ಸಂಬಂಧ

ಮದುವೆಯಾದ ಹುಡುಗ ನಿಮಗೆ ತಕ್ಕ ವರನೇ ಎಂದು ತಿಳಿದುಕೊಳ್ಳುವುದು ಹೇಗೇ..? ಈ ಗುಣಗಳು ನಿಮ್ಮ ಸಂಗಾತಿಯಲ್ಲಿದ್ದರೆ ಆತ ನಿಮಗೆ ತಕ್ಕ ವ್ಯಕ್ತಿ ಎಂದು ಅರ್ಥ…

873

ಮದುವೆ ಎಂಬುದೇ ವಿಚಿತ್ರ ನಂಟು. ಎಲ್ಲಿಯೋ ಇದ್ದ ಹುಡುಗ – ಹುಡುಗಿ ಮದುವೆ ಎಂಬ ಸಂಬಂಧ ದೊಂದಿಗೆ ಬೆಸೆಯುತ್ತದೆ. ಹುಡುಗ ಏನೋ ಸಂತಸದಲ್ಲೇ ಮದುವೆಯಾಗುತ್ತಾನೆ. ಆದರೆ……

ಹುಡುಗ ಏನೋ ಸಂತಸದಲ್ಲೇ ಮದುವೆಯಾಗುತ್ತಾನೆ. ಆದರೆ ಹುಡುಗಿ ತಾನು ಹುಟ್ಟಿ ಬೆಳೆದ ಮನೆ, ತನ್ನ ಕುಟುಂಬ ತನ್ನವರು ಎಂಬ ಎಲ್ಲಾ ಸಂಬಂಧವನ್ನು ಬಿಟ್ಟು ಇನ್ನೊಂದು ಮನೆಗೆ ಜೀವನ ಪೂರ್ತಿ ಕಳೆಯಲು ಹೋಗಬೇಕು. ಇಷ್ಟೆಲ್ಲಾ ಆದ ಮೇಲೆ ಆತನನ್ನೇ ನಿಮ್ಮ ಜೀವನವಾಗಿ ಸ್ವೀಕರಿಸಲೇಬೇಕು.

ಆದರೆ ಮದುವೆಯಾದ ಹುಡುಗ ನಿಮಗೆ ತಕ್ಕ ವರನೇ ಎಂದು ತಿಳಿದುಕೊಳ್ಳುವುದು ಹೇಗೇ..? ಈ ಗುಣಗಳು ನಿಮ್ಮ ಸಂಗಾತಿಯಲ್ಲಿದ್ದರೆ ಆತ ನಿಮಗೆ ತಕ್ಕ ವ್ಯಕ್ತಿ ಎಂದು ಅರ್ಥ…

  • ಉತ್ತಮ ಸ್ನೇಹಿತನಂತೆ ಎಲ್ಲಾ ಸಂದರ್ಭದಲ್ಲೂ ನಿಮಗೆ ಸಹಾಯ ಮಾಡುವ ಗುಣವಿರಬೇಕು.
  • ಆತನ ಮಾತು, ಪ್ರೀತಿ ಅಥವಾ ಆತನ ಏನೆ ಮಾಡಿದರೂ ಸಹ ನಿಮಗೆ ಆತ ಇಷ್ಟವಾದರೆ…ನೀವು ನಿಮ್ಮ ಫ್ಯಾಮಿಲಿ ಜೊತೆ ಅಥವಾ ಫ್ರೆಂಡ್ಸ್ ಜೊತೆ ಸಮಯ ಕಳೆಯಲು ಬಯಸಿದಾಗ ನಿಮ್ಮ ಇಷ್ಟದಂತೆ ಇರಲು ಬಿಡುವ ಗುಣ.
  • ನಿಮಗೆ ಯಾವ ಸಂದರ್ಭದಲ್ಲಿ ಸಹಾಯ ಅಥವಾ ಬೆಂಬಲ ಬೇಕು ಎಂಬುದನ್ನು ಅರಿತು ನಿಮ್ಮ ಬೆನ್ನೆಲುಬಾಗಿ ನಿಲ್ಲವಂತಹ ಗುಣವಿರಬೇಕು.
  • ಇದು ಮಹಿಳೆಯರು ಮಾಡುವಂತಹ ಕೆಲಸ. ಅಡುಗೆ ಎಲ್ಲಾ ಮಹಿಳೆಯರೇ ಮಾಡಬೇಕು ಎಂಬುದನ್ನು ಹೇಳದೆ ಯಾವುದೇ ಕೆಲಸದಲ್ಲೂ ನಿಮಗೆ ಜೊತೆಯಾಗಿ ಕೈ ಜೋಡಿಸಿ ನಿಲ್ಲುವ ವ್ಯಕ್ತಿತ್ವ.
  • ನಿಮಗಾಗಿ ಏನು ಬೇಕಾದರೂ ಮಾಡುವ ವ್ಯಕ್ತಿ ನಿಮಗೆ ಸಿಕ್ಕಿದರೆ ನೀವೇ ಲಕ್ಕಿ ಗರ್ಲ್.

ಜೊತೆಯಾಗಿ ನಡೆ ಯುತ್ತಿದ್ದರೆ ಸುಮ್ಮನೆ ಕೈ ಹಿಡಿಯುವುದು, ಸಂತಸವಾದಾಗ ಹಣೆ ಮೇಲೊಂದು ಹೂಮುತ್ತು ನೀಡುವುದು ಹಾಗೂ ನಿಮ್ಮನ್ನು ಅಪ್ಪಿಕೊಳ್ಳುವ ವ್ಯಕ್ತಿತ್ವ ಅವನದ್ದಾಗಿದ್ದರೆ ಆತ ಉತ್ತಮ ವ್ಯಕ್ತಿ. ಜಗಳ ದಾಂಪತ್ಯದಲ್ಲಿ ಸಾಮಾನ್ಯ. ಆದರೆ ಯಾವುದೋ ವಿಷಯಕ್ಕೆ  ಜಗಳವಾಡಿ ನಂತರ ನಿಮ್ಮ ಬಳಿ ಮಾತನಾಡದೆ ಇರಲು ಸಾಧ್ಯವಾಗದೆ ಏನಾದರೊಂದು ನೆಪ ಹೇಳಿ ಮಾತನಾಡುವ ಗುಣ ಹೊಂದಿದ ವ್ಯಕ್ತಿ.

ನಿಮ್ಮಿಬ್ಬರ ಮಾತು ನಡವಳಿಕೆ ಅಥವಾ ಯೋಚನಾ ಲಹರಿ ಒಂದೇ ರೀತಿ ಆಗಿದ್ದರೆ ಮತ್ತೇನು ಬೇಕು ಸಂಸಾರ ಎಂಬ ದೋಣಿಯನ್ನು ಸಾಗಿಸಲು..? ಕೊನೆಗೆ ಪೂರ್ತಿ ಫ್ಯಾಮಿಲಿಯಲ್ಲಿ ನೀವೇ ಅವರಿಗೆ ನಂ 1 ಸ್ಥಾನ ತುಂಬುವವರಾಗಿದ್ದರೆ… ನೀವು ಸರಿಯಾದ ವ್ಯಕ್ತಿಯನ್ನೇ ಮದುವೆಯಾಗಿದ್ದೀರಿ ಎಂದು ಅರ್ಥ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಆನ್ಲೈನ್ ಬ್ಯಾಂಕಿಂಗ್‌ನಲ್ಲಿ ಮೋಸಕ್ಕೆ ಒಳಗಾಗುವ ಮುನ್ನ ಇದನ್ನೊಮ್ಮೆ ನೋಡಿ,.!

    ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ, ತಂತ್ರಜ್ಙಾನ ಬೆಳೆಯುತ್ತಿದ್ದಂತೆ  ಬ್ಯಾಂಕಿಂಗ್ ವ್ಯವಹಾರಗಳು  ಸಹ ಎಲ್ಲರಿಗೂ  ಸುಲಭವಾಗುತ್ತಿದೆ. ಹಾಗೆಯೇ  ಇಂಟರ್ನೆಟ್   ಹ್ಯಾಕಿಂಗ್ , ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ.ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ. ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಪಾವತಿ  ಮಾಡುವುದು, ಹಣವನ್ನು  ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು…

  • ಆರೋಗ್ಯ

    ಹಸುವಿನ ಹಾಲಿಗಿಂತ ಕತ್ತೆ ಹಾಲೇ ಉತ್ತಮನಾ..?ತಿಳಿಯಲು ಈ ಲೇಖನ ಓದಿ…

    ಕತ್ತೆಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್‌, ಚಿಕ್ಕೋರ್‌ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.

  • ದೇಶ-ವಿದೇಶ

    ಸೌದಿಯಲ್ಲಿ ಈಗ ಯೋಗಕ್ಕೆ ನೀಡಲಾಗಿದೆ ಕ್ರೀಡೆಯ ಮಾನ್ಯತೆ..!ತಿಳಿಯಲು ಈ ಲೇಖನ ಓದಿ…

    ಯೋಗ ಈಗ ಸೌದಿ ಅರೇಬಿಯಾದ ಅಧಿಕೃತ ಕ್ರೀಡಾ ಚಟುವಟಿಕೆಗಳಲ್ಲಿ ಒಂದು ಎಂದು ಮಾನ್ಯತೆ ಪಡೆದುಕೊಂಡಿದೆ. ಈ ಮೂಲಕ ಇಸ್ಲಾಮಿಕ್‌ ರಾಷ್ಟ್ರದಲ್ಲಿ ಜನತೆಗೆ ಇನ್ಮುಂದೆ ಅಧಿಕೃತವಾಗಿ ಯೋಗ ಕಲಿಕೆ ಹಾಗೂ ಬೋಧನೆಗೆ ಪರವಾನಿಗೆ ದೊರೆಯಲಿದೆ

  • ಸುದ್ದಿ

    ಡಿಜಿಟಲ್‌ ವ್ಯಾಲೆಟ್‌ ಕಂಪನಿಯ ಫೋನ್‌ಪೇ ಕೆವೈಸಿ ಸೇವೆಯು ಈಗ ಗ್ರಾಹಕರ ಮನೆ ಬಾಗಿಲಿಗೆ ಹೊರಟಿದೆ,..ಕಾರಣ ತಿಳಿಯಲು ಇದನ್ನೊಮ್ಮೆ ಓದಿ..?

    ಡಿಜಿಟಲ್‌ ವ್ಯಾಲೆಟ್‌ಗಳಿಗೆ ಕೆವೈಸಿ ಅಳವಡಿಸಲು ಆರ್‌ಬಿಐ ನೀಡಿದ್ದ ಗಡುವು ಮುಕ್ತಾಯಕ್ಕೆ ಇನ್ನು ಎರಡು ವಾರ ಮಾತ್ರ ಬಾಕಿ ಇದ್ದು, ಆಗಸ್ಟ್‌ಅಂತ್ಯಕ್ಕೆ ಈ ಗಡುವು ಮುಗಿಯಲಿದೆ. ಅದಕ್ಕಾಗಿಯೇ ಪ್ರಮುಖ ಡಿಜಿಟಲ್‌ ವ್ಯಾಲೆಟ್‌ ಕಂಪನಿ ಫೋನ್‌ಪೇಕೆವೈಸಿ ಸೇವೆ ಪೂರೈಸಲು ಗ್ರಾಹಕರ ಮನೆ ಬಾಗಿಲಿಗೆ ಹೋಗಲು ನಿರ್ಧರಿಸಿದೆ. ಬಳಕೆದಾರರ ದಾಖಲೆಗಳನ್ನುಭೌತಿಕವಾಗಿ ಪರಿಶೀಲಿಸುವುದು ದುಬಾರಿಯಾಗಿದೆ. ಆದರೆ ಇ-ಕೆವೈಸಿಗಾಗಿ ಆಧಾರ್ ಬಳಕೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದ ನಂತರ ವ್ಯಾಲೆಟ್‌ ಕಂಪನಿಗಳಿಗೆ ಹೆಚ್ಚಿನ ಆಯ್ಕೆ ಉಳಿದಿಲ್ಲ. ಗ್ರಾಹಕರು ತಮ್ಮಸಂಪೂರ್ಣ ಕೆವೈಸಿ ಮಾಡಿಸುವ ಗಡುವನ್ನು ಆರ್‌ಬಿಐ ಆಗಸ್ಟ್‌ವರೆಗೆ ವಿಸ್ತರಿಸಿತ್ತು,…

  • ಸುದ್ದಿ

    ಇಂದು ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿಶ್ಚಿತಾರ್ಥ..ಎಲ್ಲಿ ಗೊತ್ತ ?

    ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ನಿಶ್ಚಿತಾರ್ಥ ಇಂದು (ಸೋಮವಾರ) ನಡೆಯಲಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ…

  • ಸುದ್ದಿ

    ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ಈ ಕಾಲೇಜ್ ಕೈಗೊಂಡ ಕ್ರಮವೇನು ಗೊತ್ತ?ತಿಳಿದರೆ ಬಿದ್ದು ಬಿದ್ದು ನಗ್ತೀರಾ..!

    ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿರುವ ಘಟನೆ ಹಾವೇರಿಯ ಭಗತ್ ಪಿಯುಸಿ ಕಾಲೇಜಿನಲ್ಲಿ ನಡೆದಿದೆ. ಪರೀಕ್ಷಾ ಹಾಲ್ ನಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯದಂತೆ ಕಾವಲುಗಾರನಾಗಿ ಸಿಸಿಟಿವಿ ಕ್ಯಾಮೆರಾ ನೋಡಿದ್ದೆವೆ. ಆದರೆ ಹಾವೇರಿಯ ನಗರದ ದನದ ಮಾರುಕಟ್ಟೆಯ ಎದುರಿಗಿರುವ ಭಗತ್ ಪಿಯುಸಿ ಕಾಲೇಜಿನಲ್ಲಿ ಮಕ್ಕಳು ಕಾಪಿ ಮಾಡಬಾರದು ಎಂದು ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿದ್ದಾರೆ. ಗುರುವಾರ ನಡೆದ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ…