ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಟವಾಡುವುದೆಂದರೆ…ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ.. ಒಂದು ಕಾಲದಲ್ಲಿ ಬಯಲಲ್ಲಿ ಆಟವಾಡುತ್ತಿದ್ದ ಮಕ್ಕಳು ಈಗ ನಾಲಕ್ಕು ಗೋಡೆಗಳ ಮಧ್ಯೆ, ಆನ್ ಲೈನ್ ಆಟಗಳನ್ನು ಆಡುತ್ತಿದ್ದಾರೆ. ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್ಗಳದ್ಧೆ ಹವಾ.. ಅದರಲ್ಲೂ ಪುಟ್ಟ ಮಕ್ಕಳು ಆನ್ ಲೈನ್ ಗೇಮ್`ಗಳಿಗೆಂದರೆ ಇನ್ನಿಲ್ಲದಂತೆ ತೊಡಗಿಕೊಳ್ಳುತ್ತಿದ್ಧಾರೆ. ರಷ್ಯಾದಲ್ಲಿ ಆನ್ ಲೈನ್ ಗೇಮ್ ಒಂದು ಮಕ್ಕಳ ಪ್ರಾಣ ತೆಗೆಯುತ್ತಿರುವ ಬಗ್ಗೆ ಸುದ್ದಿಯಾಗಿದೆ.
ಸಾವಿಗೆ ಪ್ರಚೋದನೆ ನೀಡುವ ಆಪಾಯಕಾರಿ ಮೊಬೈಲ್ ಗೇಮ್ ಆಗಿರುವ ಬ್ಲೂ ವೇಲ್ ಚಾಲೆಂಜ್ ಸ್ವೀಕರಿಸಿ ಇತ್ತೀಚೆಗಷ್ಟೇ ಮುಂಬೈನಲ್ಲಿ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಅಂಥಹದ್ದೇ ಯತ್ನಕ್ಕೆ ಮುಂದಾಗಿದ್ದ ಬಾಲಕನೊಬ್ಬನನ್ನು ಇಂದೋರ್ ನಲ್ಲಿ ರಕ್ಷಣೆ ಮಾಡಲಾಗಿದೆ.
ದೇಶದಲ್ಲಿ ಬ್ಲೂವೇಲ್ ಮೊಬೈಲ್ ಗೇಮ್ ಗೆ ನಿಷೇಧ ಹೇರಬೇಕೆಂದು ಭಾರೀ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಮತ್ತೊಬ್ಬ ಬಾಲಕ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದ್ದು ದೇಶದಾದ್ಯಂತ ಪೋಷಕರು ಬೆಚ್ಚಿ ಬೀಳುವಂತೆ ಮಾಡಿದೆ.
ಬ್ಲೂವೇಲ್ ಚಾಲೆಂಚ್ ನ 50ನೇ ಹಂತ ತಲುಪಿದ್ದ ಮಧ್ಯಪ್ರದೇಶದ ಇಂದೋರ್ ನ 13 ವರ್ಷದ ಬಾಲಕನೊಬ್ಬ ಗುರುವಾರ ಶಾಲೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಗುರುವಾರ ಮಧ್ಯಾಹ್ನ ಚಮಲೀದೇವಿ ಪಬ್ಲಿಕ್ ಸ್ಕೂಲ್ ನ ಶಾಲೆಯ 3ನೇ ಮಹಡಿಯಿಂದ ಕೆಳಗೆ ಹಾರಿ ಬಾಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ, ಸಹಪಾಠಿಗಳು, ಶಿಕ್ಷಕರು ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ, ಬಾಲಕ ಕಳೆದ ಕೆಲ ದಿನಗಳಿಂದ ತಂದೆಯ ಮೊಬೈಲ್ ನಲ್ಲಿ ಬ್ಲೂವೇಲ್ ಗೇಮ್ ಆಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಇದರ ಅಂತಿಮ ಹಂತವಾಗಿ ಗುರುವಾರ ಆತನಿಗೆ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಅದಕ್ಕೆ ಬಾಲಕ ಯತ್ನಿಸುತ್ತಿರವಾಗಲೇ, ಸಹಪಾಠಿಗಳ ಸಮಯ ಪ್ರಜ್ಞೆಯಿಂದಾಗಿ ಬದುಕುಳಿದಿದ್ದಾನೆ.
ಏನಿದು ಭಯಾನಕ ಬ್ಲೂವೇಲ್ ಗೇಮ್!
ಮೊದಲಿಗೆ ರಷ್ಯಾದಲ್ಲಿ ಪ್ರಾರಂಭವಾದ ಈ ಅಟ ಮೆಲ್ಲನೆ ಭಾರತವನ್ನೂ ಪ್ರವೇಶಿಸಿತು. ಒಂದು ಸಾಮಾಜಿಕ ತಾಣ ಇದನ್ನು ನಿರ್ವಹಿಸುತ್ತಿದೆ. ಈ ಆಟದಲ್ಲಿ ಪಾಲ್ಗೊಳ್ಳ ಬೇಕಾದವರು… ನಿರ್ವಾಹಕರು ಹೇಳಿದಂತೆ ಮಾಡಬೇಕು.
50 ದಿನಗಳ ಕಾಲ ಅವರು ನೀಡುವ ಟಾಸ್ಕ್ ಗಳನ್ನು ಮಾಡುತ್ತಿರಬೇಕು. ಮೊದಲು ಒಂದು ಪೇಪರಲ್ಲಿ ತಿಮಿಂಗಲ ಚಿತ್ರವನ್ನು ರಚಿಸಬೇಕು. ನಂತರ ಶರೀರದಮೆಲೆ ಬರೆಸಿಕೊಳ್ಳಬೇಕು. ನಂತರ ಹಾರರ್ ಸಿನಿಮಾಗಳನ್ನು ನೋಡುತ್ತಾ, ಮಧ್ಯರಾತ್ರಿ ಎದ್ದೇಳುವುದು… ನಡೆಯುವುದು ಮೊದಲಾದ ಟಾಸ್ಕ್ ಗಳನ್ನು ಪೂರೈಸಬೇಕು.
ಈ ರೀತಿ 50 ಟಾಸ್ಕ್ ಗಳನ್ನು 50 ದಿನಗಳಲ್ಲಿ ಪೂರ್ಣಗೊಳಿಸಿದನಂತರ ಆತ್ಮಹತ್ಯೆ ಮಾಡಿಕೊಳ್ಳಬೇಕು. ಇದನ್ನೇ ಸೆಲ್ಫ್ ಡೆಸ್ಟ್ರಾಯಿಂಗ್ ಎನ್ನುತ್ತಾರೆ. ಆಟದಲ್ಲಿ ಗೆಲ್ಲಬೇಕಾದರೆ, ತಪ್ಪದೆ ಆತ್ಮಹತ್ಯೆ ಮಡಿಕೊಳ್ಳಲೇಬೇಕು ಎಂದು ನಿರ್ವಾಹಕರು ಆಟಗಾರರ ಮೇಲೆ ಒತ್ತಡ ಹೇರುತ್ತಾರೆ. ಹೀಗಾಗಿ… ಆಟವನ್ನು ಗೆಲ್ಲಲೇ ಬೇಕೆಂಬ ಹಠದಿಂದ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಸ್ಪರ್ಧಾಳುಗಳಗಳನ್ನ ಬಲವಂತವಾಗಿ ವೇಲ್ ಶೇಪ್ ಪಡೆಯುವಂತೆ ಒತ್ತಾಯಿಸಲಾಗುತ್ತಂತೆ. ಒಂದು ಕೊನೆಯ ದಿನ ಆತ್ಮಹತ್ಯೆಯಂತಹ ಸವಾಲು ಹಾಕಲಾಗುತ್ತಂತೆ. 14 ವರ್ಷದ ಹುಡುಗಿಯರೂ ಸಹ ಈ ಗೇಮ್`ನಲ್ಲಿ ತಲ್ಲೀನರಾಗಿ 14 ಅಂತಸ್ತಿನ ಕಟ್ಟಡದಿಂದ ಧುಮುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಮಕ್ಕಳನ್ನ ಈ ರೀತಿ ಸಾವಿಗೆ ನೂಕಿದ ಆನ್ ಲೈನ್ ಡೆತ್ ಗ್ರೂಪ್`ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಮ ಸೇತುವಿನ ಬಗ್ಗೆ ನಿಮಗೆ ತಿಳಿದೇ ಇದೆ. ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ ಆಕೆಯನ್ನು ಲಂಕೆಯಿಂದ ಕರೆದುಕೊಂಡು ಬರುವ ಸಲುವಾಗಿ ಭಾರತ ಮತ್ತು ಶ್ರೀಲಂಕಾದ ನಡುವೆ ರಾಮೇಶ್ವರದಲ್ಲಿ ನಿರ್ಮಾಣ ಮಾಡಿದ ರಾಮನ ಸೇತುವೆ ಇದಾಗಿದೆ. ಈ ಸೇತುವೆ ಸುಮಾರು 30 ಮೈಲು ಉದ್ದ ಇದೆ. ಈ ಹಿಂದೆ ಇದೆಲ್ಲಾ ಸುಳ್ಳು ಎಂದು ಹೇಳಲಾಗಿತ್ತು. ಆದರೆ ಈ ಸೇತುವೆಯ ಇರುವಿಕೆಯನ್ನು ನಾಸಾ ಸ್ಪಷ್ಟಪಡಿಸಿತ್ತು.
ಬಿಗ್ ಬಾಸ್ 7ನೇ ಸೀಸನ್ ಈಗ 7ನೇ ವಾರಕ್ಕೆ ಕಾಲಿಡುತ್ತಿದೆ .ಕಳೆದ ಎಪಿಸೋಡ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ನಟಿ ರಕ್ಷಾ ಸೋಮಶೇಖರ್ ಬೆನ್ನಲ್ಲೇ ಮತ್ತೊಬ್ಬ ಸದ್ಯಸ್ಯರು ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಎರಡನೇ ಶಾಕ್ ನೀಡಿದ್ದಾರೆ. 6 ನೇ ವಾರಂತ್ಯದಲ್ಲಿ ಮನೆಯಿಂದ ನಟಿ ಸುಜಾತ ಅವರು ಹೊರ ಹೋಗಿದ್ದೇ ತಡ ಹೊಸ ಸದ್ಯರೊಬ್ಬರನ್ನು ಬಿಗ್ ಬಾಸ್ 2ನೇ ವೈಲ್ಡ್ ಕಾರ್ಡ್ಎಂಟ್ರಿ ಮೂಲಕ ಮನೆಯೊಳಕ್ಕೆ ಕರೆಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ…
ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ. 200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮ ಸಮಾಜದ ಎಲ್ಲಾ ಮಂದಿಯ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಪಡೆಯುವ ಸಾಧ್ಯತೆ ಇದೆ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಪುನಃ ನಿಮ್ಮ ಸ್ನೇಹಕ್ಕಾಗಿ ಕೈಚಾಚುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ…
ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿ, ಟೆಲಿಕಾಂ ಕಂಪನಿಗಳ ಬೆವರಿಲಿಸಿದ್ದ, ಮುಖೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ.
ಬೆಂಗಳೂರು: ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ 2ನೇ ವರ್ಷಕ್ಕೆ ದಾಖಲಾಗಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಬ್ರಿಡ್ಜ್ ಕೋರ್ಸ್ ಕೂಡ ಸಿದ್ಧವಾಗುತ್ತಿದೆ. ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ ಸೇರಿಕೊಳ್ಳಲು ಈ ವರೆಗೂ ಅವಕಾಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ದಾಖಲಾಗಲು ಅವಕಾಶ…