ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಬಗ್ಗೆ ಗೊತ್ತಲ್ಲವೇ. ಇನ್ಫೋಸಿಸ್ ಕೋ ಫೌಂಡರ್ ನಾರಾಯಣ ಮೂರ್ತಿ ಅವರ ಧರ್ಮಪತ್ನಿ. ಇವರು ಗೇಟ್ಸ್ ಫೌಂಡೇಷನ್ ಕಾರ್ಯಕ್ರಮಗಳಲ್ಲೂ ಪಾಲುದಾರರಾಗಿದ್ದಾರೆ.
ಆದರೆ ಸುಧಾಮೂರ್ತಿ ಒಂದು ಪುಸ್ತಕ ಬರೆದಿದ್ದಾರೆ. ತನ್ನ ಜೀವನದಲ್ಲಿ ನಡೆದ ಹಲವು ಸಂಗತಿಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದಾರೆ. “ಥ್ರಿ ತೌಸಂಡ್ ಸ್ಟಿಚೆಸ್: ಆರ್ಡಿನರಿ ಪೀಪಲ್, ಎಕ್ಸ್‌ಟ್ರಾ ಆರ್ಡಿನರಿ ಲೈಫ್” ಎಂಬ ಪುಸ್ತಕವನ್ನು ಬರೆದ ಅವರು ತನ್ನ ವಿಷಯಗಳನ್ನು ಅದರಲ್ಲಿ ತಿಳಿಸಿದ್ದಾರೆ.

‘ಇದು ಬಿಸಿನೆಸ್ ಕ್ಲಾಸ್ ಜನರು ನಿಲ್ಲಿವ ಸಾಲು, ಹೋಗಿ ಎಕಾನಮಿ ಕ್ಲಾಸ್ ನಲ್ಲಿ ನಿಲ್ಲಿ’ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರಿಗೆ ಲಂಡನ್ನಿನ ಹೆಥ್ರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಹಿಳಾ ಸಿಬ್ಬಂದಿಯೊಬ್ಬರು ಹೇಳಿದ ಮಾತು! ಸೆಲ್ವಾರ್ ಕಮೀಜ್ ತೊಟ್ಟಿದ್ದ ಸುಧಾಮೂರ್ತಿಯವರನ್ನು ಮಹಿಳೆಯೊಬ್ಬರು ಅವಮಾನಿಸಿದ ರೀತಿ ಇದು! ತಮ್ಮ ಈ ಕಹಿ ಅನುಭವವನ್ನು ಸುಧಾಮೂರ್ತಿಯವರು ತಮ್ಮ ಹೊಸ ಕೃತಿ ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಸುಧಾಮೂರ್ತಿ ಒಮ್ಮೆ ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದರು. ಅದಕ್ಕಾಗಿ ಬಿಜಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡಿದ್ದರು. ಹಾಗಾಗಿ ಲಂಡನ್‌ನ ಹೀತ್ರೂ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಆದರೆ ಸಾಮಾನ್ಯವಾಗಿ ಅವರು ಸೀರೆಯನ್ನೇ ಉಡುತ್ತಾರೆ. ಪ್ರಯಾಣದಲ್ಲಿದ್ದರೆ ಚೂಡಿದಾರ ಹಾಕಿಕೊಳ್ಳುತ್ತಾರೆ. ಆ ಸಮಯದಲ್ಲಿ ಆ ಡ್ರೆಸ್ ಅನುಕೂಲಕರವಾಗಿರುತ್ತದೆಂದು ಅವರು ಭಾವಿಸಿದರು. ಹಾಗಾಗಿ ಆ ದಿನ ಚೂಡಿದಾರ ಉಟ್ಟಿದ್ದರು. ನೋಡಲು ತುಂಬಾ ಸರಳವಾಗಿರುತ್ತಾರೆ. ಅವರ ಡ್ರೆಸ್ಸಿಂಗ್ ಸಹ ಯಾವಾಗಲೂ ಅದೇ ರೀತಿ ಇರುತ್ತದೆ.
ಅಂದು ತೊಟ್ಟಿದ್ದ ಚೂಡಿದಾರ ಸಹ ಅಂತಹ ದುಬಾರಿಯದ್ದೇನು ಆಗಿರಲಿಲ್ಲ. ಆ ರೀತಿ ಆಕೆ ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಸ್ವಲ್ಪ ಸಮಯ ವೆಯ್ಟ್ ಮಾಡಿದರು. ಬಳಿಕ ಬೋರ್ಡಿಂಗ್ ಪಾಸ್ ತೆಗೆದುಕೊಂಡು ವಿಮಾನ ಹತ್ತಲು ಸಾಲಿನಲ್ಲಿ ನಿಂತರು.

ಅವರ ಮುಂದೆ ನಿಂತಿದ್ದ ಒಬ್ಬಾಕೆ…ಹೋಗಮ್ಮಾ ಹೋಗು ಇದು ಬಿಝಿನೆಸ್ ಕ್ಲಾಸ್, ನೀನು ನಿಂತುಕೊಳ್ಳಬೇಕಾದ ಎಕನಾಮಿಕ್ ಕ್ಲಾಸ್ ಅಲ್ಲಿದೆ ನೋಡು ಅಲ್ಲಿಗೆ ಹೋಗು ಎಂದು ತಿರಸ್ಕಾರವಾಗಿ ಮಾತನಾಡಿದ ಆಕೆಯನ್ನು ನೋಡಿ ಏನೂ ಮಾತನಾಡದೆ ಸೈಲೆಂಟ್ ಆಗಿ ಇದ್ದರು ಸುಧಾಮೂರ್ತಿ.ಅತ್ತ ಹೋಗಿ ನಿಂತುಕೊಳ್ಳಿ ಎಂದಾಕೆ ನೋಡಲು ನೀಟಾಗಿ ಡ್ರೆಸ್ ಮಾಡಿಕೊಂಡಿದ್ದಳು.
ಕಟ್ ಮಾಡಿದರೆ ಅದೇ ದಿನ ಸಂಜೆ ಸದರಿ ಹೈಹೀಲ್ಸ್ ಹಾಕಿಕೊಂಡ ಮಹಿಳೆ ಹಾಜರಾದ ಸೆಮಿನಾರ್ ನಿರ್ವಹಿಸಿದ್ದು ಏರ್‌ಪೋರ್ಟ್‌ನಲ್ಲಿ ಸಾದಾಸೀದ ಸಲ್ವಾರ್ ಕಮೀಜ್ ಧರಿಸಿದ್ದ ಆ ಮಹಿಳೆ.ಸುಧಾಮೂರ್ತಿ ಅದನ್ನು ಕೇರ್ ಮಾಡದೆ ಕ್ಯೂನಲ್ಲಿ ಇರುವುದನ್ನು ನೋಡಿ “ಹೇಳ್ತಿದ್ದರೆ ಅರ್ಥಾವಾಗುತ್ತಿಲ್ಲವೇ” ಎಂದು ಮತ್ತೊಮ್ಮೆ ಜೋರು ಮಾಡಿದ್ದಳು ಆಕೆ.
ಕಡೆಗೆ ವಿಮಾನದ ಒಳಗೆ ಬಂದ ಸುಧಾಮೂರ್ತಿ ಆ ಮಹಿಳೆ ಬಳಿ ಹೋಗಿ….ನಾನು ಹಳ್ಳಿಯವಳೇ. ಆದರೆ ನೀವು ಮಾತ್ರ ಕ್ಲಾಸ್ ಮಹಿಳೆಯರಲ್ಲ. ಒಬ್ಬ ಮನುಷ್ಯನಿಗೆ ಕ್ಲಾಸ್ ಎಂಬುದು ಅವರು ಸಂಪಾದಿಸುವ ಹಣ, ಅಲಂಕಾರದಿಂದ ಬರಲ್ಲ. ತಾನು ಮಾಡುವ ಒಳ್ಳೆಯ ಕೆಲಸಗಳಿಂದ ಬರುತ್ತದೆ. ಅಷ್ಟೇ ಹೊರತು ಅದನ್ನು ಹಣ ತಂದುಕೊಡಲ್ಲ..ಎಂದು ಹೇಳಿ ಅಲ್ಲಿಂದ ಹೊರಟು ಹೋದರು..!
ಸುಧಾಮೂರ್ತಿ ಕೊಟ್ಟ ಕೌಂಟರ್‌ಗೆ ಆ ಮಹಿಳೆ ಏನು ಮಾತನಾಡಬೇಕೋ ಅರ್ಥವಾಗಲಿಲ್ಲ. ಹೌದಲ್ಲವೇ ಸುಧಾಮೂರ್ತಿ ಹೇಳಿದ್ದು ಸತ್ಯ. ಹಣದಿಂದ ಗುಣ ಬರುತ್ತಾ, ಕ್ಲಾಸ್ ಆಗಿ ಇರುತ್ತಾರಾ.? ಅದು ಸ್ವತಃ ಬರಬೇಕು, ಅವರು ಮಾಡುವ ಕೆಲಸಗಳನ್ನು ಅವಲಂಭಿಸಿ ಅದು ಇರುತ್ತದೆ..!

ಸುಧಾಮೂರ್ತಿ (ಆಗಿನ್ನೂ ಸುಧಾಕುಲಕರ್ಣಿ-) ಅವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಇಂಜನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು. ಆಬಳಿಕ ಇವರು ಪುಣೆಯ ವಾಲಚಂದ ಗ್ರೂಪ್ ಆಫ್ ಇಂಡಸ್ಟ್ರೀಜ್ದಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ನಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ದಿನ ನಿತ್ಯ ಬಳುಸುವ ಕೆಲವೊಂದು ವಸ್ತುಗಳೇ ನಮ್ಮ ದೇಹಕ್ಕೆ ಹಾನಿಕಾರಕ. ಅವುಗಳಲ್ಲಿ ಯಾವುವು ಅಂತ ತಿಳಿದುಕೊಲ್ಲಬೇಕಾದ್ರೆ ಮುಂದೆ
57 ವರ್ಷದ ಪುರುಷೋತ್ತಮ್ ಎಂಬಾತ 8 ಮದುವೆಯಾಗಿ ಮೋಸ ಮಾಡಿ ಕೋಟಿ ಕೋಟಿ ಹಣ ಪಂಗನಾಮ ಹಾಕಿದ್ದಾನೆ. ಈತನ ನಾಲ್ಕನೆ ಪತ್ನಿ ಉಪನ್ಯಾಸಕಿಯಾಗಿದ್ದು, ಚೆನ್ನೈನ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿರುವ ಇಂದಿರಾ ಗಾಂಧಿ ಎಂಬವರು ಈ ಕುರಿತು ದೂರು ನೀಡಿದ ಬಳಿಕ ಉದ್ಯಮಿಯ ನಿಜ ಬಣ್ಣ ಈಗ ಬೆಳಕಿಗೆ ಬಂದಿದೆ ಚೆನ್ನೈನಲ್ಲಿ ಪೊಲೀಸ್ ಕಂಪ್ಲೆಂಟ್ ನೀಡಿದ ಮೇಲೆ ಪುರುಷೋತ್ತಮ ಬಂಡವಾಳ ಬಯಲಾಗಿದೆ.
2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.
ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.
ನಾವು ಹುಟ್ಟುವಾಗ ಒಬ್ಬರಾಗಿ ಈ ಪ್ರಪಂಚಕ್ಕೆ ಬರುತ್ತೇವೆ ಮತ್ತು ಸಾಯುವಾಗ ಒಬ್ಬರಾಗಿ ಸಾಯುತ್ತೇವೆ ಮತ್ತು ನಮ್ಮ ಸಾವನ್ನ ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ ಹಾಗೆ ನಮ್ಮ ನೋವನ್ನ ಯಾರು ಭರಿಸಲು ಕೂಡ ಸಾಧ್ಯವಿಲ್ಲ. ನಾವು ಕಷ್ಟದಲ್ಲಿ ಇದ್ದಾಗ ಒಂದು ಹಂತದ ತನಕ ಮಾತ್ರ ಯಾರಾದರೂ ಸಹಾಯ ಮಾಡಬಲ್ಲರು ಆದರೆ ಅದರಿಂದ ಆಚೆ ನಾವೇ ಹೋರಾಡಬೇಕು ಮತ್ತು ನಾವೇ ಬದುಕುವ ದಾರಿಯನ್ನ ಹುಡುಕಾಡಬೇಕು ಯಾಕೆ ಅಂದರೆ ಜೀವನ ಅನ್ನುವುದು ಪ್ರತಿ ಕ್ಷಣದ ಹೋರಾಟ. ಎಲ್ಲಾ ದಾರಿಗಳು ಮುಚ್ಚಿ ಹೋದಾಗ…
ಮಹಾಭಾರತದ ದ್ರೌಪದಿ ಎಲ್ಲರಿಗೂ ಗೊತ್ತು. ಆಕೆ ಪಾಂಡವರ ಪತ್ನಿ. ಐವರು ಗಂಡಂದಿರನ್ನು ಹೊಂದಿದ್ದ ದ್ರೌಪದಿಯೇ ಮಹಾಭಾರತಕ್ಕೆ ಕಾರಣ ಎನ್ನಲಾಗುತ್ತದೆ. ಅದೇನೇ ಇರಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರು ಭಾರತದಲ್ಲಿ ಇದ್ದಾರೆ. ರಾಜಸ್ತಾನ ಮತ್ತು ಮಧ್ಯಪ್ರದೇಶದ ಗಡಿ ಭಾಗ ಮುರೆನಾದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರಿದ್ದಾರೆ. ಇದು ಹಳೇ ಪದ್ಧತಿಯೇನಲ್ಲ. ಕೆಲ ವರ್ಷಗಳ ಹಿಂದೆ ಅಲ್ಲಿನ ಮುಖಂಡರು ಗ್ರಾಮದ ಒಳಿತಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಊರಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ. ಯುವಕರ ಸಂಖ್ಯೆ…