ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶ್ರಾವಣ ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಬಳ್ಳಾರಿಗೆ ಬರುತ್ತಿದ್ದ ಭಾರತ ಸರಕಾರದ ಸಚಿವೆಯಾಗಿರುವ ಸುಷ್ಮಾ ಸ್ವರಾಜ್’ರವರು ಈ ವರ್ಷವಾದರೂ ಬಳ್ಳಾರಿಗೆ ಬರುತ್ತಾರೆಯೇ?
ಯಾಕೆಂದರೆ 1999ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದಲೇ ಕಾಂಗ್ರೆಸ್ನ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಅವರು, ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭ ನಗರದ ವೈದ್ಯ ಡಾ.ಮೂರ್ತಿ ಅವರ ನಿವಾಸದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದರಲ್ಲದೆ, “ನಾನು ಬಳ್ಳಾರಿಯ ಮಗಳು” ಎಂದು ತಿಳಿಸಿ, ಸೋಲಲಿ, ಗೆಲ್ಲಲಿ ಪ್ರತಿ ವರ್ಷ ಬಳ್ಳಾರಿಗೆ ಬಂದು ಈ ಪೂಜೆಯಲ್ಲಿ ಪಾಲ್ಗೊಂಡು ಹೋಗುವೆ ಎಂದು ಘೋಷಿಸಿದ್ದರು.
ಅವರ ಕೊಟ್ಟ ಮಾತಿನಂತೆ ಪ್ರತೀ ವರ್ಷವೂ ವರಮಹಾಲಕ್ಷ್ಮಿ ಪೂಜೆಯ ದಿನ ಬಳ್ಳಾರಿಗೆ ಬಂದು, ಡಾ.ಮೂರ್ತಿ ಅವರ ನಿವಾಸದಲ್ಲಿ ಪೂಜೆ ಮಾಡಿ, ನಂತರ ಬಿ.ಶ್ರೀರಾಮುಲು ಅವರು ಹಮ್ಮಿಕೊಳ್ಳುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುತ್ತಿದ್ದರು.
ಸುಷ್ಮಾ ಸ್ವರಾಜ್’ರವರಿಗೆ ಪ್ರತಿ ವರ್ಷವೂ ಪೂಜೆಯಲ್ಲಿ ಭಾಗವಹಿಸುವಂತೆ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಎರಡು ವಾರ ಮೊದಲೇ ಅಧಿಕೃತ ಆಹ್ವಾನ ನೀಡುತ್ತಿದ್ದರು.
ರೆಡ್ಡಿ ಸೋದರರಿಂದ ಬಾಯ್ತುಂಬ ‘ಅಮ್ಮಾ’ ಎಂದು ಕರೆಸಿಕೊಳ್ಳುತ್ತಿದ್ದ ಸುಷ್ಮಾ ಸ್ವರಾಜ್’ರವರು ಈಗ ಯಾಕೆ ಬಳ್ಳಾರಿಗೆ ಬರುತ್ತಿಲ್ಲ? ಈಗ ರೆಡ್ಡಿ ಸಹೋದರರು ಬಿಜೆಪಿ ಪಕ್ಷದಲ್ಲಿಲ್ಲ. ಹಾಗಾಗಿ ಸುಷ್ಮಾ ಸ್ವರಾಜ್’ರವರು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಬರುತ್ತಿಲ್ಲವೇ? ಏನೇ ಆಗಲಿ, ನಾನು ಬಳ್ಳಾರಿಯ ಮಗಳು ಎಂದ ಮೇಲೆ ಅವರಿಗೆ ಬಳ್ಳಾರಿ ತವರಾಯಿತಲ್ಲವೇ. ಆ ದಿನ ತಾನು ಕೊಟ್ಟ ಮಾತಿಗಾದರೂ,ಸುಷ್ಮಾ ಸ್ವರಾಜ್’ರವರು ಬಳ್ಳಾರಿಗೆ ಬರಬೇಕಿತ್ತು,ಅಲ್ಲವೇ???
ಇದಕ್ಕೆ ನಿಮ್ಮ ಅಭಿಪ್ರಾಯ ಏನು?ತಿಳಿಸಿ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 6 ದಿನಗಳು ಬಾಕಿ ಉಳಿದಿವೆ. ಕೆಲ ವೀಕ್ಷಕರಿಂದ ‘ಡ್ರಾಮಾ ಕ್ವೀನ್’ ಅಂತಲೇ ಕರೆಯಿಸಿಕೊಂಡಿದ್ದ ಅನುಪಮಾ ಗೌಡ ಭಾನುವಾರ ನಡೆದ ಎಲಿಮಿನೇಷನ್ ಪಂಚಾಯ್ತಿಯಲ್ಲಿ ಮನೆಗೆ ಕಳುಹಿಸಲಾಗಿತ್ತು.
ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…
ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ. ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ…
ವೀಳ್ಯದೆಲೆ ತಾಂಬೂಲ ಕೊಡೋವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ. ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದರೆ ಅತಿಯಾದ ನಷ್ಟ. ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ…
ನೀವು ಎಂದಾದರೂ ಚೆಕ್ ಬೌನ್ಸ್ ಆದ ಸಂದರ್ಭವನ್ನು ಎದುರಿಸಿದ್ದೀರಾ? ಇದು ಮುಜುಗರದ ವಿಚಾರ ಮಾತ್ರವಲ್ಲ, ನಿಮ್ಮ ಹಣಕಾಸಿನ ಅರ್ಹತೆ ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರವೂ ಹೌದು. ನಾನಾ ಕಾರಣಗಳಿಗೋಸ್ಕರ ಚೆಕ್ ಬೌನ್ಸ್ ಆಗಬಹುದು. ಹಾಗಂತ ಇವುಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮೊದಲು ಚೆಕ್ ಬೌನ್ಸ್ ಆಗಲು ಮುಖ್ಯ ಕಾರಣಗಳೇನೆಂದು ತಿಳಿಯೋಣ. ನೀವು ಬರೆದ ಅಥವಾ ಪಡೆದ ಚೆಕ್ ಹಿಂತಿರುಗಿತು ಎಂದರೆ ಬ್ಯಾಂಕ್ ಅದನ್ನು ಮಾನ್ಯಗೊಳಿಸಿಲ್ಲ ಎಂದರ್ಥ. ಚೆಕ್ ಬೌನ್ಸ್ ಆಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೆಲವು ನೀವು ಬರೆದ ಅಥವಾ ಪಡೆದ…
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…