ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಗಳಿದ್ದಾರೆ.

ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈ ಶಾಸಕಿ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಮಾತನಾಡುತ್ತ ಬಹಳ ಜನ ರಾಜಕಾರಣಿಗಳನ್ನ ಕಳ್ಳರು, ಸುಳ್ಳರು, ಮೋಸಗಾರರು ಎಂದು ಕರೆಯುತ್ತಾರೆ. ಆದ್ರೆ ಎಲ್ಲಾ ರಾಜಕಾರಣಿಗಳು ಆ ಪಟ್ಟಿಗೆ ಸೇರುವುದಿಲ್ಲ. ಕೆಲವು ರಾಜಕಾರಣಿಗಳ ನಡೆಯನ್ನು, ಕೆಲಸವನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ದೇಶಭಕ್ತಿಯನ್ನ ಯಾರಿಂದಲೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅದೇ ರೀತಿಯಾಗಿ ಸಮಾಜಮುಖಿಯಾಗಿ, ಸಮಾಜದ ಪರವಾಗಿ ಹಾಗೂ ಸಮಾಜಕೋಸ್ಕರ ಹೋರಾಟ ಮಾಡುವ ಬಹಳಷ್ಟು ತ್ಯಾಗಮಯಿ ರಾಜಕಾರಣಿಗಳಿದ್ದಾರೆ. ಅವರಿಂದಲೇ ಅಲ್ಪ ಸ್ವಲ್ಪ ನ್ಯಾಯ ನಮ್ಮ ಬಡವರಿಗೆ ಹಾಗೂ ರೈತರಿಗೆ ಸಿಗುತ್ತಿದೆ. ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ದು ಸುಳ್ಳಲ್ಲ. ಅವರು ಯಾರಿಗೂ ಮೋಸ ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗಳನ್ನ ಮರೆಯುವಂತಿಲ್ಲ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಈ ರೀತಿ ಹೇಳಿಕೆ ನೀಡಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಶಾಸಕಿ ಹೆಬ್ಬಾಳ್ಕರ್ ಮೋದಿಯನ್ನ ಹೊಗಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಮನ ಹೆಸರನ್ನು ಅಕ್ಷರ ರೂಪದಲ್ಲಿ ಜಪಿಸುವುದೇ ರಾಮಕೋಟಿ.! ಮನಸಾ ವಾಚಾ ಕರ್ಮೇಣ ರಾಮನ ಸ್ತುತಿ ಮಾಡುತ್ತಾ ಆ ಮಧುರನಾಮವನ್ನು ಕೋಟಿ ಸಲ ಬರೆಯುವುದೇ ರಾಮಕೋಟಿ. ಶ್ರೀಮನ್ನಾರಾಯಣನ ಎಲ್ಲ ರೂಪಗಳಲ್ಲಿ ರಾಮಾವತಾರಕ್ಕೆ ಬಹಳ ಪ್ರಾಮುಖ್ಯತೆ ಪಡೆದಿದ್ದು, ರಾಮನನ್ನು ಪ್ರತಿಯೊಬ್ಬರೂ ನಮ್ಮ ದೇವರು ಅಂದುಕೊಳ್ಳುವಷ್ಟು ಹತ್ತಿರವಾದ. ಅತೀತ ಶಕ್ತಿಗಳಿಗಿಂತ ರಾಮನು ತೋರಿದ ಆದರ್ಶವಂತ ಜೀವನವೇ ಬಹಳ ಮಂದಿಗೆ ರಾಮ ಎಂದರೆ ಒಂದು ವಿಶೇಷವಾದ ಇಷ್ಟ, ಭಕ್ತಿಯನ್ನು ಉಂಟುಮಾಡಿತು! ರಾಮ ಕೋಟೆಯನ್ನು ಬರೆಯುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು… ರಾಮ ಕೋಟಿಯನ್ನು…
ಈರುಳ್ಳಿ ದೋಸೆಯನ್ನು ನಿಮ್ಮ ಮನೆಯಲ್ಲೇ ರುಚಿಯಾಗಿ ಈ ಸರಳ ವಿಧಾನದ ಮೂಲಕ ತಯಾರಿಸಿ ಸವಿಯಿರಿ. ದೋಸೆಯನ್ನು ಹೇಗೆ ಮಾಡುವುದು ಅನ್ನೋ ಚಿಂತೆ ಬಿಡಿ ಈ ವಿಧಾನ ಅನುಸರಿಸಿ… ತಯಾರಿಸಲು ಬೇಕಾಗುವ ಸಾಮಗ್ರಿಗಳುಎರಡು ಕಪ್ ಹುಳಿ ಬಂದ ದೋಸೆ ಹಿಟ್ಟು2-3 ಈರುಳ್ಳಿ3-4 ಹಸಿಮೆಣಸಿನ ಕಾಯಿಸ್ವಲ್ಪ ಕರಿಬೇವು ಸ್ವಲ್ಪ ಕೊತ್ತಂಬರಿ ಸೊಪ್ಪುಎರಡು ಚಮಚ ತುರಿದ ಕ್ಯಾರೇಟ್ರುಚಿಗೆ ತಕ್ಕಷ್ಟು ಉಪ್ಪುಎರಡು ಚಮಚ ಎಣ್ಣೆ ತಯಾರಿಸುವ ವಿಧಾನ: ಮೊದಲನೆಯದಾಗಿ ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ…
ಭಾರತದಲ್ಲಿ ಜನಸಂಖ್ಯೆಯಂತೆಯೇ ವಾಟ್ಸಾಪ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ನ ದುರ್ಬಳಕೆ ಹೆಚ್ಚಾಗುತ್ತಿದ್ದು, ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ಹರಡುವ ಪ್ರಬಲ ಜಾಲ ತಾಣವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೆ ಚೈಲ್ಡ್ ಪೋರ್ನೋಗ್ರಫಿಯೂ ಶೇರ್ ಆಗುತ್ತಿದೆ. ಇಂತಹ ದುಷ್ಕೃತ್ಯಗಳ ಮೂಲ ಪತ್ತೆ ಹಚ್ಚುವಲ್ಲಿ ವಾಟ್ಸಾಪ್ ಕಂಪನಿಯೂ ಹರ ಸಾಹಸ ಮಾಡುತ್ತಿದೆ.ಇದೀಗ ವಾಟ್ಸಾಪ್ ಬಳಕೆದಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಯಾವ ಖಾತೆಯಿಂದ ತಪ್ಪು ಮಾಹಿತಿ, ಸುಳ್ಳು ಸುದ್ದಿ, ಕಾನೂನು ಬಾಹಿರ ಪೋರ್ನ್ ಸಂದೇಶಗಳು ರವಾನೆಯಾಗುವುದೋ…
ತಾಮ್ರದ ಪಾತ್ರೆಗಳಿಂದ ನೀರು ಕುಡಿಯುವ ಪ್ರಾಚೀನ ಭಾರತೀಯ ಅಭ್ಯಾಸದ ಹಿಂದಿನ ವಿಜ್ಞಾನವನ್ನು ಇತರ ಹಲವಾರು ಅಧ್ಯಯನಗಳೂ ಬೆಂಬಲಿಸಿವೆ ಹಾಗೂ ಎಲ್ಲವೂ ಸಕಾರಾತ್ಮಕ ತೀರ್ಮಾನವನ್ನೇ ನೀಡಿವೆ. ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ತಾಮ್ರದ ಪಾತ್ರೆಗಳಿಂದ ನೀರು ಕುಡಿಯುತ್ತಾ ಬಂದಿದ್ದಾರೆ ಹಾಗೂ ಇದರ ಪ್ರಯೋಜನಗಳನ್ನು ಪಡೆದಿದ್ದಾರೆ. ಇಂದಿಗೂ ಹಲವು ಹಿರಿಯರು ತಾಮ್ರದ ಲೋಟಗಳಿಂದಲೇ ನೀರು ಕುಡಿಯುವುದನ್ನು ಬೆಂಬಲಿಸುತ್ತಾರೆ. ಆದರೆ ಯುವಜನತೆ ಕೈಗೆ ಸಿಕ್ಕಿದ ಪ್ಲಾಸ್ಟಿಕ್ ಅಥವಾ ಇತರ ಲೋಹಗಳ ಲೋಟಗಳಿಂದಲೇ ನೀರು ಕುಡಿಯುತ್ತಾರೆ. ಇಂದು ನಮ್ಮ ಹಳೆಯ ಸಂಪ್ರದಾಯಗಳು ವೈಜ್ಞಾನಿಕ ಕಾರಣಗಳಿಂದಾಗಿ…
ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.
ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಶೇಷವಾದ ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ.ಕೆಲವು ಸುದ್ದಿಗಳು ಅಚ್ಚರಿಯಾಗಿದ್ದರು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಹಾಗು ಕೆಲವು ಸುದ್ದಿಗಳು ರೋಚಕತೆ ಸೃಷ್ಟಿಸುವ ರೀತಿಯಲ್ಲಿರುತ್ತವೆ.