ಜ್ಯೋತಿಷ್ಯ

ಮನಿ ಪ್ಲಾಂಟ್’ನ್ನು ಮನೆಯಲ್ಲಿ,ಎಲ್ಲಿ ಬೆಳೆಸಿದ್ರೆ ಶುಭ,ಅಶುಭಗಳು ಆಗುತ್ತವೆ ಗೊತ್ತಾ..?

1672

ನಾವು ಮನೆ ಮುಂದೆ ಕೆಲವೊಂದು ಗಿಡ ಗಳನ್ನು ನೆಡುವುದು ಸಾಮಾನ್ಯ. ಆದರೆ ಕೆಲವೊಂದು ಗಿಡಗಳನ್ನು ನೆಟ್ಟರೆ ಶ್ರೀಮಂತಿಕೆ ಬರುತ್ತೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಒಂದು ಗಿಡದ  ಹೆಸರು ಮನಿಪ್ಲಾಂಟ್‌. ನೋಡಿ ಇದರ ಹೆಸರೇ ಹಣಕ್ಕೆ ಸಂಬಂಧಿಸಿದ ಹಾಗಿದೆ. ನೀವು ಇದನ್ನು ಕೆಲವು ಜನರ ಮನೆಯಲ್ಲಿ ಹಾಗೂ ಕಚೇರಿಗಳಲ್ಲಿ  ಹಾಕಿರುವುದನ್ನು ನೋಡಿರುತ್ತೀರಿ.

ಆದರೆ ಇದಕ್ಕೆ ಸಂಬಂಧಿಸಿದ ಹಲವು ನಂಬಿಕೆಗಳನ್ನು ಕೂಡಾ ನೀವು ಕೇಳಿರುತ್ತೀರಿ. ಜ್ಯೋತಿಷ್ಯವನ್ನು ನಂಬುವವರಿಗೆ ಮನಿಪ್ಲಾಂಟ್ ನೆಟ್ಟರೆ ಸುಖ ಶಾಂತಿ ಮಾತ್ರವಲ್ಲ ಬದಲಾಗಿ ಮನೆಗೆ ಶ್ರೀಮಂತಿಕೆ ಕೂಡಾ ಬಂದು ಸೇರುತ್ತದೆ ಎಂದು ಹೇಳಲಾಗುತ್ತದೆ.

ಮನಿ ಪ್ಲಾಂಟ್ ಎಲ್ಲಿ ಹೇಗೆ ಇಡಬೇಕು..?

ಮನೆಯಲ್ಲಿ ಆರ್ಥಿಕ ವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ಅನೇಕರು ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟುಕೊಳ್ತಾರೆ. ಕೆಲವರು ಮನೆಯೊಳಗೆ ಮನಿ ಪ್ಲಾಂಟ್ ಇಟ್ಟರೆ ಮತ್ತೆ ಕೆಲವರು ಮನೆ ಹೊರಗಿಡ್ತಾರೆ. ಆದ್ರೆ ಇದ್ರ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟರೂ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಸರಿಯಾದ ದಿಕ್ಕು ಹಾಗೂ ವಾಸ್ತುವನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ಮನಿ ಪ್ಲಾಂಟ್ ಇಡಬೇಕು.

ವಾಸ್ತುವಿನಲ್ಲಿ ನಂಬಿಕೆ ಇರುವವರು ಮನಿಪ್ಲಾಂಟ್ ಇರಿಸುವಾಗ ಕೆಲವು ವಿಷಯಗಳನ್ನು ಗಮಿಸಬೇಕು…

ಮನಿಪ್ಲಾಂಟ್‌ ಗಿಡವನ್ನು ವಾಸ್ತುಪ್ರಕಾರ ಸರಿಯಾದ ಜಾಗ ಸರಿಯಾದ ದಿಕ್ಕಿನಲ್ಲಿ ಇರಿಸಬೇಕು. ಇಲ್ಲದಿದ್ದರೆ ಪ್ರಭಾವ ಉಲ್ಟಾ ಆಗಿಬಿಡಬಹುದಂತೆ.

ಯಾವ ದಿಕ್ಕಿನಲ್ಲಿ…

ಮನಿ ಪ್ಲಾಂಟ್ ಸರಿಯಾದ ದಿಕ್ಕಿನಲ್ಲಿಡಬೇಕು. ಈಶಾನ್ಯ ದಿಕ್ಕಿನಲ್ಲಿ ಮನಿಪ್ಲಾಂಟ್ ಇಟ್ಟರೆ ಶುಭ ಫಲಗಳನ್ನು ಪಡೆಯಬಹುದು. ಧನದ ವೃದ್ಧಿಯಾಗುತ್ತದೆ. ದಿಕ್ಕು ಬದಲಾದಲ್ಲಿ ಮನೆಯ ಸದಸ್ಯರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.ಮನಿಪ್ಲಾಂಟ್ ಉತ್ತರ ಪೂರ್ವದಿಕ್ಕಿನಲ್ಲಿಡಬೇಡಿ. ಇದು ಬಹಳ ನಕರಾತ್ಮಕವಾದ ದಿಕ್ಕು ಎನ್ನಲಾಗುತ್ತಿದೆ. ಈ ದಿಕ್ಕನ್ನು ದೇವಗುರು ಬೃಹಸ್ಪತಿ ಪ್ರತಿನಿಧಿಸುತ್ತಾನೆ,

ಮನೆಯಿಂದ ಹೊರಗೆ ಎಸೆಯಬಾರದು…

ಮನಿ ಪ್ಲಾಂಟ್ ಸರಿಯಾಗಿ ಬೆಳೆಯದಿದ್ದರೆ ಅದನ್ನು ಹೊರಗೆ ಎಸೆಯುತ್ತಾರೆ. ಆದ್ರೆ ಹೀಗೆ ಮಾಡುವುದು ಅಶುಭ. ಮನಿಪ್ಲಾಂಟ್ ಸರಿಯಾಗಿ ಬೆಳವಣಿಗೆಯಾಗದಿದ್ದಲ್ಲಿ ದೊಡ್ಡ ಪಾಟ್ ನಲ್ಲಿ ಇದನ್ನು ಬೆಳೆಸಬೇಕು. ಮನೆಯಿಂದ ಹೊರಗೆ ಎಸೆಯಬಾರದು.

ಮನೆಯಿಂದ ಹೊರಗೆ ಮನಿ ಪ್ಲಾಂಟ್ ಇಡುವುದಕ್ಕಿಂತ ಮನೆಯೊಳಗೆ ಇಡುವುದು ಶುಭ. ಮಡಿಕೆ ಅಥವಾ ಬಾಟಲಿಯಲ್ಲಿಯೂ ಮನಿ ಪ್ಲಾಂಟ್ ಬೆಳೆಸಬಹುದು.ಹಾಳಾದ ಮನಿ ಪ್ಲಾಂಟ್ ಎಲೆಗಳನ್ನು ಎಸೆಯಬೇಕು. ಮನಿ ಪ್ಲಾಂಟ್ ಎಲೆಗಳು ಮನೆಯೊಳಗೆ ಉದುರಿ ಬೀಳುವುದು ಅಶುಭ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ