ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀವ ಜಲವೆಂದೇ ಕರೆಯಲ್ಪಡುವ ನೀರು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ನಮ್ಮ ದೇಹದ ಪ್ರತಿ ಜೀವಕೋಶವೂ ಉತ್ತಮ ಆರೋಗ್ಯದಿಂದ ಇರಬೇಕಾದರೆ, ನೀರು ಅತ್ಯಗತ್ಯ.
ವಿಶೇಷವಾಗಿ ತಣ್ಣೀರಿನಲ್ಲಿ ಹಲವು ರೋಗರುಜಿನಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ.
ದೇಹದಿಂದ ತ್ಯಾಜ್ಯ ವಸ್ತು ಹಾಗೂ ಕಲ್ಮಶಗಳನ್ನು ಹೊರಹಾಕಲೂ ನೀರು ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರಲೇಬೇಕು. ಕೆಲವಾರು ಖಾಯಿಲೆಗಳ ನಿವಾರಣೆಗೆ ನೀರು ಔಷಧಿಯಂತೆ ಕೆಲಸ ಮಾಡುತ್ತದೆ.
ನಮ್ಮ ಭೂಮಿಯಲ್ಲಿ ಶೇ. 71 ರಷ್ಟು ನೀರು ಇರುವಂತೆ, ನಮ್ಮ ದೇಹವೂ ಶೇ. 71 ರಷ್ಟು ನೀರಿನಿಂದ ಕೂಡಿದೆ ಎಂದು ಹೇಳಲಾಗಿದೆ.
ನಮ್ಮ ದೇಹದ ಆರೋಗ್ಯ ಉತ್ತಮ ರೀತಿ ಇರಬೇಕಾದರೆ, ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು. ನೀರಿನಿಂದ ಆಗುವ ಪ್ರಯೋಜನಗಳನ್ನು ನೋಡಿ :-
ಕುಡಿಯುವ ನೀರು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಂಡು ಕುಡಿಯುವುದು ಒಳ್ಳೆಯದು.
ಸ್ವಚ್ಛ ನೀರನ್ನು ಪಡೆಯುವ ಸುಲಭ ವಿಧಾನವೆಂದರೆ ಕುದಿಸಿ, ತಣ್ಣಗೆ ಕುಡಿಯುವುದು ನಮ್ಮ ಆರೋಗ್ಯಕ್ಕೆ ಉತ್ತಮವೆಂದರೆ, ಸಾಮಾನ್ಯ ತಾಪಮಾನದಲ್ಲಿರುವ ತಣ್ಣೀರು.
ತಣ್ಣೀರು ಎಂದ ಮಾತ್ರಕ್ಕೆ ಫ್ರಿಜ್‌ನಲ್ಲಿರುವ ನೀರು ಎಂದು ತಿಳಿಯಬಾರದು.
ತಣ್ಣೀರನ್ನು ಕುಡಿಯುವುದು ಹಾಗೂ ಬೆಳಿಗ್ಗೆ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದೆ. ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ರಕ್ತಸಂಚಲನೆ ಉತ್ತಮಗೊಂಡು, ಆ ಮೂಲಕ ಹಲವಾರು ಖಾಯಿಲೆಗಳ ಶಮನಕ್ಕೆ ದಾರಿ ಮಾಡಿಕೊಡುತ್ತದೆ.
ನಾವು ತಿಂದ ಆಹಾರ ಜೀರ್ಣಗೊಂಡ ಬಳಿಕ ಕೆಲವು ಕಾರಣಗಳಿಂದ ಆಮ್ಲ ಬಳಕೆಯಾಗದೆ, ಉಳಿಯುವುದರಿಂದ ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ. ಹೊಟ್ಟೆಯುರಿಯಿಂದ ಎದೆಭಾಗದಲ್ಲಿ ಉರಿ, ಹುಳಿ ತೆಗು ಮುಂತಾದ ತೊಂದರೆಗಳು ಎದುರಾಗುತ್ತವೆ.
ಇವುಗಳಿಂದ ಮುಕ್ತಿ ಪಡೆಯಬೇಕಾದರೆ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣವೇ ಒಂದು ಲೋಟ ತಣ್ಣೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.
ದೇಹದ ಚರ್ಮ ಒಣಗಲು ಒಣ ಹವೆ ಪ್ರಮುಖ ಕಾರಣ. ಬಿಸಿ ನೀರಿನಿಂದ ಸ್ನಾನ, ಬಿಸಿ ನೀರನ್ನು ಕುಡಿಯುವುದರಿಂದಲ್ಲೂ ಚರ್ಮ ಒಣಗದಂತೆ ಒಣ ಚರ್ಮಕ್ಕೆ ತಣ್ಣೀರು ಅತ್ಯುತ್ತಮ ಪರಿಹಾರ.
ಚರ್ಮದಲ್ಲಿ ತುರಿಕೆ, ಪರೆ ಏಳುವುದು ಮುಂತಾದ ತೊಂದರೆಗಳಿದ್ದರೆ ತಣ್ಣೀರಿನಿಂದ ತೊಳೆದು ಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಮತ್ತೊಂದು ವಿಶೇಷವೆಂದರೆ, ಪುರುಷರ ಫಲವತ್ತತೆಯಲ್ಲಿ ತಣ್ಣೀರು ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ವೀರ್ಯಾಣುಗಳು, ದೇಹದ ತಾಪಮಾನಕ್ಕಿಂತಲೂ ಕೊಂಚ ಕಡಿಮೆ ಇರಬೇಕು. ಇದೇ ಕಾರಣಕ್ಕೆ ಎಲ್ಲಾ ಸಸ್ತನಿಗಳ ವೃಷ್ಣಗಳು ದೇಹದಿಂದ ಹೊರಗಿರುತ್ತವೆ.
ನಾವು ಧರಿಸುವ ಬಟ್ಟೆಗಳು, ದೀರ್ಘಕಾಲ ಕುಳಿತುಕೊಳ್ಳುವುದು, ವಾಹನ ಚಾಲನೆ ಮೊದಲಾದ ಕಾರಣಗಳಿಂದ ಸೂಕ್ತ ತಾಪಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಸಾಕಷ್ಟು ತಣ್ಣೀರು ಕುಡಿಯುವ ಮೂಲಕ ತಾಪಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಫಲವತ್ತತೆ ಉಳಿಸಿಕೊಳ್ಳಲು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕಣ್ಣುಗಳ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಆಗಿಂದಾಗ್ಗೆ ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಇದರಿಂದ ಕಣ್ಣುಗಳಿಗೆ ಆರಾಮ ಎನಿಸುತ್ತದೆ. ಕಣ್ಣುಗಳಿಗೆ ಅಂಟಿಕೊಂಡಿದ್ದ ಧೂಳು ಮತ್ತಿತರ ಕಣಗಳು ದೂರವಾಗುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು.
ದೀಪಾವಳಿಯ ಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ವ್ಯವಹರಿಸುವ ಐಟಿಸಿ ಕಂಪನಿಯು ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಅನ್ನು ಬಿಡುಗಡೆ ಮಾಡಿದೆ. ಚಾಕೊಲೇಟ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು 4.3 ಲಕ್ಷ ರೂ. ಕಂಪನಿಯು ಫೇಬಲ್ ಬ್ರಾಂಡ್ನೊಂದಿಗೆ ಚಾಕೊಲೇಟ್ ಅನ್ನು ಪರಿಚಯಿಸಿದೆ. ದುಬಾರಿ ಚಾಕೊಲೇಟ್ ವಿಷಯದಲ್ಲಿ, ಐಟಿಸಿಯ ಈ ಉತ್ಪನ್ನವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರಿಕೊಂಡಿದೆ. ಇಂತಹ ದುಬಾರಿ ಚಾಕೊಲೇಟ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವುದು ಇದೇ ಮೊದಲೇನಲ್ಲ. ಈ ಮೊದಲು 2012 ರಲ್ಲಿ, ಡೆನ್ಮಾರ್ಕ್ನ ಕುಶಲಕರ್ಮಿ ಚಾಕೊಲೇಟಿಯರ್ ಫ್ರಿಟ್ಜ್ ನಿಪ್ಸ್ಚೈಲ್ಡ್…
ಸಮಸ್ಯೆಯುಳ್ಳ ರೋಗಿಗಳು ಸಾಮಾನ್ಯವಾಗಿ ಇನ್ಹೇಲರ್ ಬಳಕೆ ಮಾಡುತ್ತಾರೆ. ಅಥವಾ ವೈದ್ಯರ ಸಲಹೆ ಮೇರೆಗೆ ಹಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇನ್ಹೇಲರ್ ಬಳಸದೆ ಮನೆಯಲ್ಲೇ ಉಬ್ಬಸದ ತೊಂದರೆಯನ್ನು ನಿವಾರಿಸಲು ಹಲವು ಮಾರ್ಗಗಳಿವೆ. ಈ ಪೈಕಿ, ಪ್ರಮುಖ ಅಥಾ ಸುಲಭವಾದ 6 ವಿಧಾನಗಳ ಮೂಲಕ ಉಬ್ಬಸ ಸಮಸ್ಯೆಗೆ ನಿವಾರಣೆ ಮಾಡಿಕೊಳ್ಳಬಹುದು. ಅದು ಹೇಗೆ ಗೊತ್ತಾ? ಈ ಕೆಳಗಿನ ವಿವರ ನೋಡಿದರೆ ನಿಮಗೆ ಗೊತ್ತಾಗುತ್ತದೆ. ನೀಲಗಿರಿ ಎಣ್ಣೆಯಲ್ಲಿದೆ ಪರಿಹಾರಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಹಾಕಿ ಅದರ ಆವಿಯನ್ನು ಉಸಿರಾಟದ ಮೂಲಕ…
ಪೇಟಿಮ್ ಬಂದ ಮೇಲೆ ಬೇರೆ ಬೇರೆ ಡಿಜಿಟಲ್ ಪೇಮೆಂಟ್ ಆಪ್ ಗಳು ಪ್ರಾರಂಭಿಸಿದವು. ಸಾಮಾಜಿಕ ಜಾಲತಾಣದ ದೈತ್ಯ ವಾಟ್ಸಪ್ ಸದ್ಯದಲ್ಲೇ ಡಿಜಿಟಲ್ ಪೇಮೆಂಟ್ ಶುರು ಮಾಡಲು ಹೊರಟಿದೆ. ಪ್ರಪಂಚದಲ್ಲಿ ಭಾರತದಲ್ಲೇ ಈ ರೀತಿಯ ಮೊದಲ ಹೆಜ್ಜೆ ಇಡುತ್ತಿರುವುದು.
ಜೋಗ ಜಲಪಾತದ ನೆತ್ತಿ ಪ್ರದೇಶದ ಜಲಪಾತಕ್ಕೆ ಧುಮುಕಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಇದ್ದದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.
ಇಂದು ಭಾನುವಾರ , 25/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…