ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್(ಎಇಎಸ್)ಗೆ ಬಿಹಾರದ ಮುಜಾಫರ್ನಗರ ತತ್ತರಿಸಿ ಹೋಗಿದ್ದು, ಈವರೆಗೆ ಮೆದುಳು ಜ್ವರಕ್ಕೆ ಬರೋಬ್ಬರಿ 108 ಮಕ್ಕಳು ಬಲಿಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್, ಶ್ರೀಕೃಷ್ಣ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಜಿಲ್ಲಾಧಿಕಾರಿಗಳ ಪ್ರಕಾರ, ಮಿದುಳು ಜ್ವರದಿಂದ ಬಳಲುತ್ತಿದ್ದ 89 ಮಕ್ಕಳು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರೆ, 19 ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇನ್ನೂ 290 ಮಕ್ಕಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರದಂದು ನಡೆದ ರಾಜ್ಯ ಆರೋಗ್ಯ ಇಲಾಖೆಯ ಸಭೆ ವೇಳೆ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಮಕ್ಕಳು ಮೆದುಳು ಜ್ವರದಿಂದ ಸಾವನ್ನಪ್ಪುತ್ತಿರುವುದರ ಬಗ್ಗೆ ಮಾತನಾಡುವ ಬದಲು ಕ್ರಿಕೆಟ್ ಪಂದ್ಯದ ಕುರಿತು ಪ್ರಶ್ನಿಸುತ್ತಿದ್ದು ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುದಕ್ಕೆ ಉದಾಹರಣೆಯಾಗಿದೆ. ‘ಕ್ರಿಕೆಟ್ ಪಂದ್ಯದ ಫಲಿತಾಂಶ ಏನಾಯ್ತು?’ ಎಂದು ಸಚಿವರು ಪ್ರಶ್ನಿಸುತ್ತಿರುವುದು ಮತ್ತು ಮತ್ತೊಬ್ಬ ವ್ಯಕ್ತಿ `4ನೇ ವಿಕೆಟ್ ಹೊಗಿದೆ’ ಎಂದು ಸಭೆಯಲ್ಲಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಕ್ಕಳ ಸಾವಿನ ಕುರಿತು ರಾಜ್ಯದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿರುವುದು ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ್ದು, ಸಚಿವರ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಈ ಹಿಂದೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ತೂಕಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಆ ಬಳಿಕ ಈ ಬಗ್ಗೆ ಚೌಬೆ ಅವರು ಸ್ಪಷ್ಟಿಕರಿಸಿ, ‘ನಾನು ನಿದ್ರಿಸುತ್ತಿರಲಿಲ್ಲ, ಪತ್ರಿಕಾಗೋಷ್ಠಿ ಬಗ್ಗೆ ಯೋಚಿಸುತ್ತಿದ್ದೆ’ ಎಂದು ಹೇಳಿದ್ದರು. ಆ ಬಳಿಕ ಸೋಮವಾರ ಸ್ವತಃ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರೇ, ಸಾವಿನ ಬಗ್ಗೆ ಪ್ರತಿದಿನ ಹೇಳಿಕೆಗಳನ್ನು ನೀಡುವುದಿಲ್ಲ ಎಂದಿದ್ದರು.

ಆಸ್ಪತ್ರೆಗೆ ದಾಖಲಾಗಿರುವವರು, ನೀಡಲಾಗುತ್ತಿರುವ ಚಿಕಿತ್ಸೆ, ಮೃತಪಟ್ಟ ಕುಟುಂಬಕ್ಕೆ ನೀಡುವ ಪರಿಹಾರ, ನೆರವುಗಳ ಕುರಿತು ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗ ಆರೋಗ್ಯ ಸಚಿವಾಲಯಕ್ಕೆ ಕೇಳಿದೆ. ಹಾಗೆಯೇ ಈ ಬಗ್ಗೆ ನಾಲ್ಕು ವಾರದೊಳಗೆ ಉತ್ತರ ನೀಡುವಂತೆ ತಿಳಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಸಾಮಾನ್ಯವಾಗಿ ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಕುತ್ತೆವೆ.ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ಆಗೋ ಉಪಯೋಗ ತಿಳಿದುಕೊಂಡರೆ ನೀವು ಸಿಪ್ಪೆಯನ್ನು ಎಸೆಯುವುದಿರಲಿ ಅದನ್ನೇ ಕಾಪಾಡಿಕೊಳ್ಳುತ್ತಿರ..ಹೇಗೆ ಉಪಯೋಗ ಅನ್ನೋ ಕುತೂಹಲವೇ ಇದನ್ನು ಓದಿ
ಆಸ್ತಿ ವಹಿವಾಟಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪ್ಲಾಸ್ಟಿಕ್ ಬಾಟಲಿಗಳನ್ನು ಮರಳಿನಿಂದ ತುಂಬಿಸಿಲಾಗುತ್ತದೆ, ನಂತರ ಬಾಟಲಿಗಳನ್ನು ಮೇಲೆ ತೋರಿಸಿರುವ ಚಿತ್ರದಂತೆ ಸಾಲಲ್ಲಿ ಜೋಡಿಸಲಾಗುತ್ತದೆ, ಮರಳು ಮತ್ತು ಸಿಮೆಂಟ್ ಅನ್ನು ಬೆರೆಸಿ ನಿರ್ಮಾಣಗೊಂಡ ಬಾಟಲಿಯ ಗೋಡೆಯ ಮೇಲೆ ಹಾಕಲಾಗುತ್ತದೆ, ಇದು ಬಾಟಲಿಗಳನ್ನು ಹಿಡಿದಿಡಲು ಸಹಕಾರಿಯಾಗುರ್ತದೆ ಹಾಗು ಘನ ಗೋಡೆಯನ್ನು ಹೊಂದುತ್ತದೆ.
ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಭಯ ಇದ್ದೇ ಇರುತ್ತದೆ. ಇದಕ್ಕೆ ಮನಃಶಾಸ್ತ್ರದಲ್ಲಿ ಟ್ರೈಪನೋಫೋಬಿಯಾ ಎಂದು ಹೆಸರು. ಈ ಭಯಕ್ಕೆ ಭಾರತದ ವಿಜ್ಞಾನಿಗಳು ಪರಿಹಾರ ಹುಡುಕಿದ್ದಾರೆ. ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್ ಆವಿಷ್ಕರಿಸಿದ್ದಾರೆ. ಅಹಮದಾಬಾದ್, ಮಕ್ಕಳಿಗೆ ಹುಷಾರು ತಪ್ಪಿತೆಂದರೆ ಪಾಲಕರಿಗೆ ಆಂತಂಕವಾಗುವುದು ಸಹಜ. ಚಿಕಿತ್ಸೆ ಕೊಡಿಸುವಾಗ ಚುಚ್ಚುಮದ್ದು ಕೊಡಿಸುವುದು ಮತ್ತೊಂದು ಸಾಹಸದ ಕಾರ್ಯ. ಕೆಲ ಮಕ್ಕಳಂತೂ ಹಾರಾಡಿ, ಚೀರಾಡಿ ಹಿಡಿತಕ್ಕೇ ಸಿಗದಂತಾಗಿಬಿಡುತ್ತವೆ. ಅಂತಹ ಮಕ್ಕಳ ಕೈಕಾಲು ಕಟ್ಟಿಯೇ ಚುಚ್ಚುಮದ್ದು ನೀಡಬೇಕಾಗುತ್ತದೆ. ನಮ್ಮಲ್ಲಿಯೂ ಹಲವರಿಗೆ…
ಬೆಳಗ್ಗೆ ಸಮಯದ ಅಭಾವವಿರುವುದರಿಂದ ರಾತ್ರಿಯೇ ಚಪಾತಿ ಹಿಟ್ಟು ಕಲಸಿಟ್ಟುಕೊಳ್ಳುವುದು ಈಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿದೆ. ಕೆಲವರು ಚಪಾತಿ ಹಿಟ್ಟು ಕಲಸಿದರೆ, ಇನ್ನು ಕೆಲವರು ಅಕ್ಕಿ, ಗೋಧಿ, ಜೋಳದ ಹಿಟ್ಟನ್ನು ಕಲಸಿಡುತ್ತಾರೆ. ಆದರೆ ಹೀಗೆ ಕಲಸಿಟ್ಟ ಹಿಟ್ಟನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳು ಬೀರುತ್ತವೆ, ಅದೇನೆಂದು ನೀವೇ ಓದಿ ನೋಡಿ… ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಮೃದುವಾದ, ಹಸಿ ಹಿಟ್ಟಿನಲ್ಲಿ ಹುದುಗುವಿಕೆ ಪ್ರಕ್ರಿಯೆಯು ಸಾಮಾನ್ಯ ಹಿಟ್ಟಿಗಿಂತ ಬೇಗನೆ ಪ್ರಾರಂಭವಾಗುತ್ತದೆ. ಇದರಿಂದಾಗಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಈ ಹಿಟ್ಟು…
ಆರಂಭದಲ್ಲಿ ವಾರದಲ್ಲಿ ಒಂದು ದಿನ ರಜೆ ಪಡೆಯಲು ವಿಶ್ವದ ಜನರು ಪರದಾಡಿದ್ದರು. ನಂತ್ರ ಕೆಲ ಕಂಪನಿಗಳು ವಾರದಲ್ಲಿ ಎರಡು ದಿನ ರಜೆ ನೀಡಲು ಶುರು ಮಾಡಿದ್ವು. ಇಷ್ಟಾದ್ರೂ ಉದ್ಯೋಗಿಗಳು ವಾರದಲ್ಲಿ ಮೂರು ದಿನ ರಜೆ ಸಿಕ್ಕರೆ ಎಷ್ಟು ಚೆಂದವೆಂದು ಆಲೋಚನೆ ಮಾಡ್ತಾರೆ. ಭಾರತದಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ. ಆದ್ರೆ ಬ್ರಿಟನ್ ಕಂಪನಿಯೊಂದು ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಪೋರ್ಟ್ಕುಲಸ್ ಲೆಗ್ಸ್ ಹೆಸರಿನ ಕಂಪನಿ ವಾರದಲ್ಲಿ ಮೂರು ದಿನ ರಜೆ ನೀಡುವುದಾಗಿ ಹೇಳಿದೆ. ಅಂದ್ರೆ ಕೆಲಸಗಾರರು ವಾರದಲ್ಲಿ ನಾಲ್ಕು…