ತಂತ್ರಜ್ಞಾನ

ನೀವು ಫೇಸ್ಬುಕ್ ನಲ್ಲಿ ಬೇರೆಯವರ ಫೋಟೋ ಹಾಕುವ ಮುನ್ನ ನಿಮ್ಗೆ ಇದು ತಿಳಿದಿರಬೇಕು..!

246

ಫೋಟೋ ಪೋಸ್ಟ್ ಮಾಡಿದ ವ್ಯಕ್ತಿ ನಿಮಗೆ ಟ್ಯಾಗ್ ಮಾಡಿಲ್ಲವಾದಲ್ಲಿ ಮಾತ್ರ ಈ ಸಂದೇಶ ನಿಮಗೆ ಬರಲಿದೆ. ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಫೋಟೋವನ್ನು ಗುರುತಿಸಲು ಫೇಶಿಯಲ್ ರೆಕಗ್ನೈಸ್ ಟೆಕ್ನಾಲಜಿಯನ್ನು ಬಳಸಲಿದೆ.

ಈ ಹಿಂದೆಯೇ ಫೋಟೋ ರೆಕಗ್ನೈಸ್ ಟೆಕ್ನಾಲಜಿ ಬಳಕೆಯಲ್ಲಿದೆ. ಆದ್ರೆ ಇನ್ಮುಂದೆ ಮತ್ತೊಂದು ವಿಧಾನದಲ್ಲಿ ಇದನ್ನು ಫೇಸ್ಬುಕ್ ಬಳಸಲಿದೆ.

ಈ ಬಗ್ಗೆ ಫೇಸ್ಬುಕ್ ಅಧಿಕೃತ ಹೇಳಿಕೆಯೊಂದನ್ನು ನೀಡಿದೆ. ಹೊಸ ಸಾಧನವೊಂದನ್ನು ಶುರುಮಾಡ್ತಿರುವುದಾಗಿ ಫೇಸ್ಬುಕ್ ಹೇಳಿದೆ. ಇದ್ರಲ್ಲಿ ಬಳಕೆದಾರರು ತಮ್ಮ ಮುಖವನ್ನು ಸುಲಭವಾಗಿ ಗುರುತಿಸಬಹುದು ಎಂದು ಅದು ಹೇಳಿದೆ.

ಸುಲಭವಾಗಿ ಹೇಳುವುದಾದ್ರೆ ಫೇಸ್ಬುಕ್ ನಲ್ಲಿ ನಿಮ್ಮ ಫೋಟೋವನ್ನು ಬೇರೆಯವರು ಪೋಸ್ಟ್ ಆಗ್ತಿದ್ದಂತೆ ನಿಮಗೆ ಸಂದೇಶ ಬರಲಿದೆ. ನಿಮ್ಮ ಫೋಟೋವನ್ನು ಈ ವ್ಯಕ್ತಿ ಪೋಸ್ಟ್ ಮಾಡಿದ್ದಾರೆಂದು ಫೇಸ್ಬುಕ್ ನಿಮ್ಮನ್ನು ಎಚ್ಚರಿಸಲಿದೆ.

ನಿಮಗೆ ಇಷ್ಟವಾದಲ್ಲಿ ನೀವು ಈ ಫೋಟೋವನ್ನು ಟ್ಯಾಗ್ ಮಾಡಬಹುದು. ಇಲ್ಲವೆ ಫೋಟೋ ಡಿಲಿಟ್ ಮಾಡುವಂತೆ ಆ ವ್ಯಕ್ತಿಗೆ ಹೇಳಬಹುದುಗುಂಪಿನಲ್ಲಿ ನೀವಿದ್ದರೂ ನಿಮಗೆ ಮೆಸ್ಸೇಜ್ ಬರಲಿದೆ.

ಪ್ರೋಫೈಲ್ ಫೋಟೋಗಳನ್ನು ಸುರಕ್ಷಿತಗೊಳಿಸಲೂ ಫೇಸ್ಬುಕ್ ಈ ಹೊಸ ಸಾಧನವನ್ನು ಬಳಸುವ ಸಾಧ್ಯತೆಯಿದೆ. ಶೀಘ್ರದಲ್ಲಿಯೇ ಇದ್ರ ಬಗ್ಗೆ ಕ್ರಮಕೈಗೊಳ್ಳುವುದಾಗಿ ಫೇಸ್ಬುಕ್ ಹೇಳಿದೆ. ಅನೇಕ ರಾಷ್ಟ್ರಗಳಲ್ಲಿ ಫೇಸ್ ರೆಕಗ್ನೈಸ್ ಟೆಕ್ನಾಲಜಿ ಜಾರಿಗೆ ಬರಲಿದೆ. ನಿಮಗೆ ಅವಶ್ಯವೆನಿಸಿದ್ರೆ ಮಾತ್ರ ಈ ಟೂಲ್ಸನ್ನು ನೀವು ಸಕ್ರಿಯಗೊಳಿಸಬಹುದು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ