ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಳೆದ 21 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ನಡೆಸುವ ಮೂಲಕ ಸಾವಿರಾರು ಬಡ ಜನರ ಬಾಳಿನ್ನು ಹಸನುಗೊಳಿಸಿವ,ಸಮಾಜದ ಬಡ ವರ್ಗಗಳ ರೋಗಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ.

ಸ್ವಯಂ ಸೇವಾ ಸಂಸ್ಥೆಯಾದ ಫ್ರೆಂಡ್ಸ್ ವೆಲ್ ಫೇರ್ ಆರ್ಗನೈಸೇಷನ್ ಕಳೆದ 21 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ.ಈ ಶಿಬಿರದಮೂಲಕಸಂಸ್ಥೆಯು ಸಾವಿರಾರು ಬಡ ಜನರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಅವರ ಬದುಕನ್ನು ಹಸನುಗೊಳಿಸುವಂತೆ ಮಾಡಿದೆ.

ಈ 21 ವರ್ಷದ ಅವಧಿಯಲ್ಲಿ ಸಂಸ್ಥೆಯು ನಡೆಸಿಕೊಂಡುಬಂದಿರುವ ಹತ್ತಾರು ಸಮಾಜಮುಖಿ ಮತ್ತು ಸೇವಾ ಕಾರ್ಯಕ್ರಮ. ಸಾವಿರಾರು ಬಡ ಜನರ ಬಾಳಿನ್ನು ಹಸನುಗೊಳಿಸಿರುವ ಫ್ರೆಂಡ್ಸ್ ವೆಲ್ಫೇರ್ ಆರ್ಗನೈಸೇಷನ್, ಪ್ರತಿವರ್ಷದಂತೆ ಈ ಬಾರಿಯೂ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಆಯೋಜಿಸಿದೆ.

ಪ್ರತಿ ವರ್ಷದಂತೆ ಫ್ರೆಂಡ್ಸ್ ವೆಲ್ ಫೇರ್ ಆರ್ಗನೈಸೇಷನ್ ಈ ವರ್ಷವೂ ಆಯೋಜಿಸುತ್ತಿದೆ. ಇದು ಸಂಸ್ಥೆ ನಡೆಸುತ್ತಿರುವ 22 ನೇ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವಾಗಿದೆ. ಈ ವರ್ಷದ ಶಿಬಿರದವಿಶೇಷವೆಂದರೆ ಜರ್ಮನಿಯ ನುರಿತ ಪ್ಲಾಸ್ಟಿಕ್ ತಜ್ಞರ ತಂಡ ಆಗಮಿಸಿ ಸೂಕ್ತ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಿದೆ. ಸೀಳು ತುಟಿ, ಸೀಳು ಮೇಲ್ದವಡೆ, ಸುಟ್ಟ ಗಾಯಗಳಿಂದ ಚರ್ಮಕ್ಕೆಆಗಿರುವ ಹಾನಿಯನ್ನು ಈ ಪ್ಲಾಸ್ಟಿಕ್ ಸರ್ಜರಿ ಶಿಬಿರದಲ್ಲಿ ಸರಿಪಡಿಸಲಾಗುವುದು.

ಈ ಶಿಬಿರದ ವಿವರಗಳು ಇಂತಿವೆ:-
ಪರೀಕ್ಷಾ/ತಪಾಸಣೆ ದಿನ: 14 ಜನವರಿ 2018 ರಂದು ಬೆಳಗ್ಗೆ 8.30 ರಿಂದ.
ಶಸ್ತ್ರ ಚಿಕಿತ್ಸೆ ದಿನಾಂಕ: 15 ಜನವರಿ 2018 ರಿಂದ 24 ಜನವರಿ 2018 ರವರೆಗೆ.
ಸ್ಥಳ: ವಗುಸ್ ಸೂಪರ್ ವಿಶೇಷ ಆಸ್ಪತ್ರೆ
18 ನೇ ಕ್ರಾಸ್, ಬಸ್ ನಿಲ್ದಾಣದ ಹತ್ತಿರ ಮಲ್ಲೇಶ್ವರಂ ಬೆಂಗಳೂರು– 560003.
ಈ ಶಿಬಿರದಲ್ಲಿ ಪಾಲ್ಗೊಳ್ಳುವ ರೋಗಿಗಳು 14 ಜನವರಿ 2018 ರಂದು ಬೆಳಗ್ಗೆ 8 ಗಂಟೆಗೆ ಈ ಮೇಲಿನ ವಿಳಾಸದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ದೀಪೇನ್ ದವೆ– 9591398060 ಅಥವಾಪಾಯಲ್ ಶಾಹ್ – 9591398489 ಇವರನ್ನು ಸಂಪರ್ಕಿಸಬಹುದು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಲ್ಲ ಬಗೆಯ ಹತ್ತಾರು ಹಣ್ಣುಗಳಿದ್ದರೂ ಮಂಗವೊಂದು ಯಾವ ಹಣ್ಣನ್ನು ಮುಟ್ಟದೆ ಪ್ರಸಾದಕ್ಕಿಟ್ಟಿದ್ದ ಮೊಸರನ್ನ ತಿಂದು ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವು ಕುಟುಂಬ ಕಳೆದ ತಿಂಗಳು ಕಾಶಿ ಯಾತ್ರೆಗೆ ಹೋಗಿದ್ದರು. ಊರಿಗೆ ವಾಪಸ್ಸಾದ ಬಳಿಕ ಮನೆಯಲ್ಲಿ ಪವಮಾನ ಹಾಗೂ ಕಾಶಿ ಸಮಾರಾಧಾನೆ ಹೋಮ ಹಮ್ಮಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಸೇರಿ 300ಕ್ಕೂ ಹೆಚ್ಚು ಜನ ಹೋಮದಲ್ಲಿ ಪಾಲ್ಗೊಂಡಿದ್ದರು. ಹೋಮ ಮುಗಿಯುತ್ತಿದ್ದಂತೆ ಯಾರ ಭಯವೂ ಇಲ್ಲದೆ ಸ್ಥಳಕ್ಕೆ ಬಂದ ಕೋತಿ,…
ನಿಮ್ಮ ಮನೆಗೆ ಧಿಡೀರ್ ಅಂತ ಅತಿಥಿಗಳು ಬಂದರೆ ಇಲ್ಲಿದೆ ನೋಡಿ ಬಿಸಿ ಬಿಸಿ ತುಪ್ಪಾನ್ನ ಮಾಡುವ ವಿಧಾನ
ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ಸೇವಿಸಬಹುದು ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಅಸಲಿಗೆ ಸೀಬೇಕಾಯಿ ತೂಕ ಹೆಚ್ಚಿಸಲು ಸಹಕಾರಿಯೇ ಎಂಬುದು ಹಲವರ ಪ್ರಶ್ನೆ.
ಮನುಷ್ಯ ಇಷ್ಟು ಅಭಿವೃದ್ಧಿ ಹೊಂದಿ ಈ ಹಂತಕ್ಕೆ ಬಂದಿದ್ದಾನೆ ಅಂದರೆ ಅದಕ್ಕೆ ಕಾರಣ ಆತನ ಸೂಕ್ಷ್ಮವಾದ ಬುದ್ದಿ ಮತ್ತು ಆತನ ಸೂಕ್ಷ್ಮ ಅವಲೋಕನೆ ಆಗಿದೆ. ಜೀವನದಲ್ಲಿ ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಮ್ಮನ್ನ ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಅಥವಾ ನಮ್ಮನ್ನ ಪಾತಾಳಕ್ಕೆ ತಳ್ಳಬಹುದು, ಆದರೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ ಯೋಚನೆಗಳು ನಮ್ಮ ಜೀವನವನ್ನ ಬದಲಾವಣೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ನಾವು ಹೇಳುವ ಈ ವ್ಯಕ್ತಿ 4 ಲಕ್ಷ ಸಂಬಳದ ಉದ್ಯೋಗವನ್ನ ಬಿಟ್ಟು…
17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈಗಂತೂ ಎಲ್ಲಾ ನಕಲಿ. ಸ್ವಲ್ಪ ಯಾಮಾರಿದರೂ ನಕಲಿ ಆಹಾರ ಪದಾರ್ಥಗಳನ್ನೂ ಸಹ ತಿನ್ನಿಸುವ ಕಾಲ ಇದು.ಇತ್ತೀಚಿಗೆ ಮಾರುಕಟ್ಟೆಗೆ ನಕಲಿ ಮೊಟ್ಟೆ ಕಾಲಿಟ್ಟಿದೆ. ಕೃತಕ ಮೊಟ್ಟೆ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆದರೆ ನಕಲಿ ಯಾವುದು ಅಸಲಿ ಯಾವುದು ಎಂಬುದನ್ನು ತಿಳಿಯೋದು ಕಷ್ಟ. ನಕಲಿ ಮೊಟ್ಟೆ ಬಗ್ಗೆ ನೀವೂ ಜಾಗರೂಕರಾಗಿರಬೇಕು. ನಕಲಿ ಮೊಟ್ಟೆ ಹೇಗಿರುತ್ತೆ ಎಂಬುದನ್ನು ತಿಳಿದುಕೊಂಡಲ್ಲಿ ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. *ಸಾಮಾನ್ಯವಾಗಿ ಅಸಲಿ ಮೊಟ್ಟೆ ಹೊಳಪಿರುವುದಿಲ್ಲ. ನಕಲಿ…