ಸುದ್ದಿ

ಬಿಹಾರ ರೈತರ ನಿದ್ದೆಗೆಡಿಸಿದ ಬಾನುಗಲ್ಲು….! ಕಾರಣ ಏನು?

53

ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಆಕಾಶದಿಂದ ಫುಟ್‌ಬಾಲ್ ಗಾತ್ರದ ಬಾನುಗಲ್ಲು ಬಿದ್ದ ಅಪರೂಪದ ಘಟನೆ ವರದಿಯಾಗಿದೆ.ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು.

ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು.

“ರೈತರು ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಭಾರೀ ಗಾತ್ರದ ಕಲ್ಲು ಆಕಾಶದಿಂದ ದೊಡ್ಡ ಸದ್ದಿನೊಂದಿಗೆ ಬಿತ್ತು” ಎಂದು ಮಧುಬಾನಿ ಜಿಲ್ಲಾದಿಕಾರಿ ಶಿರ್ಸತ್ ಕಪಿಲ್ ಅಶೋಕ್ ಹೇಳಿದ್ದಾರೆ.

ಹೊಗೆ ಸಂಪೂರ್ಣ ನಿಂತ ಬಳಿಕ ರೈತರು ಹೊಲಕ್ಕೆ ವಾಪಾಸ್ಸಾಗಿದ್ದಾರೆ. ನಾಲ್ಕು ಅಡಿಯ ಹೊಂಡದಿಂದ ಕಲ್ಲನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ವಿವರಿಸಿದ್ದಾರೆ.”ಇದು ಅತ್ಯಂತ ಶಕ್ತಿಶಾಲಿ ಬಾನುಗಲ್ಲು ಆಗಿದ್ದು, ಹೊಳಪಿನಿಂದ ಕೂಡಿತ್ತು. ಸುಮಾರು 15 ಕೆಜಿ ತೂಕವಿತ್ತು” ಎಂದು ವಿವರ ನೀಡಿದ್ದಾರೆ. ವಿಜ್ಞಾನಿಗಳು ಈ ವಸ್ತುವನ್ನು ವಿಶ್ಲೇಷಿಸಿ ಇದು ಬಾನುಗಲ್ಲು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಬಾನುಗಲ್ಲುಗಳು ಧೂಳು ಹಾಗೂ ಕಲ್ಲಿನ ಕಣಗಳಾಗಿದ್ದು, ಸಾಮಾನ್ಯವಾಗಿ ಭೂಮಿಯ ವಾತಾವರಣದ ಮೂಲಕ ಹಾದು ಬರುವಾಗ ಭಸ್ಮವಾಗುತ್ತವೆ. ಭಸ್ಮವಾಗಿ ಉಳಿದ ಭಾಗವನ್ನು ಬಾನುಗಲ್ಲು ಎನ್ನಲಾಗುತ್ತದೆ. 2016ರಲ್ಲಿ ತಮಿಳುನಾಡಿನಲ್ಲಿ ಇಂಥ ಬಾನುಗಲ್ಲು ಬಿದ್ದು ಬಸ್ ಚಾಲಕನೊಬ್ಬ ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದರು. 2013ರ ಫೆಬ್ರುವರಿಯಲ್ಲಿ ಇಂಥ ಬೃಹತ್ ಬಾನುಗಲ್ಲು ರಷ್ಯಾದ ಉರಲ್ ಪರ್ವತದ ಮೇಲೆ ಬಿದ್ದು, ಸೃಷ್ಟಿಯಾದ ಶಾಕ್‌ವೇವ್‌ನಿಂದ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸಾವಿರಾರು ಮನೆಗಳು ಧ್ವಂಸಗೊಂಡಿದ್ದವು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಆಂಜನೇಯ ಸ್ವಾಮಿಯ ಮೊದಲ ಅವತಾರ, ವೃಶ ಕಪಿ ಅವತಾರದ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಮುಂದೆ ಓದಿ…

    ನಮಗೆ ಗೊತ್ತಿರುವ ಹಾಗೆ ಶ್ರೀ ರಾಮ ಭಕ್ತ ಹನುಮಂತನ ಜನ್ಮ ವೃತ್ತಾಂತ, ಹನುಮಂತ ದೇವರು, ಭಗವಾನ್ ಶಿವನ ಅಂಶದ ಅವತಾರ ಇವೆಲ್ಲವೂ ನಮಗೆ ಗೊತ್ತಿದೆ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಹನುಮಂತನ ಈ ಅವತಾರಕ್ಕೆ ಮುಂಚೆ, ಎಷ್ಟೋ ಯುಗಗಳ ಹಿಂದಯೇ ಹನುಮಂತನ ಮತ್ತೊಂದು ಅವತಾರವಾಗಿತ್ತು. ಆ ಅವತಾರವೇ ವೃಶ ಕಪಿ ಅವತಾರ.

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ…ಈ ಶುಭದಿನದಂದು ನಿಮ್ಮ ರಾಶಿಯ ಶುಭಫಲಗಳು ಹೇಗಿವೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿದೆ. ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ ಮತ್ತು ನಿಮ್ಮ ಸಹಾಯವನ್ನು ಯಾಚಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ…

  • ಆರೋಗ್ಯ

    ಕಿರುಗೋಣಿ ಸೊಪ್ಪಿನಲ್ಲಿ ಅಡಗಿದೆ ಸಂಜೀವಿನಿಯಂತಹ ಔಷಧಿ. ಈ ಅರೋಗ್ಯ ಮಾಹಿತಿ ನೋಡಿ.

    ಕಿರುಗೋಣಿಸೊಪ್ಪು ಎಂದು ಕರೆಯಲ್ಪಡುವ ಈ ಸಸ್ಯ ಬೆಳೆಯದಿರುವ ಜಾಗವೇ ಇಲ್ಲ. ಶೇಕಡ 65 % ನೀರನ್ನು ಹಿಡಿದಿಟ್ಟು ಕೊಳ್ಳುವ ಹಾಗೂ ಒಮ್ಮೆಲೇ ಸುಮಾರು 3 ಲಕ್ಷ ಬೀಜ ಪ್ರಸರಣ ಸಾಮರ್ಥ್ಯ ಇರುವ ಸಸ್ಯ ಎಂತಹಾ ಬರದಲ್ಲೂ ಬದುಕುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಸೇವಿಸುವವರ ಬದುಕನ್ನೂ ಹಸನು ಮಾಡುವ ಗುಣಗಳಿವೆ. Purslane ಎಂದು ವಿಶ್ವದಾದ್ಯಂತ ಸಾಮಾನ್ಯವಾಗಿ ಕರೆಯಲ್ಪಡುವ Portulacaceae ಕುಟುಂಬದ ಇದರ ಸಸ್ಯ ಶಾಸ್ತ್ರೀಯ ಹೆಸರು Portulaca oleracea. ಮುಲತಃ ಉತ್ತರ ಅಮೆರಿಕಾದ ಸಸ್ಯ. ಗೋಣಿಸೊಪ್ಪು ಅತ್ಯಾದಿಕವಾದ ವಿಟಮಿನ್…

  • ಕರ್ನಾಟಕ

    ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಎನ್.ಧರಂಸಿಂಗ್ ಇನ್ನಿಲ್ಲ…

    ಕರ್ನಾಟಕದ ಮಾಜಿ ಮುಖ್ಯಮಂತ್ರಿ, 80 ವರ್ಷದ ಧರಂಸಿಂಗ್’ರವರು ಉಸಿರಾಟದ ತೊಂದರೆ, ಅಸ್ತಮಾ, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನ ಒಂದು ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು ಕಷ್ಟ. ದೇಹ ಫಿಟ್ ಆಗಿರಲು ಅನೇಕರು ಹಣ್ಣುಗಳನ್ನು ತಿನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗುವುದಿಲ್ಲ. ಕೆಲಸ, ಮಕ್ಕಳು, ಅಡುಗೆಯಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ಇಂತ ಮಹಿಳೆಯರು ದಿನಕ್ಕೊಂದರಂತೆ ಬಾಳೆ ಹಣ್ಣು ತಿಂದರೆ…

  • ಆರೋಗ್ಯ

    ರಾತ್ರಿ ಮಲಗುವ ಮೊದಲು ಬೆಲ್ಲ ತಿಂದರೆ ಏನಾಗುತ್ತದೆ ಗೊತ್ತಾ, ಬಹಳಷ್ಟು ಜನರಿಗೆ ಗೊತ್ತಿಲ್ಲ ಬೆಲ್ಲದ ಮಹತ್ವ.

    ಹಳೆಯ ಕಾಲದಲ್ಲಿ ಜನರು ಬೆಲ್ಲವನ್ನು ಮಾತ್ರ ಸಿಹಿ ವಸ್ತುವಾಗಿ ಹೆಚ್ಚು ಸೇವಿಸುತ್ತಿದ್ದರು ಆದರೆ ಕಾಲ ಕಳೆದಂತೆ ಇತ್ತೀಚಿನ ದಿನಗಳಲ್ಲಿ ಜನರು ಸಿಹಿ ಎಂದರೆ ಸಕ್ಕರೆಯ ಮೊರೆ ಹೋಗುತ್ತಾರೆ, ಸಕ್ಕರೆ ಸಿಹಿಯಾಗಿ ಹೆಚ್ಚು ಪ್ರಚಾರ ಪಡೆದಿದೆ. ನಮ್ಮ ಆಯುರ್ವೇದದಲ್ಲಿ ಉತ್ತಮ ಆಹಾರವು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಹಳಷ್ಟು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ ಬೆಲ್ಲವನ್ನು ತಿನ್ನುವುದರಿಂದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 12, ಆಂಟಿಆಕ್ಸಿಡೆಂಟ್ಸ್, ಕ್ಯಾಲ್ಸಿಯಂ ಮತ್ತು ಫೈಬರ್ ನಂತಹ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ….