ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು?

ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ ಕಂಪನಿಗಳು. ಮೊದಲೇ ಹೇಳಿದಂತೆ 2007 ರ ವರೆಗೆ ಜಗತ್ತನ್ನ ಆಳುತ್ತಿದ್ದದ್ದು ಬ್ಯಾಂಕಿಂಗ್ ವ್ಯವಸ್ಥೆ . ಇದೀಗ ಇದು ಟೆಕ್ನಾಲಜಿ ಕಂಪನಿಗಳ ಕೈ ಸೇರಿದೆ . ಜಗತ್ತು ಹೆಚ್ಚೆಚ್ಚು ನಗದನ್ನ ತೊರೆದು ಡಿಜಿಟಲ್ ಹಣವನ್ನ ಅಪ್ಪುವುದಕ್ಕೆ ಶುರು ಮಾಡಿದೆ. ಹಾಗಾಗಿ ಟೆಕ್ನಾಲಜಿ ಕಂಪನಿಗಳು ಹಣಕಾಸು ವಹಿವಾಟಿನ ಮೇಲೆ ತಮ್ಮ ಪ್ರಭಾವವನ್ನ ಹೆಚ್ಚು ಮಾಡಿಕೊಂಡಿವೆ. ಇಂದು ಜಗತ್ತನ್ನ ಆಳುತ್ತಿರುವ ಪ್ರಮುಖ ಟೆಕ್ನಾಲಜಿ ಕಂಪೆನಿಗಳಲ್ಲಿ ಐದು ಅತ್ಯಂತ ಪ್ರಮುಖವಾದವು. ಅವೆಂದರೆ 1.ಗೂಗಲ್ 2.ಆಪಲ್ 3.ಮೈಕ್ರೋಸಾಫ್ಟ್ 4. ಅಮೆಜಾನ್ 5.ಫೇಸ್ಬುಕ್.ಇಷ್ಟಕ್ಕೂ ನಮಗೇಕೆ ಬ್ಯಾಂಕ್ಗಳ ಮೇಲೆ ಅಷ್ಟೊಂದು ವ್ಯಾಮೋಹ ? ಬ್ಯಾಂಕ್ ಏನು ಬದಲಿಸಲಾಗದ ಶಾಶ್ವತ ವ್ಯವಸ್ಥೆಯೇನು ಅಲ್ಲ . ಬ್ಯಾಂಕ್ ಅಂದರೇನು ? ಬೇರೊಬ್ಬರ ಹಣವನ್ನ ಪಡೆದು ಇನ್ನೊಬ್ಬರಿಗೆ ಸಾಲ ಕೊಡುವ ದಲ್ಲಾಳಿ ಸಂಸ್ಥೆಯಷ್ಟೇ . ತಾನು ಹಣ ಪಡೆದವರಿಗೆ ಒಂದಷ್ಟು ಕೊಟ್ಟು ತಾನು ಕೊಟ್ಟವರಿಂದ ಒಂದಷ್ಟು ವಸೂಲಿ ಮಾಡಿ ಮಧ್ಯದಲ್ಲಿ ಒಂದಷ್ಟು ಹಣವನ್ನ ಲಾಭವನ್ನಾಗಿ ಮಾಡಿಕೊಳ್ಳುವ ಒಂದು ದಲ್ಲಾಳಿ ಮನಸ್ಥಿತಿಯ ಸಂಸ್ಥೆ ಇಷ್ಟು ಬಿಟ್ಟು ಬೇರೇನೂ ಅಲ್ಲ . ಇದೆ ಕಾರಣಕ್ಕೆ ಬ್ಯಾಂಕ್ಗಳು ನೇಪಥ್ಯಕ್ಕೆ ಸೇರುತ್ತದೆ ಅಂದದ್ದು . ಗಮನಿಸಿ ನೋಡಿ ಈ ಕೆಲಸವನ್ನ ಬ್ಯಾಂಕಿನ ಸಹಾಯವಿಲ್ಲದೆ ಟೆಕ್ನಾಲಜಿ ಕಂಪನಿಗಳು ಮಾಡಬಲ್ಲವು .

ಆದರೆ ಇಂದಿನ ಕಾಲಘಟ್ಟದಲ್ಲಿ ಬ್ಯಾಂಕ್ ಇದೆ ಕಾರ್ಯವನ್ನ ಟೆಕ್ನಾಲಜಿ ಸಂಸ್ಥೆಗಳ ಸಹಾಯವಿಲ್ಲದೆ ಮಾಡಲಾರವು . ಅಂದರೆ ಸರಳವಾಗಿ ಬ್ಯಾಂಕಿಗೆ ಟೆಕ್ನಾಲಜಿ ಕಂಪನಿ ಬೇಕು ಟೆಕ್ನಾಲಜಿ ಕಂಪನಿಗೆ ಬ್ಯಾಂಕಿನ ಅವಶ್ಯಕತೆ ಇಲ್ಲ . ಇಂತಹ ಸಂದರ್ಭದಲ್ಲಿ ಬ್ಯಾಂಕ್ಗಳು ಹೇಗೆ ತಾನೇ ಉಳಿದಾವು ? ಬ್ಯಾಂಕ್ ಎನ್ನುವುದು ಇಂದಲ್ಲ ನಾಳೆ ತೆರೆಮರೆಗೆ ಸರಿಯಲಿರುವ ಹಳೆಯ ಪಾತ್ರಧಾರಿ ಅಷ್ಟೇ . ಹಾಗಾದರೆ ಟೆಕ್ನಾಲಜಿ ಕಂಪನಿಗಳು ಮುಳುಗುವುದಿಲ್ಲವೇ ? ಎನ್ನುವ ಪ್ರಶ್ನೆ ಕೂಡ ಸಹಜವಾಗಿ ಓದುಗರಲ್ಲಿ ಹುಟ್ಟುತ್ತದೆ . ಇದಕ್ಕೆ ಉತ್ತರ ಬಹಳ ಸರಳ . ಗಮನಿಸಿ ನೋಡಿ 2007 ಕ್ಕೂ ಮುಂಚೆ ಬ್ಯಾಂಕಿನ ಬಗ್ಗೆ ಮೇಲಿನ ಸಾಲಿನಲ್ಲಿ ಹೇಳಿದ ಹಾಗೆ ಹೇಳಿದ್ದರೆ ಜನ ಹಾಗೆ ಹೇಳಿದವನ ಮಾತನ್ನ ಸಂಶಯದಿಂದ ನೋಡುತ್ತಿದ್ದರು . ಏಕೆಂದರೆ ಅಂದಿನ ಕಾಲಘಟ್ಟದಲ್ಲಿ ಅದೇ ವ್ಯವಸ್ಥೆಯಾಗಿತ್ತು . ಅರ್ಥ ಇಷ್ಟೇ ಟೆಕ್ನಾಲಜಿ ಕಂಪನಿಗಳು ಸದ್ಯದ ನಮ್ಮ ಜಗತ್ತಿನ ಹೊಸ ವ್ಯವಸ್ಥೆ . ಅವು ತಮ್ಮ ಆಟದ ಅತ್ಯುನ್ನತ ಸ್ಥಿತಿಯನ್ನ ತಲುಪುವ ಹಂತದಲ್ಲಿದೆ . ಪರಿಸ್ಥಿತಿ ಹೀಗಿರುವಾಗ ಅವುಗಳ ಕುಸಿತದ ಬಗ್ಗೆ ಈಗಲೇ ಮಾತಾಡುವುದಕ್ಕೆ ಇದು ಸರಿಯಾದ ಸಮಯವಲ್ಲ .

ಅಲ್ಲದೆ ಟೆಕ್ನಾಲಜಿ ಕಂಪನಿಗಳು ತಮ್ಮ ಲಾಭದ ಬಹು ದೊಡ್ಡ ಮೊತ್ತವನ್ನ ರಿಸೆರ್ಚ್ ಅಂಡ್ ಡೆವಲಪ್ಮೆಂಟ್ ಗಾಗಿ ವಿನಿಯೋಗಿಸುತ್ತವೆ . ಮುಂದಿನ ಹತ್ತು ವರ್ಷದಲ್ಲಿ ಜಗತ್ತಿನಲ್ಲಿ ಆಗಬಹದುದಾದ ಬದಲಾವಣೆಗಳ ಊಹೆ ಮಾಡಿಕೊಂಡು ಅದಕ್ಕೆ ಬೇಕಾದ ಸಿದ್ಧತೆಗಳನ್ನ ನೆಡೆಸುತ್ತದೆ . ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಮುದೊಂದು ದಿನ ಹೀಗಾಗಬಹದು ಎನ್ನುವ ಪರಿಕಲ್ಪನೆ ಕೂಡ ಇಟ್ಟುಕೊಂಡಿರಲಿಲ್ಲ . ಹೀಗಾಗಿ ಅವು ಸೋತು ಟೆಕ್ನಾಲಜಿ ಕಂಪನಿಗಳಿಗೆ ಅಧಿಕಾರದ ಚುಕ್ಕಾಣಿ ಬಿಟ್ಟು ಕೊಡಲಿವೆ .
ಕೊನೆ ಮಾತು : ಮೈಕ್ರೋಸಾಫ್ಟ್ ಸಂಸ್ಥೆಯ ಸ್ಥಾಪಕ ಬಿಲ್ ಗೇಟ್ಸ್ ಹೇಳುತ್ತಾರೆ ‘ ನಾವು ಮುಂದಿನ ಎರಡು ವರ್ಷದಲ್ಲಿ ಸಾಧಿಸಬಹುದಾದ ವಿಷಯಗಳನ್ನ ಅತಿಯಾಗಿ ವರ್ಣಿಸಿ ಹೇಳುತ್ತೇವೆ . ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಸಾಧಿಸಬಹದುದಾದ ವಿಷಯಗಳ ಬಗ್ಗೆ ನಮಗೆ ನಿಖರತೆಯಿಲ್ಲ ಹೀಗಾಗಿ ಅವುಗಳನ್ನ ನಾವು ಕಡೆಗಾಣಿಸುತ್ತೇವೆ ‘ . ಟೆಕ್ನಾಲಜಿ ಕಂಪನಿಗಳು ನಮ್ಮನ್ನಾಳುವ ಸಂಸ್ಥೆಗಳು ಇದರಲ್ಲಿ ಸಂಶಯ ಬೇಡ . .
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ…
ಗುರು ಅಂದರೆ ಬರಿ ಶಿಕ್ಷಣವನ್ನು ನೀಡುವವರು ಮಾತ್ರ ಅಲ್ಲ. ತಂದೆ ತಾಯಿಗಳ ರೀತಿಯಲ್ಲಿ ಸಹಕರಿಸುವವರು ಎನ್ನಲಾಗುತ್ತದೆ. ಪ್ರತಿಯೊಂದು ಹಂತಕ್ಕೂ ದಾರಿಯನ್ನು ತೋರಿಸುವವರು ಹಾಗು ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕ ಬೇಕು ಅನ್ನೋದನ್ನ ಕಲಿಸಿ ಕೊಡುವವರು. ಈ ಪ್ರಪಂಚದಲ್ಲಿ ಶಿಕ್ಷಕರಿಗೆ ಒಂದು ಸ್ಥಾನವಿದೆ.
ದಿಪಾವಳಿ ಯಾಕೆ 21 ದಿನಗಳ ನಂತರ ಆಚರಿಸಲಾಗುತ್ತದೆ?
ಇದು ನಿಜನ? ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ
ಭಾರತವು ವಿಭಿನ್ನ ಧರ್ಮಗಳ, ನಂಬಿಕೆಗಳು, ಆಚರಣೆಗಳ ನೆಲೆಬೀಡಾಗಿದ್ದು, ಇಲ್ಲಿ ಎಷ್ಟೋ ಸಾಧು,ಸಂತರು,ಮಹಾನ್ ದಾರ್ಶನಿಕರು ಜನಿಸಿದ್ದಾರೆ. ತಮ್ಮ ಸಾಮಾನ್ಯ ಜೀವನ ಕ್ರಮದಿಂದ ಧರ್ಮವನ್ನು ಭೋದಿಸಿ,ಪವಾಡಗಳನ್ನು ಮಾಡಿ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ.
ತರಕಾರಿಗಳಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ಮಾತ್ರ ಲಾಭ ನೀಡುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಪ್ರತಿಯೊಂದು ತರಕಾರಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ನಮ್ಮ ತ್ವಚೆ ಹಾಗೂ ಕೂದಲಿಗೆ ತುಂಬಾ ಉಪಯೋಗಕಾರಿ.
ಚಾಲನೆಗೆ ಬಂದ ಕೆಲವೇ ತಿಂಗಳುಗಳಲ್ಲಿ ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದ ಜಿಯೋ ಇದೀಗ ತನ್ನ ಹೊರೆಯನ್ನ ತಗ್ಗಿಸಲು ಗ್ರಾಹಕರಿಗೆ ಶಾಕ್ ಕೊಡಲು ರೆಡಿಯಾಗಿದೆ. ಈಗಾಗಲೇ ದೇಶದ ಬಹುದೊಡ್ಡ ಟೆಲಿಕಾಂ ಸಂಸ್ಥೆಗಳಾದ ಏರ್ಟೆಲ್, ವೋಡಾಪೋನ್,ಐಡಿಯಾ ಬಾಕಿ ಮೊತ್ತವನ್ನು ಹಿಂದಿರುಗಿಸಲು ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿವೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ಏರ್ಟೆಲ್ ವೊಡಾಫೋನ್-ಐಡಿಯಾ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಹಣವನ್ನು ಪಾವತಿಸಬೇಕಿದೆ. ಇದೇ ಹಾದಿಯಲ್ಲಿ ಸಾಗುವ…