ದೇವರು-ಧರ್ಮ, ರಾಜಕೀಯ

‘ಪ್ರಧಾನಿ ಮೋದಿ’ಆಜಾನ್(ನಮಾಜ್) ಧ್ವನಿ ಕೇಳಿಸಿ ಭಾಷಣ ನಿಲ್ಲಿಸಿದರು..!ಏಕೆ ಗೊತ್ತಾ?ಶಾಕ್ ಆಗ್ತೀರಾ!ಮುಂದೆ ಓದಿ…

242

ಗುಜರಾತ್ ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಪ್ರಸಂಗ ನಡೆದಿದೆ. ಮೋದಿ ಭಾಷಣ ನಿಲ್ಲಿಸಲು ಕಾರಣವಾಗಿದ್ದು ಆಜಾನ್(ನಮಾಜ್). ಬುಧವಾರ ನವ್ಸಾರಿಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಮೀಪದ ಮಸೀದಿಯಿಂದ ಆಜಾನ್(ನಮಾಜ್) ಧ್ವನಿ ಕೇಳಿತು. ತಕ್ಷಣವೇ ಪ್ರಧಾನಿ ಮೋದಿ ಕೆಲ ಕ್ಷಣಗಳ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾದರು. ನಂತರ ಆಜಾನ್ ಮುಗಿದ ಬಳಿಕ ಮತ್ತೆ ಭಾಷಣ ಮುಂದುವರೆಸಿದರು.

ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ನಿಲ್ಲಿಸುತ್ತಿದ್ದಂತೆ ಸಭಿಕರಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಆದರೆ ಮೋದಿ ಅವರು ಆಜಾನ್ ಮುಗಿದ ಬಳಿಕ ಭಾಷಣ ಆರಂಭಿಸುತ್ತಿದಂತೆ ಎಲ್ಲ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಮೋದಿಯವರ ನಡೆಯನ್ನು ಸ್ವಾಗತಿಸಿದರು.

ಇದೇ ಮೊದಲಲ್ಲ:-

ಆಜಾನ್ ವೇಳೆ ಮೋದಿ ಅವರು ಭಾಷಣ ನಿಲ್ಲಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಪಶ್ಚಿಮ ಬಂಗಾಳದ ಖರಗ್‍ಪುರದಲ್ಲಿ ಭಾಷಣ ಮಾಡುವ ವೇಳೆ ಆಜಾನ್ ಧ್ವನಿ ಕೇಳಿಸಿದಾಗಲೂ ಪ್ರಧಾನಿ ತಮ್ಮ ಭಾಷಣವನ್ನು ನಿಲ್ಲಿಸಿ ಮೌನ ವಹಿಸಿದ್ದರು.

ನಂತರ ಭಾಷಣ ಆರಂಭಿಸಿದ ಅವರು ಯಾರ ಪ್ರಾರ್ಥನೆಯನ್ನು ನಡುವೆ ಅಡ್ಡಿಪಡುಸುವುದು ನನಗೆ ಇಷ್ಟವಿಲ್ಲ. ಹಾಗಾಗಿ ಭಾಷಣವನ್ನು ನಡುವೆ ನಿಲ್ಲಿಸಬೇಕಾಯಿತು ಎಂದು ಹೇಳಿದ್ದರು.

ಭಾಷಣ ವೇಳೆ ಮತ್ತೊಂದು ಅಚ್ಚರಿ:-

ಪ್ರಧಾನಿ ಮೋದಿ ಭಾಷಣ ಮಾಡುವ ವೇಳೆ ಮತ್ತೊಂದು ಅಚ್ಚರಿ ಘಟನೆ ನಡೆಯಿತು. ಪ್ರಧಾನಿ ಮೋದಿಯಂತೆ ಬಟ್ಟೆತೊಟ್ಟಿದ್ದ ಪುಟ್ಟ ಪೋರನೊಬ್ಬ ವೇದಿಕೆ ಮೇಲೆ ಬಂದು ಪ್ರಧಾನಿಗಳಿಗೆ ಶುಭಾಶಯ ತಿಳಿಸಿದ. ಬಾಲಕನನ್ನು ಮಾತನಾಡಿಸಿದ ಪ್ರಧಾನಿ ಮೋದಿ ಬಾಲಕನ ಬಳಿ ಬಂದು ಶುಭ ಕೋರಿದರು.

ಕಳೆದ ಎರಡು ದಿನಗಳಿಂದ ಗುಜರಾತ್ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಒಳ ಉಡುಪಿಗೆ ಕೈ ಹಾಕಿ ಲೈಂಗಿಕ ದೌರ್ಜನ್ಯ: ಮಹಿಳೆ ಒಬ್ಬಳು ಟ್ರಂಪ್ ವಿರುದ್ಧ ಆರೋಪ ಮಾಡಿದ್ದಾಳೆ…

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ನಿಯತಕಾಲಿಕೆಯ ಲೇಖಕಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.ಮ್ಯಾನ್‍ಹಟನ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ತನ್ನ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. 75 ವರ್ಷದ ಇ ಜೀನ್ ಕ್ಯಾರೋಲ್ 1995-96 ರಲ್ಲಿ ಮ್ಯಾನ್‍ಹಟನ್‍ನ ಬರ್ಗ್‍ಡ್ರಾಫ್ ಅಂಗಡಿಯಲ್ಲಿ ನಡೆದಿರುವ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆಗ ಟ್ರಂಪ್‍ಗೆ 40-50 ವರ್ಷ ಆಗಿರಬಹುದು. 49-50 ವಯಸ್ಸಿನ ನನ್ನನ್ನು, ತನ್ನ ಸ್ನೇಹಿತೆಗೆ ಯಾವ ಉಡುಗೊರೆ ನೀಡಬಹುದು ಎಂದು ಕೇಳಿದ್ದರು. ಅದಕ್ಕೆ ನಾನು ಬೂದು ಬಣ್ಣದ…

  • ಸುದ್ದಿ

    ರಷ್ಯಾ ಅಭಿಮಾನಿಯ ವಿಡಿಯೋ ನೋಡಿ ಬೆರಗಾದ ಕಿಚ್ಚ ಸುದೀಪ್,.!

    ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ರಷ್ಯಾದ ಅಭಿಮಾನಿಯೊಬ್ಬರು ವಿಡಿಯೋ ಮಾಡಿ ಅವರ  ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅವರು ರಷ್ಯಾದ ಅಭಿಮಾನಿಗೆ ಬೆರಗಾಗಿದ್ದಾರೆ  ಮರೀನಾ ಕಾರ್ಟಿಂಕಾ ಎಂಬವರು ಈ ವಿಡಿಯೋದಲ್ಲಿ ಸುದೀಪ್ ಅವರ ನಟನೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮರೀನಾ ವಿಡಿಯೋದಲ್ಲಿ ತಿಳಿಸಿದ್ದಾರೆ . ವಿಡಿಯೋದಲ್ಲಿ ಏನಿದೆ? :ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು…

  • ಸುದ್ದಿ

    ವಾಸುಕಿ ಪ್ರಿಯಾಂಕಳನ್ನು ತಬ್ಬಿಕೊಂಡಿದಕ್ಕೆ ಕೋಪಗೊಂಡ ಭೂಮಿ ಮಾಡಿದ್ದೇನು ಗೊತ್ತಾ?

    ಬಿಗ್ ಬಾಸ್ ಮನೆಯಲ್ಲಿ ಈ ಸೀಸನ್ ನಲ್ಲಿ ಯಾವುದೇ ಲವ್ವು ಇಲ್ಲ ಅಂದುಕೊಂಡವರಿಗೆ ವಾಸುಕಿ‌ ಶಾಕ್ ನೀಡುತ್ತಾ ಬರುತ್ತಿರೋದು ಇವರೇನಾ ವಾಸುಕಿ ವೈಭವ್ ಎನ್ನುವಂತಾಗಿರೋದು ಸುಳ್ಳಲ್ಲ. ಆದರೆ ಸದ್ಯ ಚಂದನ ವಿಷಯ ಮುಗಿಸಿ ಭೂಮಿ ಜೊತೆ ಮನೆಯಲ್ಲಿ ಅಡ್ಡಾಡುತ್ತಾ ಹೆಡ್ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಾಸುಕಿ ಬಗ್ಗೆ ಮನೆಯಲ್ಲೇ ದೂರುಗಳು ಹೆಚ್ಚಾಗಿದೆ. ಹೌದು, ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆದಮೇಲೆ ಪ್ರಿಯಾಂಕ ಶೈನ್ ಹಾಗೂ ವಾಸುಕಿ ಅವರು ಲಿವಿಂಗ್ ಏರಿಯಾದಲ್ಲಿ ಮಾತನಾಡುವಾಗ. ಇತ್ತೀಚೆಗೆ ವಾಸುಕಿ ಅವರು ಎಲ್ಲರನ್ನು…

  • ಸುದ್ದಿ

    ಯುವಕನ ಕಣ್ಣೀರು ನೋಡಿ ಕರಗಿದ ಕಳ್ಳರು, ಕಿತ್ತುಕೊಂಡ ಹಣ ಮತ್ತು ವಸ್ತುಗಳು ವಾಪಸ್.

    ಕಷ್ಟ ಕಂಡರೇ ಕಟುಕನು ಮರುಗುತ್ತಾನೆ ಎಂಬ ಮಾತಿದೆ. ಈ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತದೆ. ಈ ಸಿಸಿಟಿವಿ ವಿಡಿಯೋ ಪಾಕಿಸ್ತಾನದ ಕರಾಚಿಯಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ದರೋಡೆಕೋರರಿಬ್ಬರು ಬೈಕಿನಲ್ಲಿ ಬಂದು ಓರ್ವ ಯುವಕನ ಬಳಿ ದರೋಡೆ ಮಾಡುವ ದೃಶ್ಯ ಸೆರೆಯಾಗಿದೆ. ಕೇವಲ 59 ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ಒಂದು ಮನಮಿಡಿಯುವ ಸ್ಟೋರಿ ಇದೆ. ಮೊದಲಿಗೆ ಫುಡ್ ಡೆಲಿವರಿ ಯುವಕನೊಬ್ಬ ಅಂಗಡಿಯಿಂದ ತನ್ನ ಬೈಕ್ ಬಳಿ ಬರುತ್ತಾನೆ. ಈ ವೇಳೆ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು…

  • ಸುದ್ದಿ

    ಎಸ್ಒಎಸ್ ಸಂಕೇತದಿಂದ ಪ್ರಾಣಾಪಾಯದಿಂದ ಪಾರಾದ ಮಹಿಳೆ,. ಹೇಗೆ ಗೊತ್ತಾ.?

    ಅದು ಆಸ್ಟ್ರೇಲಿಯಾದ ಅರಣ್ಯ. ಅದೆಷ್ಟೋ ವನ್ಯಸಂಕುಲಕ್ಕೆ ಈ ಕಾಡೇ ಆಶ್ರಯ ತಾಣ. ಇಂತಹ ಕಾನನದಲ್ಲಿ 55 ವರ್ಷದ ಮಹಿಳೆಯೊಬ್ಬರು  ಗೊತ್ತಾಗದೇ ದಾರಿ  ತಪ್ಪಿದ್ದರು…! ಬರೋಬ್ಬರಿ ಮೂರು ದಿನಗಳ ಕಾಲ  ಇವರು ಕಾಡಿನಲ್ಲಿ ದಾರಿ ತಪ್ಪಿ ಭಯದಲ್ಲೇ ಅಲೆದಾಡುತ್ತಿದ್ದರು. ಅಂತಹ ಸಮಯದಲ್ಲಿ  ಮಹಿಳೆ ಪತ್ತೆಯಾಗಿದ್ದು        ಇದೊಂದು ಸಂಕೇತದಿಂದ ಆ ಸಂಕೇತವಾದರೂ ಏನು ಗೊತ್ತಾ,… ಈಕೆ ಡೆಬೊರಾ ಪಿಲ್ಗ್ರಿಮ್. ಕಾಡಂಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಇವರು ಸಾಗುತ್ತಿದ್ದರು. ಒಬ್ಬರೇ ಇದ್ದರು. ಹೀಗೆ ಸಾಗುವಾಗ ಅಕಸ್ಮಾತ್  ದಾರಿ ತಪ್ಪಿದ್ದರು. ಹೀಗಾಗಿ,…