ಸುದ್ದಿ

ರಾಜಕಾರಣಿಯಾ ಕಚೇರಿ ಮುಂದೆಯೆ ಗೊಬ್ಬರ ಸುರಿದ ಭೂಪ….ಕಾರಣವೇನು ಗೊತ್ತಾ?

31

ರಾಜಕಾರಣಿಗಳು ಕೆಲಸ ಮಾಡದಿದ್ದರೆ ಅವರ ವಿರುದ್ಧ ಜನರು ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಆದರೆ ಆಗಾಗ ಕೆಲವು ಪ್ರತಿಭಟನೆಗಳು ಎಲ್ಲರ ಗಮನ ಸೆಳೆಯುತ್ತವೆ.

ಆಸ್ಟ್ರೇಲಿಯಾದ ತಾಸ್ಮಾನಿಯಾದ ಈ ವ್ಯಕ್ತಿ ಮಾಡಿದ ಪ್ರತಿಭಟನೆ ಕೂಡ ಬಹಳ ವಿಶಿಷ್ಟವಾಗಿದೆ. 51 ವರ್ಷದ ವ್ಯಕ್ತಿಯೊಬ್ಬ ಸ್ಥಳೀಯ ಜನಪ್ರತಿನಿಧಿ ಅವನ ಮಾತು ಕೇಳಲಿಲ್ಲವೆಂದು ಅವರ ಕಚೇರಿಯ ಮುಂದೆ 8000 ಕೆಜಿಯಷ್ಟು ಗೊಬ್ಬರ ಹಾಕಲು ಹೋಗಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಅವನಿಗೆ ಬೇಕಾಗಿರುವ ಸರ್ಕಾರದ ಅನುದಾನದ ಬಗ್ಗೆ ಕೇಳಿದ್ದಾನೆ. ಯಾವಾಗ ಅವರು ಅವನ ಪ್ರಶ್ನೆಗೆ ಉತ್ತರಿಸಲಿಲ್ಲವೋ ಸಿಟ್ಟಿಗೆದ್ದು ಈ ಕೃತ್ಯ ಮಾಡಲು ಬಂದಿದ್ದಾನೆ. ಆದರೆ ಪೊಲೀಸರು ಅವನನ್ನು ಮೊದಲೇ ತಡೆದು ಮುಜುಗರ ಆಗುವುದನ್ನು ತಪ್ಪಿಸಿದ್ದಾರೆ.

ವ್ಯಕ್ತಿಯ ಈ ಯೋಜನೆ ವಿಫಲವಾಗಿರಬಹುದು ಆದರೆ ಅವನ ಕೂಗು ಮಾತ್ರ ಸರ್ಕಾರಕ್ಕೆ ತಲುಪಿದೆ. ಈಗಲಾದರೂ ಅವರು ಉತ್ತರಿಸುತ್ತಾರೋ ನೋಡಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ