ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮುಧೋಳ ಹೌಂಡ್ / ಮುಧೋಲ್ ಹೌಂಡ್, ಇದನ್ನು ಮರಾಠಾ ಹೌಂಡ್, ಪಾಶ್ಮಿ ಹೌಂಡ್ ಮತ್ತು ಕ್ಯಾಥೆವಾರ್ ಡಾಗ್ ಎಂದೂ ಕರೆಯುತ್ತಾರೆ, ಇದು ಭಾರತದಿಂದ ದೃಷ್ಟಿಗೋಚರ ತಳಿಯಾಗಿದೆ.
ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಷನಲ್ ಕೆನಲ್ ಕ್ಲಬ್ (ಐಎನ್ಕೆಸಿ) ಈ ತಳಿಯನ್ನು ವಿವಿಧ ತಳಿಗಳ ಹೆಸರಿನಲ್ಲಿ ಗುರುತಿಸುತ್ತವೆ. ಕೆಸಿಐ ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸಿದರೆ, ಐಎನ್ಕೆಸಿ ಮುಧೋಲ್ ಹೌಂಡ್ ಹೆಸರನ್ನು ಬಳಸುತ್ತದೆ

ರಾಜ್ಯದ ಬಾಗಲಕೋಟೆ ಜಿಲ್ಲೆಯ ಸಣ್ಣ ಪಟ್ಟಣ ಮುಧೋಳ ಎಂಬ ಊರಿನ ಹೆಸರನ್ನು ಈ ನಾಯಿ ಪಡೆದುಕೊಂಡಿದೆ. ಈ ತಳಿಯನ್ನು ದೇಶದ್ಯಾಂತ ವಿವಿಧ ಹೆಸರನಿಂದ ಕರೆಯಲಾಗುತ್ತದೆ. ಬಾಂಬೆ ಪ್ರೆಸಿಡೆನ್ಸಿ ಕೊನೆಯ ರಾಜ, ಮಾಲೋಜಿರಾವ್ ಘೋರ್ಪಾಡೆ, ಯುಕೆಗೆ ಭೇಟಿ ನೀಡಿದಾಗ ಕಿಂಗ್ ಜಾರ್ಜ್ Vಗೆ ಉಡುಗೆರೆಯಾಗಿ ಕೊಟ್ಟಿ ಎರಡು ನಾಯಿಮರಿಗಳಿಗೆ ಮುಧೋಲ್ ಹೌಂಡ್ಸ್ ಎಂದು ನಾಮಕರಣ ಮಾಡಿದ್ದರಂತೆ.
13 ವರ್ಷಗಳಷ್ಷು ಅಯಸ್ಸು ಹೊಂದಿರುವ ಈ ತಳಿಯ ನಾಯಿಗಳು ಭಾರತೀಯ ಹವಾಮಾನಕ್ಕಾಗಿ ಹೇಳಿ ಮಾಡಿಸಿದಂತಿದೆ.

ಸಣ್ಣ ತಲೆ, ಸಪೂರ ದೇಹ ಹೊಂದಿದ್ದು ಎತ್ತರವಾಗಿರುವುದು ಈ ನಾಯಿಗಳು ವಿಶಿಷ್ಟತೆ. ತನ್ನ ಮಾಲೀಕರಿಗೆ ತೀವ್ರ ನಿಷ್ಠ ತೋರಿಸುವ ಮುಧೋಳ ನಾಯಿಗಳು ಮಾಲೀಕ ಅಪಾಯದಲ್ಲಿದ್ದಾನೆ ಎಂದು ಭಾವಿಸಿದರೆ ಅಪರಿಚಿತರ ಮೇಲೆ ದಾಳಿ ಸಹ ಮಾಡಲು ಹಿಂಜರಿಯೋಲ್ಲ. ಮುಧೋಳ ಬ್ರೀಡ್ ನಾಯಿಗಳಲ್ಲಿ ಕಂಡುಬರುವ ಸಾಮಾನ್ಯ ರೋಗವೆಂದರೆ ಚರ್ಮಕ್ಕೆ ಸಂಬಂಧಿಸಿದ್ದು.

ತೆಳು ಚರ್ಮದ ಈ ತಳಿ ಚಳಿಗೆ ಚಿಲ್ ಬೈಟ್ಗೆ ಗುರಿಯಾಗುವಂತೆ, ಸುಡು ಬೇಸಿಗೆಯಲ್ಲಿ ಸನ್ ಬರ್ನ್ಗೆ ಸಹ ಗುರಿಯಾಗುಬಹುದು. ಕಣ್ಗಾವಲು ಮತ್ತು ಬಾರ್ಡರ್ ಪ್ರೋಟೆಕ್ಷನ್ಗಾಗಿ ಮುಧೋಳ ನಾಯಿಗಳನ್ನು ಬಳಸುವ ಇಚ್ಛೆಯನ್ನು ಭಾರತೀಯ ಸೇನೆ ವ್ಯಕ್ತಪಡಿಸಿದೆಮೀರತ್ನಲ್ಲಿರುವ ಸೈನ್ಯದ ರಿಮೌಂಟ್ ಪಶುವೈದ್ಯಕೀಯ ದಳದಲ್ಲಿ ಪರೀಕ್ಷೆಗೆ ಆರು ಮುಧೋಳ ನಾಯಿಗಳನ್ನು ಪಡೆದುಕೊಂಡಿದೆ.

2005ರಲ್ಲಿ ಭಾರತ ಸರಕಾರ ಈ ತಳಿಯನ್ನು ಗುರುತಿಸಿ, ಮುಧೋಳ ಶ್ವಾನದ ಚಿತ್ರವನ್ನೊಳಗೊಂಡ 5 ರೂ. ಮುಖಬೆಲೆಯ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತ್ತು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ. ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ, ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಶಿರಸಿ-ಯಲ್ಲಾಪುರ ನಡುವಿನ…
ಎಲ್ಲರ ಅಡುಗೆ ಮನೆಯ ಸಾಂಬಾರ್ ಬಟ್ಟಲಲ್ಲಿ ಕಾಣಿಸಿಕೊಳ್ಳುವ ‘ಜೀರಿಗೆ’ ಬಹೂಪಯೋಗಿ ಕಿಚನ್ ಮೆಡಿಸಿನ್ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಜಿಮ್ ನಲ್ಲಿ ಎಷ್ಟು ಕಸರತ್ತು ಮಾಡಿದ್ರೂ ಕೆಲವರ ತೂಕ ಮಾತ್ರ ಇಳಿಯೋದಿಲ್ಲ. ನಾವು ಇಂದು ಹೇಳುವ ಉಪಾಯದಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಜಿಮ್…
ಹೃದಯಾಘಾತದ ಬಗ್ಗೆ ಇರುವ ಮಾಹಿತಿಯನ್ನು ಎಲ್ಲರೂ ತಿಳಿದಿರಲೇಬೇಕು. ಹೃದಯಾಘಾತ ಯಾವ ಕ್ಷಣದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ನಮ್ಮ ಜೀವಮಾನದ ಅವದಿಯಲ್ಲಿ ನಮ್ಮ ಸಂಬದಿಕರಿಗೋ, ಸ್ನೇಹ್ತಿತರಿಗೋ ಯಾರಿಗಾದ್ರೂ ಹೃದಯಾಘಾತ ಬರಬಹುದು. ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಹೃದಯಾಘಾತದ ಅಪಾಯದಿಂದ ಪಾರಾಗಲು ನೀವು ಮತ್ತು ವೈದ್ಯರು ಮುಂಚಿನ ಕೆಲವು ಗಂಟೆಗಳಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿದೆ.
ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ಆರಾಧನೆಗೆ ಭಕ್ತರು ಸಿದ್ಧರಾಗಿದ್ದಾರೆ. ಕೃಷ್ಣನಿಗೆ ಪ್ರಿಯವಾದ ವಸ್ತುಗಳಲ್ಲಿ ನವಿಲುಗರಿ ಕೂಡ ಒಂದು. ನವಿಲುಗರಿ ಅದೃಷ್ಟವನ್ನು ಬದಲಿಸುವ ಶಕ್ತಿ ಹೊಂದಿದೆ.ನವಿಲುಗರಿ ಮನೆ ಸೌಂದರ್ಯವನ್ನು ಮಾತ್ರವಲ್ಲ ಆರ್ಥಿಕ ವೃದ್ಧಿಗೆ ಕಾರಣವಾಗುತ್ತದೆ. ಶ್ರೀಕೃಷ್ಣನ ಮುಕುಟದ ಮೇಲಿರುವ ನವಿಲುಗರಿ ಬಗ್ಗೆ ಶಾಸ್ತ್ರಗಳಲ್ಲಿ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಜನ್ಮಾಷ್ಠಮಿಯಂದು ಆ ಉಪಾಯಗಳನ್ನು ಅನುಸರಿಸಿದ್ರೆ ಅದೃಷ್ಟ ನಿಮ್ಮದಾಗಲಿದೆ. ಮನೆಯಲ್ಲಿ ಯಾವಾಗಲೂ ಜಗಳವಾಗ್ತಿದ್ದರೆ, ಮನಸ್ಸಿನಲ್ಲಿ ಕಿರಿಕಿರಿಯಿದ್ದರೆ ಇದಕ್ಕೆ ನವಿಲುಗರಿ ಪರಿಹಾರ ನೀಡಬಲ್ಲದು. ನವಿಲುಗರಿಯನ್ನು ದೇವರ ಮನೆಯಲ್ಲಿ ಕೊಳಲಿನ ಜೊತೆ ಇಡಬೇಕು. ಮನೆಯಲ್ಲಿ ಹರಡುವ…
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರಲ್ಲಿ ಶೈನ್ ಶೆಟ್ಟಿ ಅವರು ಸ್ಪರ್ಧಿ ಚಂದನಾ ಅವರ ಜೊತೆ ಜಗಳವಾಡಿ ಅವಾಜ್ ಹಾಕಿದ್ದಾರೆ. ಶೈನ್ ವರ್ತನೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನಾ ಮತ್ತು ಶೈನ್ ಶೆಟ್ಟಿ, ವಾಸುಕಿ ವೈಭವ್ ಮೂವರು ಗೆಳೆಯರು. ಚಂದನಾ ವಿರುದ್ಧವಾಗಿ ಶೈನ್ ಶೆಟ್ಟಿ ಮತ್ತು ವಾಸುಕಿ ಇಲ್ಲಿಯವರೆಗೂ ಮಾತನಾಡಿಲ್ಲ. ಆದರೆ ಈಗ ಶೈನ್ ಶೆಟ್ಟಿ ಮಾತನಾಡಿದ ಬಗೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. ಚಂದನಾ ಅವರು ಟಾಸ್ಕ್ ಮಾಡಿ ಮೈ…
ನೀವು ಸೇವಿಸುವ ಆಹಾರವನ್ನೇ ಅಡುಗೆ ಮನೆಯಲ್ಲಿ ಸ್ವಚ್ಛತೆಯ ಉದ್ದೇಶಕ್ಕಾಗಿ ಬಳಸಬಹುದು ಎಂಬುದನ್ನು ನೀವು ಅರಿತಿದ್ದೀರಾ? ಅಡುಗೆ ಮನೆಯಲ್ಲಿ ಜಿಡ್ಡಿನ ಅಂಶಗಳನ್ನು ತೊಡೆದು ಹಾಕಲು, ನಲ್ಲಿಯನ್ನು ಸ್ವಚ್ಛಗೊಳಿಸಲು ನಾವು ರಾಸಾಯನಿಕ ಸ್ವಚ್ಛಕಗಳನ್ನು ಬಳಸುತ್ತೇವೆ ಆದರೆ ಅವುಗಳು ಯಾವುದೂ ನೈಸರ್ಗಿಕದಂತಿರುವ ಶುಭ್ರತೆಯನ್ನು ಒದಗಿಸುವುದಿಲ್ಲ, ಬದಲಿಗೆ ಸ್ವಲ್ಪ ದಿನ ಬೆಳ್ಳಗಾಗಿದ್ದು ಪುನಃ ಹಳೆಯ ರೂಪಕ್ಕೆ ತಿರುಗುತ್ತವೆ.