ತಂತ್ರಜ್ಞಾನ

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ ! ತಿಳಿಯಲು ಇದನ್ನು ಓದಿ..

2143

ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಹೊಸ ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.

ಅಧಿಸೂಚನೆಯ ಪ್ರಕಾರ, “2017ರ ಡಿಸೆಂಬರ್ 1ರ ನಂತರ ಮಾರಾಟವಾಗುವ ಎಲ್ಲಾ ಮೋಟಾರ್ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಲಾಗುವುದು. ಇದು ಕಾಲಕಾಲಕ್ಕೆ ವಾಹನ ತಯಾರಕರಿಂದ ಅಥವಾ ಅಧಿಕೃತ ವ್ಯಾಪಾರಿಯಿಂದ ಕೇಂದ್ರೀಕೃತ ಸರ್ಕಾರಕ್ಕೆ ಸೂಚಿಸಲ್ಪಡುತ್ತದೆ” ಎಂಬ ಮಾಹಿತಿ ಇದೆ.
ಈ ಫಾಸ್ಟ್‌ಟ್ಯಾಗ್ ಅಂದ್ರೆ ಏನು ?

ಇದನ್ನು ನಿಮ್ಮ ಕಾರಿನಲ್ಲಿ ಅಳವಡಿಸಿದರೆ ಹೇಗೆ ಕಾರ್ಯನಿರ್ವಹಿಸುತ್ತದೆ? ನಿಮ್ಮ ಕಾರಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆಯ ಪ್ರಾಮುಖ್ಯತೆಯನ್ನು ನಾವು ವಿವರವಾಗಿ ಅರ್ಥಮಾಡಿಕೊಳ್ಳೋಣ ಬನ್ನಿ…


ಫಾಸ್ಟ್ ಟ್ಯಾಗ್ ಎಂದರೇನು? ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್(ಆರ್‌ಎಫ್‌ಐಡಿ) ತಂತ್ರಜ್ಞಾನವನ್ನು ಬಳಸಿಕೊಂಡು ಈ ಫಾಸ್ಟ್ ಟ್ಯಾಗ್ ಸಾಧನವು ಕಾರ್ಯ ನಿರ್ವಹಿಸಲಿದ್ದು, ಈ ಮೊದಲೇ ಪಾವತಿಸಿದ ಹಣ ಅಥವಾ ಉಳಿತಾಯ ಖಾತೆಯನ್ನು ಬಳಸಿಕೊಂಡು ಟೋಲ್ ಫೀ ಪಾವತಿ ಮಾಡಲು ಬಳಸುತ್ತದೆ.
ಈ ಫಾಸ್ಟ್‌ಟ್ಯಾಗ್ ಸಾಧನಕ್ಕೆ ಸಂಪರ್ಕಿಸಬಹುದಾದ ಟ್ಯಾಗನ್ನು ನಾಲ್ಕು-ಚಕ್ರಗಳ ವಾಹನದ ವಿಂಡ್‌ಸ್ಕ್ರೀನ್ ಮೇಲೆ ಜೋಡಿಸಲಾಗುತ್ತದೆ. ಈ ಟ್ಯಾಗ್, ಸಾಧನದ ಜೊತೆ ಸಂಪರ್ಕ ಸಾಧಿಸುವ ಮೂಲಕ ಹಣವನ್ನು ಪಾವತಿಯನ್ನು ಮಾಡುತ್ತದೆ. ಇದರಿಂದಾಗಿ ವಾಹನವನ್ನು ಟೋಲ್‌ನಲ್ಲಿ ನಿಲ್ಲಿಸದೆ, ಪ್ರಯಾಣಿಸಬಹುದಾದ ಅನುಕೂಲತೆಯನ್ನು ಪಡೆದುಕೊಳ್ಳಲಿದೆ.

ವಾಹನ ಮಾರಾಟಗಾರ ಫಾಸ್ಟ್‌ಟ್ಯಾಗ್ ಅಳವಡಿಸದೇ ಇದ್ದಾರೆ ಏನ್ ಮಾಡಬೇಕು ? ವಾಹನ ತಯಾರಕ ಸಂಸ್ಥೆಯು ವಾಹನಗಳುನ್ನು ವಿಂಡ್‌ಸ್ಕ್ರೀನ್ ಇಲ್ಲದೆ, ಕೇವಲ ಚಾರ್ಸಿ ಇರುವ ವಾಹನವನ್ನು ಮಾರಾಟ ಮಾಡಿದರೆ ಸಾಧನವನ್ನು ನೋಂದಣಿಯಾಗುವ ಮುನ್ನ ಸ್ವತಃ ವಾಹನದ ಮಾಲೀಕ ವಿಂಡ್‌ಸ್ಕ್ರೀನ್ ಮೇಲೆ ಅಳವಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ಡಿಸೆಂಬರ್ 1ರಿಂದ ಫಾಸ್ಟ್‌ಟ್ಯಾಗ್ ಜಾರಿಗೆ ತರುವ ನಿರ್ಧಾರ ಮೆಚ್ಚುವಂತದ್ದು, ಎಷ್ಟೋ ಭಾರಿ ಕೇವಲ ಟೋಲ್ ಶುಲ್ಕ ಕಟ್ಟಲು ವಾಹನ ಸವಾರರು 15 ರಿಂದ 20 ನಿಮಿಷದಷ್ಟು ಸಮಯ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಫಾಸ್ಟ್‌ಟ್ಯಾಗ್ ನಿರ್ಧಾರ ಟೋಲ್‌ಗಳಲ್ಲಿ ಆಗುವಂತಹ ಟ್ರಾಫಿಕ್ ಕಡಿಮೆಗೊಳಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ