ಕಾನೂನು

ದೇವಮಾನವನಿಗೆ ಇನ್ನು ಮುಂದೆ ಜೈಲು ವಾಸ!ಹಿಂಸಾಚಾರದಲ್ಲಿ ಸತ್ತ ಜನ ಎಷ್ಟು ಗೊತ್ತಾ?

666

ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾಗಿದೆ. ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪುವು ಪ್ರಕಟಿಸಿದೆ. 7 ವರ್ಷ ಜೈಲುಶಿಕ್ಷೆ ವಿಧಿಸಿದೆ. ಬಾಬಾ ಇನ್ನು ತನ್ನ ಆಶ್ರಮ ಬಿಟ್ಟು ಜೈಲಿನಲ್ಲಿ ಕಂಬಿ ಎಣಿಸಬೇಕಿದೆ. ಬಾಬಾ ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು, ಜೈಲಿಗೆ ರವಾನೆ ಮಾಡಲಾಗುತ್ತಿದೆ.

ಹರಿಯಾಣದ ಸಿರ್ಸಾದಲ್ಲಿರುವ ಆಶ್ರಮದಲ್ಲಿ ರಾಮ್ ರಹೀಂ ವಿರುದ್ಧ 1999ರಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಸಾಭಿತಾಗಿದೆ. ಕಳೆದ 2002ರಿಂದ ಸಿಬಿಐ ತನಿಖೆ ನಡೆಸಲಾಗುತ್ತಿತ್ತು. ಇಂದು ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ.

ತೀರ್ಪನ್ನು ಪ್ರಕಟಿಸಿದ ನ್ಯಾಯಾಧೀಶರು, ರಾಮ್ ರಹೀಂ ಸಿಂಗ್ ನನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಸೂಚನೆ ನೀಡಿದ್ದರು, ಈ ಹಿನ್ನೆಲೆಯಲ್ಲಿ ರಾಮ್ ರಹೀಂ ಸಿಂಗ್ ರನ್ನು ಪೊಲೀಸರು ಅಂಬಾಲಾ ಜೈಲಿಗೆ ಕರೆದೊಯ್ಯಲಿದ್ದಾರೆ ಎಂದು ಸಂತ್ರಸ್ತೆ ಪರ ವಕೀಲರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾದ ಬೆನ್ನಲ್ಲೇ ಹರಿಯಾಣದ ಪಂಚಕುಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಆರೋಪ ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ಎದುರೇ ನೆರೆದಿದ್ದ ಬಾಬಾ ಭಕ್ತರು ರಾಷ್ಟ್ರೀಯ ಸುದ್ದಿವಾಹಿನಿಯ ಮೂರು ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೇ 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ.

ಘಟನೆಯಿಂದಾಗಿ 11 ಮಂದಿ ಬಾಬಾ ಭಕ್ತರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹರಿಯಾಣದ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಅಲ್ಲಿನ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್, ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ಜಗ್ಗದ ಬಾಬಾ ಭಕ್ತರು ಹಿಂಸಾಚಾರಕ್ಕೆ ತಿರುಗಿದ್ದಾರೆ. ಪೊಲೀಸರ ಮೇಲೆಯೇ ರಾಮ್ ರಹೀಂ ಭಕ್ತರಿಂದ ಕಲ್ಲು ತೂರಾಟ, ಹಲ್ಲೆ ನಡೆಯುತ್ತಿದೆ. ತಮ್ಮ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು, ಜಲಫಿರಂಗಿ ಬಳಸಿದ್ರೂ ಬಗ್ಗದೇ ಭದ್ರತಾ ಪಡೆ ಮೇಲೂ ಕಲ್ಲು ತೂರಾಟ ನಡೆಸುತ್ತಿದ್ದಾರೆ.

ಸರ್ಕಾರಿ ಕಚೇರಿ, ಪೆಟ್ರೋಲ್ ಬಂಕ್, ವಿದ್ಯುತ್ ಸ್ಥಾವರಕ್ಕೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಮನೆಯೊಳಗೆ ನಿಲ್ಲಿಸಿದ್ದ ಕಾರ್ ಗಳ ಮೇಲೂ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಹರಿಯಾಣದ ಪರಿಸ್ಥಿತಿ ಬಿಗಡಾಯಿಸಿದೆ. ಇತ್ತ ನವದೆಹಲಿಯಲ್ಲಿ 7 ಕಡೆ ಕಲ್ಲು ತೂರಾಟ, ಬೆಂಕಿ ಹಚ್ಚಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸೇತುವೆ ಮೇಲೆ ನಿಂತು ಮೂತ್ರ ವಿಸಾರ್ಜನೆ ಮಾಡಿದ ವ್ಯಕ್ತಿಯಿಂದಾಯ್ತು ಯಡವಟ್ಟು…..ಇದನ್ನು ಓಧಿ…

    ಸೇತುವೆ ಮೇಲೆ ನಿಂತ ಮೂತ್ರ ಮಾಡಿದ ವ್ಯಕ್ತಿಯೊಬ್ಬ ಅನೇಕರು ಆಸ್ಪತ್ರೆ ಸೇರಲು ಕಾರಣವಾಗಿದ್ದಾನೆ. ಗಾಯಾಳುಗಳನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಜರ್ಮನ್ ರಾಜಧಾನಿ ಬರ್ಲಿನ್ ನಲ್ಲಿ ನಡೆದಿದೆ. ಮಾಧ್ಯಮದ ವರದಿ ಪ್ರಕಾರ, ಜಾನೋವಿಟ್ಜ್ ಸೇತುವೆ ಮೇಲೆ ನಿಂತ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಾನೆ. ಸೇತುವೆ ಕೆಳಗೆ ಹೋಗ್ತಿದ್ದ ಪ್ರವಾಸಿ ಬೋಟ್ ನಲ್ಲಿ ಗೊಂದಲ ಸೃಷ್ಟಿಯಾಗಿದೆ. ಘಟನೆಯಲ್ಲಿ ಅನೇಕ ಪ್ರವಾಸಿಗರು ಗಾಯಗೊಂಡಿದ್ದಾರೆ. ತಕ್ಷಣ ರಕ್ಷಣಾ ಪಡೆಯನ್ನು ಕರೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿ ವಿರುದ್ಧ ದೂರು ದಾಖಲಿಸಿಕೊಂಡು…

  • ಸುದ್ದಿ

    ಬರೋಬ್ಬರಿ 40 ಕೋಟಿ ಆಫರ್ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ…!

    ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೆಡ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಮಧ್ಯೆ ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡಲು ವಿಜಯ್ ದೇವರಕೊಂಡ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ವಿಜಯ್ ತಮಗೆ ಬಂದಿದ್ದ ಆಫರ್ ರನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ಸಿನಿಮಾವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡುತ್ತಿದ್ದಾರೆ. ಹೀಗಾಗಿ ಹಿಂದಿಯಲ್ಲಿ ದೇವರಕೊಂಡ…

  • ಸುದ್ದಿ

    ಉಪ್ಪನ್ನು ಬಳಸಿ ಮನೆ ಒರೆಸಿದ್ರೆ ನಿಮ್ಮ ಮನೆಯಲ್ಲಿ ಏನಾಗುತ್ತೆ ಗೊತ್ತಾ?ತಿಳಿದರೆ ಶಾಕ್ ಆಗ್ತೀರಾ..!

    ಉಪ್ಪು ಇದರ ಬಗ್ಗೆ ನಿಮಗೆ ಈ ವಿಷಯದಲ್ಲಿ ನಾನು ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇನೆ ಉಪ್ಪನ್ನು ನಾವು ಅಡುಗೆಗೆ ಮಾತ್ರ ಬಳಸುತ್ತೇವೆ ಎಂದು ತಿಳಿದುಕೊಂಡಿರುತ್ತೇವೆ ಅದು ತಪ್ಪು ಉಪ್ಪಿನ ಋಣವನ್ನು ನಾವು ಯಾವತ್ತೂ ತಿಳಿಸಲು ಸಾಧ್ಯವಿಲ್ಲ. ನೀವು ನೋಡಿರಬಹುದು ಅಂಗಡಿಯ ಆಚೆ ಉಪ್ಪನ್ನು ಇಟ್ಟಿರುತ್ತಾರೆ ಆದರೆ ಅದನ್ನು ಯಾರು ಕಲಿಯುವುದಿಲ್ಲ ಏಕೆಂದರೆ ಉಪ್ಪಿನ ಋಣವನ್ನು ತೀರಿಸಲು ಸಾಧ್ಯವಿಲ್ಲ. ಇಲ್ಲಿ ಒಂದು ವಿಷಯ ಏನಂದರೆ ಉಪ್ಪಿನಿಂದ ಆಗುವ ಉಪಯೋಗಗಳು ಯಾವುವು ಎಂಬುದನ್ನುತಿಳಿದುಕೊಳ್ಳಿ ಮತ್ತು ಯಾವುದಕ್ಕೆ ಬಳಕೆ ಮಾಡುತ್ತಾರೆ ಎಂದು ನೋಡಿ….

  • ವಿಚಿತ್ರ ಆದರೂ ಸತ್ಯ

    ಮಹಿಳೆಯೊಬ್ಬಳು 300 ವರ್ಷ ವಯಸ್ಸಿನ ದೆವ್ವದ ಜೊತೆ ಮದುವೆಯಾಗಿದ್ದಾಳೆ..!ತಿಳಿಯಲು ಈ ಲೇಖನ ಓದಿ…

    ಮಹಿಳೆಯೊಬ್ಬಳು ಐರ್ಲೆಂಡ್ ನಲ್ಲಿ ದೆವ್ವವನ್ನೇ ಮದುವೆಯಾಗಿದ್ದಾಳೆ. ಅಮಂಡಾ ಟೀಗ್ ಎಂಬ ಮಹಿಳೆ ಸರ್ವಾಲಂಕೃತಳಾಗಿ ಚರ್ಚ್ ಗೆ ಬಂದಿದ್ಲು. ಅಲ್ಲಿ ಅತಿಥಿಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ 300 ವರ್ಷ ವಯಸ್ಸಿನ ಜಾಕ್ ಎಂಬ ದೆವ್ವವನ್ನು ಮದುವೆಯಾಗಿದ್ದಾಳೆ.

  • ರಾಜಕೀಯ

    ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ  ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು 24 ಗಂಟೆಗಳಲ್ಲಿಯೇ ಎರಡನೇ ಪಟ್ಬಿ ಬಿಡುಗಡೆ ಮಾಡಿದೆ. ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್‌, ಬಸವನ ಬಾಗೇವಾಡಿ- ಎಸ್‌.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್‌, ಗುರಮಿಠಕಲ್-‌ ಲಲಿತಾ ಅನಾಪುರ್‌, ಬೀದರ್-‌ ಈಶ್ವರ್‌ ಸಿಂಗ್‌ ಠಾಕೂರ್‌, ಭಾಲ್ಕಿ- ಪ್ರಕಾಶ್‌ ಖಂಡ್ರೆ, ಗಂಗಾವತಿ- ಪರಣ್ಣ ಮುನವಳ್ಳಿ, ಕಲಘಟಗಿ-…

  • bank

    ಎಟಿಎಂ ನಲ್ಲಿ ‘ನೋಟು’ ಬರದಿದ್ರೆ ಏನು ಮಾಡಬೇಕು…?

    ಹಣ ಡ್ರಾ ಮಾಡಲು ಸಾಮಾನ್ಯವಾಗಿ ಎಲ್ಲರೂ ಎಟಿಎಂ ಬಳಸ್ತಾರೆ. ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ. ಹೀಗೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ.ಮಾನಸಿಕ ಹಾಗೂ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಬೇರೆ ಬ್ಯಾಂಕ್ ಎಟಿಎಂಗೆ ಹೋದಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಬೇರೆ ಎಟಿಎಂಗೆ ಹೋದಾಗ ನೀವು ಈ ಕೆಲಸವನ್ನು ಅವಶ್ಯವಾಗಿ ಮಾಡಬೇಕಾಗುತ್ತದೆ. ಹಣ ಡ್ರಾ ಮಾಡಿದ ನಂತ್ರ ಬರುವ ಸ್ಲಿಪ್ ನ್ನು ಜೋಪಾನವಾಗಿ ತೆಗೆದಿಟ್ಟುಕೊಂಡಿರಬೇಕಾಗುತ್ತದೆ. ಕೆಲವೊಮ್ಮೆ ಹಣ ಡ್ರಾ…