ಸಂಬಂಧ

ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ !!!

95

          ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಮನೆನಾದ್ರೂ ಇದೆ. ಪ್ಲೀಸ್ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಬಾಲಕಿ ಸಾವನ್ನಪ್ಪಿದ್ದಾಳೆ.

ಆಂಧ್ರಪ್ರದೇಶ ಮೂಲದ ಬಾಲಕಿಯ ಹೆಸರು ಸಾಯಿ ಶ್ರೀ. ಈಕೆಗೆ ಬೋನ್ ಮ್ಯಾರೋ ಕ್ಯಾನ್ಸರ್ ಇದೆ ಎಂದು 2016 ಆಗಸ್ಟ್ 27ರಂರಂದು ವೈದ್ಯರು ಹೇಳಿದ್ದರು. ಆದ್ರೆ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಅಮ್ಮನ ಬಳಿ ಇಲ್ಲ. ಮನೆ ಮಾರಿ ಹಣ ಕೊಡಿ. ಅಮ್ಮನಿಗೆ ಹಣ ಕೊಡಲು ಇಷ್ಟವಿಲ್ಲ ಅಂದ್ರೆ ನೀವೇ ಬಂದು ಆಸ್ಪತ್ರೆಯಲ್ಲಿ ಹಣ ಕಟ್ಟಿ ಎಂದು ಸಾಯಿ ಶ್ರೀ ವಿಡಿಯೋ ಮೂಲಕ ತನ್ನ ತಂದೆಗೆ ಹಣ ನೀಡುವಂತೆ ಕೇಳಿದ್ದಳು.

ಸಾಯಿ ಶ್ರೀ ತಂದೆ ಮದಮ್ಶೆಟ್ಟಿ ಶಿವಕುಮಾರ್ ತನ್ನ ಪತ್ನಿ ಸುಮಾ ಶ್ರೀ ಮತ್ತು ಮಗಳಿಂದ 8 ವರ್ಷದ ಹಿಂದೆಯೇ ದೂರವಾಗಿದ್ರು. ವರದಿಯ ಪ್ರಕಾರ ಸಾಯಿ ಶ್ರೀ ತನ್ನ ತಾಯಿಯೊಂದಿಗೆ ವಿಜಯವಾಡದಲ್ಲಿ ನೆಲೆಸಿದ್ದು, ತಂದೆ ಬೆಂಗಳೂರಿನಲ್ಲಿದ್ದರು ಎನ್ನಲಾಗಿದೆ.

ಶಿವ ಕುಮಾರ್ ಮತ್ತು ಸುಮಾ ದೂರವಾಗುವುದಕ್ಕೂ ಮುನ್ನ ಮಗಳಾದ ಸಾಯಿ ಶ್ರೀ ಹೆಸರಲ್ಲಿ ಒಂದು ಫ್ಲಾಟ್ ಖರೀದಿಸಿದ್ರು. ಮನೆ ಮಾರಿ ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮುಂದಾದಾಗ ಗಂಡ ಶಿವ ಕುಮಾರ್, ತೆಲುಗು ದೇಶಂ ಪಾರ್ಟಿಯ ಶಾಸಕ ಬೋಂಡಾ ಉಮಾಮಹೇಶ್ವರ್ ರಾವ್ ಅವರ ನೆರವಿನಿಂದ ಮನೆ ಮಾರಾಟ ಮಾಡದಂತೆ ತಡೆದಿದ್ದರು ಎಂದು ಸುಮಾ ಆರೋಪಿಸಿದ್ದಾರೆ.

ಶಾಸಕರ ಬೆಂಬಲ ಇದ್ದ ಕಾರಣ ಶಿವ ಕುಮಾರ್ ಕಳಿದಿದ್ದ ಗೂಂಡಾಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಆಂಧ್ರಪ್ರದೇಶದ ಪೊಲೀಸರು ನಿರಾಕರಿಸಿದ್ರು ಎಂದು ಸುದ್ದಿ ಸಂಸ್ಥೆ ಎಎನ್ ವರದಿ ಮಾಡಿದೆ.

ಬಗ್ಗೆ ಹೇಳಿಕೆ ನೀಡಿರೋ ಬಾಲಾಲ ಹಕ್ಕುಳ ಸಂಗಂನ ಅಧ್ಯಕ್ಷರಾದ ಅಚ್ಯುತ್ ರಾವ್, ನಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಹಣ ನೀಡಲು ಶಕ್ತರಾಗಿದ್ದರೂ ತಂದೆ ಮಗಳ ಚಿಕಿತ್ಸೆಗೆ ಹಣ ನೀಡಿಲ್ಲವೆಂಬುದನ್ನು ಮನಗಂಡ ರಾಜ್ಯ ಮಾನವ ಹಕ್ಕುಗಳ ಆಯೋಗ, ಬಗ್ಗೆ ವಿಸ್ತø ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.

ವಿಡಿಯೋ ಸದ್ಯ ದೇಶದಾದ್ಯಂತ ವೈರಲ್ ಆಗಿದ್ದು, ತಂದೆಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

 

 

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಗುಲ ದರ್ಶನ

    ಅಚ್ಚರಿ ಮೂಡಿಸುವ ಸಹಸ್ರಾರು ಶಿವಲಿಂಗಗಳು..!ಎಲ್ಲಿ ಗೊತ್ತಾ.?ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ ಶೇರ್ ಮಾಡಿ…

    ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ. ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ, ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಶಿರಸಿ-ಯಲ್ಲಾಪುರ ನಡುವಿನ…

  • ಸ್ಪೂರ್ತಿ

    ಬಾಂಬ್ ಬ್ಲಾಸ್ಟ್‌ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರೂ ಈಕೆ ಪಿಎಚ್‍ಡಿ ಮಾಡಿದ್ದಾರೆ..!ತಿಳಿಯಲು ಇದನ್ನು ಓದಿ..

    ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಮುಂದೆ ಸಾಗಬೇಕೆ ಹೊರತು ಹಿಂದಡಿ ಇಡಬಾರದು. ಅಂಗವೈಕಲ್ಯ ಇದೆ ಎಂದು ನೋವನುಭವಿಸಬಾರುದು. ಅದನ್ನು ಜಯಿಸಬೇಕು. ಯಶಸ್ಸಿನಿಂದ ಮುಂದೆ ಸಾಗಬೇಕು. ಮಾಳವಿಕಾ ಅಯ್ಯರ್‌ ಯುವತಿ ತನ್ನ 13ನೇ ವರ್ಷ ಬಾಂಬ್ ಬ್ಲಾಸ್ಟ್‌ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರೂ ಈಗ ಪಿಎಚ್‍ಡಿ ಮಾಡಿದ್ದಾರೆ. ತನ್ನಂತಹ ಅದೆಷ್ಟೋ ಮಂದಿಗೆ ಪ್ರೇರಣೆಯಾಗಿದ್ದಾರೆ. ಆಕೆ ಬಿಕನೀರ್ ಮೂಲದವರು. ಮಾಳವಿಕಾ ಅಯ್ಯರ್‌ದು ತಮಿಳುನಾಡಿನ ಕುಂಭಕೋಣ ಪ್ರದೇಶ. ಅಲ್ಲೇ ಬೆಳದಳು. ಆದರೆ ತಂದೆಗೆ ಬಿಕನೀರ್‌ಗೆ ಟ್ರಾನ್ಸ್‌ಫರ್ ಆಯಿತು. ಆತ ವಾಟರ್ ವರ್ಕ್ಸ್ ಇಲಾಖೆಯಲ್ಲಿ…

  • ಚುನಾವಣೆ

    ಕರ್ನಾಟಕ ಮೇ.೧೦ ಚುನಾವಣೆ

    ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಬುಧವಾರ ಚುನಾವಣೆ ನಡೆಯಲಿದ್ದು, ಮೇ.೧೩ ಶನಿವಾರ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗವು ಬುಧವಾರ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಇಂದಿನಿಂದಲೇ ತಕ್ಷಣ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿದೆ. ಚುನಾವಣಾ ವೇಳಾಪಟ್ಟಿಯು ಏಪ್ರಿಲ್ ೧೩ ರಂದು ಚುನಾವಣಾ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವು ಅಂದಿನಿಂದಲೂ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕೊನೆಯ ದಿನವಾಗಿದ್ದು,…

  • ಉಪಯುಕ್ತ ಮಾಹಿತಿ

    ‘ಪೊಲೀಯೋ ಡ್ರಾಪ್ಸ್’ ನೀಡಲಾದ ಆ ಹುಡುಗನಿಗೆ ಆದ ದಾರುಣ ಘಟನೆ ಏನು..? ತಿಳಿಯಲು ಇದನ್ನು ಓದಿ ..

    ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

  • ಆರೋಗ್ಯ

    ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಮನೆ ಮದ್ದುಗಳು. ಈ ಉಪಯುಕ್ತ ಮಾಹಿತಿ ನೋಡಿ.!

    ಗ್ಯಾಸ್ಟ್ರಿಕ್ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಈಗ ತಾನೇ ಹುಟ್ಟಿದ ಮಗುವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು, ಏಕೆಂದರೆ ಈಗ ನಾವು ಬಳಸುತ್ತಿರುವ ಆಹಾರದಲ್ಲಿ ಪೋಷಕಾಂಶ ಕಡಿಮೆ, ಕೆಮಿಕಲ್ ಹೆಚ್ಚು. ಇದನ್ನು ಸ್ವತಃ ಆಹಾರ ತಜ್ಞರೇ ಒಪ್ಪಿಕೊಳ್ಳುತ್ತಾರೆ. ಆದರೇನು ಮಾಡುವುದು ದಿನನಿತ್ಯ ಲಭ್ಯವಿರುವ ತಾಜಾ ತರಕಾರಿ, ಆಹಾರವನ್ನು ಸೇವಿಸಿ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆಂದು ಇಲ್ಲಿ ಪರಿಹಾರ ಕೊಡಲಾಗಿದೆ. ಓದಿ. ಸದುಪಯೋಗಪಡಿಸಿಕೊಳ್ಳಿ. ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ…