ಆಧ್ಯಾತ್ಮ

ಮಹಾ ಲಕ್ಷಿ ನಿಮ್ಗೆ ಒಲಿಬೇಕೆಂದ್ರೆ ಈ ಗುಣಗಳನ್ನು ನೀವು ಬಿಡಲೇಬೇಕು!ಮುಂದೆ ಓದಿ ಗೊತ್ತಾಗುತ್ತೆ…….

4569

ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಇವುಗಳು ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಜೀವನದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿ ಸಿಗುವುದು, ಅದು ಖಂಡಿತವಾಗಿಯೂ ನಿಜವೇ.

ಆದರೆ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಒಲಿಸಿಕೊಂಡ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೂ ಕಷ್ಟಕರವಾದ ವಿಷಯ.

ಲಕ್ಷ್ಮಿ ದೇವಿಯ ಆಶೀರ್ವಾದ ನಮ್ಮ ಮೇಲೆ ನಿರಂತರವಾಗಿಬೇಕೆಂದರೆ ಕೆಲವು ನಕಾರಾತ್ಮಕ ಅಂಶಗಳಿಂದ ದೂರ ಉಳಿಯಬೇಕಾಗುತ್ತದೆ. ಮತ್ತು ಅಂತಹ ಗುಣಗಳನ್ನು ಬಿಡಬೇಕಾಗುತ್ತದೆ.

  • ಅನೈರ್ಮಲ್ಯ ಹಾಗೂ ಅವ್ಯವಸ್ಥೆ:- 

ಶುಚಿತ್ವ, ಸ್ವಚ್ಛತೆ ಇಲ್ಲದ ಕಡೆ ಸಂಪತ್ತು ಇರುವುದಿಲ್ಲ ಎಂಬ ನಂಬಿಕೆ ಇದೆ. ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಲ್ಲಿ ಲಕ್ಷ್ಮಿ ದೇವಿಯ ಸಾನ್ನಿಧ್ಯವೂ ಇರುವುದಿಲ್ಲ ಎನ್ನುತ್ತಾರೆ. ಆದ್ದರಿಂದ ಸಂಪತ್ತು ವೃದ್ಧಿಯಾಗುವುದಕ್ಕೆ ಸ್ವಚ್ಛತೆಯೂ ಪ್ರಭಾವ ಬೀರಲಿದೆ

  • ಸೋಮಾರಿತನ ಬಿಡಬೇಕು:-

ಯಾವುದೇ ಪ್ರಯತ್ನ ನಡೆಸದೇ ಏಕಾಏಕಿ ಸಂಪತ್ತು ಗಳಿಸಲು ಸಾಧ್ಯವಿಲ್ಲ. ಕಷ್ಟಪಡದೇ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾದರೆ ಅನಾರೋಗ್ಯದ ಸಂದರ್ಭ, ಅಥವಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಬೆಳಿಗ್ಗೆ ವಿಳಂಬವಾಗಿ ಏಳುವುದು, ಸಂಜೆ ವೇಳೆ ಮಲಗುವುದು ಸೇರಿದಂತೆ ಸೋಮಾರಿತನ ಬಿಡಬೇಕು ಎನ್ನುತ್ತದೆ ಹಿಂದಿನಿಂದಲೂ ನಡೆದುಬಂದಿರುವ ನಂಬಿಕೆಗಳು.

  • ವಿಶ್ವಾಸವಿಡಿ(ನಿಮ್ಮನ್ನು ನೀವು ನಂಬಿ):- 

ನಿಮ್ಮನ್ನು ನೀವು ನಂಬದೆ ದೇವರನ್ನು ನಂಬಿ ಪ್ರಯೋಜನವಿಲ್ಲ ಎಂದಿದ್ದಾರೆ ಹಿರಿಯರು. ಅದರಂತೆಯೇ ಸಂಪತ್ತು, ಸಂವೃದ್ಧಿಯನ್ನು ಗಳಿಸಲು ನಮ್ಮ ಮೇಲೆ ನಮಗೆ ನಂಬಿಕೆ, ವಿಶ್ವಾಸ ಇರಬೇಕು ಹಾಗಾದಲ್ಲಿ ಮಾತ್ರ ಲಕ್ಷ್ಮಿ ದೇವಿಯೂ ನಮಗೆ ಒಲಿಯುತ್ತಾಳೆ, ಸದಾ ಕ್ರಿಯಾಶೀಲರಾಗಿರಬೇಕು.

  • ಅತಿ ಆಸೆ ಒಳ್ಳೆಯದಲ್ಲ:-

ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ. ಅದರಂತೆ,  ಶ್ರೀಮಂತಿಕೆಯ ಆಸೆ ಗಳಿಸಿದಷ್ಟೂ ಮತ್ತಷ್ಟು ಗಳಿಸಬೇಕೆಂಬ ಅತಿ ಆಸೆಯೂ ಲಕ್ಷ್ಮಿಯ ಸಾನ್ನಿಧ್ಯ ಇಲ್ಲದಂತೆ ಮಾಡುತ್ತದೆ. ಆದ್ದರಿಂದ ಅತಿ ಆಸೆ, ಸ್ವಾರ್ಥ, ಕೋಪ ಇವುಗಳನ್ನು ತ್ಯಜಿಸುವ ಮೂಲಕ ಲಕ್ಷ್ಮಿಯ ಆಶೀರ್ವಾದಕ್ಕೆ ಪಾತ್ರರಾಗಬಹುದಂತೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ