ದೇವರು-ಧರ್ಮ

ಮೈಸೂರು ರಾಜವಂಶಸ್ತರಿಗೆ ಇದ್ದ ಅಲಮೇಲಮ್ಮನ ಶಾಪ ಮುಕ್ತವಾಯಿತ..?ತಿಳಿಯಲು ಈ ಲೇಖನ ಓದಿ..

576

ಮೈಸೂರು ಅರಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಹಾರಾಣಿ ತ್ರಿಶಿಕಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಯದುವಂಶಕ್ಕೆ ವಾರಸುದಾರನನ್ನು ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಅರಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ.  ಯುವರಾಜನ ಆಗಮನದಿಂದ ಶತಮಾನಗಳ ಮೈಸೂರು ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಯ ಆಗಮನವಾದಂತಾಗಿದೆ.

ದತ್ತುಪುತ್ರರಿಗೆ ತಟ್ಟಲ್ಲ ಅಲಮೇಲಮ್ಮನ ಶಾಪ..!:-

ರಾಜಕುಮಾರಿ ತ್ರಿಷಿಕಾ ಒಡೆಯರ್ ಗರ್ಭವತಿಯಾಗಿರುವ ಸುದ್ದಿ ಹೊರಬರುತ್ತಿದ್ದಂತೆಯೇ ಮೈಸೂರು ರಾಜವಂಶಸ್ಥರಿಗೆ ತಟ್ಟಿದ ಶಾಪ ವಿಮೋಚನೆಯಾಯಿತು ಎಂಬಂತಹ ಮಾತುಗಳು ಕೇಳಿ ಬರುತ್ತಿವೆ.

ಆದರೆ ಮೈಸೂರು ರಾಜವಂಶಸ್ಥರ ಇತಿಹಾಸದ ಪುಟಗಳನ್ನು ತಿರುವಿ ನೋಡಿದ್ದೇ ಆದರೆ ಅಲಮೇಲಮ್ಮನ ಶಾಪ ದತ್ತುಪುತ್ರರಿಗೆ ತಟ್ಟಿಲ್ಲ ಎಂಬುದು ತಿಳಿದು ಬರುತ್ತದೆ. ಆದರೆ ಅವರಿಗೆ ಹುಟ್ಟಿದ ಮಕ್ಕಳಿಗೆ ಮಾತ್ರ ಮಕ್ಕಳಾಗದೆ, ದತ್ತು ಪಡೆಯುತ್ತಾ ಸಾಗಿರುವುದು ರಾಜವಂಶಸ್ಥರ ಇತಿಹಾಸದುದ್ದಕ್ಕೂ ಕಾಣಲು ಸಿಗುತ್ತದೆ.

ಅಲಮೇಲಮ್ಮನ ಶಾಪದ್ ಬಗ್ಗೆ ಹರಿದಾಡುವ ಕಥೆ:-

ಇಷ್ಟಕ್ಕೂ ಅಲಮೇಲಮ್ಮನ ಶಾಪಕ್ಕೂ ಮೈಸೂರು ರಾಜರಿಗೆ ಮಕ್ಕಳಾಗದಿರುವುದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಕಾಡಬಹುದು.

ಇವತ್ತಿಗೂ ಮೈಸೂರು ಪ್ರಾಂತ್ಯದ ಜನರ ಬಾಯಲ್ಲಿ ಹರಿದಾಡುತ್ತಿರುವ ಕಥೆಗಳನ್ನು ಗಮನಿಸಿದರೆ ಮೈಸೂರು ಅರಸರಿಗೆ ಮಕ್ಕಳಾಗದಿರುವುದು, ಮಾಲಂಗಿ ಮಡುವಾಗಿರುವುದು, ತಲಕಾಡು ಮರಳಾಗಿರುವುದು ಎಲ್ಲದಕ್ಕೂ ನೇರಾನೇರ ಸಂಬಂಧ ಇರುವುದನ್ನು ನಾವು ಕಾಣಬಹುದಾಗಿದೆ.

ಶಾಪ ನೀಡಿ ದೇಹತ್ಯಾಗ ಮಾಡಿದ ಅಲಮೇಲಮ್ಮ:-

ಶ್ರೀರಂಗರಾಯ ತಲಕಾಡಿನಲ್ಲಿಯೇ ಸಾವನ್ನಪ್ಪುತ್ತಾನೆ. ಬಳಿಕ ಪತ್ನಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಅಮೂಲ್ಯವಾದ ವಜ್ರದ ಮುತ್ತಿನ ಮೂಗುತಿ ಸೇರಿದಂತೆ ಬಹಳಷ್ಟು ಒಡವೆಗಳು ಅವಳ ಬಳಿ ಇದ್ದು, ಅವುಗಳನ್ನು ವಶಪಡಿಸಿಕೊಳ್ಳಲು ರಾಜಒಡೆಯರು ಭಟರನ್ನು ಕಳುಹಿಸುತ್ತಾರೆ.

ಇದನ್ನು ಅರಿತ ಅಲಮೇಲಮ್ಮ ಕೋಪಗೊಂಡು ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿ ಒಡವೆಗಳೊಡನೆ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ