ಅನೇಕ ಚಿಕ್ಕ ಪುಟ್ಟ ವಿಷಯಗಳು ನಡೆಯುತ್ತಿರುತ್ತವೆ.ಅವನ್ನು ನೋಡಿಯೂ ನೋಡದಂತಯೂ ಇರುತ್ತೇವೆ.ಒಂದು ವೇಳೆ ಗಮನಿಸಿದರೂ ಸಹ ಅದರ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲ.ಏಕೆ ಹೀಗೆ ಮಾಡುತ್ತಾರೆ ಎನ್ನುವ ಕಾರಣ ಗೊತ್ತಿಲ್ಲದಿದ್ರೂ ತಿಳಿದುಕೊಳ್ಳುವ ಯಾವುದೇ ಆಲೋಚನೆ ನಮ್ಮಲ್ಲಿ ಬರುವುದೇ ಇಲ್ಲ. ಇಂತಹ ಅನೇಕ ಚಿಕ್ಕ ಪುಟ್ಟ ವಿಷಯಗಳಲ್ಲಿ ಸತ್ತ ದೇಹದ ಮೂಗಿಗೆ ಮತ್ತು ಕಿವಿಗೆ ಹತ್ತಿ ಇಡುವುದು.ಹೌದು ಹಿಂದೂ ಧರ್ಮದಲ್ಲಿ ಮನುಷ್ಯ ತೀರಿಕೊಂಡ ನಂತರ ಮೃತದೇಹದ ಕಿವಿ ಮತ್ತು ಮೂಗಿಗೆ ಹತ್ತಿ ಇಡುತ್ತಾರೆ. ಇದನ್ನು…

  • Sports

    ಶಿವಂದುಬೆಗೆ ಕೋವಿಡ್-19

    ಶಿವಂದುಬೆಗೆ ಕೋವಿಡ್-19 ಪತ್ತೆಯಾಗಿದೆ.ವೀಡೀಯೊ ಅನಲಿಸ್ಟ್ ಸಹಾಯಕ ಸಿಬ್ಬಂದಿಗೆ ಕೋವಿಡ್-19 ಪತ್ತೆಯಾಗಿದೆ. ಶಿವಂದುಬೆ ಬದಲಿ ಆಟಗಾರನಾಗಿ ಸಾಯಿರಾಜ್ ಪಾಟೀಲ್ ಹೆಸರು ಘೋಷಣೆ ಮಾಡಿದ್ದಾರೆ. ಇಂದು ಮುಂಬೈ ತಂಡ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೋಲ್ಕತ್ತಾ ನಗರಕ್ಕೆ ತೆರಳಬೇಕಿತ್ತು. ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಶಿವಂದುಬೆ ತೆರಳಲಿಲ್ಲ ಕೋವಿಡ್-19 ಕಾರಣದಿಂದ ರಣಜಿ ಟ್ರೋಫಿ ಪಂದ್ಯಾವಳಿಯನ್ನು 6 ನಗರಗಳಲ್ಲಿ ಆಯೋಜಿಸಲಾಗಿದೆ. ಅವು ಯಾವುವೆಂದರೆ ಕೋಲ್ಕತ್ತಾ ಬೆಂಗಳೂರು ಚೆನ್ನೈ ಅಹಮದಾಬಾದ್ ಮುಂಬೈ ತಿರುವನಂತಪುರಂ  

    Loading

  • ಸುದ್ದಿ

    ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ಸುಮಲತಾ ಅವರ ಮುಂದಿನ ಪ್ಲಾನ್ ಏನು?

    ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ. 200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ…

  • ವ್ಯಕ್ತಿ ವಿಶೇಷಣ

    ಈ 10 ಗುಣಗಳು ನಿಮ್ಮಲ್ಲಿದ್ರೆ ಜನರು ನಿಮ್ಮನು ಅಪರೂಪದ ವ್ಯಕ್ತಿ ಎಂದು ಕಾಣುತ್ತಾರೆ ..!ತಿಳಿಯಲು ಈ ಲೇಖನ ಓದಿ…

    ನಿಮಗೆ ನೀವು ಬೇರೆಯವರಿಗಿಂತ ವಿಭಿನ್ನ ಅಂತ ಅನಿಸುತ್ತೀರಾ? ನಿಮ್ಮನ್ನ ಅರ್ಥ ಮಾಡಿಕೊಳ್ಳೋರು ಯಾರು ಇಲ್ಲ ಅನ್ನಿಸುತ್ತಾ?
    ಕಾರ್ಲ್ ಜಂಕ್ ಸೈಕೋ ಅನಾಲಿಸಿಸ್ ಥಿಯರೀ ಅನುದಾರ ಮೇಯರ್ಸ್ ಅಂಡ್ ಬ್ರಿಗ್ಗರ್ಸ್ ಸಿಸ್ಟೆಮ್ ಪ್ರತಿ ಮನುಷ್ಯನನ್ನ ಬೇರೆ ಬೇರೆ ವ್ಯಕ್ತಿತ್ವದವರಾಗಿ ವಿಂಗಡಿಸಲಾಗಿದ್ಯಂತೆ.

  • ಸಿನಿಮಾ

    ದಂಡುಪಾಳ್ಯ-2 ಟ್ರೈಲರ್ ನೋಡಿದ್ರೆ, ಶಾಕ್ ಆಗ್ತೀರಾ !!!

    ದಂಡುಪಾಳ್ಯ ತಂಡ ಮತ್ತೊಮ್ಮೆ ಬೆಳ್ಳಿತೆರೆಗೆ ಅಪ್ಪಳಿಸಲಿಕ್ಕೆ ಸಿದ್ಧವಾಗಿದೆ. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್‍ಗಳಿಂಗ ಸಿನಿರಸಿಕರನ್ನು ಸೆಳೆದಿರುವ ಸಿನಿಮಾ ಶೀಘ್ರದಲ್ಲೇ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿರಿಸಲಿದೆ.

  • ಆಧ್ಯಾತ್ಮ

    ಶ್ರೀ ಶಿರಡಿ ಸಾಯಿಬಾಬಾ ಅವರ ಬಗ್ಗೆ ನಿಮ್ಗೆ ಗೊತ್ತಿಲ್ಲದ ವಿಷಯಗಳು..!

    ಭಾರತವು ವಿಭಿನ್ನ ಧರ್ಮಗಳ, ನಂಬಿಕೆಗಳು, ಆಚರಣೆಗಳ ನೆಲೆಬೀಡಾಗಿದ್ದು, ಇಲ್ಲಿ ಎಷ್ಟೋ ಸಾಧು,ಸಂತರು,ಮಹಾನ್ ದಾರ್ಶನಿಕರು ಜನಿಸಿದ್ದಾರೆ. ತಮ್ಮ ಸಾಮಾನ್ಯ ಜೀವನ ಕ್ರಮದಿಂದ ಧರ್ಮವನ್ನು ಭೋದಿಸಿ,ಪವಾಡಗಳನ್ನು ಮಾಡಿ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ.