ಉಪಯುಕ್ತ ಮಾಹಿತಿ

‘ಪೊಲೀಯೋ ಡ್ರಾಪ್ಸ್’ ನೀಡಲಾದ ಆ ಹುಡುಗನಿಗೆ ಆದ ದಾರುಣ ಘಟನೆ ಏನು..? ತಿಳಿಯಲು ಇದನ್ನು ಓದಿ ..

370

ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮನೆ ಮನೆಗೆ ತೆರಳಿ ಪೊಲಿಯೋ ಡ್ರಾಪ್ಸ್ ನೀಡುವ ಕಾರ್ಯಕ್ರಮದ ಭಾಗವಾಗಿ ಅಂಗನವಾಡಿ ಕಾರ್ಯಕರ್ತೆಯರು ಒಂದೂವರೆ ವರ್ಷ ಪ್ರಾಯದ ಬಾಲಕನಿಗೆ ಪೊಲೀಯೋ ಡ್ರಾಪ್ಸ್ ನೀಡಿದ ಅರ್ಧ ತಾಸಿನೊಳಗೆ ಆತನ ಬಾಯಲ್ಲಿ ನೊರೆ ಹೊರಬರಲು ಆರಂಭವಾಯಿತು. ಒಡನೆಯೇ ಬಾಲಕನನ್ನು ಕೃಷ್ಣ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಷ್ಟರೊಳಗಾಗಿಯೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು.

ಬಾಲಕನ ಮನೆಯವರು ಮೂಲತಃ ಆಗ್ರಾದವರು. ಅವರು ತಮ್ಮ ಬಂಧುಗಳನ್ನು ಕಾಣಲು ಫೌಜಿ ಮೊಹಲ್ಲಾಗೆ ಬಂದಿದ್ದರು. ನತದೃಷ್ಟ ಬಾಲಕನು ಮನೆಯಲ್ಲಿ ಮಲಗಿದ್ದಾಗ ಆತನನ್ನು ಎಬ್ಬಿಸಿ ಆತನಿಗೆ ಆಶಾ ಕಾರ್ಯಕರ್ತೆಯರು ಪೊಲೀಯೋ ಡ್ರಾಪ್ಸ್ ನೀಡಿದರು ಎಂದು ವರದಿಗಳು ತಿಳಿಸಿವೆ.

ಜಿಲ್ಲಾ ಪೊಲೀಯೋ ಅಭಿಯಾನದ ಅಧಿಕಾರಿಯಾಗಿರುವ ಡಾ. ಜಸ್ಬೀರ್ ಸಿಂಗ್ ಈ ಬಗ್ಗೆ ಹೇಳಿರುವುದು ಇಷ್ಟು :

ನಾವು ಐದು ದಿನಗಳ ಈ ಪೋಲಿಯೋ ನಿರ್ಮೂಲನ ಅಭಿಯಾನದಲ್ಲಿ 3.75 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಹಾಕಿದ್ದೇವೆ; ಆದರೆ ಯಾವುದೇ ಮಗುವಿಗೆ ಯಾವುದೇ ರೀತಿಯ ಅನಾರೋಗ್ಯ, ತೊಂದರೆ ಕಾಣಿಸಿದ್ದಿಲ್ಲ. ಈ ಪ್ರಕರಣದಲ್ಲಿ ಬಾಲಕನ ಸಾವಿಗೆ ಬೇರೇನೋ ಕಾರಣ ಇರಬೇಕು.

ಪೋಲಿಯೋ ಡ್ರಾಪ್ಸ್ ಹಾಕಿದ ಅರೆ ತಾಸಿನೊಳಗೆ ಬಾಲಕನು ಸತ್ತಿರುವುದು ಏನೋ ಕಾಕತಾಳೀಯವಾಗಿರಬೇಕು. ವೈದ್ಯರ ತಂಡವು ಮೃತ ಬಾಲಕನ ಮರಣೋತ್ತರ ಪರೀಕ್ಷೆಯನ್ನು ನಡೆಸಲಿದ್ದಾರೆ ಮತ್ತು ಆವರ ವರದಿಯಿಂದ ಬಾಲಕನ ಸಾವಿನ ನಿಜವಾದ ಕಾರಣವೇನು ಎಂಬುದು ಗೊತ್ತಾಗಲಿದೆ.

 

“ಬಾಲಕನ ಸಾವಿಗೂ ಪೋಲಿಯೋ ಡ್ರಾಪ್ಸ್ ಗೂ ಯಾವುದೇ ಸಂಬಂಧವಿಲ್ಲ; 1995ರಿಂದಲೂ ನಾವು ಈ ಅಭಿಯಾನವನ್ನು ಯಾವುದೇ ಚ್ಯುತಿ, ಹುಳಕು, ವ್ಯತಿರಿಕ್ತ ಪರಿಣಾಮವಿಲ್ಲದೇ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಡಾ. ಜಸ್ಬೀರ್ ಸಿಂಗ್ ಹೇಳಿದ್ದಾರೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಪ್ಪಿತಪ್ಪಿಯೂ ಈ 4 ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಡಿ; ಸೇವಿಸಿದರೆ ಕಿಡ್ನಿ ಸ್ಟೋನ್ ಗ್ಯಾರಂಟಿ,ಇಷ್ಟಕ್ಕೂ ಆ ಆಹಾರ ಯಾವುದೆಂದು ತಿಳಿಯುವುದಕ್ಕೆ ಇದನ್ನೊಮ್ಮೆ ಓದಿ,.!

    ಅಪ್ಪಿತಪ್ಪಿಯೂ ಈ ನಾಲ್ಕು ಆಹಾರ ಸೇವಿಸಬೇಡಿ,ಕಿಡ್ನಿ ಸ್ಟೋನ್ ಗ್ಯಾರೆಂಟಿ.ಈಗಲೆ ನೋಡಿ. ನಮಸ್ಕಾರ ವೀಕ್ಷಕರೇ ಕೆಲವೊಂದು ಆಹಾರ ಪದಾರ್ಥಗಳನ್ನು ತಿಂದರೆ ಕಿಡ್ನಿ ಸ್ಟೋನ್ ಆಗುತ್ತದೆ ಮಾಹಿತಿಯನ್ನು ತಿಳಿದುಕೊಳ್ಳೋಣ ಮನುಷ್ಯನ ಶರೀರದಲ್ಲಿ ಮೂತ್ರಪಿಂಡಗಳು ತುಂಬ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಇವು ರಕ್ತವನ್ನು ಹಾಳು ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡಿಸಿ ಮೂತ್ರದ ಮೂಲಕ ವರ ಹಾಕಿ ಆಹಾರಗಳ ಸಮತೋಲನವನ್ನು ಕಾಪಾಡುತ್ತವೆ ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಪಟಿಕ ರೂಪದಲ್ಲಿ ಮಾರ್ಪಟ್ಟು ಗಣವನ್ನು ವಸ್ತುವಾಗಿ ಪರಿವರ್ತನೆಯಾಗುತ್ತದೆ ಅದನ್ನು ಮೂತ್ರಕೋಶದ ಕಲ್ಲು ಅಥವಾ ಕಿಡ್ನಿಸ್ಟೋನ್…

  • ಆರೋಗ್ಯ

    ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಆಹಾರವನ್ನು ಸೇವಿಸಿ, ಕೊಬ್ಬನ್ನು ಕಡಿಮೆ ಮಾಡಿಕೊಳ್ಳಿ.

    ತೂಕ ನಷ್ಟಕ್ಕೆ ಆಹಾರವನ್ನು ಅನುಸರಿಸುವಾಗ ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ. ನೀವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ನೀವು ಸುಡಬೇಕು. ಅದಕ್ಕಾಗಿಯೇ ತೂಕ ನಷ್ಟಕ್ಕೆ ಯಾವುದೇ ಆಹಾರವು ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ನಿರ್ಬಂಧಿಸುತ್ತದೆ. ಆದರೆ ದಿನದ ಯಾವುದೇ ಸಮಯದಲ್ಲಾದರೂ ಹಸಿವು ಜಾಸ್ತಿಯಾಗಿ ನಿವು ಅಗತ್ಯಕ್ಕಿಂತ ಹೆಚ್ಚಿನದನ್ನು ತಿನ್ನಬಹುದು ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುವುದಿಲ್ಲ. ಹೊಟ್ಟೆಯ ಕೊಬ್ಬಿನ ಶೇಖರಣೆಗೆ ಕಾರಣವಾಗುವ ಆಹಾರವನ್ನ ನಿವು ಹಸಿವನ್ನು ನೀಗಿಸಲು ಹೆಚ್ಚಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುತ್ತೀರಿ. ಅಂತಹ ಪರಿಸ್ಥಿತಿಯನ್ನು…

  • ಸ್ಪೂರ್ತಿ

    ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ತಮ್ಮ ಶಿಕ್ಷಕನನ್ನು ಬಿಡದೇ ಅಂಗಲಾಚಿ ಕಣ್ಣಿರು ಹಾಕುತ್ತಿರುವುದೇಕೆ ಗೊತ್ತಾ..!

    ಈಗಂತೂ ವಿಧ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಗುರು ಶಿಷ್ಯರ ಸಂಬಂದ ಮೊದಲಿನ ಹಾಗೆ ಇಲ್ಲ.ಆದರೆ ಕೆಲವು ಶಿಕ್ಷಕರು ವಿಧ್ಯಾರ್ಥಿಗಳಿಗೆ ತೋರಿಸುವ ಪ್ರೀತಿ ಮತ್ತು ಕಲಿಸುವ ರೀತಿ ವಿಧ್ಯಾರ್ಥಿ ಶಿಕ್ಷಕರ ನಡುವೆ ಒಂದು ಬಿಡಿಸಲಾರದ ಅನುಬಂದವನ್ನೇ ಹುಟ್ಟು ಹಾಕುತ್ತದೆ. ಅಂತಹ ಶಿಕ್ಷಕರು ಒಂದು ವೇಳೆ ಬೇರೊಂದು ಶಾಲೆಗೇ ವರ್ಗಾವಣೆಯಾದರೆ ವಿಧ್ಯಾರ್ಥಿಗಳು ಮತ್ತು ಆ ಶಿಕ್ಷಕ ಪಡುವ ಯಾತನೆ ಅಷಿಷ್ಟಲ್ಲ.ಇದಕ್ಕೊಂದು ನೈಜ ಉದಾಹರಣೆ ಎಂಬಂತೆ ತಮಿಳುನಾಡಿನ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ತಮ್ಮ ಪ್ರೀತಿಯ ಶಿಕ್ಷಕ ವರ್ಗವಾಗಿ ಬೇರೆ ಶಾಲೆಗೆ ಹೋಗುವುದು…

  • ಸುದ್ದಿ

    ಹೆಚ್.ವಿಶ್ವನಾಥ್​ ವಿರುದ್ದ ಧೋಸ್ತಿ ಸರ್ಕಾರ ಗರಂ ; ನೀವು ಎಲ್ಲಿದ್ದೀರಿ.? ಯಾಕ್ರಿ ರಾಜೀನಾಮೆ ಕೊಟ್ರಿ.? ಎಂದು ಆವಾಜ್…..

    ನೀವೂ ಎಲ್ಲಿದ್ದೀರಿ.? ಯಾಕ್ರಿ ರಾಜೀನಾಮೆ ಕೊಟ್ರಿ, ಈಗ ಎಲ್ಲಿದ್ದೀರಾ ನೀವು.? ಯಾಕೆ ಮೋಸ ಮಾಡಿದ್ರೀ.? ಎಂದು ಹುಣಸೂರು ಕಾರ್ಯಕರ್ತರಿಂದ ಶಾಸಕ ಹೆಚ್. ವಿಶ್ವನಾಥ್ ಗೆ ನಾನ್ ಸ್ಟಾಪ್ ಕರೆ ಮಾಡಿ ಆವಾಜ್ ಹಾಕಲಾಗುತ್ತೀದೆ. ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಶಾಸಕ ಹೆಚ್ ವಿಶ್ವನಾಥ್​​ ಅವರ ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ವ್ಯಕ್ತವಾಗಿದೆ. ವಿಶ್ವನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಅಲ್ಲದೆ ಅದರ ಫೋಟೋವನ್ನು…

  • Law

    ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ 10 ವರ್ಷ ಜೈಲು ಶಿಕ್ಷೆ..!

    ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರೇಪಿಸ್ಟ್, ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ ಸಿಬಿಐ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆಯಾಗಿದೆ.

  • ಸಿನಿಮಾ

    ‘ಒಂದು ಮೊಟ್ಟೆಯ ಕಥೆ’ಇದು ಕನ್ನಡದ ಸಿನಿಮಾ!ಈ ಸಿನಿಮಾ ಹೇಗಿದೆ ಗೊತ್ತಾ?ಈ ಲೇಖನಿ ಓದಿ…

    ಲೂಸಿಯಾ, ಯೂ ಟರ್ನ್ ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಹೊಸದೊಂದು ಚಿತ್ರವನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು ‘ಒಂದು ಮೊಟ್ಟೆಯ ಕಥೆ’. ಹಾಗಂತ ಇದು ಕೋಳಿ ಮೊಟ್ಟೆಯ ಕಥೆಯಲ್ಲ. ನಮ್ಮ ನಿಮ್ಮೆಲರ ನಡುವೆ ಓಡಾಡೋ ಹಲವಾರು ಮೊಟ್ಟೆ ತಲೆಗಳ ಕಥೆ. ಅಂದ್ರೆ ತಲೆಯ ಮೇಲೆ ಕೂದಲಿಲ್ಲದೇ ಎಲ್ಲರಿಂದ ‘ಮೊಟ್ಟೆ, ಬಾಲ್ಡಿ, ಚೊಂಬು, ಟಕ್ಲು’ ಎಂದೆಲ್ಲಾ ಕರೆಸಿಕೊಳ್ಳುವವರ ಕಥೆ.