ಜ್ಯೋತಿಷ್ಯ

ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾದ ಪ್ರೇಮಿಗಳು….!

43

75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್‍ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್‍ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್‍ರನ್ನು ಭೇಟಿ ಆಗಿದ್ದಾರೆ.

ಪ್ರೀತಿ ಶುರುವಾಗಿದ್ದು ಹೇಗೆ?
1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ ಶುರುವಾಗಿದೆ. 24 ವರ್ಷದಲ್ಲಿದ್ದಾಗ ಕೇಟಿ ರಾಬಿನ್ಸ್, ಜೇನಿನ್‍ನನ್ನು ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲೇ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ರಾಬಿನ್ಸ್ ಅಮೆರಿಕದಲ್ಲಿ ವಾಸಿಸುತ್ತಿದ್ದರೆ, ಜೇನಿನ್ ಫ್ರಾನ್ಸ್ ನಲ್ಲಿ ವಾಸಿಸುತ್ತಿದ್ದರು. ರಾಬಿನ್ಸ್ ಅಮೆರಿಕದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ 2ನೇ ವಿಶ್ವ ಯುದ್ಧ ನಡೆಯುತ್ತಿದ್ದ ಕಾರಣ ಬೇರೆ ಕಡೆ ಕಳುಹಿಸಲಾಗಿತ್ತು. ಯುದ್ಧ ಮುಗಿದ ನಂತರ ಎಲ್ಲ ಸೈನಿಕರು ತಮ್ಮ ತಮ್ಮ ಮನೆಗೆ ಹಿಂದಿರುಗಿದ್ದರು. ಹಾಗೆಯೇ ರಾಬಿನ್ಸ್ ಕೂಡ ತಮ್ಮ ಮನೆಗೆ ಹಿಂದಿರುಗಿದ್ದರು.
ಹಿಂತಿರುಗಲಿಲ್ಲ ರಾಬಿನ್ಸ್:

ರಾಬಿನ್ಸ್ ನನ್ನನ್ನು ಬಿಟ್ಟು ಹೋಗಿದ್ದ ಸಂದರ್ಭದಲ್ಲಿ ನಾನು ತುಂಬಾ ಅತ್ತಿದ್ದೆ. ರಾಬಿನ್ಸ್ ಮತ್ತೆ ವಾಪಸ್ ಬರುತ್ತಾರೆ ಎಂಬ ಭರವಸೆಯಿಂದ ನಾನು ಆಂಗ್ಲ ಭಾಷೆ ಕೂಡ ಕಲಿತೆ. ಅವರು ಮತ್ತೆ ಬಂದಾಗ ನಾನು ಅವರ ಜೊತೆ ಆಂಗ್ಲ ಭಾಷೆ ಮಾತನಾಡಬೇಕು ಎಂದು ಆಸೆಯಿಂದ ಇದ್ದೆ. ಆದರೆ ಯುದ್ಧ ನಡೆದ ಬಳಿಕ ರಾಬಿನ್ಸ್ ಅಮೆರಿಕಗೆ ಹೊರಟೇ ಹೋದರು ಎಂದು ಜೇನಿನ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಹಿಂತಿರುಗಲಿಲ್ಲ ರಾಬಿನ್ಸ್:
ನಾನು ಕೂಡ ಜೇನಿನ್‍ನನ್ನು ಮರೆಯಲಿಲ್ಲ. ನಾನು ಈಗಲೂ ಸಹ ಜೇನಿನ್ ಫೋಟೋ ಇಟ್ಟುಕೊಂಡಿದ್ದೇನೆ. ನಾನು ಮತ್ತೆ ಹಿಂದಿರುಗಿ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಆ ಸಂದರ್ಭದಲ್ಲಿ ಹೇಳಿದ್ದೆ. ಆದರೆ ಆಗ ಅದು ಸಾಧ್ಯವಾಗಿಲ್ಲ ಎಂದು ರಾಬಿನ್ಸ್ ಹೇಳಿದ್ದಾರೆ. ಅಲ್ಲದೆ ಜೇನಿನ್ ಕೂಡ ನಾನು ರಾಬಿನ್ಸ್ ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ಅವರನ್ನು ಎಂದಿಗೂ ಹೃದಯದಿಂದ ತೆಗೆಯಲಿಲ್ಲ ಎಂದು ಹೇಳಿದ್ದಾರೆ. ರಾಬಿನ್ಸ್ ಟ್ರಕ್‍ನಲ್ಲಿ ಯುದ್ಧಕ್ಕೆ ಹೊರಟಾಗ ನನಗೆ ತುಂಬಾ ದುಃಖ ಆಗಿತ್ತು. ನಾನು ತುಂಬಾ ಅತ್ತಿದ್ದೆ. ಯುದ್ಧ ನಡೆದ ಬಳಿಕ ಅವರು ಅಮೆರಿಕಗೆ ಹೋಗಬಾರದಿತ್ತು ಎಂದು ಜೇನಿನ್ ಹೇಳಿದ್ದಾರೆ.

ಸ್ವಲ್ಪ ವರ್ಷದ ಬಳಿಕ ಇಬ್ಬರು ಬೇರೆಯವರನ್ನು ಮದುವೆಯಾಗಿದ್ದು, ಈಗ ಇಬ್ಬರ ಸಂಗಾತಿ ಕೂಡ ನಿಧನರಾಗಿದ್ದಾರೆ. 75 ವರ್ಷಗಳ ಬಳಿಕ ಇಬ್ಬರು ಪರಸ್ಪರ ಭೇಟಿಯಾಗಿ ಭಾವುಕರಾಗಿದ್ದಾರೆ. ಅಲ್ಲದೆ ಇಬ್ಬರು ಕಿಸ್ ಮಾಡಿ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಬಳಿಕ ರಾಬಿನ್ಸ್ ನಾನು ಈಗ ಹೋಗಬೇಕು. ನಾನು ಮತ್ತೆ ಹಿಂದಿರುಗುತ್ತೇನೆ ಎಂದು ನಿನಗೆ ಮಾತು ನೀಡುತ್ತೇನೆ ಎಂದು ಹೇಳುತ್ತಾ ಜೇನಿನ್‍ಗೆ ಐ ಲವ್ ಯೂ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಭಾನುವಾರದ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(21 ಏಪ್ರಿಲ್, 2019) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ…

  • ಸುದ್ದಿ

    ತೆಲಂಗಾಣದಲ್ಲಿ 27 ವಿದ್ಯಾರ್ಥಿಗಳ ಆತ್ಮಹತ್ಯೆ,ವರದಿ ಕೇಳಿದ ರಾಷ್ಟ್ರಪತಿ., ಕಾರಣ.?

    ಹೈದರಾಬಾದ್, ಆಗಸ್ಟ್ 14: ತೆಲಂಗಾಣದಲ್ಲಿ ಮಧ್ಯಂತರ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೂಚಿಸಿದ್ದಾರೆ. ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಒಟ್ಟು 27 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮುಖ್ಯ ಕಾರ್ಯದರ್ಶಿ ಎಸ್‌ಕೆ ಜೋಶಿ ಅವರಿಗೆ ವರದಿ ನೀಡುವಂತೆ ತಿಳಿಸಿದ್ದಾರೆ. ಒಟ್ಟು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿಮೂರು ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ.ತೆಲಂಗಾಣ ರಾಜ್ಯದ ಮಧ್ಯಂತರ ಪರೀಕ್ಷಾ ಮಂಡಳಿ(TSBIE)ಯು ಏ. 18ರಂದು ಫಲಿತಾಂಶವನ್ನುಪ್ರಕಟಿಸಿತ್ತು. ಅಚ್ಚರಿಯೆಂದರೆ ಈ ವೇಳೆ ಸಾವಿರಾರು…

  • ಜೀವನಶೈಲಿ, ಸೌಂದರ್ಯ

    4 ಮೊಮ್ಮಕ್ಕಳ ಈ ಅಜ್ಜಿಯ ಬ್ಯೂಟಿ ಸಿಕ್ರೆಟ್ ಬಗ್ಗೆ ನಿಮಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

    ಬಾಲ್ಯ, ಯೌವ್ವನ, ಮುಪ್ಪು ಇವೆಲ್ಲ ಬೇಡ ಅಂದ್ರೂ ನಮ್ಮನ್ನು ಬಿಡೋದಿಲ್ಲ. ವಯಸ್ಸಾದಂತೆ ನಮ್ಮ ದೇಹದಲ್ಲಿ ಬದಲಾವಣೆಗಳು ಸಹಜ. 50 ವರ್ಷ ಆಯ್ತು ಅಂದ್ರೆ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತೆ. ಆದ್ರೆ ಆಸ್ಟ್ರೇಲಿಯಾದ ಮಹಿಳೆಯೊಬ್ಳು ಪ್ರಕೃತಿಯ ನಿಯಮಕ್ಕೇ ಸೆಡ್ಡು ಹೊಡೆದಿದ್ದಾಳೆ.

  • ಉಪಯುಕ್ತ ಮಾಹಿತಿ

    ನಿಮ್ಮ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು..?ಯಾರೆಲ್ಲ ರಕ್ತದಾನ ಮಾಡಬಹುದು..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಮಾನವ ರಕ್ತಕ್ಕೆ ಪರ್ಯಾಯವಾಗಿ ಬೇರೊಂದಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮಾನವ ದೇಹದ ತೂಕದಲ್ಲಿ ಪ್ರತಿಶತ 7 ರಷ್ಟು ರಕ್ತದ ಭಾಗವಾಗಿರುತ್ತದೆ. ವಯಸ್ಕರೊಬ್ಬರ ದೇಹದಲ್ಲಿ 10 ರಿಂದ 12 ಯುನಿಟ್ ರಕ್ತ ಇರುತ್ತದೆ. ರಕ್ತವು ಆಮ್ಲಜನಕ ಮತ್ತು ಪೋಷಕಾಂಶವನ್ನು ದೇಹದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತದೆ.

  • ಆರೋಗ್ಯ

    ಈ ಹಣ್ಣು ಯಾವುದು ಗೊತ್ತಾ. ತಿಂದರೆ ಏನಾಗುತ್ತೆ?

    ಈ ಆಪಲ್ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಅಂತಹ ಆಪಲ್ ಇದ್ಯಾವುದಪ್ಪ ಅಂತ ಯೋಚಿಸುತ್ತಿದ್ದೀರಾ? ಇದನ್ನ ವ್ಯಾಕ್ಸನ್ ಆಪಲ್ ಅಂತಾರೆ ಅಥವಾ ರೆಡ್ ಚುಂಬಕ ಅಂತಾರೆ ಅಥವಾ ವಾಟರ್ ಆಪಲ್ ಎಂದೂ ಕರೆಯುತ್ತಾರೆ. ಬಹಳಷ್ಟು ಹೆಸರಿನಲ್ಲಿ ಈ ಹಣ್ಣನ್ನು ಕರೆಯುತ್ತಾರೆ. ಇದು ನಮ್ಮ ದೇಶದಲ್ಲಿ ಬೆಳೆಯುವ ತುಂಬಾನೇ ರೇರ್ ಆದಂತಹ ಹಣ್ಣು ಎಂದೇ ಹೇಳಬಹುದು.ಈ ಹಣ್ಣು ಪೂರ್ತಿಯಾಗಿ ನೀರಿನಿಂದಲೇ ತುಂಬಿಕೊಂಡಿರುತ್ತದೆ ಅಂತ ಹೇಳಿದರೆ ತಪ್ಪಾಗಲ್ಲ. ಈ ಹಣ್ಣು ಕೇವಲ ಕೆಂಪು ಬಣ್ಣದಲ್ಲಿ ಅಷ್ಟೇ ಅಲ್ಲ. ಬಿಳಿ, ಹಸಿರು…

  • ಸುದ್ದಿ

    ಮದ್ವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್.

    ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಬಾಲಕೃಷ್ಣ ಚೌಬೆ (55) ಎಂಬಾತ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.  ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ…