ಸುದ್ದಿ

ಗೌರಿ-ಗಣೇಶ ಹಬ್ಬದ ಆಚರಣೆಯೊಂದಿಗೆ ವಾಹನ ಸವಾರರಿಗೊಂದು ಬಿಗ್ ಶಾಕ್, ಇಷ್ಟಕ್ಕೂ ಏನದು, ಇದನ್ನೊಮ್ಮೆ ಓದಿ ..!

65

ಗೌರಿ-ಗಣೇಶ ಹಬ್ಬದ ಆಚರಣೆಯೊಂದಿಗೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ. 2019ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗಿರುವ ದಂಡ ವನ್ನು ಭಾರೀ ಪ್ರಮಾಣದಲ್ಲಿ ಪರಿಷ್ಕರಿಸಲಾಗಿದೆ. ಸೆಪ್ಟೆಂಬರ್ 1ರಿಂದ ಪರಿಷ್ಕøತ ದಂಡದ ಪ್ರಮಾಣ ಅನುಷ್ಠಾನಕ್ಕೆ ಬರಲಿದೆ. ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ತಂದು ವಿವಿಧ ಸಂಚಾರಿ ನಿಯಮ ಗಳಿಗೆ ವಿಧಿಸಲಾಗುವ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಅಪರಾಧಕ್ಕೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 100 ನಿಂದ 500ರೂ.ಗೆ ಹೆಚ್ಚಿಸಲಾಗಿದೆ. ಪರವಾನಗಿ ಇಲ್ಲದೆ ಅನಧಿಕೃತ ವಾಹನಗಳಿಗೆ 1000 ದಿಂದ 5000ರೂ. ವರೆಗೆ ಪರಿಷ್ಕರಿಸಲಾಗಿದೆ.

ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಪ್ರಮಾಣವನ್ನು 500 ರಿಂದ 5000ರೂ.ಗೆ ಹೆಚ್ಚಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಕ್ಕೆ ವಿಧಿಸಲಾಗುತ್ತಿದ್ದ ದಂಡವನ್ನು 2000 ದಿಂದ 10,000ರೂ.ಗೆ ಹೆಚ್ಚಿಸಲಾಗಿದೆ. ಅತೀ ವೇಗದ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 400 ರಿಂದ 1000ರೂ.ಗೆ ಪರಿಷ್ಕರಿಸಲಾಗಿದೆ. ಪರವಾನಗಿ ಇಲ್ಲದ ವಾಹನಕ್ಕೆ ವಿಧಿಸಲಾಗುತ್ತಿದ್ದ ದಂಡವನ್ನು 5000 ದಿಂದ 10,000ಕ್ಕೆ ಹೆಚ್ಚಿಸಲಾಗಿದ್ದು, ಅರ್ಹತೆ ಇಲ್ಲದವರು ವಾಹನ ಚಾಲನೆ ಮಾಡಿದರೆ ವಿಧಿಸಲಾಗುತ್ತಿದ್ದ ದಂಡವನ್ನು 500 ರಿಂದ 10,000ರೂ.ಗೆ ಹೆಚ್ಚಳ ಮಾಡಲಾಗಿದೆ.

ಸೀಟ್‍ಬೆಲ್ಟ್ ಧರಿಸದೆ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಪ್ರಮಾಣ 100 ರಿಂದ 1000ರೂ.ಗೆ ಹೆಚ್ಚಿಸಲಾಗಿದೆ. ಆ್ಯಂಬುಲೆನ್ಸ್‍ನಂತಹ ತುರ್ತು ವಾಹನಗಳಿಗೆ ಅವಕಾಶ ಮಾಡಿಕೊಡದಿದ್ದರೆ 10,000ರೂ., ಟಿಕೆಟ್ ರಹಿತ ಪ್ರಯಾಣಕ್ಕೆ 500ರೂ. ದಂಡ ವಿಧಿಸಲಾಗಿದೆ. ವಿಮೆ ಇಲ್ಲದೆ ಚಾಲನೆ ಮಾಡುವ ವಾಹನಕ್ಕೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 1000 ದಿಂದ 2000ರೂ.ಗೆ ಹಾಗೂ ಅಪಾಯಕಾರಿ ವಾಹನ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 1000 ದಿಂದ 5000ರೂ.ಗೆ ಹೆಚ್ಚಿಸಲಾಗಿದೆ.

ಅತಿ ಭಾರದ ಸರಕು ಸಾಗಣೆ ಮಾಡಿದರೆ 20,000ರೂ.ವರೆಗೂ ದಂಡ ವಿಧಿಸುವುದಲ್ಲದೆ ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಿಗೆ ಪ್ರತೀ ಪ್ರಯಾಣಿಕರಿಗೆ 1000ರೂ., ಹಾಗೆಯೇ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ 1000 ದಿಂದ 5000ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಎಸಗುವ ಅಪರಾಧಕ್ಕೆ 25,000ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಹಲವಾರು ರೋಗಗಳಿಗೆ ರಾಮಬಾಣ ಈ ಒಂದು ಡ್ರಾಗನ್ ಪ್ರುಟ್. ಈ ಅರೋಗ್ಯ ಮಾಹಿತಿ ನೋಡಿ.

    ಕೆಲವು ಹಣ್ಣುಗಳು ಕಂಡ್ ಕಂಡಲ್ಲಿ ಸಿಗೋಲ್ಲ. ವಿಪರೀತ ದುಬಾರಿ ಬೇರೆ. ಹಾಗಂತ ತಿನ್ನದೇ ಇರಬಹುದು. ಅದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿರುತ್ತದೆ. ಅಂಥ ಹಣ್ಣುಗಳಲ್ಲಿ ಡ್ರಾಗನ್ ಫ್ರೂಟ್ ಒಂದು. ದುಬಾರಿಯಾದರೂ ಆರೋಗ್ಯವಾಗಿರಲು ಇದೊಂದು ಹಣ್ಣು ತಿಂದರೆ ಸಾಕು. ಕೊಲೆಸ್ಟ್ರಾಲ್, ಹೃದಯ ತೊಂದರೆ, ಡಯಾಬಿಟೀಸ್‌ನಂಥ ತೊಂದರೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಡ್ರಾಗನ್ ಫ್ರೂಟ್.  ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್. ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ….

  • ಸುದ್ದಿ

    ಪೂರ್ಣ ಯುದ್ಧ ಸಂಭವ:ಭಾರತಕ್ಕೆ ಪಾಕ್ ಎಚ್ಚರ…..!

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ಸರ್ಕಾರದ ಕ್ರಮಕ್ಕೆ ಪಾಕಿಸ್ತಾನದಿಂದ ವಿರೋಧ ವ್ಯಕ್ತವಾಗಿದೆ. ಈ ಕ್ರಮ ಅಕ್ರಮವೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.ಭಾರತ ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡಿರುವ ಕ್ರಮ ಅಕ್ರಮ ಮತ್ತು ಏಕಪಕ್ಷೀಯವಾಗಿದೆ. ತನ್ನದಲ್ಲದ ಪ್ರದೇಶದ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಿರುವ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡುವುದಾಗಿ ಪಾಕ್ ತಿಳಿಸಿದೆ. ಅಧಿಕೃತ ಮಾಹಿತಿ ಪ್ರಕಾರ, ಮಲೇಷ್ಯಾದ ಮಹಾತಿರ್ ಮೊಹಮದ್ ಮತ್ತು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಜೊತೆ…

  • ಸಿನಿಮಾ

    ಈ ನಟಿ ಸಿಡಿಸಿದ ಬಾಂಬ್’ಗೆ ಇಡೀ ಟಾಲಿವುಡ್ ಶೇಕ್..!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೆಲವು ದಿನಗಳ ಹಿಂದಯೇ ನಟಿ ಶ್ರೀರೆಡ್ಡಿ,  ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಲ್ಲದೆ ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ ಶ್ರೀರೆಡ್ಡಿ,ಹೈದರಾಬಾದ್’ನ ಫಿಲ್ಮ್ ಚೇಂಬರ್ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ವಿವಾದವಾಗಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ…

  • ಆರೋಗ್ಯ

    10ನೇ ತರಗತಿ ಬಾಲಕನ, ಈ ಸಾಧನೆ ಬಗ್ಗೆ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ! ತಿಳಿಯಲು ಈ ಲೇಖನಿ ಓದಿ…

    ಹಾರ್ಟ್ ಅಟ್ಯಾಕ್ ಇದು ಮನುಷ್ಯನಿಗೆ ದೊಡ್ಡ ಸವಾಲಾಗಿರುವ ಕಾಯಿಲೆ.ಯಾಕೆಂದ್ರೆ ಇದು ಬರುವ ಮುನ್ಸೂಚನೆ ಯಾರಿಗೂ ಗೊತ್ತಾಗೊದಿಲ್ಲಾ. ಹಾರ್ಟ್ ಅಟ್ಯಾಕ್ ಯಾವಾಗ ಇಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಬರೋದಿಲ್ಲ.

  • ಸುದ್ದಿ

    ಕಾಶ್ಮೀರದಲ್ಲಿ ಯಾರೇ ಗನ್​​ ಹಿಡಿದರೂ, ಅವರನ್ನು ಖಂಡಿತಾ ಕೊಂದು ಹಾಕುತ್ತೇವೆ…ವಾರ್ನಿಂಗ್ ಕೊಟ್ಟ ಭಾರತೀಯ ಸೇನೆ…

    ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ನಾಯಕತ್ವವನ್ನೇ ನಿರ್ನಾಮ ಮಾಡಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಜೊತೆಗೆ ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ. ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು…

  • ಸುದ್ದಿ

    ಕೌನ್ ಬನೇಗಾ ಕರೋಡ್‍ಪತಿ ಹಾಟ್ ಸೀಟ್‌ನಲ್ಲಿ ನಮ್ಮ ಹೆಮ್ಮೆಯ ಕನ್ನಡತಿ.!ಯಾರು ಅಂತ ಗೊತ್ತಾದರೆ ಶಾಕ್ ಆಗ್ತೀರಾ…

    ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಹಾಗೂ ಜನಾನುರಾಗಿ ಸುಧಾ ಮೂರ್ತಿ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್‌ಪತಿ 11’ರ (ಕೆಬಿಸಿ) ಹಾಟ್ ಸೀಟ್‌ ಅಲಂಕರಿಸುತ್ತಿದ್ದು ಈ ಎಪಿಸೋಡ್ ಕಿರುತೆರೆ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಕೆಬಿಸಿ ಸೆಟ್‌ನಲ್ಲಿ ಬಿಗ್ ಬಿಯನ್ನು ಸುಧಾ ಮೂರ್ತಿ ಭೇಟಿಯಾಗಿರುವ ಫೋಟೋಗಳನ್ನು ಬಿಗ್ ಬಿ ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, “ನಾನು ಸಿನಿಮಾ ಪ್ರೇಮಿ ಹಾಗಾಗಿ ಅಮಿತಾಭ್ ಬಚ್ಚನ್‌ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಗಿದೆ….