ಆಧ್ಯಾತ್ಮ

ಯಾವ ದೇವರಿಗೆ ಯಾವ ಹೂವಿನ ಮೂಲಕ ಪೂಜೆ ಮಾಡಿದ್ರೆ ಹೆಚ್ಚು ಫಲ ಸಿಗುತ್ತೆ ಗೊತ್ತಾ ನಿಮ್ಗೆ?

2451

ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ಪೂಜೆಯಲ್ಲಿ ಹಲವು ಸಾಮಾಗ್ರಿಗಳ ಅಗತ್ಯವಿದ್ದು ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ ಹೂವುಗಳನ್ನು ಇರಿಸಲಾಗಿರಿಸುತ್ತದೆ.

ಪೂಜೆಯ ಬಳಿಕ ಪ್ರಸಾದದ ರೂಪದಲ್ಲಿ ಹೂವುಗಳ ಪಕಳೆಗಳನ್ನೂ ನೀಡಲಾಗುತ್ತದೆ. ಹೂವುಗಳು ಭಕ್ತ ಮತ್ತು ದೇವರ ನಡುವಿನ ಸಂವಹನ ಮಾಧ್ಯಮ ಎಂದೂ ಭಾವಿಸಲಾಗುತ್ತದೆ. ಲಕ್ಷ್ಮಿ ಸರಸ್ವತಿ ಮೊದಲಾದ ದೇವತೆಯರನ್ನು ಕಮಲದ ಹೂವಿನಲ್ಲಿ ಕುಳಿತಿರುವಂತೆಯೇ ಕವಿಗಳು ಮತ್ತು ಚಿತ್ರಕಾರರು ವರ್ಣಿಸಿದ್ದಾರೆ.ದೇವಾಲಯದ ಪವಿತ್ರ ವಾತಾವರಣದಲ್ಲಿ ಹೂವುಗಳ ಸುವಾಸನೆ ಭಕ್ತರ ಪರವಶತೆಯನ್ನು ಹೆಚ್ಚಿಸುತ್ತದೆ.

ಹೂವುಗಳನ್ನು ದೇವರಿಗೆ ಕಾಣಿಕೆಯ ರೂಪದಲ್ಲಿ ಅರ್ಪಿಸಿದಾಗ ಹೊರಹೊಮ್ಮುವ ಧನಾತ್ಮಕ ಶಕ್ತಿ ನೆರದವರಲ್ಲಿ ಹಾಗೂ ಸುತ್ತಲ ವಾತಾವರಣದಲ್ಲಿ ದೈವಿಕ ಶಕ್ತಿಯನ್ನು ಮೂಡಿಸುತ್ತದೆ.

ಸದಾ ಆಗಸವನ್ನು ನೋಡುವ ಹೂವುಗಳು ಆಗಸದಿಂದ ಧನಾತ್ಮಕ ಶಕ್ತಿಯನ್ನು ಸೆಳೆದು ಕೆಳಮುಖವಾಗಿರುವ ಪಕಳೆಗಳ ಮೂಲಕ ನೆಲದಲ್ಲಿ ಅಡ್ಡಲಾಗಿ ಪ್ರವಹಿಸುವಂತೆ ಮಾಡುತ್ತವೆ. ಹಿಂದೂ ಧರ್ಮದಲ್ಲಿ ವಿವಿಧ ದೇವರುಗಳಿಗೆ ವಿವಿಧ ಹೂವುಗಳಿಂದ ಪೂಜೆ ಸಲ್ಲಿಸುವುದು ಶ್ರೇಯಸ್ಕರ ಎಂಬ ಭಾವನೆ ಮತ್ತು ನಂಬಿಕೆಯಿದೆ. ಬನ್ನಿ, ಈ ನಂಬಿಕೆಯಂತೆ ಯಾವ ದೇವರಿಗೆ ಯಾವ ಹೂವಿನ ಮೂಲಕ ಪೂಜೆ ಸಲ್ಲಿಸಿದರೆ ಹೆಚ್ಚು ಫಲಕಾರಿ ಎಂಬುದನ್ನು ನೋಡೊಣ…

ಶಿವ ಅಥವಾ ಈಶ್ವರನಿಗೆ ಬಿಲ್ವಾಪತ್ರೆ ಅತ್ಯಂತ ಇಷ್ಟವಾದ ಎಲೆಗಳು ಎಂದು ಶಿವನ ಭಕ್ತರು ನಂಬುತ್ತಾರೆ. ಇದರ ಹೊರತಾಗಿ ತುಂಬೆ ಹೂವು, ನೇರಳೆ ಆರ್ಕಿಡ್ ಅಥವಾ ಮಂದಾರ ಪುಷ್ಪವೂ ಶಿವನಿಗೆ ಇಷ್ಟವಾಗಿದ್ದು ಈ ಹೂವುಗಳನ್ನು ಶಿವಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರ ಜೊತೆಗೇ ಸಂಪಿಗೆ ಮತ್ತು ಕಿರೀಟ ಹೂ  ಸಹಾ ಶಿವನ ಅನುಗ್ರಹ ಪಡೆಯಲು ನೆರವಾಗುವ ಹೂವುಗಳಾಗಿವೆ.

ಈಶ್ವರನ ಪತ್ನಿ ಪಾರ್ವತೀದೇವಿಗೆ ಸಲ್ಲಿಸುವ ವಿಶೇಷ ಪಾರ್ಥನೆಯಾದ ಲಲಿತಾ ಸಹಸ್ರನಾಮದಲ್ಲಿ ಹಲವು ಹೂವುಗಳನ್ನು ಉಲ್ಲೇಖಿಸಲಾಗಿದೆ. ಕದಂಬ ವನ ಪಾರ್ವತಿ ಹೆಚ್ಚು ಇಷ್ಟವೆಂದು ಹಲವೆಡೆ ತಿಳಿಸಲಾಗಿದ್ದು ಇದೇ ಕಾರಣಕ್ಕೆ ಆಕೆಗೆ ಕದಂಬವನವಾಸಿನಿ ಎಂಬ ಹೆಸರೂ ಇದೆ.

ಈ ವನದಲ್ಲಿ ಸಿಗುತ್ತದೆ ಎಂಬ ಕಾರಣದಿಂದ ಕದಂಬ ಹೂ ಸಂಪಿಗೆ, ದಾಸವಾಳ, ಕೆಂಡಸಂಪಿಗೆ, ಮಲ್ಲಿಗೆ ಮೊದಲಾದ ಹೂವುಗಳನ್ನು ಪಾರ್ವತಿ ದೇವಿಯ ಪೂಜೆಯಲ್ಲಿ ಬಳಸಲಾಗುತ್ತದೆ.

ಕಾಳಿಯ ಅವತಾರವಾದ ದುರ್ಗಾಮಾತೆಯ ಪೂಜೆಯಲ್ಲಿ ಸಾಮಾನ್ಯವಾಗಿ ಕೆಂಪು ಬಣ್ಣದ ಹೂವುಗಳನ್ನೇ ಬಳಸಲಾಗುತ್ತದೆ. ದಾಸವಾಳ, ಗುಡ್ಡೆ ಹೂ, ಕಣಗಿಲ ಮೊದಲಾದ ಕೆಂಪು ಹೂವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಲಕ್ಷ್ಮಿ ದೇವತೆಗೆ ಕಮಲದ ಹೂವು ಅತಿ ಹೆಚ್ಚು ಇಷ್ಟವಾದ ಹೂವಾಗಿದ್ದು ಲಕ್ಷ್ಮೀಪೂಜೆಯಲ್ಲಿ ಕಮಲವನ್ನೇ ಹೆಚ್ಚು ಉಪಯೋಗಿಸಲಾಗುತ್ತದೆ. ಇನ್ನುಳಿದಂತೆ ಕೇದಿಗೆ, ಸಂಪಿಗೆ, ಸೇವಂತಿಗೆ, ಗೊಂಡೆ ಹೂವುಗಳು ಸಹಾ ಪೂಜೆಗೆ ಅರ್ಹವಾಗಿವೆ.

ಕಮಲ ಮತ್ತು ಕಣಗಿಲೆ ಹೂವುಗಳು ಸುಬ್ರಹ್ಮಣ್ಯನ ಪೂಜೆಗೆ ಅತಿ ಅರ್ಹವಾದ ಹೂವುಗಳಾಗಿವೆ.

ಸರಸ್ವತಿ ದೇವಿಯನ್ನು ವಿದ್ಯಾದೇವತೆ ಎಂದು ನಂಬಲಾಗಿದ್ದು ಬಿಳಿಯ ಕಮಲದ ಹೂವು ಅತಿ ಹೆಚ್ಚು ಪ್ರಿಯ ಎಂದು ಭಕ್ತರು ನಂಬುತ್ತಾರೆ. ಅಂತೆಯೇ ಬಿಳಿಕಮಲ ಹಾಗೂ ಪಾರಿಜಾತ ಹೂವುಗಳನ್ನು ಸರಸ್ವತಿ ಪೂಜೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ಹನುಮಂತನಿಗೆ ಸಲ್ಲಿಸುವ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಅಡಿಕೆಯ ಹಿಂಗಾರದ ಹೂವಿನ ಹಾರವನ್ನು ಅರ್ಪಿಸಲಾಗುತ್ತದೆ. ಈ ಹೂವುಗಳನ್ನು ಪೂಜೆಯಲ್ಲಿ ಅರ್ಪಿಸುವ ಮೂಲಕ ವಿವಿಧ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು.

ಮೂಲ:

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • nation

    400 ಶಾಲಾ ಮಕ್ಕಳ ಪ್ರಾಣ ಉಳಿಸಲು,10ಕೆಜಿ ಬಾಂಬ್ ಎತ್ತುಕೊಂಡು 1ಕಿಮೀ ಓಡಿದ, ಈ ಪೇದೆ ರಿಯಲ್ ಸಿಂಗಂ!ಈ ಲೇಖನಿ ಓದಿ ಶಾಕ್ ಆಗ್ತೀರಾ..!

    ಅಭಿಷೇಕ್ ಪಟೇಲ್ ಎಂಬ ಪೇದೆಯೊಬ್ಬರು 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು, 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

  • govt, nation, ಉಪಯುಕ್ತ ಮಾಹಿತಿ, ಸರ್ಕಾರದ ಯೋಜನೆಗಳು, ಸರ್ಕಾರಿ ಯೋಜನೆಗಳು

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ ಎಂದರೇನು? ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 6,000 ರೂಪಾಯಿಗಳನ್ನು ಕೇಂದ್ರ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುತ್ತದೆ ನೋಂದಣಿಗೆ ಯಾವ ದಾಖಲೆ ಬೇಕು? ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಲಾಭ ಪಡೆಯುವ ರೈತನಿಗೆ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ನೀವು ಆಧಾರ್ ಕಾರ್ಡ್ ನೀಡದಿದ್ದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಕಂತು ಪಡೆಯಲು, ನೀವು ಬ್ಯಾಂಕ್ ಖಾತೆ…

  • ಸುದ್ದಿ

    ಮೊಟ್ಟೆ ತಿನ್ನುವವರು ಇದನ್ನು ತಪ್ಪದೇ ಓದಲೇಬೇಕು,.!

    ಬೆಳಿಗ್ಗೆ ಉಪಹಾರದ ಜೊತೆ ಮೊಟ್ಟೆ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆ ಶಕ್ತಿಯನ್ನು ಹೆಚ್ಚು ಮಾಡುತ್ತೆ. ಹಾಗಾಗಿಯೇ ಅನೇಕರು ಬೆಳಿಗ್ಗೆ, ಸಂಜೆ ಮೊಟ್ಟೆ ಸೇವಿಸ್ತಾರೆ. ಆದ್ರೆ ನೀವು ಸೇವಿಸುವ ಮೊಟ್ಟೆಯಲ್ಲಿ ಶಕ್ತಿ ನೀಡುವಂತ ಅಂಶ ಇರಬೇಕೆಂದೇನೂ ಇಲ್ಲ. ಯಾಕೆಂದ್ರೆ ಮಾರುಕಟ್ಟೆಯಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗ್ತಾ ಇದ್ದಂತೆ ಕೃತಕವಾಗಿ ಮೊಟ್ಟೆ ತಯಾರಿಸಲಾಗ್ತಾ ಇದೆ. ಈ ಮೊಟ್ಟೆಯನ್ನು ಹೇಗೆ ತಯಾರಿಸಲಾಗುತ್ತೆ ಎನ್ನುವ ವಿಷಯ ಗೊತ್ತಾದ್ರೆ ಕೆಲವರು ಇಂದಿನಿಂದಲೇ ಮೊಟ್ಟೆ ಸೇವನೆಯನ್ನು ನಿಲ್ಲಿಸಿದ್ರೂ ಸಂಶಯವಿಲ್ಲ. ಈಗ ಒಂದು ಕೋಳಿಗೆ ಮೊಟ್ಟೆ ಉತ್ಪಾದಿಸಲು ಸುಮಾರು…

  • ಸುದ್ದಿ

    ‘ಸೂರ್ಯವಂಶಿ’ ಶೂಟಿಂಗ್ ಸೆಟ್‌ನಲ್ಲೇ ಜಗಳವಾಡಿಕೊಂಡ ಅಕ್ಷಯ್‌ ಕುಮಾರ್ ಹಾಗು ರೋಹಿತ್ ಶೆಟ್ಟಿ!!

    ಸಾಮಾನ್ಯವಾಗಿ ಸೆಟ್‌ನಲ್ಲಿ ತಂತ್ರಜ್ಞರೆಲ್ಲ ಮನೆಯವರಂತೆ ಇರುತ್ತಾರೆ. ಮನಸ್ತಾಪಗಳು ಬಂದರು ಬಹಳ ಕಾಲ ಇರುವುದಿಲ್ಲ. ಅಲ್ಲಿಂದಲ್ಲಿಗೆ ಮರೆತು ಒಂದಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಆದರೆ, ‘ಸೂರ್ಯವಂಶಿ’ ಚಿತ್ರದ ಸೆಟ್‌ನಲ್ಲಿ ಮಾತ್ರ ಎಲ್ಲ ಅವಾಂತರವೇ ಆಗಿಹೋಗಿದೆ. ಆ ಚಿತ್ರದ ಹೀರೋ ಅಕ್ಷಯ್‌ಕುಮಾರ್. ನಿರ್ದೇಶನ ಮಾಡುತ್ತಿರುವುದು ರೋಹಿತ್ ಶೆಟ್ಟಿ. ಇದೀಗ ಇವರಿಬ್ಬರು ಸೆಟ್‌ನಲ್ಲಿ ಹೊಡೆದಾಡಿಕೊಂಡಿದ್ದಾರೆ.  ಹಾಗಾದರೆ, ಅಕ್ಷಯ್‌ ಮತ್ತು ರೋಹಿತ್ ಹೀಗೆ ಹೊಡೆದಾಡಿಕೊಂಡರು? ಗಾಬರಿ ಆಗಬೇಡಿ. ಇದು ನಿಜವಾದ ಜಗಳವಲ್ಲ. ಬದಲಿಗೆ, ಕಾಮಿಡಿ ಜಗಳ. ಈ ರೀತಿ ಅವರಿಬ್ಬರು ನಡೆದುಕೊಳ್ಳಲೂ ಕಾರಣವಿದೆ. ಅದೇನೆಂದರೆ, ಇತ್ತೀಚಿಗೆ…

  • ಸುದ್ದಿ, ಸ್ಪೂರ್ತಿ

    42 ನಿಮಿಷಗಳಲ್ಲಿ 80 ಕಿಮೀ ಚಲಿಸಿ. ಅವಳಿ ಮಕ್ಕಳ ಜೀವ ಉಳಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ.

    ಸಂಚಾರಿ ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನ ಅಂಬ್ಯುಲೆನ್ಸ್ ಸಿಬ್ಬಂದಿ ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ. ಹಾವೇರಿ ನಗರದ ನಿವಾಸಿ ಲಕ್ಷ್ಮಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮಕ್ಕಳಲ್ಲಿ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆಯಂತೆ ಆದಷ್ಟು ಬೇಗ ನವಜಾತ ಶಿಶುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರ್ಥಮಾಡಿಕೊಂಡ ಅಂಬ್ಯುಲೆನ್ಸ್ ಸಿಬ್ಬಂದಿ ಕೇವಲ 42 ನಿಮಿಷಗಳಲ್ಲಿ 80 ಕಿಮೀ ಕ್ರಮಿಸಿ ಮಕ್ಕಳನ್ನು ಕಿಮ್ಸ್ ಗೆ ದಾಖಲಿಸಿದ್ದಾರೆ….