ಸರ್ಕಾರದ ಯೋಜನೆಗಳು

ಬಿ.ಪಿ.ಎಲ್. ಕುಟುಂಬಗಳಿಗೆ ಸರ್ಕಾರದಿಂದ “ಇಂದಿರಾ ಬಟ್ಟೆ ಭಾಗ್ಯ”..! ತಿಳಿಯಲು ಈ ಓದಿ..

475

ಈಗಾಗಲೇ ಹಲವು ‘ಭಾಗ್ಯ’ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಇಂದಿರಾ ಗಾಂಧಿ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ ಈಗಾಗಲೇ ಇಂದಿರಾ ಹೆಸರಿನಲ್ಲಿ  ಕ್ಯಾಂಟೀನ್‌, ಕ್ಲಿನಿಕ್‌ ತೆರೆದಿರುವ ಸರ್ಕಾರ ಈಗ ಇಂದಿರಾ ವಸ್ತ್ರ ಭಾಗ್ಯ ಯೋಜನೆ ಜಾರಿಗೆ ಚಿಂತನೆ ನಡೆಸಿದೆ.

ಬಿ.ಪಿ.ಎಲ್. ಕುಟುಂಬದವರಿಗೆ ಉಚಿತವಾಗಿ ಬಟ್ಟೆ ನೀಡುವ ‘ಇಂದಿರಾ ವಸ್ತ್ರ ಭಾಗ್ಯ’ ಯೋಜನೆ ಜಾರಿಗೆ ಯೋಜಿಸಲಾಗಿದೆ. ಜವಳಿ ಇಲಾಖೆಯಿಂದ ವಾರ್ಷಿಕ 550 ಕೋಟಿ ರೂ. ವೆಚ್ಚದಲ್ಲಿ ‘ಇಂದಿರಾ ವಸ್ತ್ರ ಭಾಗ್ಯ’ ಯೋಜನೆ ಜಾರಿಗೊಳಿಸಲಿದ್ದು, ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ.

ಪುರುಷರಿಗೆ ಶರ್ಟ್ ಬಟ್ಟೆ, ಪಂಚೆ, ಮಹಿಳೆಯರಿಗೆ ಸೀರೆ ಮತ್ತು ರವಿಕೆ ಬಟ್ಟೆ ನೀಡಲಾಗುವುದು. ರಾಜ್ಯದ 1.10 ಕೋಟಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಈ ಸೌಲಭ್ಯ ಸಿಗಲಿದೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಬಟ್ಟೆಯನ್ನು ವಿತರಿಸಲಾಗುತ್ತದೆ ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಮಾಹಿತಿ ನೀಡಿದ್ದಾರೆ.

ಅನ್ನಭಾಗ್ಯ, ಕ್ಷೀರಭಾಗ್ಯ ಮೊದಲಾದ ಯೋಜನೆಗಳು ಜನಪ್ರಿಯವಾಗಿದ್ದು, ಅದೇ ಮಾದರಿಯಲ್ಲಿ ‘ಇಂದಿರಾ ವಸ್ತ್ರ ಭಾಗ್ಯ’ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ.

ಈ ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ 550 ಕೋಟಿ ರೂಪಾಯಿ ಅಗತ್ಯವಿದ್ದು, ಆ ಅನುದಾನವನ್ನು 2018-19 ಬಜೆಟ್‌ನಲ್ಲಿ ಘೋಷಿಸಿ, ಹಣ ಒದಗಿಸಲು ಸಚಿವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.


ಪುರುಷರಿಗೆ                ಮಹಿಳೆಯರಿಗೆ
ಪಂಚೆ    150              ಸೀರೆ         200
ಶರ್ಟ್‌    100              ರವಿಕೆ         50
ಒಟ್ಟು    250                              250

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ