ಜೀವನಶೈಲಿ

ತಾಮ್ರದ ಲೋಟದಲ್ಲಿ ನೀರು ಕುಡಿದರೆ ಏನೆಲ್ಲಾ ಪರಿಣಾಮ ಆಗುತ್ತೆ ಗೊತ್ತಾ???

1164

ಬದಲಾದ ಜೀವನ ಶೈಲಿಯಿಂದಾಗಿ ನಿತ್ಯ ನಾವು ಸ್ಟೀಲ್ ಮತ್ತು ಪ್ಲಾಸ್ಟಿಕ್ ತಟ್ಟೆ, ಲೋಟಗಳ ಉಪಯೋಗಿಸುವುದು ಹೆಚ್ಚು.

ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ  ಪ್ರಯೋಜನಗಳನ್ನು ತಿಳಿದರೆ ಇನ್ನೆಂದೂ ನೀವು ಸ್ಟೀಲ್ ಲೋಟಗಳ ಕಡೆ ತಿರುಗಿಯೂ ನೋಡುವುದಿಲ್ಲ..

ಹೌದು, ದಿನ ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಮಾರಕ ಕ್ಯಾನ್ಸರ್ ರೋಗದಿಂದಲೂ ನಾವು ದೂರವಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಕೇವಲ ಇದು ಮಾತ್ರವಲ್ಲದೇ ಅಜೀರ್ಣ, ಬೊಜ್ಜಿನ ಸಮಸ್ಯೆ ಕೂಡ  ಇದರಿಂದ ಬಗೆಹರಿಯುತ್ತದೆ. ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ ಪ್ರಮುಖ ಪ್ರಯೋಜನಗಳ ಪಟ್ಟಿ ಇಲ್ಲಿದೆ.

1.ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಊಟದ ಬಳಿಕ ಅಥವಾ ಇತರೆ ಸಂದರ್ಭಗಳಲ್ಲಿ ತಾಮ್ರದ ಚೊಂಬು ಅಥವಾ ತಾಮ್ರದ ಲೋಟಗಳಲ್ಲಿ ನೀರು ಕುಡಿಯುವುದರಿಂದ ಅದರಲ್ಲಿನ ಅಂಶಗಳು ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಅಂತೆಯೇ  ಹೊಟ್ಟೆಯೊಳಗಿನ ಉರಿಯನ್ನು ನಿಯಂತ್ರಿಸುತ್ತದೆ. ಆ ಮೂಲಕ ದೇಹದ ಜೀರ್ಣ ಕ್ರಿಯೆಯನ್ನು ಇದು ಉತ್ತಮಪಡಿಸುತ್ತದೆ.

2.ಬೊಜ್ಜಿನ ಸಮಸ್ಯೆಯಿಂದ ಮುಕ್ತಿ

ಬೊಜ್ಜಿನಿಂದ ಬಳಲುತ್ತಿರುವ ಮಂದಿ ನಿತ್ಯ ಡಯಟ್ ಹಾಗೂ ವ್ಯಾಯಾಮ ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದು ದುಃಖ ಪಡುತ್ತಾರೆ. ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಅಧಿಕ ಬೊಜ್ಜು ಕೂಡ  ನಿಯಂತ್ರಣಕ್ಕೆ ಬರುತ್ತದೆ. ನೀರಿನಲ್ಲಿರುವ ತಾಮ್ರದ ಅಂಶ ದೇಹದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಬೊಜ್ಜು ಶೇಖರಣೆಯಾಗದಂತೆ ತಡೆಯುತ್ತದೆ. ಆ ಮೂಲಕ ಆಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ.

3.ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ತಾಮ್ರದ ಅಂಶ ಮಾನವನ ದೇಹದಲ್ಲಿ ರೋಗ ನಿರೋಧಕ ಅಂಶವನ್ನು ಹೆಚ್ಚಿಸುತ್ತದೆ. ಆ ಮೂಲಕ ಯಾವುದೇ ರೋಗಗಳು ಸುಲಭವಾಗಿ ದೇಹಕ್ಕೆ ತಾಗದಂತೆ ನೋಡಿಕೊಳ್ಳುತ್ತದೆ.

ಹಿಂದಿನ ಕಾಲದಲ್ಲಿ ಈಗಿನ ಸ್ಟೀಲ್ ನಾಣ್ಯಗಳ  ಬದಲಿಗೆ ತಾಮ್ರ ಮತ್ತು ಚಿನ್ನದ ನಾಣ್ಯಗಳು ಚಾಲ್ತಿಯಲ್ಲಿದ್ದವು. ತಾಮ್ರ ಮತ್ತು ಚಿನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿದಿದ್ದ ಅಂದಿನ ವೈದ್ಯರು ಮತ್ತು ಧರ್ಮ ಪ್ರಚಾರಕರು ದೇವಾಲಯಗಳ ಕಲ್ಯಾಣಿ ಹಾಗೂ ಪವಿತ್ರ  ನದಿಗಳಲ್ಲಿ ನಾಣ್ಯವನ್ನು ಹಾಕಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಿದ್ದರು. ಆ ಮೂಲಕ ಕಲ್ಯಾಣಿಯ ನೀರು ಮತ್ತು ನದಿಯ ನೀರು ಕುಡಿಯುವ ಮಂದಿ ಯಾವುದೇ ರೋಗಗಳಿಗೆ ತುತ್ತಾಗುವುದಿಲ್ಲ ಎಂಬುದು ಅವರ  ಭಾವನೆಯಾಗಿತ್ತು.

4.ವಯಸ್ಸನ್ನು ಮರೆಮಾಚುತ್ತದೆ

ತಾಮ್ರದಲ್ಲಿ ಆ್ಯಂಟಿ ಆಕ್ಸಿಂಡೆಂಟ್ ಅಂಶ ಯಥೇಚ್ಛವಾಗಿದ್ದು, ಇದು ದೇಹದ ಅನಾವಶ್ಯಕ ಬೊಜ್ಜಿನ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಅಂತೆಯೇ ದೇಹ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ತೊಡೆದು ಹಾಕುವ  ಶಕ್ತಿ ತಾಮ್ರಕ್ಕೆ ಇದ್ದು, ನಿರ್ಜೀವ ಜೀವಕೋಶಗಳನ್ನು ತೊಡೆದುಹಾಕಿ ಹೊಸ ಜೀವಕೋಶಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

5.ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ

ತಾಮ್ರದ ಅಂಶ ಹೃದಯಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಅಧಿಕ ಬೊಜ್ಜು ನಿಯಂತ್ರಣದ ಮೂಲಕ ಮತ್ತು ಹೃದಯದ ರಕ್ತನಾಳಗಳ ಶುದ್ದೀಕರಣದ ಮೂಲತ ಹೃದಯ ಆರೋಗ್ಯವಾಗಿರುವಂತೆ ತಾಮ್ರದ ಅಂಶ  ನೋಡಿಕೊಳ್ಳುತ್ತದೆ. ಅಮೆರಿಕನ್ ವೈದ್ಯರು ಹೇಳಿರುವಂತೆ ತಾಮ್ರ ಬಿಪಿಯನ್ನು ಕೂಡ ನಿಯಂತ್ರಣದಲ್ಲಿಡುತ್ತದೆಯಂತೆ.

6.ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಇನ್ನು ತಾಮ್ರದಲ್ಲಿನ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾರಕ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಅಂತೆಯೇ ಭವಿಷ್ಯದಲ್ಲಿ ಕ್ಯಾನ್ಸರ್ ರೋಗ ಬರದಂತೆಯೂ ಇದು ತಡೆಯುತ್ತದೆ.

7. ಥೈರಾಯ್ಡ್ ಉಪಶಮನದಲ್ಲಿ ಪರಿಣಾಮಕಾರಿ

ಪ್ರಸ್ತುತ ಸಮಾಜದಲ್ಲಿ ಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ತಿನ್ನುವ ಆಹಾರದಲ್ಲಿ ತಾಮ್ರದ ಅಂಶದ ಕೊರತೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ನಾವು ನಿತ್ಯ ತಾಮ್ರದ ಲೋಟದಲ್ಲಿ ನೀರು  ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶ ಸೇರುತ್ತದೆ. ಇದು ಥೈರಾಯ್ಡ್ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

8.ಚರ್ಮರೋಗ ಸಮಸ್ಯೆಯಲ್ಲೂ ಪರಿಣಾಮಕಾರಿ

ತಾಮ್ರದಲ್ಲಿರುವ ಅಂಶಗಳು ಮಾನವನ ಚರ್ಮಕ್ಕೆ ಯಾವುದೇ ರೀತಿಯ ಸಮಸ್ಯೆ ಕಾಡದಂತೆ ತಡೆಯುತ್ತದೆ. ಅಂತೆಯೇ ಸಂಧಿವಾತ ಮತ್ತು ಸಂಧಿನೋವಿನಲ್ಲೂ ಇದು ಪರಿಣಾಮಕಾರಿಯಾಗಬಲ್ಲದು ಎಂದು ವೈದ್ಯರು ಹೇಳಿದ್ದಾರೆ.

9.ರಕ್ತ ಹೀನತೆ ಸಮಸ್ಯೆ ದೂರ

ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ದೇಹದ ಬೊಜ್ಜನ್ನು ನಿಯಂತ್ರಿಸುವ ಮೂಲಕ ದೇಹ ಸದಾಕಾಲ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಅಂತೆಯೇ ಹೃದಯ  ಆರೋಗ್ಯದಲ್ಲೂ ತಾಮ್ರ ಪರಿಣಾಮಕಾರಿಯಾಗಿದ್ದು, ಹೃದಯ ನಾಳಗಳು ಸದಾಕಾಲ ಚಟುವಟಿಕೆಯಿಂದ ನೋಡಿಕೊಳ್ಳುತ್ತದೆ. ಆ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುತ್ತದೆ.  ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ದೂರಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಗೋವಿನ ಬಾಲದ ಒಂದು ಕೂದಲಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ, ಗೋಮಾತೆಯ ಮಹಿಮೆ.

    ಪಶು ಪಕ್ಷಿಗಳನ್ನ ಆರಾಧನೆ ಮಾಡುವ ಸಂಪ್ರದಾಯ ನಮ್ಮ ಹಿಂದುಗಳದ್ದು, ನಮ್ಮ ಪೂರ್ವಜರ ಕಾಲದಲ್ಲಿಂದ ಗೋವುಗಳ ಪೂಜೆಯನ್ನ ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಇನ್ನು ಗೋವನ್ನ ಕಾಮಧೇನು ಎಂದು ಕರೆಯುತ್ತಾರೆ, ಗೋವಿಗೆ ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನ ನೀಡುತ್ತಾ ನಮಸ್ಕಾರ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಪದ್ಧತಿಯಾಗಿದೆ. ಇನ್ನು ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತದೆ, ಇನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಗೋವು ಕಾಣಿಸಿಕೊಂಡರೆ ಅದೂ ಶುಭ ಸೂಚನೆ ಎಂದು ಹೇಳುತ್ತಾರೆ ಪಂಡಿತರು….

  • ತಂತ್ರಜ್ಞಾನ

    ಜಗತ್ತಿನ ಅತೀ ಸಣ್ಣ ಉಪಗ್ರಹವನ್ನು ತಯಾರಿಸಿದ ಈ ಬಾಲಕನ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ತಮಿಳುನಾಡಿನ ಪಲ್ಲಾಪಟ್ಟಿ ಗ್ರಾಮದ 18 ವರ್ಷದ ಬಾಲಕ ರಿಫತ್‍ ಶಾರೂಕ್ 64 ಗ್ರಾಮ್ ತೂಕದ ಸ್ಯಾಟ್‍ಲೈಟ್‍ ರೂಪಿಸಿದ್ದು, ಇದು ವಿಶ್ವದ ಅತ್ಯಂತ ಕಿರಿಯ ಸ್ಯಾಟ್‍ಲೈಟ್‍ ಎಂಬ ಹಿರಿಮೆಗೆ ಪಾತ್ರವಾಗಿದೆ.

  • ಸುದ್ದಿ

    ಬಿಗ್ ಬ್ರೇಕಿಂಗ್ ನ್ಯೂಸ್ : ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್…!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಳ್ಳಂಬೆಳಿಗ್ಗೆ ಸೆಲೆಬ್ರಿಟಿ ಒಬ್ಬರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಮಧ್ಯಾಹ್ನ ಫೇಸ್ ಬುಕ್ ಲೈವ್ ಗೆ ಬಂದು ಅದನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಅಂದ ಹಾಗೆ, ಆ ಸೆಲೆಬ್ರಿಟಿ ಸಿನಿಮಾದವರೇ ಅಥವಾ ರಾಜಕೀಯದವರೇ ಎನ್ನುವುದು ಕುತೂಹಲ ಮೂಡಿಸಿದೆ. ‘ಕುರುಕ್ಷೇತ್ರ’ ಸಿನಿಮಾದ ಆಡಿಯೋ ಸಂದರ್ಭದಲ್ಲಿ ದರ್ಶನ್ ಫೋಟೋ ಇರಲಿಲ್ಲ ಎಂಬ ಆರೋಪ ಅಭಿಮಾನಿಗಳಿಂದ ಕೇಳಿಬಂದಿತ್ತು. ಅಲ್ಲದೆ, ಇತ್ತೀಚೆಗೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದರು. ಇಂದು ಅವರು…

  • ಸುದ್ದಿ

    ಸದ್ಯದಲ್ಲೇ ಜೆಡಿಎಸ್‍ಗೆ ಮತ್ತೊಂದು ಬಿಗ್ ಶಾಕ್ ಕೊಡಲು ಬಿಜೆಪಿ ತಯಾರಿ…!

    ಬೆಂಗಳೂರು, ಆ.4- ಈಗಾಗಲೇ ಮೂವರು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆದಿರುವ ಬಿಜೆಪಿ ಜೆಡಿಎಸ್‍ಗೆ ಮತ್ತೊಂದು ಭಾರೀ ಶಾಕ್ ಕೊಡಲು ಸಜ್ಜಾಗಿದೆ. ಜೆಡಿಎಸ್‍ನ ಎಲ್ಲ 23 ಶಾಸಕರನ್ನು ಒಂದೇ ಬಂಚ್‍ನಲ್ಲಿ ಸೆಳೆಯಲು ಮಹತ್ವದ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರ ಪತನದ ನಂತರ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ತನ್ನತ್ತ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಎಲ್ಲ 23 ಶಾಸಕರನ್ನು ಬಿಜೆಪಿಗೆ ಕರೆದೊಯ್ಯಲು ಇಬ್ಬರು ಮಾಜಿ ಸಚಿವರೇ ಮುಂದಾಳತ್ವ ವಹಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ…

  • ಆರೋಗ್ಯ

    10 ಆರೋಗ್ಯ ಸೂಚನೆಗಳು/ ಸಲಹೆ

    ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು: ನಮ್ಮ ಆರೋಗ್ಯ ಉತ್ತಮ ವಾಗಿರಲು ಇವು ಮುಖ್ಯ 1. ಬಿಪಿ: 120/80 2. ನಾಡಿ: 70 – 100 3. ತಾಪಮಾನ: 36.8 – 37 4. ಉಸಿರು: 12-16 5. ಹಿಮೋಗ್ಲೋಬಿನ್: ಪುರುಷ -13.50-18 ಹೆಣ್ಣು – 11.50 – 16 6. ಕೊಲೆಸ್ಟ್ರಾಲ್: 130 – 200 7. ಪೊಟ್ಯಾಸಿಯಮ್: 3.50 – 5 8. ಸೋಡಿಯಂ: 135 – 145 9. ಟ್ರೈಗ್ಲಿಸರೈಡ್‌ಗಳು: 220 10. ದೇಹದಲ್ಲಿನ ರಕ್ತದ…

  • ಸುದ್ದಿ

    ಮೋದಿ ಅಧಿಕಾರಕ್ಕೆ ಬಂದ ನಂತರ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ…!

    ನವದೆಹಲಿ, ಮೇ 02: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಗಳ ಏರಿಕೆ ಮಾಡದೆ ನಷ್ಟ ಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಈಗ ಹೊಸ ಸರ್ಕಾರ ಸ್ಥಾಪನೆಯಾದ ಬಳಿಕ, ಹಂತ ಹಂತವಾಗಿ ಬೆಲೆ ಏರಿಕೆ ಮಾಡಲು ಆರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂದುವರೆದಿದೆ. ಈಗ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ…