ಆರೋಗ್ಯ

ನೀವು ತಿಳಿದಿರದ ಕಮರಾಕ್ಷಿ ಮರದ ಉಪಯೋಗಗಳ ಬಗ್ಗೆ ತಿಳಿಯಲು ಈ ಲೇಖನ ಓದಿ..

690

ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು.ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್‌, ಚೀನಾ ತೈವಾನ್‌, ಕ್ವೀನ್ಸ್‌ಲ್ಯಾಂಡ್‌ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

ಔಷಧೀಯ ಗುಣಗಳು:

ಹಣ್ಣು ಸ್ವಲ್ಪ ಒಗರು. ಅವುಗಳನ್ನು ತಿನ್ನುತ್ತಿದ್ದಲ್ಲಿ ಹಸಿವು ಹೆಚ್ಚಾಗುತ್ತದೆ.

ಈ ಹಣ್ಣುಗಳಿಂದ ತಯಾರಿಸಿದ ಪಾನಕ ಮತ್ತು ಶರಬತ್ತುಗಳನ್ನು ಕುಡಿಯುತ್ತಿದ್ದಲ್ಲಿ ದಣಿವು ದೂರಗೊಂಡು
ಶರಿರದಲ್ಲಿನ ಊತ, ಜ್ವರದ ತಾಪಗಳು ಉಪಶಮನಗೊಳ್ಳುತ್ತವೆ.


ಈ ಪಾನೀಯಗಳು ಶೈತ್ಯಕಾರಕವಿರುತ್ತವೆ. ಮೂಲವ್ಯಾಧಿ, ಸ್ಕರ್ವಿ, ಅತಿಸಾರ, ಪಿತ್ತರಸದ ತೊಂದರೆಗಳಿಗೆ ಈ ಹಣ್ಣುಗಳ ಸೇವನೆ ಲಾಭದಾಯಕ.
ಹಣ್ಣುಗಳಿಗೆ ಆ‍ಯ್‌ಸ್ಕಾರ್ಬಿಕ್‌ ಆಮ್ಲದ ಆಮ್ಲಜನೀಕರಣವನ್ನು ತಡೆಹಿಡಿಯುವ ಗುಣವಿದೆ ಎನ್ನಲಾಗಿದೆ.

ಫಿಲಿಪ್ಪೈನ್ಸ್‌ನಲ್ಲಿ ಇವುಗಳ ಎಲೆ ಮತ್ತು ಚಿಗುರು ಕುಡಿಗಳನ್ನು ಅರೆದು ಸಿಡುಬು ರೋಗಿಗಳೆಗೆ ಕೊಡುವುದುಂಟು.
ಅವುಗಳ ಸೇವನೆ ಹೊಟ್ಟೆಯಲ್ಲಿನ ಹುಳುಗಳಿಗೆ ಒಳ್ಳೆಯ ಔಷಧಿ, ತಲೆನೋವು ಇದ್ದಲ್ಲಿ ಎಲೆ ಮತ್ತು ಚಿಗುರುಗಳನ್ನು ತಿನ್ನುವುದು ಒಳ್ಳೆಯದು.

ಇತರ ಉಪಯೋಗಗಳು:

ಈ ಹಣ್ಣು ಸಾರು ಮಾಡುವಲ್ಲಿ ಹುಣಿಸೇಹಣ್ಣಿನ ಬದಲಾಗಿ ಬಳಸುವುದುಂಟು.
ಹಣ್ಣುಗಳಿಂದ ರುಚಿಕರ ಜಾಮ್‌, ಜೆಲ್ಲಿ, ಚಟ್ನಿ, ಉಪ್ಪಿನ ಕಾಯಿ ಮುಂತಾಗಿ ತಯಾರಿಸುತ್ತಾರೆ.
ಈ ಹಣ್ಣುಗಳ ರಸಹಿಂಡಿ ಬಟ್ಟೆಗಳ ಲಿನನ್ ಬಟ್ಟೆಗಳ ಮೇಲಿನ ಕರೆಗಳನ್ನು ಹೋಗಲಾಡಿಸುವುದುಂಟು.
ಹಿತ್ತಾಳೆ ಪಾತ್ರೆ ಪರಡಿಗಳನ್ನು ಬೆಳಗಿ ಅವುಗಳ ಮೇಲಿನ ಕಲೆ, ತುಕ್ಕು ಮುಂತಾಗಿ ಹೋಗಲಾಡಿಸಲು ಇವು ಬಲು ಉಪಯುಕ್ತ.
ಮರದ ಒಳಕಟ್ಟಿಗೆಯನ್ನು ಪೀಠೋಪಕರಣಗಳನ್ನು ತಯಾರಿಸಲು ಬಳಸುತ್ತಾರೆ.


ಮರಗಳಿಂದ ಉದುರಿಬಿದ್ದ ಎಲೆ, ಹೂವು ಮಣ್ಣಿಗೆ ಒಳ್ಳೆಯ ಹೊದಿಕೆಯಾಗುತ್ತವೆ.
ಅವು ದಿನಕಳೆದಂತೆ ಕೊಳೆತು ಗೊಬ್ಬರವಾಗಬಲ್ಲವು.
ಈ ಮರಗಳು ಒಳ್ಳೆಯ ನೆರಳು ಹಾಗೂ ಅಲಂಕಾರಕ ಸಸ್ಯಗಳಾಗಿವೆ.
ಬೀಜದಿಂದ ಪಡೆದ ಸಸಿಗಳನ್ನು ತೋಟದ ಸುತ್ತಂಚಿನಲ್ಲಿ ಉದ್ದಕ್ಕೆ ನೆಟ್ಟು ಬೆಳೆಸಿದರೆ ಅವು ಒಳ್ಳೆಯ ಗಾಳಿ ತಡೆಯಾಗಬಲ್ಲವು ಮತ್ತು ಮಣ್ಣು ಕೊಚ್ಚಿಹೋಗುವುದನ್ನು ತಡೆಯಬಲ್ಲವು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ನೀವು ಹುಟ್ಟಿದ ದಿನದ ಪ್ರಕಾರ ಯಾವ ತರಹದ ಉದ್ಯೋಗ ಮಾಡಿದ್ರೆ ಒಳ್ಳೆಯದು ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹುಟ್ಟಿದ ದಿನದ ಪ್ರಕಾರ ನೀವು ಯಾವ ತರದ ಉದ್ಯೋಗ ಮಾಡಿದ್ರೆ ನಿಮಗೆ ಸರಿಹೋಗತ್ತೆ ಅಂತ ಇಲ್ಲಿ ತಿಳಿದು ಕೊಳ್ಳಿ.ನಿಮ್ಮದು ಸ್ವಲ್ಪ ವಿಶೇಷವಾದ ವ್ಯಕ್ತಿತ್ವ, ನೀವು ರಿಸ್ಕ್ ತೊಗೊಳಕ್ಕೆ ಹಿಂದೇಟಾಕಲ್ಲ ಆದ್ರೆ ಸುಮಾರ್ ಸತಿ ನಿಮ್ಮ ತಪ್ಪು ನಿರ್ಧಾರದಿಂದ ಒಳ್ಳೆ ಪಾಠ ಕಲಿತೀರಿ. ನಿಮಗೆ ಆಕ್ಟಿಂಗ್, ಕಲೆ ವಿಭಾಗದಲ್ಲಿ ಒಳ್ಳೆ ಬೆಳವಣಿಗೆ ಇರತ್ತೆ.

  • ಆರೋಗ್ಯ

    ನೀವು ತಿಳಿದಿರದ ಕಮರಾಕ್ಷಿ ಮರದ ಉಪಯೋಗಗಳ ಬಗ್ಗೆ ತಿಳಿಯಲು ಈ ಲೇಖನ ಓದಿ..

    ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು.ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್‌, ಚೀನಾ ತೈವಾನ್‌, ಕ್ವೀನ್ಸ್‌ಲ್ಯಾಂಡ್‌ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

  • ಸುದ್ದಿ

    ಹೊಳಪು ಹಾಗು ಸೊಂಪಾದ ಕೂದಲಿಗೆ ʼದಾಸವಾಳʼ ರಾಮಬಾಣ…! ಅದರ ಪ್ರಯೋಜನಗಳೇನು.?

    ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. ಆದ್ರೆ ಇದರಿಂದ ಕೂದಲು ಬೆಳೆಯುವ ಬದಲು ಮತ್ತಷ್ಟು ಕೂದಲು ಉದುರಲು ಕಾರಣವಾಗುತ್ತದೆ. ಮನೆಯಲ್ಲಿ ಸುಲಭವಾಗಿ ಸಿಗುವ ದಾಸವಾಳದ ಹೂ ನಿಮ್ಮ ಕೂದಲಿಗೆ ಹೇಳಿ ಮಾಡಿಸಿದ ಔಷಧ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ಗಟ್ಟಿಯಾದ ಸುಂದರ ಕಪ್ಪು ಕೂದಲು ಬೆಳೆಯಲು ನೆರವಾಗುತ್ತದೆ.ದಾಸವಾಳದ ಜೊತೆ ಬೇರೆ ಬೇರೆ ಉತ್ಪನ್ನಗಳನ್ನು ಬೆರೆಸಿ…

  • ಸುದ್ದಿ

    ಮೀನಿಗಾಗಿ ಬಲೆ ಬೀಸಿದವನಿಗೆ ಸಿಕ್ಕಿದ್ದು ಬರೋಬ್ಬರಿ 20 ಕೋಟಿ, ಅದೇಗೆ ಗೊತ್ತೆ

    ಇತ್ತೀಚಿಗೆ ಗೋಲ್ಡ್ ಜಾತಿಯ ಮೀನು ಹಿಡಿದ್ದಿದ್ದ ಮೀನುಗಾರ 5 ಲಕ್ಷ ಸಂಪಾದನೆ ಮಾಡಿರುವ ಬಗ್ಗೆ ಸುದ್ದಿ ಆಗಿತ್ತು. ಈಗ ಮೀನುಗಾರನೊಬ್ಬ 20 ಕೋಟಿ ಗಳಿಸಿದ್ದಾನೆ ಎಂದು ತಿಳಿದು ಬಂದಿದೆ. ಅದೇಗೆ ಅಂತೀರಾ. ಓಮನ್ ದೇಶಕ್ಕೆ ಸೇರಿದ ಖಾಲಿದ್ ತನ್ನ ಇಬ್ಬರು ಗೆಳೆಯರೊಡನೆ ಹೋಗಿ ಹಗಲೆಲ್ಲ ಮೀನು ಹಿಡಿದು ಕುಟುಂಬಕ್ಕೆ ಪೋಷಣೆ ಮಾಡುತ್ತಿದ್ದ, ಈತ ಬಡತನದಲ್ಲಿ ಬೆಂದು ಹೋಗಿದ್ದ ಆದರೆ ಅವತ್ತು ಆತನ ಅದೃಷ್ಟದ ದಿನವಾಗಿತ್ತು. ಒಂದು ದಿನ ಹೀಗೆ ಮೀನು ಹಿಡಿಯಲು ಹೋದಾಗ ಅಷ್ಟೊಂದು ಮೀನು ಸಿಗಲಿಲ್ಲ….

  • Cinema

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೊಂದು ‘ಗುಡ್ ನ್ಯೂಸ್’……..!

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರೀಕರಣ ಭರದಿಂದ ಸಾಗಿದೆ. ‘ರಾಜಕುಮಾರ’ ಬಳಿಕ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಯುವರತ್ನ’ ಭಾರಿ ನಿರೀಕ್ಷೆ ಮೂಡಿಸಿದೆ. ‘ಯುವರತ್ನ’ ಚಿತ್ರೀಕರಣ ನಡೆದಿರುವಾಗಲೇ ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ‘ಭರ್ಜರಿ’ ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ಅಭಿನಯಿಸಲಿದ್ದಾರೆ. ಬಹಳ ಹಿಂದೆಯೇ ‘ಜೇಮ್ಸ್’ ಚಿತ್ರದ ಮೋಷನ್ ಪೋಸ್ಟರ್…