ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಗತ್ತಿನ ದೇವರುಗಳಿಗಿಂತ ಭಾರತೀಯ ದೇವರ ಸನ್ನಿಧಿಯಲ್ಲಿ ಕೋಟಿ ಕೋಟಿ ರೂಪಾಯಿ ಅಡಗಿ ಕುಳಿತಿದೆ. ದೇವರ ಖಜಾನೆಯಲ್ಲಿ ಲೆಕ್ಕವಿಲ್ಲದಷ್ಟು ಬಂಗಾರ ಬೇಕಾ ಬಿಟ್ಟಿಯಾಗಿ ಬಿದ್ದಿದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಒಟ್ಟು ಸುಮಾರು 54 ಬಿಲಿಯನ್ ರೂಪಾಯಿಗಳಷ್ಟು ಮೌಲ್ಯವುಳ್ಳ ಬಂಗಾರ ದೇವರ ಪಾದಕ್ಕೆ ಸೇರಿದೆ ಎಂದರೆ ಇದು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಂಗತಿ.
ಭಕ್ತರು ತಮ್ಮ ಭಕ್ತಿಗೆ ತಕ್ಕಂತೆ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಹೀಗೆ ಸಲ್ಲಿಸಿದ ಕಾಣಿಕೆಗಳಲ್ಲಿ ಭಾಗಶಃ ಚಿನ್ನದ ಕಾಣಿಕೆಯೇ ಹೆಚ್ಚಗಿದೆ ಎಂದು ಅಂದಾಜಿಸಲಾಗಿದೆ. ತಿರುಪತಿಯ ತಮ್ಮಪ್ಪನ ದೇವಾಲಯ, ಜಮ್ಮು ಕಾಶ್ಮೀರದ ವೈಷ್ಣೋ ದೇವತೆಯ ದೇವಾಲಯ, ಅನಂತ ಪದ್ಮನಾಭ ಸ್ವಾಮಿ ದೇವಾಲಯ, ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶೇಖರಣೆಗೊಂಡಿರುವ ಒಟ್ಟು ಚಿನ್ನದ ಮೌಲ್ಯ, ಬರೋಬ್ಬರಿ 50 ಬಿಲಿಯನ್ ರೂಪಾಯಿಗಳು.
ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿ ಪ್ರಸಿದ್ಧ ವೈದಿಕ ದೇವಾಲಯ ಆಗಿದೆ .ಇದು ಹೈದರಾಬಾದ್ ನಿಂದ ಸುಮಾರು 600 ಕಿ ( 370 ಮೈಲಿ) , ಚೆನೈ ನಿಂದ 138 ಕಿ ( 86 ಮೈಲಿ) ಮತ್ತು ಬೆಂಗಳೂರಿನಿಂದ 291 ಕಿಮೀ ( 181 ಮೈಲು) ದುರದಲ್ಲಿದೆ. ತಿರುಮಲ ಬೆಟ್ಟ ಸಮುದ್ರ ಮಟ್ಟದಿಂದ 853m ಮತ್ತು ಪ್ರದೇಶದಿಂದ 10,33 ಚದರ ಮೈಲಿ ( 27 ಕಿಮಿ 2 ) ಇದೆ . ತಿರುಪತಿ ತಿಮ್ಮಪ್ಪ ಎಷ್ಟು ಶ್ರೀಮಂತ ದೇವರು ಎಂದರೆ, ಪ್ರತಿ ತಿಂಗಳು 80 ರಿಂದ 100ಕಿಲೋ ಚಿನ್ನವನ್ನು ಭಕ್ತರು ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡ್ತಾರಂತೆ. ಒಟ್ಟಾರೆಯಾಗಿ ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ಸುಮರು 70,000 ಕೋಟಿ ಮವಲ್ಯದ ಚಿನ್ನ ಅಡಗಿ ಕುಳಿತಿದೆ.ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿರುವ ಚಿನ್ನವನ್ನು ಕೆಲವು ಬ್ಯಾಂಕಿನಲ್ಲಿ ಇಡಲಾಗಿದೆ. ಇದರ ಬಡ್ಡಿಯೇ ಸುಮಾರು ಕೋಟಿಗಟ್ಟಲೇ ಬರುತ್ತದೆ ಎಂದು ಎಂದು ಮೂಲಗಳು ಅಂದಾಜಿಸಿವೆ. ಇಂಡಿಯನ್ ಓವರ್‌ಸಿಸ್ ಬ್ಯಾಂಕಿನಲ್ಲಿ 1353 ಕಿಲೋ, ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2275 ಕಿಲೋ ಚಿನ್ನವನ್ನು ಠೇವಣಿ ಮಾಡಿ ಇಡಲಾಗಿದೆ.
ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದರು ಮೂರು ನಾಲ್ಕು ದಶಲಕ್ಷದಷ್ಟು ಯಾತ್ರಿಗಳು ಪ್ರತಿ ವರ್ಷ ಸೆಳೆಯುತ್ತದೆ. ಪರ್ವತಗಳನ್ನು ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಬಹುಶಃ ಕೇರಳದೆ ಅತ್ಯುತ್ತಮ ತೀರ್ಥಯಾತ್ರಾ ಸ್ಥಳವಾಗಿದೆ ಶಬರಿಮಲೆ ಆಗಿದೆ. ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಜನವರಿ ಕೊನೆಯಾಗುತ್ತದೆ . ದೇವಾಲಯದ ಭಾರತದ ದಕ್ಷಿಣ ರಾಜ್ಯಗಳ ,ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಶಬರಿಮಲೆ ಸ್ವಾಮಿಯ ಒಟ್ಟು ಆರ್ಥಿಕ ವರಮಾನ ಎಷ್ಟು ಗೊತ್ತೇ? ಬರೋಬ್ಬರಿ 105 ಕೋಟಿಗಳು. ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 15 ಕಿಲೋಗಳಷ್ಟು ಚಿನ್ನ ಇದೆ ಎಂದು ಹೇಳಲಾಗುತ್ತದೆ.
ಕಟ್ರಾ ಅಥವಾ ಕಟ್ರಾ ವೈಷ್ಣೋ ದೇವಿ ಜಮ್ಮು ಮತ್ತು ಕಾಶ್ಮೀರದ ಉಧಮ್‍ಪುರ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮತ್ತು ವೈಷ್ಣೋ ದೇವಿ ಪವಿತ್ರ ದೇವಾಲಯ ನೆಲೆಗೊಂಡಿರುವ ತ್ರಿಕೂಟ ಬೆಟ್ಟಗಳ ತಪ್ಪಲಿನಲ್ಲಿ ಸ್ಥಿತವಾಗಿದೆ. ಅದು ಜಮ್ಮು ನಗರದಿಂದ ೪೨ ಕಿ.ಮಿ. ದೂರದಲ್ಲಿ ನೆಲೆಗೊಂಡಿದೆ. ಭಾರತದ ಮುಂಚೂಣಿಯಲ್ಲಿರುವ ತಾಂತ್ರಿಕ ವಿಶ್ವವಿದ್ಯಾಲಯಗಳ ಪೈಕಿ ಒಂದಾದ ಶ್ರೀ ಮಾತಾ ವೈಷ್ಣೋ ದೇವಿ ವಿಶ್ವವಿದ್ಯಾಲಯವೂ ಇಲ್ಲಿ ನೆಲೆಗೊಂಡಿದೆ.
ಅತಿ ಶ್ರೀಮಂತ ದೇವಾಲಯಗಳಲ್ಲಿ 5 ನೇ ಸ್ಥಾನದಲ್ಲಿ ಇರುವ ದೇವಾಲಯ ಜಮ್ಮು ಕಾಶ್ಮೀರದ ವೈಷ್ಣೋ ದೇವಯಿ ದೇವಾಲಯ. ಇಲ್ಲಿಗೆ ನವರಾತ್ರಿ ಸಮಯದಲ್ಲಿ ಕನಿಷ್ಟ ಸುಮಾರು 80 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವೈಷ್ಣೋ ದೇವಿಯ ಸನ್ನಿಧಿಯಲ್ಲಿರುವ ಒಟ್ಟು ಚಿನ್ನ ಎಂದರೆ 20,000 ಟನ್ ಎಂದು ಅಂದಾಜಿಸಲಾಗಿದೆ.
ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯ 108 ವಿಷ್ಣು ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಇಲ್ಲಿ ನೀವು ಶೇಷ ಶಯನ ಅನಂತ ಪದ್ಮನಾಭನ ದಿವ್ಯ ಮೂರ್ತಿಯನ್ನು ಕಾಣಬಹುದು. ಮಲಗಿದ ರೂಪದಲ್ಲಿರುವ ಇಂತಹ ಬೃಹತ್ ಮೂರ್ತಿಯನ್ನು ನೀವು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಇಲ್ಲಿ ವಿಷ್ಣು ತಾವರೆಯ ಮೇಲೆ ಮಲಗಿರುವುದರಿಂದ ಪದ್ಮನಾಭ ಎಂದು ಕರೆಯಲಾಗುತ್ತದೆ. ಕೇರಳದ ಅನಂತ ಪದ್ಮನಾಭಸ್ವಾಮಿ ದೇವಾಲಯವು ಭಾರತದ ಅತಿ ಶ್ರೀಮಂತ ದೇವಾಲಯ ಎಂಬುದಾಗಿ ಗುರ್ತಿಸಿಕೊಂಡಿದೆ. ಈ ದೇವಾಲಯದಲ್ಲಿನ ಒಟ್ಟು ಚಿನ್ನದ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗಳು..
ಗುರುವಾಯೂರು, ಗುರುಪಾವನಪುರಿ ಎಂದೂ ಪರಿಚಿತವಾಗಿದೆ, ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಒಂದು ಪುರಸಭಾ ಪಟ್ಟಣ. ಇದು, ದೈನಂದಿನ ಭಕ್ತಾದಿಗಳ ಸಂಖ್ಯೆಯ ದೃಷ್ಟಿಯಿಂದ, ಭಾರತದ ನಾಲ್ಕನೆ ಅತಿ ದೊಡ್ಡ ದೇವಸ್ಥಾನವೆನಿಸಿರುವ ಗುರುವಾಯೂರು ಶ್ರೀ ಕೃಷ್ಣ ದೇವಾಲಯದ ನೆಲೆಯಾಗಿದೆ. ಗುರುವಾಯೂರು, ದಂತಕಥೆಗಳ ಪ್ರಕಾರ, ಗುರುವಾಯೂರು ದೇವಸ್ಥಾನದ ಮೂರ್ತಿಯಷ್ಟು ಅಂದರೆ, 5000 ವರ್ಷಗಳಷ್ಟು ಹಳೆಯದಿರಬಹುದು.
ಕೇರಳಾದಲ್ಲಿ ಇರುವ ಖ್ಯಾತ ಹಿಂದೂ ದೇವಾಲಯ ಗುರುವಾಯೂರು ದೇವಾಲಯ. ಶ್ರೀಕೃಷ್ಣನ ಆವಾಸ ಸ್ಥಾನವಾಗಿರುವ ಗುರುವಾಯೂರು ದೇವಾಲಯದ ಒಟ್ಟು ಆದಾಯ 50 ಕೋಟಿಗಳು. ಭಕ್ತರಿಂದ ಕೆಜಿಗಟ್ಟಲೇ ಚಿನ್ನ ಉಡುಗೊರೆಯಾಗಿ ಶ್ರೀಕೃಷ್ಣನ ಪಾದಕ್ಕೆ ಬಂದು ಬೀಳುತ್ತದೆ. ಈ ದೇವಾಲಯದಲ್ಲಿ ಸುಮಾರು 600ಕಿಲೋಗಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ಇದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 500 ಕಿಲೋ ಚಿನ್ನವನ್ನು ಭಾರತೀಯ ಸ್ಟೇಟ್ ಬ್ಯಾಂಕಿನ ಮುಂಬೈ ಶಾಖೆಯಲ್ಲಿ ಠೇವಣಿ ಮಾಡಿ ಇಡಲಾಗಿದೆ. ಇನ್ನುಳಿದ ಚಿನ್ನ ದೇವಾಲಯದ ವಶದಲ್ಲಿ ಇದೆ ಎಂದು ಹೇಳಲಾಗುತ್ತದೆ.
ಮುಂಬೈನ ಖ್ಯಾತ ದೇವಾಲಯ ಶ್ರೀ ಸಿದ್ದಿ ವಿನಾಯಕ ದೆವಾಲಯ. ಗಣೇಶ ಹಬ್ಬವನ್ನು ಇಲ್ಲಿನ ಜನರು ಭಕ್ತಿಯಿಂದ, ವಿಜೃಂಭಣೆಯಿಂದ ಅಚರಿಸುತ್ತಾರೆ. ಈ ದೇವಾಲಯದಲ್ಲಿ ಒಟ್ಟಾರೆಯಾಗಿ 150 ಕಿಲೋ ಚಿನ್ನ ಇದ್ದು, ಅದರಲ್ಲಿ ಕೇವಲ 10 ಕಿಲೋ ಚಿನ್ನವನ್ನು 10 ನಲ್ಲಿ ಇಡಲಾಗಿದೆ. ಇನ್ನುಳಿದ 140 ಕಿಲೋ ಚಿನ್ನವು ದೇವಸ್ಥಾನದ ಖಜಾನೆಯಲ್ಲಿ ಭದ್ರವಾಗಿದೆ ಅಂತ ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತ ದೇಶವನ್ನು ತನ್ನ ಕೈ ಬೆರಳುಗಳಿಂದಲೇ ಶಾಸಿಸುವಷ್ಟು ಶಕ್ತಿ ಇರುವ ದಿಗ್ಗಜ, ರಿಲಯೆನ್ಸ್ ಅಧಿನೇತ ಮುಖೇಶ್ ಅಂಬಾನೀ ಪುತ್ರ ಆಕಾಶ್ ಅಂಬಾನೀ ವಿವಾಹ ಇಷ್ಟರಲ್ಲೇ ಜರುಗಲಿದೆ.
ಸಿನಿಮಾ ಸೆಲೆಬ್ರಿಟಿಗಳು ಬೇರೆಯವರ ಚಿತ್ರ ನೋಡದಿದ್ದರೂ ತಾವು ಬಣ್ಣ ಹಚ್ಚಿದ ಸಿನಿಮಾವನ್ನು ತಪ್ಪದೇ ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡುತ್ತಾರೆ. ಆದರೆ ಇಲ್ಲೊಬ್ಬ ಕಲಾವಿದ ನಟಿಸಿದ್ದು ಸಾವಿರಕ್ಕೂ ಅಧಿಕ ಚಿತ್ರಗಳಾದರೂ, ಕಳೆದ 25 ವರ್ಷಗಳಿಂದ ಒಂದು ಬಾರಿಯೂ ಥಿಯೇಟರ್ಗೆ ಕಾಲಿಟ್ಟಿಲ್ಲವಂತೆ! ಯಾರವರು? ಕಾಮಿಡಿ ಕಿಂಗ್ ಬ್ರಹ್ಮಾನಂದಮ್..
ಪ್ರಸ್ತುತ ದಿನಗಳಲ್ಲಿ ಕೃಷಿ ಕ್ಷೇತ್ರದ ಕಡೆ ಮುಖ ಮಾಡಿ ನೋಡದ ಜನರನಡುವೆ ಹಾಗು ಸರ್ಕಾರೀ ಕೆಲಸ ಬೇಕು, ಎಂಬುದಾಗಿ ಬಯಸೋ ಜನರು ಇದ್ದಾರೆ ಆದರೆ. ಅವೆಲ್ಲವನ್ನು ಬಿಟ್ಟು ನಾನು ಕೃಷಿ ಕ್ಷೇತ್ರದಲ್ಲಿ ಏನೋ ಒಂದು ಸಾಧನೆ ಮಾಡಬೇಕು ಅಂದುಕೊಂಡು ತಾನು ಮಾಡುತ್ತಿದ್ದ ಚಾರ್ಟೆಡ್ ಅಕೌಂಟೆಡ್ ಕೆಲಸವನ್ನು ಬಿಟ್ಟು ಕೃಷಿ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದಕ್ಕೆ ಇಂದು 40 -45 ಲಕ್ಷ ಅಧಾಯವನ್ನು ಪಡೆಯುತ್ತಿದಾರೆ. ರಾಂಚಿ ಮೂಲದ ರಾಜೀವ್ ಎನ್ನುವವರು 10 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದು…
ನಟಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಏಟು ಮಾಡಿಕೊಂಡಿದ್ದು ಇದೀಗ ಶೂಟಿಂಗ್ ಸೆಟ್ ನಲ್ಲೇ ಕುರಿಬಲಿ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದಲ್ಲಿ ಕಾಳಿಮಾತೆಯ ಅವತಾರ ತಾಳಿದ್ದ ರಾಧಿಕಾ ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುವ ವೇಳೆ ಗೋರಿ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡಿದ್ದರು. ಅಂದು ಅಮಾವಾಸ್ಯೆಯಾಗಿದ್ದು ರಾಧಿಕಾ ಕುಮಾರಸ್ವಾಮಿ ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಚಿತ್ರತಂಡಕ್ಕೆ ಅಡ್ಡಿಯಾಗಿದೆ. ಹೀಗಾಗಿ ಚಿತ್ರೀಕರಣದ ಸೆಟ್ ನಲ್ಲೇ ಕುರಿಬಲಿ ನೀಡಲಾಗಿದೆ ಎಂಬ ಸುದ್ದಿ…
ಸ್ಯಾಂಡಲವುಡ್ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ….
ಬೆಂಗಳೂರು: ಸಾಲ ಮನ್ನಾ ಯೋಜನೆಯಲ್ಲಿ ಈವರೆಗೆ ರಾಜ್ಯದ 18.70 ಲಕ್ಷ ರೈತ ಕುಟುಂಬಗಳ 8759 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ಮನ್ನಾ ವರ್ಗೀಕರಣ ಮಾಡುವಾಗ ಯಾದಗಿರಿಯಲ್ಲಿ ಕೆಲಗೊಂದಲ ಮೂಡಿದ್ದು ಈ ಕುರಿತು ಶುಕ್ರವಾರ ಜೂ.14ರಂದು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ. ಸಾಲ ಮನ್ನಾ ಯೋಜನೆಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು ನಿಗದಿತ ಅವಧಿಯೊಳಗೆ ಸಾಲಮನ್ನಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.ವಾಣಿಜ್ಯ ಬ್ಯಾಂಕ್‌ಗಳಲ್ಲಿ 7.49…