ಉಪಯುಕ್ತ ಮಾಹಿತಿ

ರಸ್ತೆಗಳ ಮೇಲೆ ಹಾಕಿರುವ ಹಳದಿ ಮತ್ತು ಬಿಳಿ ಪಟ್ಟಿಗಳ ಬಗ್ಗೆ ನಿಮಗೆಷ್ಟು ಗೊತ್ತು..?ತಿಳಿಯಲು ಈ ಲೇಖನ ಓದಿ…

699

ಹೆದ್ದಾರಿಗಳ ಮೇಲೆ ಬಿಳಿ, ಹಳದಿ ಬಣ್ಣಗಳಲ್ಲಿ ಹಾಕುವ ಹಲವು ವಿಧದ ಪಟ್ಟೆಗಳನ್ನು ಸಹ ಎಲ್ಲರೂ ನೋಡಿಕೊಂಡು ಹೋಗಬೇಕು. ಇಷ್ಟಕ್ಕೂ ಆ ಪಟ್ಟೆಗಳನ್ನು ಯಾಕೆ ಹಾಕುತ್ತಾರೆ? ಅವುಗಳ ಉಪಯೋಗವೇನು ಎಂದು ಈಗ ತಿಳಿದುಕೊಳ್ಳೋಣ.

ರಸ್ತೆ ಮೇಲೆ ವಾಹನಗಳನ್ನು ಚಲಾಯಿಸುವ ವಾಹನಸವಾರರಷ್ಟೇ ಅಲ್ಲ, ನಡೆದುಕೊಂಡು ಹೋಗುವ ಪಾದಚಾರಿಗಳಿಗೂ ಸಹ ಸಂಚಾರಿ ನಿಯಮ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಚಾರಿ ನಿಯಮಗಳ ಬಗ್ಗೆ ಕಡ್ಡಾಯವಾಗಿ ಗೊತ್ತಿರಬೇಕು. ಇದರ ಜತೆಗೆ ಟ್ರಾಫಿಕ್ ಸಿಗ್ನಲ್ ಸಹ ಕರ್ತವ್ಯದ ರೀತಿ ನೋಡಿಕೊಂಡು ವಾಹನ ಚಲಾಯಿಸಬೇಕು. ಇದರಿಂದ ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.

ಹಳದಿ ಗೆರೆಗಳ ನಡುವೆ ಬ್ರೆಕ್ಸ್ ಇದ್ರೆ :-

ಹೆದ್ದಾರಿ ಮೇಲೆ ಇರುವ ಹಳದಿ ಪಟ್ಟೆಗಳ ನಡುನಡುವೆ ಬ್ರೇಕ್ ಆಗಿದ್ದರೆ ಓವರ್‌ಟೇಕ್ ಮಾಡಬಹುದು, ಆದರೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಎಂದರ್ಥ.

ಸ್ಥಿರವಾದ ಹಳದಿ ಬಣ್ಣದ ಪಟ್ಟೆ ಇದ್ರೆ :-

ಮೇಲೆ ತಿಳಿಸಿದ ವಿಧದಲ್ಲಿ ಬಿಳಿ ಬಣ್ಣಕ್ಕೆ ಬದಲಾಗಿ ಹೆದ್ದಾರಿ ಮಧ್ಯದಲ್ಲಿ ಸ್ಥಿರವಾದ, ಉದ್ದಕ್ಕೆ ಹಳದಿ ಪಟ್ಟೆ ಇದ್ದರೆ ವಾಹನಗಳು ಓವರ್‌ಟೇಕ್ ಮಾಡಬಹುದು ಎಂದರ್ಥ. ಆದರೆ ಹಳದಿ ಬಣ್ಣದ ಗೆರೆಯನ್ನು ಮಾತ್ರ ದಾಟಬಾರದು. ಆದರೆ ಈ ಪಟ್ಟೆಯ ಅರ್ಥ ಎಲ್ಲಾ ಸ್ಥಳಗಳಲ್ಲಿ ಒಂದೇ ತರಹ ಇರಲ್ಲ. ಉದಾಹರಣೆಗೆ ಕೆಲವು ಕಡೆ ಈ ರೀತಿ ಗೆರೆ ಇದ್ದರೆ ಓವರ್‌ಟೇಕ್ ಮಾಡಬಾರದು ಎಂದರ್ಥ ಇದೆ. ಆಯಾ ಪ್ರದೇಶದ, ರಾಜ್ಯದ ರೂಲ್ಸ್ ತಿಳಿದುಕೊಳ್ಳುವುದು ಒಳಿತು.

ಸ್ಥಿರವಾದ ಹಳದಿ ಬಣ್ಣದ ಪಟ್ಟೆಗಳು ಎರಡು ಇದ್ರೆ :-

ಹೆದ್ದಾರಿ ಮೇಲೆ ಸ್ಥಿರವಾದ ಎರಡು ಹಳದಿ ಬಣ್ಣದ ಗೆರೆಗಳು ಇದ್ದರೆ ಓವರ್‌ಟೇಕ್ ಮಾಡುವುದು ನಿಷೇಧಿಸಿದೆ ಎಂದರ್ಥ.

ಸ್ಥಿರವಾದ ಬಿಳಿ ಬಣ್ಣದ ಪಟ್ಟೆ ಒಂದೇ ಇದ್ರೆ :-

ಹೆದ್ದಾರಿ ಮೇಲೆ ಬಿಳಿ ಪಟ್ಟೆ ಸ್ಥಿರವಾಗಿ, ಉದ್ದಕ್ಕೆ ಒಂದೇ ಇದ್ದರೆ ವಾಹನಗಳು ತಮ್ಮ ಲೇನ್‍ನಲ್ಲೇ ಸಾಗಬೇಕು ಎಂದರ್ಥ. ಇತರೆ ಲೇನ್‌ಗಳ ಒಳಗೆ ಪ್ರವೇಶಿಸಬಾರದು.ಅಲ್ಲಲ್ಲಿ ಬ್ರೇಕ್ ಕೊಟ್ಟು ಬಿಳಿ ಬಣ್ಣದ ಪಟ್ಟೆ ಇದ್ದರೆ* ಹೆದ್ದಾರಿ ಮೇಲೆ ಇರುವ ಬಿಳಿ ಬಣ್ಣದ ಪಟ್ಟೆಗೆ ಅಲ್ಲಲ್ಲಿ ಬ್ರೇಕ್ ಇದ್ದರೆ ವಾಹನಗಳು ಲೇನ್ ಬದಲಾಯಿಸಬಹುದು ಎಂದರ್ಥ. ಆದರೆ ಆ ರೀತಿ ಬದಲಾಯಿಸುವ ಸಂದರ್ಭದಲ್ಲಿ ಎಚ್ಚರದಿಂದ ಎಲ್ಲಾ ದಿಕ್ಕಿನಲ್ಲೂ ನೋಡಿ ಲೇನ್ ಬದಲಾಯಿಸಬೇಕಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ