ಕ್ರೀಡೆ

ಭಾರತ ಅಂಡರ್ 19 ವಿಶ್ವಕಪ್ ಚಾಂಪಿಯನ್:ಬಗ್ಗುಬಡಿದ ದ್ರಾವಿಡ್ ಯುವ ಪಡೆ..!ತಿಳಿಯಲು ಈ ಲೇಖನ ಓದಿ..

145

ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ  ಗೆಲುವು ಸಾಧಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಬಾರಿಗೆ ಕಿರಿಯರ ವಿಶ್ವಕಪ್ ಎತ್ತಿ ಹಿಡಿದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 47.2 ಓವರುಗಳಲ್ಲಿ ಭಾರತ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 216 ರನ್ ಗಳಿಗೆ ಆಲೌಟ್ ಆಯಿತು..

ಆಸ್ಟ್ರೇಲಿಯಾ ಪರವಾಗಿ ಜೋನಾಥನ್ ಮೆರ್ಲೊ 76, ಪರಮ್ ಉಪ್ಪಲ್ 34 ಜ್ಯಾಕ್ ಎಡ್ವಾರ್ಡ್ಸ್ 28 ರನ್ ಗಳಿಸಿದರು. ಭಾರತದ ಇಶಾನ್ ಪೊರೆಲ್, ಶಿವಾ ಸಿಂಗ್, ಕಮಲೇಶ್ ನಗರಕೋಟಿ, ಅನುಕೂಲ್ ರಾಯ್ ತಲಾ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕ ಬ್ಯಾಟ್ಸಮನ್ ಗಳಾದ ಪೃಥ್ವಿ ಶಾ ಹಾಗೂ ಮಂಜೋತ್ ಕಾಲ್ರಾ ಉತ್ತಮ ಆರಂಭ ಒದಗಿಸಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಮಂಜೋತ್ ಕಾಲ್ರಾ (101) ಅಜೇಯ ಶತಕ ಬಾರಿಸಿದರು. ನಾಯಕ ಪೃಥ್ವಿ ಶಾ 29, ಶುಭಮನ್ ಗಿಲ್ 31, ಹಾರ್ವಿಕ್ ದೇಸಾಯಿ 47 ರನ್ ಗಳಿಸಿದರು. ಭಾರತ 38.5 ಓವರುಗಳಲ್ಲಿ ಗುರಿಯನ್ನು ತಲುಪಿ ಭರ್ಜರಿ ಜಯ ಗಳಿಸಿತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಹುಟ್ಟು ಹಬ್ಬದ ಸಂಧರ್ಭದಲ್ಲಿ ಕೇಕ್ ಮೇಲೆ ಮೋಂಬತ್ತಿ ಉರಿಸುತ್ತಿರಾ!ಹಾಗದ್ರೆ ತಪ್ಪದೇ ಈ ಸುದ್ದಿ ನೋಡಿ..

    ಹುಟ್ಟುಹಬ್ಬ ಆಚರಿಸುವಾಗ ಕೇಕ್ ಮೇಲೆ ಕ್ಯಾಂಡಲ್ ಗಳನ್ನು ಉರಿಸಿ ಅದನ್ನು ಆರಿಸೋದು ಕಾಮನ್. ಎಲ್ಲರೂ ಖುಷಿ ಖುಷಿಯಾಗಿ ಮೋಂಬತ್ತಿಗಳನ್ನು ಆರಿಸಿ ನಂತರ ಆ ಕೇಕ್ ಅನ್ನು ಕತ್ತರಿಸ್ತಾರೆ. ಆದ್ರೆ ಹೀಗೆ ಮಾಡೋದ್ರಿಂದ ಕೇಕ್ ನಲ್ಲಿ ಬ್ಯಾಕ್ಟೀರಿಯಾಗಳು ತುಂಬಿಕೊಳ್ಳುತ್ತವೆ. ದಕ್ಷಿಣ ಕೆರೊಲಿನಾದ ಕ್ಲೆಮ್ಸನ್ ಯೂನಿವರ್ಸಿಟಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಮೋಂಬತ್ತಿ ಆರಿಸುವ ವೇಳೆ ಉಗುಳು ಕೂಡ ಕೇಕ್ ಮೇಲೆ ಬೀಳುತ್ತದೆ. ಇದರಿಂದಾಗಿ ಕೇಕ್ ನಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಶೇ. 1400 ರಷ್ಟು ಜಾಸ್ತಿಯಾಗುತ್ತದೆ. ಕ್ಯಾಂಡಲ್…

  • ಜ್ಯೋತಿಷ್ಯ

    ನವಿಲು ಗರಿಯನ್ನು ಮನೆಯ ಈ ಜಾಗದಲ್ಲಿ ಇಟ್ಟರೆ ಏನಾಗುತ್ತೆ ಗೊತ್ತಾ..?

    ಹಿಂದೂ ಧರ್ಮದಲ್ಲಿ ನವಿಲು ಗರಿಗೆ ಮಹತ್ವದ ಸ್ಥಾನವಿದೆ. ಕಾರ್ತಿಕನ ವಾಹನ ನವಿಲು ಎನ್ನಲಾಗಿದೆ. ಇಂದ್ರ ಕೂಡ ನವಿಲುಗರಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದನಂತೆ. ಶ್ರೀಕೃಷ್ಣನ ತಲೆ ಮೇಲೂ ನವಿಲು ಗರಿಯಿರುತ್ತದೆ. ನವಿಲು ಗರಿ ಮನೆಯಲ್ಲಿದ್ದರೆ ಸಾಕಷ್ಟು ಲಾಭಗಳಿವೆ. ನವಿಲು ಗರಿ ಮನೆಯ ಸುಖ, ಶಾಂತಿ, ಸಮೃದ್ಧಿಗೆ ಕಾರಣವಾಗುತ್ತದೆ. ಶುಕ್ರವಾರದ ದಿನ ನವಿಲು ಗರಿಯನ್ನು ಮನೆಗೆ ತನ್ನಿ. ಅದನ್ನು ದೇವರ ಮನೆಯಲ್ಲಿಡಿ. ದೇವರ ಮನೆಯಲ್ಲಿ ಪೂಜೆ ವೇಳೆ ಗಣೇಶ, ಈಶ್ವರ, ಲಕ್ಷ್ಮಿ, ಸರಸ್ವತಿ ಮತ್ತು ಹನುಮಂತನ ಮೂರ್ತಿ ಅಥವಾ ಫೋಟೋ…

  • ಸಿನಿಮಾ

    ಕನ್ನಡ ಚಿತ್ರಗಳ ಹಿಂದಿನ ಎಲ್ಲಾ ದಾಖಲೆಗಳು ದೂಳಿಪಟ!ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

    ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 25 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಕೆಜಿಎಫ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಚಿತ್ರ…

  • ಉಪಯುಕ್ತ ಮಾಹಿತಿ

    ಪ್ರಧಾನಮಂತ್ರಿ ಜನೌಷಧಿ ಯೋಜನೆಯಲ್ಲಿ, ಕ್ಯಾನ್ಸೆರ್’ಗೂ ಸಿಗಲಿವೆ ಅತೀ ಕಡಿಮೆ ಬೆಲೆಯ ಗುಣಮಟ್ಟದ ಔಷಧಿಗಳು!ತಿಳಿಯಲು ಈ ಲೇಖನ ಓದಿ…

    ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಜನೌಷಧಿ ಯೋಜನೆಯಿಂದಾಗಿ ಉತ್ತಮ ಗುಣಮಟ್ಟದ ಔಷಧಿಗಳು ಬಡವರಿಗೆ ಕೈಗೆಟಕುವ ದರದಲ್ಲಿ ದೊರಕುತ್ತಿದ್ದು ಇದಕ್ಕಾಗಿ ದೇಶದಾದ್ಯಂತ ಕೇಂದ್ರ ಸರಕಾರವು ಸಾವಿರಾರು ಜನೌಷಧ ಮಳಿಗೆಗಳನ್ನು ತೆರೆದಿದೆ.

  • ಸುದ್ದಿ

    ಹಾಲಲ್ಲ,ಆಲ್ಕೋಹಾಲ್‍ನಲ್ಲೂ ಕಲಬೆರಕೆ; ಬಾಟಲ್ ಖಾಲಿ ಮಾಡುವಾಗ ಬಯಲಿಗೆ ಬಂದ ಸತ್ಯ..! ಈ ಗಟನೆ ನಡೆದಿದ್ದು ಎಲ್ಲಿ ಗೊತ್ತಾ?

    ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ಕೋಲಾರ ಜಿಲ್ಲೆಯ ಮಾಲೂರಿನ ಬೈರಸಂದ್ರ ಬಳಿಯ ಶ್ರೀ ಲಕ್ಷ್ಮೀ ವೈನ್ಸ್‍ನಲ್ಲಿ ಖರೀದಿಸಿದ ಬಿಯರ್ ನಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ. ಚಿಲ್ಡ್ ಬಿಯರ್ ನಲ್ಲಿ ಕಲಬೆರಕೆಯಾಗಿದ್ದು, ಅರ್ಧ ಬಾಟಲಿ ಕುಡಿದ ಬಳಿಕ ಇದು ಗ್ರಾಹಕನ ಅರಿವಿಗೆ ಬಂದಿದೆ. ಈ ಕುರಿತು ಬಾರ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಕ್ಸ್ ಮಾಡುವ ವೇಳೆ ಏನೋ ಬಿದ್ದಿದೆ ಎಂದು ಬಾರ್ ಮಾಲೀಕರು…

  • ಶ್ರದ್ಧಾಂಜಲಿ

    ಹಿರಿಯ ನಟಿ ಜಮುನಾ ನಿಧನ

    ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಅವರು ಇಂದು (ಜನವರಿ 27) ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು. ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್​ನಲ್ಲಿರುವ ಫಿಲಂ ಚೇಂಬರ್‌ಗೆ ತರಲಾಗುತ್ತದೆ….