ಉಪಯುಕ್ತ ಮಾಹಿತಿ

ನಿಮ್ಮ ಎಲ್ಲಾ ಕಾಯಿಲೆಗಳಿಗೆ ಔಷಧಿಗಳು ಅಡುಗೆ ಮನೆಯಲ್ಲಿ ದೊರೆಯುತ್ತವೆ! ತಿಳಿಯಲು ಈ ಲೇಖನ ಓದಿ…

850

ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿ ದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ.

ಅಡುಗೆ ಮನೆಯಲ್ಲೇ ಇದೆ ಆರೋಗ್ಯ. ದೊರೆಯುವ ಔಷಧಿಗಳು ಇಲ್ಲಿವೆ ಓದಿ…

ಅಡುಗೆ ಮನೆ ಔಷಧಾಲಯ:-

ಅಡುಗೆ ಮನೆ: ಅಲ್ಲಿ ದೊರೆಯುವ ನೀರು, ಸಾಸಿವೆ, ಏಲಕ್ಕಿ, ಅರಿಶಿನ. ಜೀರಿಗೆ, ಮೆಂತ್ಯ, ಶುಂಠಿ, ಗಸಗಸೆ. ಕೊತ್ತಂಬರಿ ಬೀಜ, ಇಂಗು, ಬೆಳ್ಳುಳ್ಳಿ, ಬೆಲ್ಲ, ಉಪ್ಪು, ಕರಿ, ಬೇವು. ಅಂಜೂರ, ದ್ರಾಕ್ಷಿ, ಬಾದಾಮಿ, ಹಣ್ಣು, ತರಕಾರಿ, ಹೇಳುತ್ತಾ ಹೋದರೆ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ. ಅಡಿಗೆ ಮನೆಯಲ್ಲಿ ದೊರೆಯುವ ಪ್ರತಿಯೊಂದೂ ಪದಾರ್ಥ ತನ್ನದೇ ಆದ ಔಷಧೀಯಗುಣಗಳನ್ನು ಹೊಂದಿವೆ. ಕ್ಯಾನ್ಸರ್, ಜಾಂಡೀಸ್, ಅರ್ಥೋರೈಟೀಸ್ ನಂತಹ ಕಾಯಿಲೆಗಳಿಗೂ ಉತ್ತಮ ಔಷಧಿಗಳು ಅಡುಗೆ ಮನೆಯಲ್ಲಿವೆ.

ಭಾರತೀಯ ಆಹಾರ ಪದ್ಧತಿ:-

ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರತಿನಿತ್ಯ ಇವುಗಳನ್ನು ಬಳಸುತ್ತಾರೆ. ಪಾಶ್ಚಾತ್ಯರ ಪ್ರಭಾವ ಹಾಗೂ ಆಧುನಿಕತೆಯಿಂದ ಆಹಾರ ಪದ್ಧತಿಯಲ್ಲಿ ವ್ಯತ್ಯಯವಾಯಿತು.ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿತು. ಅಡುಗೆ ಮನೆಯ ಸಾಮಾನುಗಳ ವಿಶಿಷ್ಟ ತಿಳಿದವರಿಗೆ ಅದರ ಮಹತ್ವದ ಅರಿವಿರುತ್ತದೆ. ಸಿಹಿ,ಹುಳಿ,ಉಪ್ಪು,ಖಾರ, ಒಗರು ಮತ್ತು ಕಹಿ ಎಂಬ ಆರು ರುಚಿಗಳೇ ಷಡ್ರಸಗಳು.

ಪ್ರತಿ ನಿತ್ಯ ನಮ್ಮ ಅಡುಗೆ ಮನೆಯಲ್ಲಿ ಬಳಸುವಬೆಲ್ಲ, ಹುಣಸೆ ಹಣ್ಣು, ಅಡಿಗೆ ಉಪ್ಪು, ಮೆಣಸಿನ ಕಾಯಿ ಮತ್ತು ಕಾಳುಮೆಣಸು, ಜೀರಿಗೆ ಮತ್ತು ಸಾಸಿವೆ ಹಾಗು ಮೆಂತ್ಯ ಈ ಆರೂ ಪದಾರ್ಥಗಳೂ ಔ?ಂಯ ಗುಣದೊಂದಿಗೆ ವಿಭಿನ್ನ ರುಚಿಯನ್ನು ಹೊಂದಿವೆ. ಆರೂ ಪದಾರ್ಥಗಳನ್ನು ಬಳಸಿ ತಯಾರಿಸುವ ಬೇಳೆ ಸಾರು ಷಡ್ರಸ ಪಾಕಕ್ಕೆ ಉತ್ತಮ ಉದಾಹರಣೆಯಾಗಿದೆ. ನಾಲಿಗೆಗೆ ರುಚಿ. ಶರೀರಕ್ಕೆ ಸೌಖ್ಯ.

 

ಸಾಸಿವೆ:

ಸಾಸಿವೆ ತೀಕ್ಷ ದ್ರವ್ಯವಾಗಿದ್ದು ಖಾರ ಹೆಚ್ಚಿಸುವುದು. ಆಮ್ಲತೆಯನ್ನು ಹೆಚ್ಚಿಸುವುದು. ಹೈಡ್ರೋಕ್ಲೋರಿಕ್ ಆಸಿಡ್ ಇರುವುದರಿಂದ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ನೋವುನಿವಾರಕವಾಗಿಯೂ ಕೆಲಸಮಾಡುವುದು. ಹಿಡಿ ಸಾಸಿವೆ ಅರೆದು ಪೇಸ್ಟನ್ನು ಮಾಡಿಕೊಂಡು ಬಿಸಿಮಾಡಿ ನೋವು ಇರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದು. ಭುಜದ ನೋವಿಗೆ ಅತ್ಯಂತ ಸೂಕ್ತ ಔಷಧ, ಸಾಸಿವೆ ಎಣ್ಣೆಯನ್ನೂ ಸಹ ಬಳಸಬಹುದು.

ಏಲಕ್ಕಿ :

ಏಲಕ್ಕಿ ಪಾಯಸ ಮೊದಲಾದ ಸಿಹಿ ತಿನಿಸುಗಳಿಗೆ ಪರಿಮಳ ನೀಡುತ್ತದೆ. ಅಜೀರ್ಣವಾಗದಂತೆ ಮಾಡುತ್ತದೆ. ಅಜೀರ್ಣದಿಂದುಂಟಾಗುವ ಹೊಟ್ಟೆ ತೊಳಸನ್ನು ತಪ್ಪಿಸುತ್ತದೆ, ತಲೆಸುತ್ತನ್ನು ನಿವಾರಿಸುತ್ತದೆ. ಸಮಾರಂಭಗಳಲ್ಲಿ ಊಟಮಾಡಿದ ನಂತರ ಏಲಕ್ಕಿಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಆಹಾರ ಜೀರ್ಣವಾಗುವುದು.

ಜೀರಿಗೆ :

ಆಮ್ಲತೆ ಕಡಿಮೆ ಮಾಡಿ, ಪಿತ್ತಹರ, ಪಿತ್ತದಿಂದ ಉಂಟಾದ ಕಾಯಿಲೆ ರೋಗವನ್ನು ಕಡಿಮೆ ಮಾಡುತ್ತದೆ. ಅಸಿಡಿಟಿಯನ್ನೂ ಕಡಿಮೆಮಾಡುತ್ತದೆ. ಅರ್ಧ ಚಮಚ ಜೀರಿಗೆ 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆರಿಸಿ ಪ್ರತಿನಿತ್ಯ ಕುಡಿಯುವುದರಿಂದ ರಕ್ತಶುದ್ಧಿಯಾಗುತ್ತದೆ. 15 ರಿಂದ 20 ದಿನದವರೆಗೆ ಸೇವಿಸುವುದರಿಂದ ಚರ್ಮರೋಗವು ಕಡಿಮೆ ಯಾಗುತ್ತದೆ. ಅರ್ಧ ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯವನ್ನು ತಯಾರಿಸಿ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ.

ಕೊತ್ತಂಬರಿ (ಧನಿಯಾ) :

ಒಂದು ಚಮಚ ನೀರನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಅರ್ಧ ಚಮಚ ಈ ಕೊತ್ತಂಬರಿ ಮಿಶ್ರಣವನ್ನು ಅರ್ಧಲೋಟ ಹಾಲಿಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಲ್ಸರ್ ಮತ್ತು ಅಸಿಡಿಟಿ ಕಡಿಮೆಯಾಗುತ್ತದೆ.

 

ಬೆಳ್ಳುಳ್ಳಿ :

ಬಡವರ ಕಸ್ತೂರಿ, ಶೀತಹರ. ವಾಯುಹರ. 2-3 ಬೆಳ್ಳುಳ್ಳಿಯನ್ನು ಅರ್ಧಲೋಟ ಹಾಲಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಕುಡಿಯುವುದರಿಂದ ರೋಗ ನಿರೋಧಕ ಗುಣ ಹೆಚ್ಚುತ್ತದೆ. ಶೀತ ಕಡಿಮೆಯಾಗುತ್ತದೆ.

ಅರಿಶಿಣ:

ಅಡುಗೆ ಮನೆಯಲ್ಲಿ ಸದಾಕಾಲ ಲಭ್ಯವಿರುವ ಸರ್ವ ರೋಗಗಳಿಗೆ ಮದ್ದು ಎಂದು ಕರೆಸಿಕೊಳ್ಳುವ ಅರಿಶಿನ ಆರೋಗ್ಯದ ವಿಷಯವಲ್ಲದೇ ಸೌಂದರ್ಯದ ವಿಷಯಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಅರಿಶಿನ ಮತ್ತು ಹಳದಿ ಎಂದು ಕರೆಯಲ್ಪಡುವ ಈ ಮಸಾಲೆ ಪದಾರ್ಥವನ್ನು ಹಲವಾರು ಖಾದ್ಯಗಳಿಗೆ ಬಳಸುತ್ತಾರೆ. ಕೆಲವೊಂದು ಭಾರತೀಯ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದರಲ್ಲಿ ಇದರ ಕೈವಾಡ ಇದೆ.

ಆದ್ದರಿಂದಲೇ ಶತ ಶತಮಾನಗಳಿಂದ ಭಾರತೀಯ ಹೆಂಗಸರು ಅರಿಶಿನವನ್ನು ಮುಖಕ್ಕೆ ಬಳಿದುಕೊಳ್ಳುತ್ತಿದ್ದರು. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳಿಂದಾಗಿ ಇದನ್ನು ಆಂತರಿಕವಾಗಿ (ಅಡುಗೆಯಲ್ಲಿ) ಮತ್ತು ಬಾಹ್ಯವಾಗಿ (ತ್ವಚೆಗೆ) ನಾವು ಬಳಸುತ್ತಿದ್ದೇವೆ. ಸೂಕ್ಷ್ಮ ತ್ವಚೆ ಇರುವವರನ್ನು ಹೊರತುಪಡಿಸಿ ಯಾರು ಬೇಕಾದರು ಅರಿಶಿನ ಬಳಸಬಹುದು. ಅರಿಶಿನದಲ್ಲಿರುವ ಆಂಟಿ-ಸೆಪ್ಟಿಕ ಮತ್ತು ಆಂಟಿ-ಬ್ಯಾಕ್ಟೀರಿಯಾ ಗುಣಗಳು ಮೊಡವೆಗಳನ್ನು ನಾಶ ಮಾಡುತ್ತವೆ.

ಹಾಗಾಗಿಯೇ ಭಾರತೀಯ ಮಹಿಳೆಯರು ಇದನ್ನು ಮುಖಕ್ಕೆ ಕ್ರೀಮ ಮತ್ತು ಫೇಸ್ ಪ್ಯಾಕ್‌ನಂತೆ ಹಚ್ಚಿಕೊಳ್ಳುವುದು. ಅರಿಶಿನ ಹಾಲು ಬ್ಯಾಕ್ಟಿರಿಯಾ ಮತ್ತು ವೈರಸ್ ಸೊಂಕುಗಳು ಆಕ್ರಮಿಸುವುದನ್ನು ವಿರೊಧಿಸುತ್ತದೆ. ಇದು ಉಸಿರಾಟ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ದೇಹ ಉ?ಂUವಾಗಿದ್ದರೆ ಮತ್ತು ಉಸಿರಾಟ ಹಾಗೂ ಸೈನೆಸ್ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ.

ಅಲ್ಲದೇ ಅಸ್ತಮಾ ಹಾಗೂ ಗಂಟಲೂತದಿಂದ ಕೂಡ ನಿವಾರಣೆ ಹೊಂದಬಹುದು. ನೈಸರ್ಗಿಕವಾಗಿ ದೊರೆಯುವ ಅರಿಶಿನಕ್ಕೆ ನಮ್ಮಲ್ಲಿ ಬಹಳ ಬೇಡಿಕೆ. ಪೂಜೆ-ಪುನಸ್ಕಾರ, ಅಡುಗೆಯಲ್ಲಿ ಅರಿಶಿಣವನ್ನು ಬಳಸುತ್ತೇವೆ. ಮಾತ್ರವಲ್ಲ ಆರಿಶಿಣಕ್ಕೆ ನಮ್ಮಲ್ಲಿ ಒಂದು ಪವಿತ್ರ ಸ್ಥಾನ ಕಲ್ಪಿಸಿಕೊಟ್ಟಿದ್ದೇವೆ. ಮದುವೆಯಲ್ಲಿ ಅರಿಶಿಣ ಕೊಂಬನ್ನು ಕಟ್ಟುವ ಪದ್ಧತಿ ಹಲವು ಕಡೆ ಇದೆ. ಹಾಗಾಗಿ ಅರಿಶಿಣಕ್ಕೆ ಚಿನ್ನದ ಸ್ಥಾನಮಾನ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(6 ಮಾರ್ಚ್, 2019) ನಿಮ್ಮ ಪತ್ನಿಯೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುವ ಒಂದು ದಿನ. ಕುಟುಂಬದಲ್ಲಿರುವ ಇಬ್ಬರೂ ಅವರ ಸಂಬಂಧದಲ್ಲಿ…

  • ಸುದ್ದಿ

    ಅತಿ ಚಿಕ್ಕ ಪಕ್ಷಿ ಎಂದಾದರೂ ನೋಡಿದೀರಾ ಹಾಗಾದರೆ, ಜಗತ್ತಿನ ಅತಿ ಪುಟ್ಟ ಪಕ್ಷಿ ಹಮ್ಮಿಂಗ್‌ ಬರ್ಡ್‌ ನೋಡಿ.

    ಮನುಷ್ಯನ ಉಗುರಿನ ಮೇಲೆ ನಿಂತಿರುವ ಪುಟ್ಟಪಕ್ಷಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದರೊಂದಿಗೆ ಇದು ಜಗತ್ತಿನ ಅತಿ ಚಿಕ್ಕ ಹಕ್ಕಿ ಹಮ್ಮಿಂಗ್‌ ಬರ್ಡ್‌ ಎಂದು ಹೇಳಲಾಗಿದೆ. ‘ಬ್ಯಾನ್‌ ಬಾಯ್‌ ಸಹೀದ್‌’ ಎನ್ನುವ ಫೇಸ್‌ಬುಕ್‌ ಬಳಕೆದಾರರು ಈ ಫೋಟೋವನ್ನು ಮೊದಲು ಪೋಸ್ಟ್‌ ಮಾಡಿದ್ದು ಬಂಗಾಳಿ ಭಾಷೆಯಲ್ಲಿ ‘ಜಗತ್ತಿನ ಅತಿ ಚಿಕ್ಕ ಪಕ್ಷಿ ಹಮ್ಮಿಂಗ್‌ ಬರ್ಡ್‌. ನಾನು ಮೊದಲ ಬಾರಿಗೆ ನೋಡಿದ್ದು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಸದ್ಯ ಇದೀಗ ವೈರಲ್‌ ಆಗುತ್ತಿದ್ದು 15000 ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ. ಆದರೆ ನಿಜಕ್ಕೂ ಇದು…

  • ವಿಸ್ಮಯ ಜಗತ್ತು

    ವರ್ಷಗಳ ಕಾಲ ಸ್ನಾನ ಮಾಡದೆ ಇರುವ ಈ ಭೂಪನ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಒಂದೇ ಒಂದು ದಿನ ಸ್ನಾನ ಮಾಡದಿದ್ದರೂ ಕೆಟ್ಟ ವಾಸನೆ ಬರುತ್ತದೆ. ಇನ್ನು 60 ವರ್ಷಗಳು ಎಂದರೆ ಹೇಗಿರುತ್ತದೆ!? ಇಷ್ಟಕ್ಕೂ ಅಷ್ಟು ವರ್ಷಗಳ ಕಾಲ ಸ್ನಾನ ಮಾಡದೆ ಯಾರಾದರೂ ಇರುತ್ತಾರಾ…? ನಿಜವಾಗಿಯೂ ಅಂತಹವರು ಇದ್ದರೆ ಅವರ ಬಳಿ ಹೋಗಬೇಕೆಂದರೇನೇ ಸಾಹಸ ಮಾಡಬೇಕು.

  • ಸುದ್ದಿ

    ಸೊಪ್ಪು ಮಾರುವ ಹುಡುಗನನ್ನು ಲವ್ ಮಾಡಿ ಮದುವೆಯಾದ ಚೈತ್ರಾ ಕೋಟೂರ್ ;ಇವರು ಹೇಳಿದ ಈ ಕಥೆ ನಿಜಾನಾ?

    ಬಿಗ್ ಬಾಸ್ ಸೀಸನ್ ನಲ್ಲಿ ತುಂಬಾ ವಿಚಿತ್ರವಾದ ಸ್ಪರ್ದಿ ಎಂದರೆ ಅವರು ಚೈತ್ರಾ ಕೋಟೂರ್‌ .ಚೈತ್ರಾ ಕೋಟೂರ್‌ಗೆ ಈ ನವೆಂಬರ್ ಬಂದರೆ  ಮದುವೆಯಾಗಿ ಮೂರು ವರ್ಷ ಆಗುತ್ತಂತೆ. ಆ ಹುಡುಗ ಸೊಪ್ಪು ಮಾರುತ್ತಿದ್ದಾನಂತೆ. ಶಾಸ್ತ್ರೋಕ್ತವಾಗಿ ಮದುವೆಯಾಗಿಲ್ವಂತೆ, ಸೈನ್ ಮಾಡಿ ಮದುವೆಯಾಗಿದ್ದಾರಂತೆ. ವ್ಯಕ್ತಿತ್ವ ನೋಡಿ ಮದುವೆಯಾಗಬೇಕು. ಸೊಪ್ಪು ಮಾರುವವರಿಗೆ, ತರಕಾರಿ ಮಾರುವವರಿಗೂ ಕೂಡ ಓದಿರುವವರನ್ನು ಮದುವೆಯಾಗಬೇಕು ಎಂಬ ಆಸೆ ಇರತ್ತೆ ಎಂದಿದ್ದಾರೆ ಚೈತ್ರಾ ಕೋಟೂರ್‌. ಸೊಪ್ಪು ಮಾರುವವನ ಮೇಲೆ ಚೈತ್ರಾಗೆ ಲವ್ ಆಗಿದ್ದೇಗೆ?ಮಾರ್ಕೆಟ್‌ ವಿಚಾರವಾಗಿ ಚೈತ್ರಾರಿಗೆ ಶೈನ್ ಶೆಟ್ಟಿ, ಸುಜಾತಾ…

  • ಉಪಯುಕ್ತ ಮಾಹಿತಿ

    ಕೆಟ್ಟ ದೃಷ್ಟಿ ಇದ್ದರೆ ತಪ್ಪದೆ ವಿಳ್ಳೆದೆಲೆಯಿಂದ ಹೀಗೆ ಮಾಡಿ ಸಾಕು.

    ಮಕ್ಕಳು ಎಂದರೆ ಎಲ್ಲರಿಗೂ ಕೂಡ ಬಹಳನೇ ಪ್ರೀತಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸಣ್ಣ ಪುಟ್ಟ ಮಕ್ಕಳು ಇರುತ್ತಾರೆ ನಾವು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಸಂಜೆವರೆಗೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿ ಆಯಾಸ ಬೇಜಾರು ಬೇಸರ ಇದರಲ್ಲಿ ಮುಳುಗಿ ಹೋಗಿರುತ್ತದೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಪುಟ್ಟ ಮಕ್ಕಳು ಜೊತೆ ಒಂದಷ್ಟು ಸಮಯ ಕಳೆದರೆ ಆಯಾಸ ಹೋಗುತ್ತದೆ ಮನೆಯಲ್ಲಿರುವ ಮಕ್ಕಳು ದೇವರಿಗೆ ಸಮಾನ ಅವು ಯಾವಾಗಲೂ ನಗುನಗುತ್ತಾ ಖುಷಿಯಿಂದ ಇರಬೇಕು. ಆದರೆ ಸಾಮಾನ್ಯವಾಗಿ ಪುಟ್ಟಮಕ್ಕಳು ರಾತ್ರಿಯ ವೇಳೆ ಚಿಕ್ಕ ಪುಟ್ಟ…