ಜೀವನಶೈಲಿ

ದಯವಿಟ್ಟು ಕಡಿಮೆ ಬೆಲೆಯ “ಕಾಸ್ಮೆಟಿಕ್ಸ್”ಗಳನ್ನು ಬಳಸುವ ಮುನ್ನ ಹುಷಾರಾಗಿರಿ!ತಿಳಿಯಲು ಈ ಲೇಖನಿ ಓದಿ, ಮರೆಯದೇ ಶೇರ್ ಮಾಡಿ…

433

ತಾನು ಇನ್ನೊಬ್ಬರಿಗೆ ಚೆನ್ನಾಗಿ ಕಾಣಬೇಕು ಎಂದು ಯಾರಿಗೆ ತಾನೇ ಅನ್ನಿಸೋದಿಲ್ಲ ಹೇಳಿ.ಉತ್ತಮ ತ್ವಚೆ ಹೊಂದುವುದು ಪ್ರತಿಯೊಬ್ಬ ಯುವತಿಯರ ಮತ್ತು ಹೆಂಗಳೆಯರ ಆಸೆಯಾಗಿರುತ್ತದೆ. ಇದರಲ್ಲಿ ಯುವಕರು ಸಹ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಬಳಸುವ ಸೌಂದರ್ಯ ವರ್ಧಕಗಳು 100 ರೂಪಾಯಿಯಿಂದ ಸಾವಿರಾರು ರೂಪಾಯಿಗಳವರೆಗೂ ಇರುತ್ತದೆ.

ಸ್ಟೆರಾಯ್ಡ್ ಆಧಾರಿತ  ಸೌಂದರ್ಯವರ್ಧಕಗಳ ಬಗ್ಗೆ :-

ಸ್ಟೆರಾಯ್ಡ್ ಆಧಾರಿತ  ಸೌಂದರ್ಯವರ್ಧಕಗಳು 100 ರೂಪಾಯಿಗಿಂತಲೂ ಕಡಿಮೆಗೆ ಸಿಗುತ್ತದೆ. ಮುಖ ಸೌಂದರ್ಯ ಕಾಣಲೆಂದು ಕಡಿಮೆ ಬೆಲೆಯ ಸೌಂದರ್ಯ ವರ್ಧಕ ಬಳಸುವ ಮುನ್ನ ಎಚ್ಚರ.

ಕಾಲೇಜಿಗೆ ಹೋಗುವ ಯುವಕ ಯುವತಿಯರು ಇಂತಹ ಸೌಂದರ್ಯವರ್ಧಕಗಳನ್ನು ಖರೀದಿಸಲು ಬಯಸುತ್ತಾರೆ. ಸ್ವಲ್ಪ ದಿನಗಳವರೆಗೆ ಇದು ಸುಂದರವಾಗಿ ಏನೋ  ಕಾಣುತ್ತದೆ. ಆದರೆ ಸೌಂದರ್ಯವರ್ಧಕಗಳನ್ನು ಹಾಕಲು ಆರಂಭಿಸಿ 15 ದಿನಗಳ ನಂತರ ಅದರಿಂದಾಗುವ ಅಪಾಯಗಳ ಸೂಚನೆ ಕಂಡುಬರುತ್ತದೆ.

ಸ್ಟೆರಾಯ್ಡ್ ಆಧಾರಿತ ಕಾಸ್ಮೆಟಿಕ್ಸ್ ಬಳಸಿದ ಪರಿಣಾಮಗಳು :-

ಒಬ್ಬ ಯುವತಿ, ಆಕೆಯ ಮದುವೆ ದಿನ ಸೊಗಸಾಗಿ ಕಾಣಬೇಕೆಂದು ಬಯಸಿದಳು. ಬ್ಯೂಟಿ ಪಾರ್ಲರ್ ಗೆ ಫೇಶಿಯಲ್ ಕ್ಲೀನ್ ಅಪ್ ಗೆಂದು ಹೋದಳು. ಅಲ್ಲಿ ಬ್ಯೂಟಿಷಿಯನ್ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ತೋರುವ ಫೇರ್ ನೆಸ್ ಕ್ರೀಮ್ ಬಳಸಲು ಹೇಳಿದಳು.

ಅದರಂತೆ ಆ ಯುವತಿ ಕ್ರೀಮ್ ಬಳಸಲು ಆರಂಭಿಸಿದ ಒಂದು ತಿಂಗಳ ಬಳಿಕ ಅವಳ ಮುಖದಲ್ಲಿ ಮೊಡವೆ, ಕೂದಲು ಬೆಳೆಯಲು ಆರಂಭಿಸಿತು. ಅದೇ ಬ್ಯೂಟಿ ಪಾರ್ಲರ್ ಗೆ ಹೋಗಿ ಆ ಯುವತಿ ಕೇಳಿದಾಗ ತಮ್ಮ ಸೂಕ್ಷ್ಮ ಚರ್ಮದಿಂದ ಹೀಗಾಗಿದೆ ಎಂದು ಹೇಳಿ ಬ್ಯೂಟಿಷಿಯನ್ ಜಾರಿಕೊಂಡುಬಿಟ್ಟಳು.

ಚರ್ಮರೋಗ ತಜ್ಞರಲ್ಲಿ ಹೋಗಿ ಕೇಳಿದಾಗ ಮುಖಕ್ಕೆ ಸ್ಟಿರಾಯ್ಡ್ ಬಳಸುತ್ತಿದ್ದ ಕಾರಣ ಕೂದಲು ಬೆಳೆದಿದೆ ಎಂದರು. ಹೊಳೆಯುವ ಚರ್ಮದ ಕಾಂತಿಗೆಂದು ಸ್ಟಿರಾಯ್ಡ್ ನ್ನು ಜನರು ಬಳಸುತ್ತಾರೆ. ಅದನ್ನು ಸರಿಯಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ  ಎನ್ನುತ್ತಾರೆ ಚರ್ಮರೋಗ ತಜ್ಞರು.

ಚರ್ಮರೋಗ ತಜ್ಞರ ಅಭಿಪ್ರಾಯ :- 

ಸ್ಟಿರಾಯ್ಡ್ ನಿಜಕ್ಕೂ ಚರ್ಮಕ್ಕೆ ಹಾನಿ ಎನ್ನುತ್ತಾರೆ ತಜ್ಞರು.  ಒಬ್ಬ ಮಹಿಳೆ ಕಳೆದ ವರ್ಷ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕಡಿಮೆ ಕ್ರಯದ ಫೇಶಿಯಲ್ ಕ್ರೀಮ್ ಬಳಸಿದ್ದರು. ಒಂದು ತಿಂಗಳು ಆಗುವಾಗ ಮುಖದಲ್ಲಿ ಸಣ್ಣ ಸಣ್ಣ ಕಲೆಗಳು ಬರಲಾರಂಭಿಸಿದವು. ಜನರು ಬೇಗನೆ ತಮ್ಮ ತ್ವಚೆ ಸುಂದರವಾಗಬೇಕೆಂದು ಸ್ಟಿರಾಯ್ಡ್ ಮಾದರಿಯ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಆ ಮೇಲೆ ಸಮಸ್ಯೆಗಳು ತಲೆದೋರುತ್ತವೆ. ಸ್ನೇಹಿತರು, ಅಕ್ಕಪಕ್ಕದ ಮನೆಯವರು, ಜಾಹಿರಾತು ಮತ್ತು ಸೌಂದರ್ಯತಜ್ಞರನ್ನು ಸಂಪರ್ಕಿಸುವ ಮುನ್ನ ನುರಿತ ವೃತ್ತಿಪರರ ಸಲಹೆ ಪಡೆದು ಸೌಂದರ್ಯ ವರ್ಧಕಗಳನ್ನು ಬಳಸಬೇಕು ಎನ್ನುತ್ತಾರೆ ಚರ್ಮರೋಗ ತಜ್ಞರು. 

ಸ್ಚಿರಾಯ್ಡ್ ಗೆ ಸಂಬಂಧಪಟ್ಟಂತೆ 15ರಿಂದ 23 ವರ್ಷಗಳವರೆಗೆ ಮತ್ತು 35ರಿಂದ 45 ವರ್ಷಗಳವರೆಗಿನವರಿಗೆ ಚರ್ಮದಲ್ಲಿ ತೊಂದರೆ ಕಾಣಿಸಿಕೊಳ್ಳುವುದು ಹೆಚ್ಚು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ