ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತ್ರಿವಳಿ ತಲಾಖ್ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್ ಅನ್ನು ರದ್ದು ಪಡಿಸಿದೆ.
ತ್ರಿವಳಿ ತಲಾಖ್ ಸಂವಿದಾನ ಬಾಹಿರ ಎಂದು ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ. ಒಂದೊಮ್ಮೆ ತ್ರಿವಳಿ ತಲಾಖ್ ಬ್ಯಾನ್ ಮಾಡಬೇಕಿದ್ದರೆ ಇದಕ್ಕೆ ಕಾನೂನು ಜಾರಿಗೆ ತನ್ನಿ ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲವಾದ್ದರಿಂದ ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇನ್ನು ತ್ರಿವಳಿ ತಲಾಖ್ ನೀಡುವುದಕ್ಕೆ 6 ತಿಂಗಳ ಕಾಲ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದಕ್ಕೂ ಮೊದಲು ಇದಕ್ಕೆ ಕಾನೂನು ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳ ಬಹುಮತದ ತೀರ್ಪಿನ ಆಧಾರದ ಮೇಲೆ ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಬೇರೆ ಬೇರೆ ಧರ್ಮಕ್ಕೆ ಸೇರಿದ ನ್ಯಾ. ಖೇಹರ್, ಕುರಿಯನ್ ಜೋಸೆಫ್, ರೋಹಿಂಗ್ಟನ್ ಎಫ್ ನಾರಿಮನ್, ಉದಯ್ ಲಲಿತ್, ಎಸ್ ಅಬ್ದುಲ್ ನಜೀರ್ ನ್ಯಾಯಪೀಠ ಈ ತೀರ್ಪು ನೀಡಿದೆ.
ಈ ಹಿಂದೆ ತ್ರಿವಳಿ ತಲಾಖ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಮಹಿಳೆಯರ ಗುಂಪನ್ನು ಕೇಂದ್ರ ಸರ್ಕಾರವು ಬೆಂಬಲಿಸಿತ್ತು. ಈ ವಿಚಾರವನ್ನು ಲಿಂಗ ಸಮಾನತೆ, ಸಾಂವಿಧಾನಿಕ ನೈತಿಕತೆ ಮತ್ತು ಆತ್ಮಸಾಕ್ಷಿಯ ದೃಷ್ಟಿಯಿಂದ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿತ್ತು.
ತ್ರಿವಳಿ ತಲಾಖ್ ಎಂಬುದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಣ ಸಂಘರ್ಷ ಅಲ್ಲ. ಇದು ಮುಸ್ಲಿಂ ಸಮುದಾಯದೊಳಗಿನ ಗಂಡಸರು ಮತ್ತು ಹೆಂಗಸರ ನಡುವಣ ಸಂಘರ್ಷ ಎಂದು ಸರ್ಕಾರ ವಾದಿಸಿತ್ತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವರ್ಷಗಳ ಕಾಲ ಪ್ರೀತಿ ಮಾಡಿದ ಹುಡುಗಿಯರು ಮದುವೆ ವಿಚಾರ ಬಂದಾಗ ತಮ್ಮ ಮನಸ್ಸನ್ನು ಬದಲಿಸ್ತಾರೆ. ಪ್ರೀತಿಸಿದ ಅದೆಷ್ಟೋ ಹುಡುಗಿಯರು ಬಾಯ್ ಫ್ರೆಂಡ್ ಬಿಟ್ಟು ಬೇರೆ ಹುಡುಗನ ಕೈ ಹಿಡಿತಾರೆ. ಅಷ್ಟಕ್ಕೂ ಹುಡುಗಿಯರು ಯಾಕೆ ಹೀಗೆ ಮಾಡ್ತಾರೆ ಎಂಬ ಪ್ರಶ್ನೆ ಹುಡುಗರನ್ನು ಕಾಡದೆ ಇರುವುದಿಲ್ಲ. ಮಹಿಳೆಯರು ಎಷ್ಟು ಮುಂದುವರೆದಿದ್ದರು ತಂದೆ-ತಾಯಿ ಪ್ರೀತಿ, ಭಯ ಅವರನ್ನು ಕಾಡುತ್ತದೆ. ಪ್ರೀತಿಸಿದ ಹುಡುಗನಿಗೆ ಪಾಲಕರು ಒಲ್ಲೆ ಎಂದ್ರೆ ಭಯ ಅವ್ರನ್ನು ಕಾಡುತ್ತದೆ. ತಂದೆ-ತಾಯಿಗೆ ನೋವು ನೀಡಲು ಮನಸ್ಸು ಮಾಡದ ಹುಡುಗಿಯರು ಪ್ರೇಮಿಯಿಂದ ದೂರ…
ಯುವ ಜನರಿಗೆ ಟ್ಯಾಟೂ, ಹಚ್ಚೆಗಳು ಅಂದ್ರೆ ಸ್ವಲ್ಪ ಹೆಚ್ಚೇ ಹುಚ್ಚಿದೆ. ವಾಹನಗಳ ಮೇಲೆ ವಿಭಿನ್ನವಾದ ಸ್ಟಿಕ್ಕರ್ಗಳು ಪ್ರಯೋಗಿಸುವ ಬಗ್ಗೆಯೂ ಆಸಕ್ತಿ ಇರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರು ಮತ್ತು ಬೈಕ್ಗಳ ಮೇಲೆ ಉಗ್ರ ಸ್ವರೂಪಿ ಆಂಜನೇಯನ ಚಿತ್ರ ರಾರಾಜಿಸುತ್ತಿದೆ. ರಾಜ್ಯದ ಸಾಕಷ್ಟು ಕಡೆಗಳಲ್ಲಿ ಈ ಭಜರಂಗಿ ಓಡಾಡುತ್ತಿದ್ದಾನೆ.
ಸ್ಮಾರ್ಟ್ಫೋನ್ನಲ್ಲಿ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ಎಂ-ಆಧಾರ್ ಆ್ಯಪ್ ಅನ್ನು ಮತ್ತಷ್ಟು ಸುರಕ್ಷಿತಗೊಳಿಸಿರುವ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಹೊಸ ಆವೃತ್ತಿಯನ್ನು ಗ್ರಾಹಕರ ಬಳಕೆಗಾಗಿ ಬಿಡುಗಡೆಮಾಡಿದೆ.ಹಿಂದಿನ ಆವೃತ್ತಿಯನ್ನು ಅಳಿಸಿ,ನೂತನ ಆವೃತ್ತಿಯನ್ನು ಸ್ಮಾರ್ಟ್ಫೋನ್ಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಯುಐಡಿಎಐ ಸೂಚಿಸಿದೆ. ನೂತನ ಆವೃತ್ತಿಯ ಎಂ-ಆಧಾರ್ನಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಿವೆ. ಆಧಾರ್ ಕಾರ್ಡ್ ಡೌನ್ಲೋಡ್, ಆಫ್ಲೈನ್ ಇಕೆವೈಸಿ, ವಿಳಾಸ ಪರಿಷ್ಕರಣೆ, ಇ-ಮೇಲ್ ಪರಿಶೀಲನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಗ್ರಾಹಕರು ಎಂ-ಆಧಾರ್ನಿಂದ ಪಡೆಯಬಹುದಾಗಿದೆ. ಗುರುತು ಖಾತ್ರಿಗಾಗಿ ಆಧುನಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನುನೂತನ ಆವೃತ್ತಿಯಲ್ಲಿ ಬಳಸಲಾಗಿದ್ದು, ಇದರಿಂದ ಆಧಾರ್ ಆ್ಯಪ್ಅನ್ನು ಲಾಕ್…
ಮೆಂತ್ಯ ಸೊಪ್ಪಿನ ದೋಸೆ.ಈ ದೋಸೆ ಮಾಡಲು ಮೊದಲು ಮಾಮೂಲಿ ದೋಸೆ ಹಿಟ್ಟು ತಯಾರಿಸ ಬೇಕು.ನಂತರ ಈ ಹಿಟ್ಟಿಗೆ ಮೆಂತೆ ಸೊಪ್ಪಿನ ರುಬ್ಬಿದ ಮಸಾಲೆ ಮಿಶ್ರಣ ವನ್ನು ಎಷ್ಟು ಬೇಕೋ ಅಷ್ಟು ಸೇರಿಸಿ ದೋಸೆ ಮಾಡಬೇಕು. ದೋಸೆ ಹಿಟ್ಟು ಮಾಡಲು ಬೇಕಗುವ ಪದಾರ್ಥಗಳು. ದೋಸೆ ಅಕ್ಕಿ ಒಂದು ಬಟ್ಟಲು, ಉದ್ದಿನ ಬೇಳೆ ಕಾಲು ಬಟ್ಟಲು, ಮೆಂತ್ಯ ಕಾಳು ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ದೋಸೆ ಕಾಯಿಸಲು ಬೇಕಾಗುವಷ್ಟು.ಮಾಡುವ ವಿಧಾನ. ದೋಸೆ ಅಕ್ಕಿ . ಉದ್ದಿನ…
‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.
ದೇವರಿಗೆ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರೆದ ಭಕ್ತನೊಬ್ಬ ಅದನ್ನು ಹುಂಡಿಯಲ್ಲಿ ಹಾಕಿದ್ದಾನೆ…